ಬುಧವಾರ, ಸೆಪ್ಟೆಂಬರ್ 25, 2019

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ ಬಳಕೆ ಶೀತ ಮತ್ತು ಕಫ ಕಟ್ಟುವಿಕೆ ನಿವಾರಣೆ ಮಾಡುತ್ತದೆ.- ನೀಲಗಿರಿ ಎಣ್ಣೆಯಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಶೀತ ಮತ್ತು ಕಫ ಕಟ್ಟಿರುವುದನ್ನು ನಿವಾರಣೆ ಮಾಡಲು ನೆರವಾಗುವುದು. ಸಿನೋಲ್ ಎನ್ನುವಂತಹ ಅಂಶವು ನೀಲಗಿರಿ ಎಣ್ಣೆಯಲ್ಲಿ ಇರುವ ಕಾರಣದಿಂದಾಗಿ ಇದು ಸೂಕ್ಷ್ಮಾಣು ವಿರೋಧಿಯಾಗಿ ಕೆಲಸ ಮಾಡಿ, ಹಲವಾರು ರೀತಿಯ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ನಿವಾರಣೆ ಮಾಡುತ್ತೆ.

ನೀಲಗಿರಿ ಎಣ್ಣೆ ಕೆಮ್ಮು ನಿವಾರಣೆ ಮಾಡುವ ಶಕ್ತಿ ಹೂಂದಿದೆ.- ಇದರಲ್ಲಿ ಇರುವಂತಹ ಯೂಕಲಿಪ್ಟಾಲ್ ಎನ್ನುವ ಅಂಶವು ಕೆಮ್ಮು ನಿವಾರಣೆ ಮಾಡುವುದು. ಕೆಮ್ಮು ನಿವಾರಣೆ ಮಾಡುವಂತಹ ಹಲವಾರು ರೀತಿಯ ಔಷಧಿಗಳಲ್ಲಿ ನೀಲಗಿರಿ ಎಣ್ಣೆಯು ಒಂದು ಪ್ರಮುಖ ಅಂಶವನ್ನಾಗಿ ಬಳಸಲಾಗುತ್ತದೆ. ಉದಾ- ವಿಕ್ಸ್ ವಿಪೊರಬ್ ನಲ್ಲಿ 1.2 ಶೇಕಡದಷ್ಟು ನೀಲಗಿರಿ ಎಣ್ಣೆ ಅಂಶವಿದೆ.

ನೀಲಗಿರಿ ಎಣ್ಣೆ ತಲೆನೋವು ನಿವಾರಕವಾಗಿದೆ.- ನೀಲಗಿರಿ ಎಣ್ಣೆಯಲ್ಲಿ ತಲೆನೋವಿಗೆ ತುಂಬಾ ಪರಿಣಾಮಕಾರಿ ಯಾಗಿರುವುದು. ಸೈನಸ್ ನಿಂದಾಗಿ ಕಾಡುವಂತಹ ತಲೆನೋವಿಗೆ ಇದು ತುಂಬಾ ಒಳ್ಳೆಯದು. ಕೆಲವೊಂದು ಸಲ ಸೈನಸ್ ನ ಉರಿಯೂತದಿಂದ ತಲೆನೋವು ಕಾಡುವುದು. ಇದು ಕಟ್ಟಿರುವಂತಹ ಸೈನಸ್ ನ್ನು ಬಿಡುಗಡೆ ಮಾಡುವುದು ಮತ್ತು ತಲೆನೋವು ನಿವಾರಿಸುವುದು. ಇದು ತುಂಬಾ ಪರಿಣಾಮಕಾರಿ ನೋವು ನಿವಾರಕವಾಗಿ ಕೆಲಸ ಮಾಡುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ