ಬುಧವಾರ, ಸೆಪ್ಟೆಂಬರ್ 25, 2019

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು ಆರೋಗ್ಯಕ್ಕೆ ಉತ್ತಮ ದಿವ್ಶಔಷಧ ಈ ಹಣ್ಣನ್ನು ತಿನ್ನುವುದರಿಂದ ನಮ್ಮ ನೆನಪಿನ ಶಕ್ತಿಯು ಹೆಚ್ಚುವದು.ಇತ್ತಿಚಿಗೆ ಮಾರುಕಟ್ಟೆಯಲ್ಲಿ ಇದರ ಬೆಲೆಯೂ ಗಗನಕ್ಕೇರಿದೆ ಅದರೂ ಆರೋಗ್ಯವಂತರಗಿರಬೇಕಾದರೆ ದಾಳಿಂಬೆ ಹಣ್ಣನ್ನು ತಿನ್ನುವದು ಉತ್ತಮ.ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ .
ದಾಳಿಂಬೆ ಹಣ್ಣಿನಿಂದಾಗುವ ಪ್ರಯೋಜನಗಳು:೧. ದಾಳಿಂಬೆ ತಿನ್ನುವುದರಿಂದ ರಕ್ತದೊತ್ತಡ ಕಡಿಮೆ ಆಗುವದು.
೨.ದಾಳಿಂಬೆ ಎಲೆ ತಿನ್ನುವದರಿಂದ ಕೆಮ್ಮು ಕಡಿಮೆಯಾಗುವದು.
೩.ದಾಳಿಂಬೆ ರಸ ಸೇವಿಸುವದರಿಂದ ಮುಖದ ಚರ್ಮವು ಕಾಂತಿಯುತವಾಗುವದು. ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವದು.
೪.ದಾಳಂಬಿ ಬೀಜವನ್ನು ತಿನ್ನುವದರಿಂದ ಹಲ್ಲುಗಳ ಹೊಳಪು ಹೆಚ್ಚುವುದು. ಮನಸ್ಸು ಉಲ್ಲಾಸದಿಂದ ಇರುವದು ಓದು,ಆಟ ಇತರೆ ಕೆಲಸದಲ್ಲಿ ಆಸಕ್ತಿ ಹೆಚಿಸುವದು.
೫. ದಾಳಿಂಬೆ ಹಣ್ಣಿನ ರಸ ಸೇವಿಸಿದರೆ ಶರೀರದ ಶಕ್ತಿ ಹೆಚ್ಚಾಗುತ್ತದೆ. ಹದಯ , ಯಕತ್ತಿಗೆ ತುಂಬಾ ಒಳ್ಳೆಯದು . ಹಣ್ಣಿನ ರಸಕ್ಕೆ ಏಲಕ್ಕಿ , ಲವಂಗ ಹಾಕಿ ಸೇವಿಸಿದರೆ ಭೇದಿ ಕಡಿಮೆಯಾಗುತ್ತದೆ. ಹಣ್ಣಿನ ರಸಕ್ಕೆ ಕಲ್ಲು ಸಕ್ಕರೆ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ತೆಗೆದುಕೊಂಡರೆ ವಸಡುಗಳು ಹಾಗೂ ಮೂಗಿನಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ . ಚಮಚ ದಾಳಿಂಬೆ ಬೇರಿನ ತೊಗಟೆಯ ಕಷಾಯಕ್ಕೆ 2 ಚಮಚ ಜೇನುತುಪ್ಪವನ್ನು ದಿನಕ್ಕೆ 4 ಬಾರಿ ಸೇವಿಸಿದರೆ ಹೊಟ್ಟೆ ಹುಳುಗಳು ಕಡಿಮೆಯಾಗುತ್ತದೆ. ಎಲೆಗಳನ್ನು ಜಜ್ಜಿ ಸುಟ್ಟ ಗಾಯಕ್ಕೆ ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ. ೬.
ದಾಳಿಂಬೆ ಹೂವುಗಳನ್ನು ಜಜ್ಜಿ , ಮಜ್ಜಿಗೆ ಜೊತೆ ಸೇವಿಸಿದರೆ , ರಕ್ತಮಿಶ್ರಿತ ಮಲವನ್ನು ಸರಿಪಡಿಸುತ್ತದೆ . ದಾಳಿಂಬೆ ಮೊಗ್ಗು ಹಾಗೂ ತುಳಸಿ ದಳಗಳನ್ನು ಜಜ್ಜಿ ರಸವನ್ನು ಮೂಗಿಗೆ ಹಾಕಿದರೆ ಬಿಕ್ಕಳಿಕೆ ನಿವಾರಣೆಯಾಗುತ್ತದೆ . ಅದಕ್ಕಾಗಿ ದಾಳಿಂಬೆ ತಿನ್ನುವದು ಅವಶ್ಯಕವಾದುದು ಇದರಿಂದ ಮಕ್ಕಳು ಮಹಿಳೆಯರಿಗೆ ನೆನಪಿನ ಶಕ್ತ್ತಿ ಹೆಚ್ಹಿ ಅರೋಗವಂತರಾಗಿರಲು ಸಹಾಯಕವಾಗಿದೆ -

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ