ಗುರುವಾರ, ಮಾರ್ಚ್ 17, 2022

ತಿರುಮಲದಲ್ಲಿರುವ 7 ಬೆಟ್ಟಗಳ ಹೆಸರಿಗೆ ರೂಪ

ತಿರುಮಲದಲ್ಲಿರುವ 7 ಬೆಟ್ಟಗಳ ಹೆಸರಿಗೆ ರೂಪ .........!!
 1. ಶ್ರೀವಾರಿಯ ಅಪ್ಪಣೆಯಿಂದ ಗರುತ್ಮಂತು ತಂದ ಬೆಟ್ಟ - "ಗರುಡಾದ್ರಿ".

 2. ಭಗವಾನ್ ಮಹಾವಿಷ್ಣುವಿನಿಂದ ಕೊಂದ ವೃಷಬಾಸುರುಡು - "ವೃಷಬಾದ್ರಿ".

 3. ಹನುಮಂತನ ತಾಯಿ ಅಂಜನಿದೇವಿ ತಪಸ್ಸು ಮಾಡಿದಳು - "ಅಂಜನಾದ್ರಿ".

 4. ಬೆಟ್ಟದ ಮೇಲೆ ತಲೆಬಾಗಿದ ಮೊದಲ ಭಕ್ತರು 'ನೀಲಾಂಬರಿ' - "ನೀಲಾದ್ರಿ".

 5. ಆದಿಶೇಷುಡು - "ಶೇಷಾದ್ರಿ".

 6. ಪಾಪಗಳ ದಹನ - "ವೆಂಕಟಾದ್ರಿ"
 ('ವೆಮ್' - ಪಾಪಗಳು ... 'ಕಟ' ಸುಡುತ್ತದೆ).

 7. 'ನಾರಾಯಣನಾಡು' - "ನಾರಾಯಣಾದ್ರಿ", ಪುಷ್ಕರಿಣಿ ದಡದಲ್ಲಿ ತಪಸ್ಸು ಮಾಡಿದ ಭಕ್ತ.

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

ರಾಘವೇಂದ್ರಸ್ವಾಮಿಗಳು

“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ’

ತಮಿಳುನಾಡಿನ ಚಿದಂಬರ ಕ್ಷೇತ್ರ ಸಮೀಪದ ಭುವನಗಿರಿಯಲ್ಲಿ 1595ರಲ್ಲಿ ಜನಿಸಿದ ಶ್ರೀ ರಾಘವೇಂದ್ರಸ್ವಾಮಿಗಳು (ಪೂರ್ವಾಶ್ರಮದ ಹೆಸರು ವೆಂಕಟನಾಥ) 76 ವರ್ಷಗಳ ಕಾಲ ಇಹಲೋಕದಲ್ಲಿದ್ದು ಇಚ್ಛಾಮರಣಿಯಂತೆ 1671ರಲ್ಲಿ ಸಶರೀರವಾಗಿ ವೃಂದಾ ವನವನ್ನು ಪ್ರವೇಶಿಸಿದರು. ಅವರು ಜನಿಸಿ ಈಗ 427 ವರ್ಷಗಳಾಗಿವೆ, ಅವರು ಭೌತಿಕ ಶರೀರದಲ್ಲಿ ಕೊನೆಯದಾಗಿ ಕಾಣಿಸಿಕೊಂಡು 351 ವರ್ಷಗಳಾಗಿವೆ.

“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||’ ಈ ಧ್ಯಾನ ಶ್ಲೋಕದಲ್ಲಿ ಅವರ ಆದ್ಯತೆ ಸತ್ಯ ಮತ್ತು ಧರ್ಮಕ್ಕೆ ಎನ್ನುವುದು ಕಂಡುಬರುತ್ತದೆ. ಎಲ್ಲ ಧರ್ಮೀಯರಿಗೂ ಅನುಗ್ರಹ ಮಾಡಿದ ಯತಿಗಳು ಎಂಬುದಕ್ಕೆ ರಾಯರ ಕಾಲಾನಂತರ ಮಂತ್ರಾಲಯಕ್ಕೆ ಬಂದ ಬ್ರಿಟಿಷ್‌ ಅಧಿಕಾರಿ ಥಾಮಸ್‌ ಮನ್ರೊàವಿಗೂ ದರ್ಶನ ಮತ್ತು ಮಂತ್ರಾಕ್ಷತೆ ಕೊಟ್ಟ ಘಟನೆ (1800 -1807), ಅವರ ತಪಃಪ್ರಭಾವಕ್ಕೆ ಒಳಗಾದ ಅದೋನಿಯ ಮಾಂಡಲಿಕ ಸಿದ್ಧಿಮಸೂದ್‌ ಖಾನ್‌ ವೃಂದಾವನ ನಿರ್ಮಾಣಕ್ಕೆ ಸ್ಥಳವನ್ನು ಕೊಟ್ಟದ್ದು, ವೃಂದಾವನದ ಮೇಲೆ ವಿವಿಧ ಭಗವದ್ರೂಪಗಳ ಜತೆ ಮೀನಾರ್‌ ಕೆತ್ತನೆ ಇರುವುದು ಕೆಲವು ಉದಾಹರಣೆಯಾಗಬಹುದು.

ತಂಜಾವೂರಿನಲ್ಲಿ ಬರಗಾಲವಿದ್ದಾಗ ಯಜ್ಞವನ್ನು ಮಾಡಿ ಮಳೆ ತರಿಸಿದ್ದು, ನಾಶಿಕದಲ್ಲಿ ವಾಸುದೇವ ಪಂತ್‌ ಅವರ ಸೋದರಳಿಯ ಸುರೇಂದ್ರನಿಗೆ ಬಾಯಿ ಬಿದ್ದು ಹೋಗಿದ್ದಾಗ ಮತ್ತೆ ಹಾಡುವಂತಾದುದು, ಗದುಗಿನ ವೆಂಕಟರಾಯ ದೇಸಾಯಿ, ಸವಣೂರು ನವಾಬನ ಪುತ್ರ ಸತ್ತಾಗ ಬದುಕಿಸಿದ್ದು ಜೀವನಚರಿತ್ರೆಯಲ್ಲಿ ಕಾಣಸಿಗುತ್ತದೆ.

ರಾಘವೇಂದ್ರಸ್ವಾಮಿಗಳು ವೈಕುಂಠದ ಭಗವಂತನ ಸೇವಾ ಕಿಂಕರನಾದ ಶಂಕುಕರ್ಣನ ಅವತಾರ, ಶಂಕುಕರ್ಣ ಪ್ರಹ್ಲಾದನಾಗಿ, ಬಾಹ್ಲಿàಕರಾಜನಾಗಿ, ವ್ಯಾಸರಾಜರಾಗಿ, ರಾಘ ವೇಂದ್ರಸ್ವಾಮಿಗಳಾಗಿ ಅವತರಿಸಿದರು ಎಂಬ ನಂಬಿಕೆ ಇದೆ.

ಶ್ರೀ ರಾಘವೇಂದ್ರಸ್ವಾಮಿಗಳು ಶ್ರೀಮನ್ಮಧ್ವಾಚಾರ್ಯರ ಶಿಷ್ಯರಾದ ಶ್ರೀ ಪದ್ಮನಾಭತೀರ್ಥರ ಪರಂಪರೆಯಲ್ಲಿ ಬಂದ ಕುಂಭಕೋಣ ಮಠದ ಶ್ರೀವಿಜಯೀಂದ್ರತೀರ್ಥರ ಪ್ರಶಿಷ್ಯರಾದರು. ಶ್ರೀ ವಿಜಯೀಂದ್ರತೀರ್ಥರು ಶ್ರೀಕಾಶೀ ಮಠ ಸಂಸ್ಥಾನದ ಪ್ರವರ್ತಕರು. ಶ್ರೀ ವಿಜಯೀಂದ್ರತೀರ್ಥರ ಶಿಷ್ಯ ಶ್ರೀ ಸುಧೀಂದ್ರತೀರ್ಥರು ವೆಂಕಟನಾಥರಿಗೆ ಶ್ರೀ ರಾಘವೇಂದ್ರತೀರ್ಥರೆಂದು ನಾಮಕರಣ ಮಾಡಿ 1621, ದುರ್ಮತಿ ಸಂವತ್ಸರ ಪಾಲ್ಗುಣ ಶುದ್ಧ ಬಿದಿಗೆಯಂದು ಶಿಷ್ಯರಾಗಿ ಸ್ವೀಕರಿಸಿದರು. ಮಧ್ವಾಚಾರ್ಯರ ಬಳಿಕ ಪರಂಪರೆಯಲ್ಲಿ 16ನೆಯ ಯತಿಗಳು ಇವರು.

ಪೂರ್ವಾಶ್ರಮದಲ್ಲಿಯೇ ವಿದ್ವತ್‌ಸಿದ್ಧಿ ವೆಂಕಟನಾಥರಾಗಿರುವಾಗಲೇ ಇವರು ಅಣ್ಣ ಗುರುರಾಜಾಚಾರ್ಯರಲ್ಲಿ, ಅನಂತರ ಭಾವ ಲಕ್ಷ್ಮೀನರ ಸಿಂಹಾಚಾರ್ಯರಲ್ಲಿ ಶಾಸ್ತ್ರಾಧ್ಯಯನ ನಡೆಸಿದ್ದರು. ವೆಂಕಟ ನಾಥರು “ಮಧ್ವವಿಜಯ’ ಗ್ರಂಥಕರ್ತ ನಾರಾಯಣ ಪಂಡಿತಾ ಚಾರ್ಯರ “ಪ್ರಮೇಯ ನವಮಾಲಿಕಾ’ ಗ್ರಂಥಕ್ಕೆ ವ್ಯಾಖ್ಯಾನ ರಚಿಸಿದರು. ಇದು ಅವರ ಚೊಚ್ಚಲ ಕೃತಿ. ಪಾಂಡಿತ್ಯವನ್ನು ಕುಂಭಕೋಣದಲ್ಲಿ ನಡೆದ ವಿದ್ವತ್ಸಭೆಯಲ್ಲಿ ಗಮನಿಸಿದ ಗುರುಗಳು “ಮಹಾಭಾಷ್ಯಾಚಾರ್ಯ’ ಬಿರುದು ನೀಡಿದ್ದರು.

40 ಕೃತಿಗಳ ಕರ್ತ
ಸ್ವಾಮಿಗಳಾದ ಬಳಿಕ ಮಧ್ವಾಚಾರ್ಯರ, ವೇದವ್ಯಾಸರ ಬ್ರಹ್ಮಸೂತ್ರಗಳು, ಉಪನಿಷತ್ತುಗಳು, ಭಗವದ್ಗೀತಾ ಪ್ರಸ್ಥಾನಕ್ಕೆ ಭಾಷ್ಯ ರಚನೆ ಹೀಗೆ ಒಟ್ಟು ಸುಮಾರು 40 ಕೃತಿಗಳನ್ನು ರಚಿಸಿದರು. ಸಮಗ್ರ ಮೀಮಾಂಸಾಗ್ರಂಥಕ್ಕೆ ಸಂಬಂಧಿಸಿ”ಭಾಟ್ಟ ಸಂಗ್ರಹ’ ಗ್ರಂಥಕ್ಕೆ ಮಧುರೆಯ ರಾಜ ಮೆರವಣಿಗೆ ಮಾಡಿಸಿದ್ದ. ವಿಜಾಪುರ ಸಮೀಪದ ಕೃಷ್ಣಾ ನದೀ ತೀರದ ಚಾತುರ್ಮಾಸ್ಯ ವ್ರತಾಚರಣೆಯ ಕಾಲದಲ್ಲಿ ಜಯತೀರ್ಥರ “ತಣ್ತೀಪ್ರಕಾಶಿಕಾ’ ಟೀಕೆಗೆ “ಭಾವದೀಪ’ ಎಂಬ ವ್ಯಾಖ್ಯಾನವನ್ನು ರಚಿಸಿದರು.

ಕರ್ನಾಟಕ ಕರಾವಳಿ ಸಂಚಾರ
ಅವರ ಸಂಚಾರ ಕ್ರಮದಲ್ಲಿ ಕಾಸರಗೋಡಿನ ವಿಷ್ಣುಮಂಗಲ ಕ್ಷೇತ್ರ, ಸುಬ್ರಹ್ಮಣ್ಯ ಮತ್ತು ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದ್ದರು. ಇದು ಸುಮಾರು 1660ರ ದಶಕ. ಅವರಿಗೆ ಸುಮಾರು 60ರ ವಯಸ್ಸಿನಲ್ಲಿ ಎಂದು ಅಂದಾಜಿಸಬಹುದಾಗಿದೆ. ಉಡುಪಿಯಲ್ಲಿ ಚಂದ್ರಿಕಾ ಪ್ರಕಾಶ, ತಂತ್ರದೀಪಿಕಾ, ನ್ಯಾಯಮುಕ್ತಾವಳಿ ಎಂಬ ಮೂರು ಕೃತಿಗಳನ್ನು ರಚಿಸಿ ಕೃಷ್ಣನಿಗೆ ಸಮರ್ಪಿಸಿದರು. ಚಂದ್ರಿಕಾ ಕೃತಿಯನ್ನು ಹತ್ತು ಬಾರಿ ಪಾಠ ಮಾಡಿ ಮಂಗಲೋತ್ಸವ ನಡೆಸಿದರು. ಉಡುಪಿ ಮೊಕ್ಕಾಂ ನೆನಪಿಗಾಗಿ ಉಡುಪಿ ಕೃಷ್ಣನ ಚಿನ್ನದ ಪ್ರತಿಮೆಯೊಂದನ್ನು ತಾವೇ ತಯಾರಿಸಿ ಪೂಜಿಸಿ ಕೊಂಡೊಯ್ದರು. “ಇಂದು ಎನಗೆ ಗೋವಿಂದ….’ ಎಂಬ ದಾಸರ ಹಾಡನ್ನು ರಚಿಸಿದ್ದೂ ಉಡುಪಿಯಲ್ಲಿ ಎಂಬ ಐತಿಹ್ಯವಿದೆ.
ಮಂತ್ರಾಲಯದಲ್ಲಿ ಏಕೆ ನೆಲೆನಿಂತರು?

ಶ್ರೀ ರಾಘವೇಂದ್ರ ಸ್ವಾಮಿಗಳು ಕೊನೆಯ ಕಾಲ ಘಟ್ಟದಲ್ಲಿ ಅದೋನಿಗೆ ಬಂದರು. ಅದೋನಿ ಮಾಂಡಲಿಕನಾಗಿ ಸಿದ್ಧಿಮಸೂದ್‌ ಖಾನ್‌, ದಿವಾನ್‌ ಆಗಿ ವೆಂಕೋಬ ಯಾನೆ ವೆಂಕಣ್ಣ ನೋಡಿಕೊಳ್ಳುತ್ತಿದ್ದ. ವೆಂಕಣ್ಣ ಹಿಂದೆ ಶತದಡ್ಡನಾಗಿ ರಾಯರಿಂದಲೇ ಅನುಗ್ರಹೀತನಾಗಿ ಈ ಪಟ್ಟವನ್ನೇರಿದ್ದ. ರಾಯರು ಮಂತ್ರಾಲಯ ಗ್ರಾಮವನ್ನು ರಾಜನಲ್ಲಿ ಕೇಳಿದರು. ಅದಕ್ಕೆ ಕಾರಣವೆಂದರೆ ಪ್ರಹ್ಲಾದರಾಜರಾಗಿದ್ದಾಗ ಮಾಡಿದ ಯಜ್ಞದ ಸ್ಥಳ, ರಾಮಲಕ್ಷ್ಮಣರು ಸೀತಾಮಾತೆ ಕಣ್ಮರೆಯಾದಾಗ ಹುಡುಕಾಡಿ ಬಂದಾಗ ತಂಗಿದ ಸ್ಥಳ, ಪಾಂಡವರು ಓಡಾಡಿದ ಸ್ಥಳ, ಪರಂಪರೆಯಲ್ಲಿ ಇವರಿಗಿಂತ
ಹಿಂದಿನ ಶ್ರೀ ವಿಬುಧೇಂದ್ರತೀರ್ಥ ಶ್ರೀಪಾದರು ಸ್ಥಳದ ಮಹತ್ವ ನೋಡಿ ಜಪತಪ ಮಾಡಿದ ಸ್ಥಳವಾಗಿತ್ತು.

ಇದೇ ಸ್ಥಳದಲ್ಲಿ ರಾಯರು ವೃಂದಾವನದಲ್ಲಿ ಪ್ರವೇಶ ಮಾಡಿದರು.

ರಾಘವೇಂದ್ರ ಸ್ವಾಮಿಗಳ ಕೊನೆಯ ಸಂದೇಶ
ರಾಘವೇಂದ್ರ ಸ್ವಾಮಿಗಳು ತಾವು ವೃಂದಾವನ ಪ್ರವೇಶಿಸುವ ದಿನವನ್ನು ನಿಗದಿಪಡಿಸಿ ಪೂಜೆಗಳೆಲ್ಲ ವನ್ನೂ ಮಾಡಿ ಅನಂತರ ತಮ್ಮ ನಿರ್ದೇಶನದಂತೆ ನಿರ್ಮಿತವಾದ 6ಗಿ6 ಅಡಿ ಸುತ್ತಳತೆಯ ವೃಂದಾವನ ಗುಹೆಯನ್ನು ಪ್ರವೇಶಿಸಿದರು.

ಜೀವನವೂ ತತ್ತ್ವಬೋಧಕ
ನಾವು ಪ್ರತಿಪಾದಿಸಿದ ಪವಿತ್ರ ಸಿದ್ಧಾಂತವನ್ನು ಅರುಹಿದ ಮೂಲಗುರು ಶ್ರೀಮಧ್ವಾಚಾರ್ಯರು ಹನುಮಂತನಾಗಿ ರಾಮನನ್ನೂ ಭೀಮನಾಗಿ ಶ್ರೀಕೃಷ್ಣನನ್ನೂ ಸೇವಿಸಿದ ವಾಯುದೇವರು ಮಧ್ವಾಚಾರ್ಯರಾಗಿ ವೇದವ್ಯಾಸರ ಸೇವೆಗೆಂದು ಪ್ರಸಾರ ಮಾಡಿದರು. ಅವರ ಗ್ರಂಥಗಳಂತೆ ಅವರ ಜೀವನವೂ ತಣ್ತೀಬೋಧಕವಾಗಿದೆ.

ಗ್ರಂಥಗಳಲ್ಲಿ ನಮ್ಮ ಸನ್ನಿಧಾನ
ನಾವು ಇನ್ನು ತೆರಳುತ್ತೇವೆ. ನಮ್ಮನ್ನು ನಿಮ್ಮಲ್ಲಿಗೆ ಕಳುಹಿಸಿದ ಭಗವಂತನೇ ನಮ್ಮನ್ನು ತನ್ನ ಬಳಿಗೆ ಕರೆದಿದ್ದಾನೆ. ಆತ ನಮಗೆ ಕೊಟ್ಟ ಕೆಲಸ ಮುಗಿದಿದೆ. ಅವರು ಕಳುಹಿಸಿದಾಗ ಬರುವುದು, ಕರೆದಾಗ ಹೋಗುವುದು ಎಲ್ಲರಿಗೂ ಕಡ್ಡಾಯ. ನೀವು ಯಾರೂ ದುಃಖೀಸಬೇಕಾಗಿಲ್ಲ. ನಾವು ನಿಮ್ಮ ಎದುರು ಇಲ್ಲದಿದ್ದರೂ ನಮ್ಮ ಗ್ರಂಥಗಳು ಇರುತ್ತವೆ. ನಮ್ಮ ಸನ್ನಿಧಾನ ವೃಂದಾವನದಲ್ಲಿರುವುದಕ್ಕಿಂತ ಗ್ರಂಥಗಳಲ್ಲಿಯೇ ಹೆಚ್ಚಾಗಿ ಇರುತ್ತವೆ. ಯಥಾಶಕ್ತಿ ಶಾಸ್ತ್ರ ಶ್ರವಣ, ಅಧ್ಯಯನ, ಸಂರಕ್ಷಣ, ಪ್ರಸರಣಗಳೇ ನಮಗೆ ನೀವು ಸಲ್ಲಿಸಬಹುದಾದ ಶ್ರೇಷ್ಠ ಸೇವೆ.

ಲೋಕಚಿಂತೆಗೆ ಶಾಸ್ತ್ರ ಚಿಂತನೆ ಪರಿಹಾರ
ಶಾಸ್ತ್ರಗಳ ಸಾರವನ್ನು ತಿಳಿದು ಬದುಕಬೇಕೆಂದೇ ಭಗವಂತನು ಇಂತಹ ಅಮೂಲ್ಯಜನ್ಮವನ್ನು ಎಲ್ಲರಿಗೂ ದಯಪಾಲಿಸಿದ್ದಾನೆ. ಎಲ್ಲ ಬಗೆಯ ಲೋಕಚಿಂತೆಗೂ ಶಾಸ್ತ್ರಚಿಂತನೆಯೇ ಶಾಶ್ವತ ಪರಿಹಾರ. ತಣ್ತೀಚಿಂತನೆಯೇ ಆತ್ಮವಿಕಾಸದ ಏಕೈಕ ಮಾರ್ಗ. ಆದರೆ ಎಂದಿಗೂ ವ್ಯಕ್ತಿದ್ವೇಷ ತರವಲ್ಲ. ಹರಿಗುರುಗಳ ದಯೆಯೊಂದಿಗೆ ಶ್ರದ್ಧೆ, ಪ್ರಯತ್ನ ಹೊಂದಿದ ಜನಕ್ಕೆ ಮಾತ್ರ ತಣ್ತೀ ಜ್ಞಾನ ಮಾರ್ಗ ಕಠಿನವಾದರೂ ದುರ್ಗಮವೇನಲ್ಲ.

ಸದಾಚಾರವಿಲ್ಲದೆ ಸದ್ವಿಚಾರವಿಲ್ಲ
ಜೀವನದಲ್ಲಿ ಇತರರಿಗೆ ಅನ್ಯಾಯವಾಗದಂತೆ, ನೋವಾಗದಂತೆ ಎಚ್ಚರವಹಿಸಬೇಕು. ಸದಾಚಾರವಿಲ್ಲದೆ ಸದ್ವಿಚಾರ ಸಿದ್ಧಿಯಾಗದು. ಹೀಗಾಗಿ ನಮಗೆ ದೇವರು ಒದಗಿಸಿದ ಕರ್ಮಗಳನ್ನು ಫ‌ಲಾಪೇಕ್ಷೆ ಇಲ್ಲದೆ ಕೃಷ್ಣಾರ್ಪಣ ಬುದ್ಧಿಯಿಂದ ಮಾಡಬೇಕು. ಉಪವಾಸವ್ರತಾದಿಗಳು ಸದಾಚಾರದ ಇನ್ನೊಂದು ಮುಖ. ಪ್ರತಿಯೊಬ್ಬರೂ ಏಕಾದಶಿ ಮತ್ತು ಕೃಷ್ಣಾಷ್ಟಮೀ ಉಪವಾಸವ್ರತಗಳನ್ನು ನಡೆಸಬೇಕು.

ಪವಾಡಕ್ಕಿಂತ ತತ್ತ್ವ ಜ್ಞಾನ ಮಿಗಿಲು
ಶಾಸ್ತ್ರಗಳನ್ನು ಬಿಟ್ಟು ಬರೀ ಪವಾಡಗಳಿಂದಲೇ ತಮ್ಮನ್ನು ಗುರುಗಳೆಂದೂ, ದೇವರೆಂದೂ ಕರೆದುಕೊಳ್ಳುವ ಜನಗಳಿಂದ ಸದಾ ದೂರ ಇರಬೇಕು. ನಾವೂ ಪವಾಡಗಳನ್ನು ತೋರಿಸಿದ್ದೇವೆ. ಮಧ್ವಾಚಾರ್ಯರೂ ತೋರಿದ್ದಾರೆ. ಆದರೆ ಇದರ ಹಿಂದೆ ಯೋಗಸಿದ್ಧಿ, ಶಾಸ್ತ್ರದ ತಳಹದಿ ಇದೆ ಎಂಬುದನ್ನು ಮರೆಯಕೂಡದು. ಇವುಗಳನ್ನು ತೋರಿಸಿದ್ದು ಭಗವಂತನ ಮಹಿಮೆ ಎಷ್ಟು ದೊಡ್ಡದು, ಅವನ ಅನುಗ್ರಹಕ್ಕೆ ಪಾತ್ರರಾದರೆ ನಮ್ಮ ವ್ಯಕ್ತಿತ್ವಕ್ಕೆ ಎಂತಹ ಸಾಮರ್ಥ್ಯ ಬರುತ್ತದೆ ಎಂದು ತೋರಿಸಲು ಮಾತ್ರ. ಯಾವುದೇ ಪವಾಡಕ್ಕಿಂತಲೂ ತಣ್ತೀಜ್ಞಾನ ಮಿಗಿಲು. ಅದಿಲ್ಲದೆ ಯಾವ ಪವಾಡವೂ ನಡೆಯುವುದಿಲ್ಲ. ತಣ್ತೀಜ್ಞಾನವಿಲ್ಲದವರು ತೋರುವ ಪವಾಡ ವಾಮಾಚಾರ.

ಸಮರ್ಪಣ ಭಾವನೆ ಅಧ್ಯಾತ್ಮ
ಉತ್ತಮರಲ್ಲಿ ಭಕ್ತಿ, ಸಮಾನರಲ್ಲಿ ಸ್ನೇಹಭಾವ, ಕಿರಿಯರಲ್ಲಿ ವಾತ್ಸಲ್ಯ ಇವು ಜೀವನದ ಶ್ರೇಷ್ಠ ಮೌಲ್ಯಗಳು. ನಿಮ್ಮ ಬಳಿ ಯಾರಾದರೂ ಕಷ್ಟದಲ್ಲಿ ಬಂದರೆ ಬರಿ ಕೈಯಿಂದ ಕಳುಹಿಸಬೇಡಿ. ಜೀವನದ ಒಳ್ಳೆಯತನವನ್ನು ಅಧ್ಯಾತ್ಮ ಬೇಡವೆನ್ನುವುದಿಲ್ಲ. ಆದರೆ ಎಲ್ಲದಕ್ಕೂ ಭಗವಂತನೇ ಕೇಂದ್ರ ಎನ್ನುವುದನ್ನು ಮರೆಯಕೂಡದು. ನಮಗಾಗಿ ಲೋಕವಲ್ಲ, ಲೋಕ, ಲೋಕೇಶ್ವರನಿಗಾಗಿ ನಾವು ಎಂಬ ಸಮರ್ಪಣ ಭಾವನೆಯೇ ಅಧ್ಯಾತ್ಮ.

ನಿಜಭಕ್ತಿ-ಮೂಢಭಕ್ತಿ
ಸಜ್ಜನರಿಗೆ ಹಿತವಾಗುವ ಸಮಾಜಸೇವೆಯನ್ನೂ ಸಹ ಭಗವಂತನ ಪೂಜೆ ಎಂದೇ ತಿಳಿಯಬೇಕು. ಒಟ್ಟಾರೆ ನಮ್ಮ ಜೀವನ ಒಂದು ಯಜ್ಞವಾಗಬೇಕು. ನಮ್ಮ ಪ್ರತಿ ಕರ್ಮವೂ ಭಗವಂತನ ಪೂಜೆ. ಭಗವಂತನಲ್ಲಿ ಭಕ್ತಿ ಇರಬೇಕು. ಅಂತಹ ಭಕ್ತಿ ಮೂಢಭಕ್ತಿಯಲ್ಲ. ಮೌಡ್ಯದಿಂದ ಕೂಡಿದ ಭಕ್ತಿ ಮಾತ್ರ ಮೂಢಭಕ್ತಿ. ಭಗವಂತನ ಹಿರಿಮೆಯನ್ನು ಆತ್ಮಪೂರ್ವಕ ಒಪ್ಪಿ ಗೌರವಿಸುವುದು ನಿಜವಾದ ಭಕ್ತಿ.

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

ಋಷಿ ಮುನಿಗಳ ಸಂತತಿಯನ್ನೇ ಗೋತ್ರ ಎನ್ನುವರು.

ಒಂದು ಸಂಗ್ರಹ ಉಪಯುಕ್ತ ಮಾಹಿತಿ

ಋಷಿ ಮುನಿಗಳ ಸಂತತಿಯನ್ನೇ ಗೋತ್ರ ಎನ್ನುವರು. 

ಹೆಚ್ಚಾಗಿ ಬ್ರಾಹ್ಮಣ ವರ್ಗ ಮತ್ತು ಕ್ಷತ್ರಿಯ ವರ್ಗದವರಿಗೆ ಗೋತ್ರ ಬಗ್ಗೆ ಮಾಹಿತಿ ಸಿಗುತ್ತದೆ. 

ಬೇರೆ ಯಾರಿಗೂ ಗೋತ್ರದ ಬಗ್ಗೆ ಮಾಹಿತಿ ಸಿಗುವುದಿಲ್ಲ.

ಆದರೆ ದೇವಸ್ಥಾನದಲ್ಲಿ ನಿಮ್ಮ ಹೆಸರಲ್ಲಿ ಪೂಜೆ ಮಾಡುವಾಗ ನಿಮ್ಮ ಹೆಸರು, ಜನ್ಮ ನಕ್ಷತ್ರ ಮತ್ತು ಗೋತ್ರ ವಿಚಾರಿಸಿ ನಂತರ ಸಂಕಲ್ಪ ಮಾಡುವರು.

ಕೆಲವರಿಗೆ ತಮ್ಮ ಗೋತ್ರದ ಬಗ್ಗೆ ಯಾವುದೇ ಅರಿವು ಇಲ್ಲದೆ ಚಡಪಡಿಕೆ ಉಂಟಾಗುತ್ತದೆ. ಮನೆಯ ಹಿರಿಯರಿಗೂ ತಿಳಿಯದಿದ್ದಾಗ ಗಾಬರಿಪಡುವ ಅಗತ್ಯವಿಲ್ಲ. 

ಏಕೆಂದರೆ ಜನ್ಮ ನಕ್ಷತ್ರಗಳ ಮೂಲಕವೂ ತಿಳಿಯಬಹುದು.

ಯಾರ ಜನನ ಅಶ್ವನಿ, ಮಘ ಮತ್ತು ಮೂಲ ನಕ್ಷತ್ರಗಳಲ್ಲಾಗಿದ್ದರೆ, 
ಆರಂಭದಲ್ಲಿ ದೆಸೆ ಕೇತು,
 ಹಾಗಾಗಿ ನಿಮ್ಮ ಗೋತ್ರ ಪುರಂದರ ಆಗುತ್ತದೆ. 

ಯಾರ ಜನನ ಭರಣಿ, ಹುಬ್ಬ ಮತ್ತು ಪೂರ್ವಾಷಾಢ ನಕ್ಷತ್ರಗಳಾದರೆ 
ಆರಂಭದ ದೆಸೆ ಶುಕ್ರ. 
ಹಾಗಾಗಿ ನಿಮ್ಮ ಗೋತ್ರ ಭಾರದ್ವಾಜ ಆಗುವುದು.

ಯಾರ ಜನನ ಕೃತಿಕ, ಉತ್ತರೆ ಮತ್ತು ಉತ್ತರ ಆಷಾಢ ನಕ್ಷತ್ರಗಳಾದರೆ 
ಆರಂಭದ ದೆಶೆ ರವಿ. 
ಹಾಗಾಗಿ ಅಗಸ್ತ್ಯ ಗೋತ್ರ ಆಗುವುದು.

 ಯಾರ ಜನನ ರೋಹಿಣಿ, ಹಸ್ತಾ ಮತ್ತು ಶ್ರವಣ ನಕ್ಷತ್ರಗಳಾದರೆ, 
ಆರಂಭದ ದೆಶೆ ಚಂದ್ರ. 
ಹಾಗಾಗಿ ನಿಮ್ಮ ಗೋತ್ರ ಗೌತಮ ಆಗುವುದು.

ಯಾರ ಜನನ ಮೃಗಶಿರ, ಚಿತ್ರ ಮತ್ತು ಧನಿಷ್ಟಗಳಾದರೆ ಆರಂಭದ ದೆಶೆ ಮಂಗಳ 
ಹಾಗಾಗಿ ಗೋತ್ರ ವಿರೂಪಾಕ್ಷ ಆಗುವುದು.

 ಜನನ ಆರಿದ್ರ, ಸ್ವಾತಿ ಮತ್ತು ಶತಭಿಷ ಗಳಾದರೆ ಆರಂಭದ ದೆಸೆ ರಾಹು.
 ಹಾಗಾಗಿ ಗೋತ್ರ ವಾಮದೇವ ಆಗುವುದು.

 ಯಾರ ಜನನ ಪುನರ್ವಸು, ವಿಶಾಖ ಮತ್ತು ಪೂರ್ವಭಾದ್ರವಾಗಿರುತ್ತದೋ 
ಆರಂಭದ ದೆಶೆ ಗುರು. 
ಹಾಗಾಗಿ ನಿಮ್ಮದು ವಸಿಷ್ಠ ಗೋತ್ರ ಆಗಲಿದೆ.

ಯಾರ ಜನನ ಪುಷ್ಯ, ಅನುರಾಧ ಮತ್ತು ಉತ್ತರಭಾದ್ರಗಳಾದರೆ 
ಆರಂಭದ ದೆಶೆ ಶನಿ. 
ಹಾಗಾಗಿ ನಿಮ್ಮದು ಕಾಶ್ಯಪ ಗೋತ್ರ ಆಗುವುದು.

ಯಾರ ಜನನ ಆಶ್ಲೇಷ, ಜ್ಯೇಷ್ಠ ಮತ್ತು ರೇವತಿ ನಕ್ಷತ್ರಗಳಲ್ಲಿ ಆಗಿರುತ್ತದೋ
 ಪ್ರಾರಂಭದ ದೆಶೆ ಬುಧ. 
ಹಾಗಾಗಿ ನಿಮ್ಮದು ಕಾತ್ಯಾಯನ ಗೋತ್ರ ಆಗುವುದು. 

ಎಲ್ಲಾ ಗ್ರಹಗಳ ಕವಚ ಮಂತ್ರ ಪಠಿಸಿದಾಗ ಆಯಾ ಗ್ರಹಗಳ ಗೋತ್ರ ತಿಳಿಯುತ್ತದೆ. ಒಂದೇ ನಕ್ಷತ್ರ, ಗೋತ್ರ ಆದರೆ ಸಂಬಂಧಿತರಲ್ಲಿ  ವಿವಾಹ ಮಾಡಬಾರದು.
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಲಾಗಿದೆ ಲಿಂಕ್
https://www.facebook.com/groups/258679464702378/permalink/649908938912760/

ಹೋಳಿ ಹಬ್ಬದ ಆಚರಣೆ ಮಹತ್ವ ಏನು ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹೋಳಿ ಹಬ್ಬದ ಆಚರಣೆ ಮಹತ್ವ ಏನು ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬೇಸಿಗೆಯ ಸಮಯ ರೈತರೆಲ್ಲ ತನ್ನ ಹೊಲಗದ್ದೆಗಳ ಕಾರ್ಯಗಳನ್ನು ಮುಗಿಸಿ ಮನೆಯಲ್ಲಿ ನಿರಾಳವಾಗಿ ಕಾಲ ಕಳೆಯುವ ಸಮಯ.

 ಗಿಡ-ಮರಗಳಲ್ಲಿ ಹಸಿರು ಸಿರಿ ಚಿಮ್ಮುವ ಸಂಭ್ರಮ.ಇಂಥ ಸಂಭ್ರಮದಲ್ಲಿ ಗಂಡಸರಿಗೆ ಬರುವ ಹಬ್ಬ ಹೋಳಿ.ಕಾಮವು ಕ್ಷಣಿಕ ಪ್ರೇಮವು ಶಾಶ್ವತ,ಕಾಮವು ದೈಹಿಕ,ಪ್ರೇಮವು ಮಾನಸಿಕ.ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ ದಹನದ ಹೋಳಿಹಬ್ಬ.

ಇದನ್ನು ವಸಂತೋತ್ಸವ,ರಂಗಪಂಚಮಿ,ಫಗ್ವಾ,ಡೋಲ್ ಯಾತ್ರಾ ಎಂಬ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸುತ್ತಾರೆ.ಇತಿಹಾಸ ಕಾಲದಲ್ಲಿಯೂ ಹೋಳಿ ಹಬ್ಬ ಆಚರಣೆಯ ಬಗ್ಗೆ ಐತಿಹ್ಯಗಳು ದೊರೆತಿವೆ.

ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಅಹಮದ್‍ನಗರ,ಮೇವಾರ ಮತ್ತು ಬುಂಡಿಯಲ್ಲಿರುವ ಚಿತ್ರಕಲೆಯಲ್ಲಿ ಈ ಹಬ್ಬ ಆಚರಣೆ ಕುರಿತ ಕುರುಹುಗಳು ದೊರೆತಿವೆ.

ಭಾಗವತ ಪುರಾಣ ಮತ್ತು ವಿಷ್ಣು ಪುರಾಣದಲ್ಲಿಯೂ ಈ ಕುರಿತ ಮಾಹಿತಿ ಉಲ್ಲೇಖವಿದೆ.

ಪಾಲ್ಗುಣ ಹುಣ್ಣಿಮೆಯ ವೇಳೆಗೆ ಗಿಡಮರಗಳು ಚಿಗುರಿ ಹೂಗೊಂಚಲು ಮೂಡಿ ಹಸಿರಿನಿಂದ ಕಂಗೊಳಿಸುತ್ತಿರುತ್ತವೆ.ಇದು ವಸಂತನನ್ನು ಸ್ವಾಗತಿಸುವ ಮುನ್ಸೂಚನೆ ಕೂಡ.ಈ ಸಮಯ ರಾಜ ಮಹರಾಜರು ಕೌಮುದಿ ಮಹೋತ್ಸವ ಆಚರಿಸುತ್ತಿದ್ದರು.ಇದು ಶೃಂಗಾರ ರಸಕ್ಕೆ ಪೂರಕ ಕೂಡ.ಆಗ ಸಂಗೀತ ಮತ್ತು ನೃತ್ಯ ನಾಟಕಾಭಿನಯ ರಾಜ ಅರಮನೆಯಲ್ಲಿ ಏರ್ಪಾಟಾಗುತ್ತಿದ್ದವು.ಇದು ಸಾಮೂಹಿಕ ಉತ್ಸವ ರೂಪವನ್ನು ಪಡೆದಿದ್ದಿತು ಎಂಬುದನ್ನು ಇತಿಹಾಸದಿಂದ ತಿಳಿಯಬಹುದು.

ಹೋಳಿ ಹಬ್ಬ ಕುರಿತಂತೆ ಎರಡು ದೃಷ್ಟಾಂತಗಳು ಬಳಕೆಯಲ್ಲಿವೆ. ಶಿವರಾತ್ರಿ ಅಮವಾಸೆಯಿಂದ ಹೋಳಿ ಹುಣ್ಣಿಮೆಗೆ ಹದಿನೈದರಿಂದ ಇಪ್ಪತ್ತು ದಿನಗಳ ಅಂತರ. 

ಪರಮಾತ್ಮನು ತುಂಗಭದ್ರಾ ನದಿಯ ದಡದಲ್ಲಿ ಇರುವ ಹೇಮಗಿರಿ ಪರ್ವತದ ಶಿಖರದಲ್ಲಿ ತಪಸ್ಸು ಮಾಡುವಾಗ ಅವನ ತಪಸ್ಸನ್ನು ಭಂಗ ಮಾಡಿ ಮದುವೆಯಾಗಲು ಪಾರ್ವತಿಯು ಕಾಮದೇವನಲ್ಲಿ ಮೊರೆ ಹೋಗುತ್ತಾಳೆ.

ಆಗ ವಿಷ್ಣುವಿನ ಅಪ್ಪಣೆಯಂತೆ ಕಾಮದೇವನು ತನ್ನ ಸೈನ್ಯ ಸಮೇತ ಶಿವನಿದ್ದ ಸ್ಥಳಕ್ಕೆ ಬಂದು ತನ್ನ ಬಾಣಗಳಿಂದ ತಫೋಭಂಗಗೊಳಿಸುತ್ತಾನೆ ಇದರಿಂದ ಕೋಪೆಗೊಂಡ ಶಿವನು ತನ್ನ ಉರಿಗಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡುತ್ತಾನೆ. 

ಗಂಡನನ್ನು ಕಳೆದುಕೊಂಡ ರತಿಯನ್ನು ಸಮಾಧಾನಪಡಿಸುವುದು ಪಾರ್ವತಿಗೆ ಕಷ್ಟವಾಗುತ್ತದೆ. ಆಗ ಪಾರ್ವತಿಯು ಕೂಡ ಘೋರ ತಪಸ್ಸನ್ನಾಚರಿಸಿ ಪರಶಿವನನ್ನು ಒಲಿಸಿಕೊಂಡಳಲ್ಲದೇ ಕಾಮನಿಗೆ ಮರುಜನ್ಮ ಕೊಡಿಸುವಳು.ತನ್ನಿಮಿತ್ತ ಹೋಳಿ ಆಚರಣೆ ಬಂದಿದೆ ಎಂಬುದು ಪ್ರತೀತಿ.

ಹಿರಣ್ಯಕಶ್ಯಪನ ತಂಗಿ ಹೋಲಿಕಾ ತನಗೆ ಬೆಂಕಿಯಿಂದ ಮರಣ ಬರಬಾರದೆಂದು ವರ ಪಡೆದಿದ್ದಳು.ಇದನ್ನು ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನನ್ನು ಪರಿವರ್ತಿಸಲು ಎಲ್ಲ ಪ್ರಯತ್ನಗಳನ್ನು ಮಾಡಿ ಸೋತಾಗ ತನ್ನ ತಂಗಿಯ ತೊಡೆಯ ಮೇಲೆ ಕುಳ್ಳಿರಿಸಿ ಸುತ್ತಲೂ ಅಗ್ನಿಯನ್ನು ಉರಿಸಲು ಆ ಅಗ್ನಿಯಲ್ಲಿ ಹೋಲಿಕಾ ತನ್ನ ರಾಕ್ಷಸೀ ಪ್ರವೃತ್ತಿಯಿಂದ ಆಹುತಿಯಾಗುತ್ತಾಳೆ., ತನ್ನ ಭಕ್ತಿಯಿಂದ ಪ್ರಹ್ಲಾದ ಭಗವಂತನಿಂದ ರಕ್ಷಿಸಲ್ಪಡುವನು. ಅವಳ ನೆನಪಿಗೆ ಹೋಲಿ ಹಬ್ಬ ಆಚರಣೆ ಬಂತೆಂದು ಹೇಳುವರು.

ಇಂದು ಕಾಮನ ಪ್ರತಿಷ್ಟಾಪನೆ ಗ್ರಾಮೀಣ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಜರುಗುತ್ತದೆ. ಊರಿನ ಪ್ರತಿ ಓಣಿ(ಗಲ್ಲಿಗಳಲ್ಲಿ)ಗಳಲ್ಲಿ ಒಂದೊಂದು ನಿಗದಿತ ಸ್ಥಳದಲ್ಲಿ ಕಾಮನ ಕಟ್ಟೆಯೆಂಬ ಸ್ಥಳದಲ್ಲಿ ರತಿಮನ್ಮಥರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವರು.ಈ ಸಂದರ್ಭ ವಯಸ್ಸಿನ ಬೇಧವಿಲ್ಲದೇ ಹಲಗೆ ಬಾರಿಸುತ್ತ

"ಕಾಮಣ್ಣನ ಕಟ್ಟುವ ಕರಿಬಿದರ ಸವರುತ್ತ,
ಕಾಮಣ್ಣಗ ಬಾಸಿಂಗ ಕಟ್ಟುವ ನಮ್ಮ ಕಾಮ
ಇನ್ನೆರಡ ದಿವಸ ಇರಲಿಲ್ಲೋ." ಎಂದು ಲಬೋ ಲಬೋ ಲಬೋ ಎಂದು ಹೊಯ್ಯುಕೊಳ್ಳುವ ಈ ಆಚರಣೆ ನಿಜಕ್ಕೂ ವಿಶಿಷ್ಟವಾದುದು.

ಇಲ್ಲಿ ಅಶ್ಲೀಲತೆಯಂಥಹ ಪದಗಳು ಬಳಕೆಯಾದರೂ ಕೂಡ ಕಾಮ ಮತ್ತು ರತಿಯರ ಸ್ವಭಾವ ಗುಣಗಳನ್ನು ಹೊಗಳುತ್ತ ಗಂಡು-ಹೆಣ್ಣು ವೇಷ ಧರಿಸಿ ಸವಾಲ್-ಜವಾಬ್ ರೀತಿ ಪದಗಳನ್ನು ಹೇಳುತ್ತ ಖುಷಿಯಿಂದ ಗಂಡಸರು ಆಚರಿಸುವ ಈ ಹೋಳಿ ಕಾಮನನ್ನು ಕೂಡ್ರಿಸಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ನೈವೇದ್ಯೆ ಮಾಡಿ ಮರುದಿನ ಕಟ್ಟಿಗೆಯ ಮೇಲೆ ಕಾಮನನ್ನು ಕುಳ್ಳಿರಿಸಿ ದಹನ ಮಾಡುವ ಮೂಲಕ ಹಬ್ಬ ಆಚರಣೆ ವಿಶಿಷ್ಟವಾದುದು.

ಇಂಥ ಸಂದರ್ಭ ಕಾಮನನ್ನು ಸುಟ್ಟ ಬೆಂಕಿಯ ಕೆಂಡವನ್ನು ಕೆಲವು ಜನ ತಮ್ಮ ಮನೆಗೆ ತರುತ್ತಾರೆ. ಕಾರಣವಿಷ್ಟೇ ಆ ಕೆಂಡದಿಂದ ಮನೆಯ ಒಲೆಯನ್ನು ಹೊತ್ತಿಸಿದರೆ ವರ್ಷದುದ್ದಕ್ಕೂ ಅವರ ಮನೆ ಅಡುಗೆ ಹುಲುಸಾಗುತ್ತದೆ ಎಂಬ ನಂಬಿಕೆ.ಅಷ್ಟೇ ಅಲ್ಲ ಆ ದಿನ ಹೋಳಿಗೆ ಮಾಡುತ್ತಾರೆ ಅದನ್ನು ಹೆಂಗಸರು ಹೇಳುವ ರೀತಿ ಹೀಗಿದೆ " ಹೊಯ್ಕೊಂಡ ಬಾಯಿಗೆ ಹೋಳಿಗೆ-ತುಪ್ಪ" ಎಂದು ಚೇಷ್ಟೆ ಮಾಡಿ ಉಣಬಡಿಸುವರು.

ಇನ್ನೂ ಕೆಲವರು ಈ ಕಾಮನ ಬೆಂಕಿಯಲ್ಲಿ ಕಡಲೆ ಹುರಿದುಕೊಳ್ಳುವರು. ಈ ಕಡಲೆ ತಿಂದರೆ ಬಾಯಿಯಲ್ಲಿನ ಹಲ್ಲುಗಳು ಗಟ್ಟಿಯಾಗುತ್ತವೆ ಎಂಬ ನಂಬಿಕೆ. ಕಾಮನ ಬೂದಿಯನ್ನು ಮನೆಗೆ ಒಯ್ದು ಆ ವರ್ಷದ ಮೊದಲ ಮಳೆಯ ನಂತರ ಬಿತ್ತುವ ಬೀಜದಲ್ಲಿ ಆ ಬೂದಿಯನ್ನು ಬೆರೆಸಿ ಬಿತ್ತನೆ ಮಾಡಿದರೆ ಬೆಳೆ ಚನ್ನಾಗಿ ಬರುತ್ತದೆ ಎಂಬ ಪ್ರತೀತಿ ಇದೆ.

ಕಾಮದಹನ ಸಂದರ್ಭ ತೆಂಗಿನ ಕಾಯಿಯನ್ನು ಕಾಮನ ತಲೆಯನ್ನು ಗುರಿಯಾಗಿಸಿಕೊಂಡು ಎಸೆಯುವರು. ಆಗ ಅವನ ರುಂಡವು ಯಾವ ದಿಕ್ಕಿನತ್ತ ಬೀಳುತ್ತದೆಯೋ ಆ ದಿಕ್ಕಿನಲ್ಲಿ ಮಳೆ-ಬೆಳೆ ಬಹಳ ಆಗುತ್ತದೆ ಎನ್ನುವುದು ವಾಡಿಕೆ.ಕಾಮ ಸತ್ತ ಐದು ದಿನಕ್ಕೆ ಮಳೆಯಾಗುತ್ತದೆ. ಅದು ಕಾಮಣ್ಣನ ಬೂದಿ ತೋಯಿಸುತ್ತದೆ.ಅದು ಕಾಮನ ಕಣ್ಣೀರು ಎಂಬುದು ಗ್ರಾಮೀಣ ಜನರ ನಂಬಿಕೆ.

ಕಾಮನನ್ನು ಸುಟ್ಟು ಅವನ ಬೂದಿಯನ್ನು ವಿಭೂತಿಯಂತೆ ಹಣೆಗೆ ಧರಿಸುವುದು ಕೂಡ ಮನದ ಕೆಟ್ಟ ಕಾಮವನ್ನು ಜ್ಞಾನ ಚಕ್ಷುವಿನಿಂದ ಸುಟ್ಟು ಬೊಟ್ಟಿಡುವುದು ಶಿವನ ಸಾಕ್ಷಾತ್ಕಾರದ ಸಾಧನ.

ನಮ್ಮ ಆಸೆ ಆಕಾಂಕ್ಷೆಗಳಲ್ಲಿ ಧರ್ಮಸೂಕ್ಷ್ಮ ದರ್ಶನಕಾಣ್ಕೆಯಿದ್ದು ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಶರೀರ ಪವಿತ್ರತೆಯನ್ನು ಪಡೆಯಬೇಕು.ಇದು ವಿಭೂತಿ ಧಾರಣೆಯ ಮೂಲಕ ಆಗಬೇಕು.

ಅದು ಕಾಮ ದಹನದ ಮೂಲಕ.ಶಿವನ ಹಣೆ ಎಂದರೆ ಜ್ಞಾನ ಚಕ್ಷು.ಕಾಮ ಎಂದರೆ ಕೆಟ್ಟ ಆಸೆ.ಕೆಟ್ಟ ಆಸೆಯನ್ನು ಜ್ಞಾನ ಚಕ್ಷುವಿನ ಸೂರ್ಯನಿಂದ ಸುಟ್ಟು ಉತ್ತಮ ಸಂಸ್ಕಾರ ಹೊಂದುವುದಾಗಿದೆ.

ಕೇವಲ ಯೌವನ ಭರಿತ ದೇಹ ಕಾಮಾತುರಣದಿಂದ ತನ್ನ ಸ್ಥಿತಿಯನ್ನು ಪಡೆದರೆ ಅದು ಪ್ರೇಮವಾಗದು.ಭಾವನಾಪರವಶತೆಯಿಂದ ಆತ್ಮಶ್ರೀಯಿಂದ ಎರಡೂ ಕಡೆ ಸಮತೋಲಿತ ಪ್ರೇಮ ಒಡಮೂಡಿದಾಗ ಮಾತ್ರ ಅದು ತಪಸ್ಸಿನಂತೆ ಕಂಗೊಳಿಸುವುದು.

ಇಲ್ಲಿ ಕೇವಲ ಕಾಮವಿರದೆ ಪ್ರೇಮತ್ವ ಮೂಡಿರುವುದು.ಇದು ಪಾರ್ವತಿ ಕಾಮನ ಸಹಾಯ ಪಡೆದು ಶಿವನ ಮೋಹಿಸುವ ಪರಿಯನ್ನು ಶಿವ ತನ್ನ ಇಚ್ದೆಯ ವಿರುದ್ಧ ಪ್ರಕ್ರಿಯೆಯೆಂದು ಪರಿಗಣಿಸಿ ಕಾಮನನ್ನು ಸುಡುವ ಮೂಲಕ ಪಾರ್ವತಿ ತನ್ನ ತಪಸ್ಸಿನ ಮೂಲಕ ಶಿವನೊಲುಮೆ ಪಡೆಯುವಂತೆ ಮಾಡುವುದಿದೆಯಲ್ಲ ಅಲ್ಲಿ ನಿಷ್ಕಾಮ ಪ್ರೇಮ ಮೂಡುವ ಭಾವನೆ ಆತ್ಮಶ್ರೀಯ ಮೂಲಕ ನಡೆಯುವುದು.

ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳನ್ನು ಮೊದಲು ಸುಡಬೇಕು.ಕಾಮವು ಪ್ರೇಮವಾಗಿ ಶಿವರತಿಯಾಗಬೇಕು.  ಬಹಿರಂಗ ಶುದ್ದೀಕರಣವಾಗಬೇಕು.

ಮಾರ ಎಂದೂ ಕರೆಯಲ್ಪಡುವ ಕಾಮದೇವನು ಮಾನವ ಪ್ರೇಮ ಹಾಗೂ ಬಯಕೆಯ ಹಿಂದೂ ದೇವತೆ. ಮನ್ಮಥ, ಅತನು,ಮದನ, ರತಿಕಾಂತ, ಕುಸುಮಶರ ಅಥವಾ ಕಾಮ ಅವನ ಇತರ ಹೆಸರುಗಳು. ಕಾಮದೇವನು ಹಿಂದೂ ದೇವತೆ ಶ್ರೀಯ ಮಗ ಮತ್ತು ಜೊತೆಗೆ ಕೃಷ್ಣನ ಮಗನಾದ ಪ್ರದ್ಯುಮ್ನನು ಕಾಮದೇವನ ಅವತಾರನೆಂದು ಪರಿಗಣಿಸಲಾಗುತ್ತದೆ.
 
ಬಣ್ಣಗಳ ಹಬ್ಬ ಹೋಳಿ ಹಬ್ಬ. ಉಲ್ಲಾಸ ತುರುವ ಬಣ್ಣಗಳ ಎರಚಾಟದ ಮನೋರಂಜನೆಯ ನಂತರ ಸ್ನಾನ ಮಾಡಿ ದೇವರ ಪೂಜೆ ನೆರವೇರಿಸುವುದು ಹೋಳಿ ಹಬ್ಬದ ವಿಶೇಷ. ವಿವಿಧ ಬಣ್ಣಗಳ ಓಕುಳಿ ಹರಿಸಿ ಇಡಿ ವರ್ಷ ಸಂತೋಷದ ಕೋಡಿಯೇ ಹರಿಯಲಿ ಎಂದು ಹಾರೈಸುವ ರಂಗಿನ ಹಬ್ಬ ಇದು. 

ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬವನ್ನು ಈಗ ಭಾರತದಾದ್ಯಂತ ಆಚರಿಸಲಾಗುತ್ತಿದೆ. ಯುವಕ ಯುವತಿಯರಿಗೆಲ್ಲ ಮೋಜು ತರುವ ಹರ್ಷದ ಹಬ್ಬ ಇದಾಗಿರುವುದರಿಂದ ಸುಲಭವಾಗಿ ಈ ಹಬ್ಬ ದೇಶದೆಲ್ಲಡೆ ಪಸರಿಸಿದೆ. ಬಣ್ಣಗಳೊಂದಿಗೆ ಓಕುಳಿ ಆಡಿ, ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಖುಷಿಪಟ್ಟು ಈ ಹಬ್ಬವನ್ನಾಚರಿಸಲಾಗುತ್ತದೆ. 

ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯ ದಿವಸ ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಕಾಮನ ಹಬ್ಬವೆಂದೂ ಕರೆಯಲಾಗುತ್ತದೆ.
 
ಹರ್ಷ ತರುವ ಬಣ್ಣಗಳ ಹಬ್ಬ..
ಕಾಮನ ಹಬ್ಬವೆಂದೂ ಕರೆಯಲ್ಪಡುವ ಹೋಳಿ ಆಚರಣೆಯ ಹಿಂದೆ ಒಂದು ಕಥೆಯಿದೆ. ತಾರಕಾಸುರನೆಂಬ ರಾಕ್ಷಸನು ತಪಸ್ಸುಮಾಡಿ ಬ್ರಹ್ಮನನ್ನು ಒಲಿಸಿಕೊಂಡು ತನಗೆ ಸಾವು ಬಾರದಂತೆ ಅನುಗೃಹಿಸು ಎಂದು ಬೇಡುತ್ತಾನೆ. ಅದಕ್ಕೆ ಬ್ರಹ್ಮ ಸಾವು ಎಲ್ಲರಿಗೂ ನಿಶ್ಚಿತ ಸಾವು ಬಾರದಂತೆ ತಡೆಯಲು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ತಾರಕಾಸುರನು, ಶಿವನಿಗೆ ಏಳು ದಿನದಲ್ಲಿ ಜನಿಸಿದ ಮಗನಿಂದ ನನಗೆ ಸಾವು ಬರುವಂತೆ ಮಾಡು ಎಂದು ವರ ಬೇಡುತ್ತಾನೆ. ಅದಕ್ಕೆ ಬ್ರಹ್ಮ ಒಪ್ಪಿ ವರ ನೀಡುತ್ತಾನೆ. ಬ್ರಹ್ಮನಿಂದ ವರ ಪಡೆದಿರುವ ತಾರಕಾಸುರ ಅಹಂಕಾರದಿಂದ ಲೋಕದೆಲ್ಲಡೆ ಉಪಟಳ ನೀಡುತ್ತಿರುತ್ತಾನೆ. 

ಆಗ ದೇವತೆಗಳೆಲ್ಲ ಸಹಾಯ ಕೋರಿ ಶಿವನಲ್ಲಿಗೆ ಹೋದಾಗ ಶಿವ ಭೋಗಸಮಾಧಿಯಲ್ಲಿರುತ್ತಾನೆ. ಶಿವ ಭೋಗಸಮಾಧಿಯಿಂದ ಎದ್ದು ಪಾರ್ವತಿಯಲ್ಲಿ ಮೋಹಗೊಂಡು ಸೇರುವಂತೆ ಮಾಡುವುದಕ್ಕಾಗಿ ದೇವತೆಗಳೆಲ್ಲ ಸೇರಿ ರತಿ ಮನ್ಮಥರನ್ನು ಒಪ್ಪಿಸುತ್ತಾರೆ. ಪುಣ್ಯಕಾರ್ಯ ಮಾಡಲು ರತಿ ಮನ್ಮಥರು ಒಪ್ಪುತ್ತಾರೆ. ಅದರಂತೆ ಧ್ಯಾನಸ್ಥ ಸ್ಥಿತಿಯಲ್ಲಿದ್ದ ಮಹಾದೇವನ ಎದುರು ನೃತ್ಯ ಮಾಡಿ, ಹೂವಿನ ಬಾಣ ಬಿಟ್ಟು ಶಿವನ ಧ್ಯಾನಕ್ಕೆ ಭಂಗ ತರುತ್ತಾರೆ. ಇದರಿಂದ ಕುಪಿತಗೊಂಡ ಶಿವ ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟುಬಿಡುತ್ತಾನೆ. ನಂತರ ರತಿ ಪತಿಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥ ಕಾಣುವಂತೆ ವರ ನೀಡುತ್ತಾನೆ.

ರಂಗಿನಾಟದ ಮೋಜು ಮಸ್ತಿ..
ಮನ್ಮಥನಿಗೆ ಕಾಮ ಎಂಬ ಹೆಸರಿದೆ. ಹೀಗಾಗಿ ಕಾಮ ಶಿವನ ಕೆಂಗಣ್ಣಿಗೆ ಗುರಿಯಾಗಿ ಸುಟ್ಟುಹೋದ ದಿನವನ್ನು ಕಾಮನ ಹಬ್ಬವಾಗಿ ಆಚರಿಸುತ್ತಾರೆ. ಹೀಗಾಗಿ ಕಾಮನನ್ನು ಸುಟ್ಟು ಹೋಳಿಹುಣ್ಣಿಮೆ ಆಚರಿಸುವ ಪದ್ಧತಿ ಆಚರಣೆಯಲ್ಲಿ ಬಂದಿದೆ. 

ಹೋಳಿ ಹಬ್ಬಕ್ಕಾಗಿ ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿ ಗುಲಾಲು ತಯಾರಿಸಿಕೊಂಡು ಓಕುಳಿಯಾಡುವ ಸಂಪ್ರದಾಯವಿದೆ. ಈಗೀಗ ಕೃತಕ ಬಣ್ಣಗಳನ್ನು ಎರಚಾಟಕ್ಕೆ ಹೆಚ್ಚಾಗಿ ಬಳಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ವಿಜ್ರಂಭಣೆಯಿಂದ ಆಚರಿಸಲ್ಪಡುವ ಹೋಳಿಯಲ್ಲಿ ವಿಶೇಷ ಖಾದ್ಯಗಳನ್ನೂ ಮಾಡಲಾಗುತ್ತದೆ. ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಹೋಳಿಹಬ್ಬದ ವಿಶೇಷ ತಿಂಡಿಗಳು. 

ನಮ್ಮ ರಾಜ್ಯದಲ್ಲಿಯೂ ದಕ್ಷಿಣ ಕರ್ನಾಟಕದಲ್ಲಿಯೂ ಹಲವೆಡೆ ಹೋಳಿಯ ವಿಶಿಷ್ಠ ಆಚರಣೆಯಿಂದೆ. ಊರ ದೇವಸ್ಥಾನದ ಮುಂದೆ ಹೋಳಿ ಹುಣ್ಣಿಮೆಯ ಸಾಯಂಕಾಲ ಹೋಳಿಯನ್ನು ಹೊತ್ತಿಸಲಾಗುತ್ತದೆ. ಹೋಳಿ ಎಂದರೆ ಕಾಮನ ಪ್ರತಿರೂಪ. ಇದನ್ನು ಔಡಲಗಿಡ, ತೆಂಗಿನಗಿಡ, ಅಡಿಕೆಗಿಡ ಅಥವಾ ಕಬ್ಬನ್ನು ಮಧ್ಯ ನಿಲ್ಲಿಸಿ, ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ಕಟ್ಟಿ. ಸುಲಭವಾಗಿ ದಹನವಾಗುವ ರೀತಿಯಲ್ಲಿ ರಚಿಸಲಾಗಿರುತ್ತದೆ.
ನಂತರ ಇದನ್ನು ಊರ ಮುಖಂಡ ಪೂಜೆ ಮಾಡಿ, ನೈವೇದ್ಯ ನೀಡಿ, ಹೋಳಿಯನ್ನು ಹೊತ್ತಿಸುತ್ತಾನೆ. ಹೋಳಿ ಹೊತ್ತಿಕೊಂಡಾಗ ಅದರ ಸುತ್ತ ಪ್ರದಕ್ಷಿಣೆ ಹಾಕಲಾಗುತ್ತದೆ. ನಂತರ ಪ್ರಸಾದದ ರೂಪದಲ್ಲಿ ತೆಂಗಿನ ಕಾಯಿ, ಹಲಸು ಮುಂತಾದ ಹಣ್ಣುಗಳನ್ನು ಹಂಚಲಾಗುತ್ತದೆ. 
ಹೋಳಿ ಹುಣ್ಣಿಮೆಯ ರಾತ್ರಿಯನ್ನು ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿ ಆಚರಿಸಲಾಗುತ್ತದೆ. 

ಭಾರತದಾದ್ಯಂತ ಆಚರಿಸಲ್ಪಡುವ ಮನೋರಂಜನೆಯ ಹಬ್ಬ ಹೋಳಿ ಹಬ್ಬ ವರ್ಷಪೂರ್ತಿ ಹರ್ಷ ತರಲಿ, ಓಕುಳಿಯಾಡಿ ಖುಷಿಪಟ್ಟ ಎಲ್ಲರಲ್ಲಿಯೂ ಇಡೀ ವರ್ಷಪೂ ಹರ್ಷದ ರಂಗು ಮಾಸದಿರಲಿ ಎಂಬುದು ನಮ್ಮ ಹಾರೈಕೆ.

ಹೋಳಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*

 *ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

ಲಕ್ಷ್ಮಿ ಜಯಂತಿ ಎಂದರೆ ಲಕ್ಷ್ಮಿ ದೇವಿಯ ಜನ್ಮದಿನ.

ಲಕ್ಷ್ಮಿ ಜಯಂತಿ ಎಂದರೆ ಲಕ್ಷ್ಮಿ ದೇವಿಯ ಜನ್ಮದಿನ. 

 ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆ.  

ಸಮುದ್ರ ಮಂಥನ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕ್ಷೀರಸಾಗರದ ಮಹಾ ಮಂಥನದ ಸಮಯದಲ್ಲಿ ಲಕ್ಷ್ಮಿ ದೇವಿಯು ಫಾಲ್ಗುಣ ಪೂರ್ಣಿಮೆಯಂದು ಜನಿಸಿದಳು ಎಂದು ನಂಬಲಾಗಿದೆ.

 ಫಾಲ್ಗುಣ ಪೂರ್ಣಿಮೆಯ ದಿನವು ಹೆಚ್ಚಾಗಿ ಉತ್ತರ ಫಾಲ್ಗುಣಿ ನಕ್ಷತ್ರದೊಂದಿಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಗಮನಿಸುವುದು ಗಮನಾರ್ಹವಾಗಿದೆ.  

ಹಾಗಾಗಿ ಉತ್ತರ ಫಾಲ್ಗುಣ ದಿನವೂ ಲಕ್ಷ್ಮಿ ಜಯಂತಿಯೊಂದಿಗೆ ಸಂಬಂಧ ಹೊಂದಿದೆ.  ಲಕ್ಷ್ಮಿ ಜಯಂತಿಯನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತದೆ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಇದು ಕಡಿಮೆ ಪ್ರಸಿದ್ಧವಾಗಿದೆ.

 ಲಕ್ಷ್ಮಿ ಜಯಂತಿಯ ದಿನವು ಸಂಪತ್ತು ಮತ್ತು ಸಮೃದ್ಧಿಯ ದೇವತೆಯನ್ನು ಸಮಾಧಾನಪಡಿಸಲು ಮಹತ್ವದ್ದಾಗಿದೆ.  ಲಕ್ಷ್ಮೀ ಜಯಂತಿಯಂದು ಜನರು ಲಕ್ಷ್ಮೀ ಹೋಮವನ್ನು ಮಾಡುತ್ತಾರೆ.  

ಲಕ್ಷ್ಮೀ ಹೋಮದ ಸಮಯದಲ್ಲಿ ಲಕ್ಷ್ಮಿ ಸಹಸ್ರನಾಮಾವಳಿ ಅಂದರೆ ಲಕ್ಷ್ಮಿ ದೇವಿಯ 1000 ಹೆಸರುಗಳು ಮತ್ತು ಶ್ರೀ ಸೂಕ್ತಂ ಅನ್ನು ಪಠಿಸಲಾಗುತ್ತದೆ.  ಮಹಾಲಕ್ಷ್ಮಿಯನ್ನು ಸಂತೈಸಲು ಜೇನುತುಪ್ಪದಲ್ಲಿ ಅದ್ದಿದ ಕಮಲದ ಹೂವುಗಳನ್ನು ಆಹುತಿಗೆ ಬಳಸಲಾಗುತ್ತದೆ.

ಲಕ್ಷ್ಮಿ ಜಯಂತಿ ಸಮಯ

 ಲಕ್ಷ್ಮಿ ಜಯಂತಿ ಶುಕ್ರವಾರ, ಮಾರ್ಚ್ 18, 2022
 ಪೂರ್ಣಿಮಾ ತಿಥಿ ಪ್ರಾರಂಭವಾಗುತ್ತದೆ - ಮಾರ್ಚ್ 17, 2022 ರಂದು 01:29 PM
 ಪೂರ್ಣಿಮಾ ತಿಥಿ ಕೊನೆಗೊಳ್ಳುತ್ತದೆ - 

ಮಾರ್ಚ್ 18, 2022 ರಂದು 12:47 PM
 ಲಕ್ಷ್ಮಿ ಜಯಂತಿಯಂದು ಲಕ್ಷ್ಮೀ ಜಯಂತಿಯಂದು ಚೋಘಡಿಯ ಮುಹೂರ್ತಕ್ಕಾಗಿ ಪಂಚಾಂಗ
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

ॐಶ್ರೀಮಹಾಲಕ್ಷ್ಮೀನಮೋಸ್ತುತೇ ದಾ ರಿ ದ್ರ್ಯ ನಾ ಶ ನಂ🌷|| ಸಿದ್ಧಿಲಕ್ಷ್ಮೀಸ್ತೋತ್ರಂ ||🌷

🚩ॐಶ್ರೀಮಹಾಲಕ್ಷ್ಮೀನಮೋಸ್ತುತೇ
            ದಾ  ರಿ  ದ್ರ್ಯ  ನಾ  ಶ  ನಂ
🌷|| ಸಿದ್ಧಿಲಕ್ಷ್ಮೀಸ್ತೋತ್ರಂ ||🌷
ಬ್ರಾಹ್ಮೀಂ ಚ ವೈಷ್ಣವೀಂ ಭದ್ರಾಂ ಷಡ್ಭುಜಾಂಚ ಚತುರ್ಮುಖಾಂ |
ತ್ರಿನೇತ್ರಾಂ ಚ ತ್ರಿಶೂಲಾಂ ಚ ಪದ್ಮಚಕ್ರಗದಾಧರಾಂ ||
ಪೀತಾಂಬರಧರಾಂ ದೇವೀಂ ನಾನಾಲಂಕಾರಭೂಷಿತಾಂ |
ತೇಜಃಪುಂಜಧರಾಂ ಶ್ರೇಷ್ಠಾಂ ಧ್ಯಾಯೇದ್ಬಾಲಕುಮಾರಿಕಾಂ ||
ಓಂಕಾರಲಕ್ಷ್ಮೀರೂಪೇಣ ವಿಷ್ಣೋರ್ಹೃದಯಮವ್ಯಯಂ |
ವಿಷ್ಣುಮಾನಂದಮಧ್ಯಸ್ಥಂ ಹ್ರೀಂಕಾರಬೀಜರೂಪಿಣೀ ||
ಓಂ ಕ್ಲೀಂ ಅಮೃತಾನಂದಭದ್ರೇ ಸದ್ಯ ಆನಂದದಾಯಿನೀ |
ಓಂ ಶ್ರೀಂ ದೈತ್ಯಭಕ್ಷರದಾಂ ಶಕ್ತಿಮಾಲಿನೀ ಶತ್ರುಮರ್ದಿನೀ ||
ತೇಜಃಪ್ರಕಾಶಿನೀ ದೇವೀ ವರದಾ ಶುಭಕಾರಿಣೀ |
ಬ್ರಾಹ್ಮೀ ಚ ವೈಷ್ಣವೀ ಭದ್ರಾ ಕಾಲಿಕಾ ರಕ್ತಶಾಂಭವೀ ||
ಆಕಾರಬ್ರಹ್ಮರೂಪೇಣ ಓಂಕಾರಂ ವಿಷ್ಣುಮವ್ಯಯಂ |
ಸಿದ್ಧಿಲಕ್ಷ್ಮಿ ಪರಾಲಕ್ಷ್ಮಿ ಲಕ್ಷ್ಯಲಕ್ಷ್ಮಿ ನಮೋಽಸ್ತುತೇ ||
ಸೂರ್ಯಕೋಟಿಪ್ರತೀಕಾಶಂ ಚಂದ್ರಕೋಟಿಸಮಪ್ರಭಂ |
ತನ್ಮಧ್ಯೇ ನಿಕರೇ ಸೂಕ್ಷ್ಮಂ ಬ್ರಹ್ಮರೂಪವ್ಯವಸ್ಥಿತಂ ||
ಓಂಕಾರಪರಮಾನಂದಂ ಕ್ರಿಯತೇ ಸುಖಸಂಪದಾ |
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ||
ಪ್ರಥಮೇ ತ್ರ್ಯಂಬಕಾ ಗೌರೀ ದ್ವಿತೀಯೇ ವೈಷ್ಣವೀ ತಥಾ |
ತೃತೀಯೇ ಕಮಲಾ ಪ್ರೋಕ್ತಾ ಚತುರ್ಥೇ ಸುರಸುಂದರೀ ||
ಪಂಚಮೇ ವಿಷ್ಣುಪತ್ನೀ ಚ ಷಷ್ಠೇ ಚ ವೈಏಷ್ಣವೀ ತಥಾ |
ಸಪ್ತಮೇ ಚ ವರಾರೋಹಾ ಅಷ್ಟಮೇ ವರದಾಯಿನೀ ||
ನವಮೇ ಖಡ್ಗತ್ರಿಶೂಲಾ ದಶಮೇ ದೇವದೇವತಾ |
ಏಕಾದಶೇ ಸಿದ್ಧಿಲಕ್ಷ್ಮೀರ್ದ್ವಾದಶೇ ಲಲಿತಾತ್ಮಿಕಾ ||
ಏತತ್ಸ್ತೋತ್ರಂ ಪಠಂತಸ್ತ್ವಾಂ ಸ್ತುವಂತಿ ಭುವಿ ಮಾನವಾಃ |
ಸರ್ವೋಪದ್ರವಮುಕ್ತಾಸ್ತೇ ನಾತ್ರ ಕಾರ್ಯಾ ವಿಚಾರಣಾ ||
ಏಕಮಾಸಂ ದ್ವಿಮಾಸಂ ವಾ ತ್ರಿಮಾಸಂ ಚ ಚತುರ್ಥಕಂ |
ಪಂಚಮಾಸಂ ಚ ಷಣ್ಮಾಸಂ ತ್ರಿಕಾಲಂ ಯಃ ಪಠೇನ್ನರಃ ||
ಬ್ರಾಹ್ಮಣಾಃ ಕ್ಲೇಶತೋ ದುಃಖದರಿದ್ರಾ ಭಯಪೀಡಿತಾಃ |
ಜನ್ಮಾಂತರಸಹಸ್ರೇಷು ಮುಚ್ಯಂತೇ ಸರ್ವಕ್ಲೇಶತಃ ||
ಅಲಕ್ಷ್ಮೀರ್ಲಭತೇ ಲಕ್ಷ್ಮೀಮಪುತ್ರಃ ಪುತ್ರಮುತ್ತಮಂ |
ಧನ್ಯಂ ಯಶಸ್ಯಮಾಯುಷ್ಯಂ ವಹ್ನಿಚೌರಭಯೇಷು ಚ ||
ಶಾಕಿನೀಭೂತವೇತಾಲಸರ್ವವ್ಯಾಧಿನಿಪಾತಕೇ |
ರಾಜದ್ವಾರೇ ಮಹಾಘೋರೇ ಸಂಗ್ರಾಮೇ ರಿಪುಸಂಕಟೇ ||
ಸಭಾಸ್ಥಾನೇ ಶ್ಮಶಾನೇ ಚ ಕಾರಾಗೇಹಾರಿಬಂಧನೇ |
ಅಶೇಷಭಯಸಂಪ್ರಾಪ್ತೌ ಸಿದ್ಧಿಲಕ್ಷ್ಮೀಂ ಜಪೇನ್ನರಃ ||
ಈಶ್ವರೇಣ ಕೃತಂ ಸ್ತೋತ್ರಂ ಪ್ರಾಣಿನಾಂ ಹಿತಕಾರಣಂ |
ಸ್ತುವಂತಿ ಬ್ರಾಹ್ಮಣಾ ನಿತ್ಯಂ ದಾರಿದ್ರ್ಯಂ ನ ಚ ವರ್ಧತೇ ||
ಯಾ ಶ್ರೀಃ ಪದ್ಮವನೇ ಕದಂಬಶಿಖರೇ ರಾಜಗೃಹೇ ಕುಂಜರೇ
ಶ್ವೇತೇ ಚಾಶ್ವಯುತೇ ವೃಷೇ ಚ ಯುಗಲೇ ಯಜ್ಞೇ ಚ ಯೂಪಸ್ಥಿತೇ |
ಶಂಖೇ ದೇವಕುಲೇ ನರೇಂದ್ರಭವನೀ ಗಂಗಾತಟೇ ಗೋಕುಲೇ
ಸಾ ಶ್ರೀಸ್ತಿಷ್ಠತು ಸರ್ವದಾ ಮಮ ಗೃಹೇ ಭೂಯಾತ್ಸದಾ ನಿಶ್ಚಲಾ ||
ಇತಿ ಶ್ರೀಬ್ರಹ್ಮಾಂಡಪುರಾಣೇ ಈಶ್ವರವಿಷ್ಣುಸಂವಾದೇ 
ದಾರಿದ್ರ್ಯನಾಶನಂ ಸಿದ್ಧಿಲಕ್ಷ್ಮೀಸ್ತೋತ್ರಂ ಸಂಪೂರ್ಣಂ
__________________________________________________
🌹 ಶ್ರೀಕೃಷ್ಣಾರ್ಪಣಮಸ್ತು 🌹
🙏 ಸಪಾರೆ ನಾಗೇಂದ್ರ

ಮಹಾಲಕ್ಷ್ಮೀ ಅವಿರ್ಭಜಿಸಿದ ಕಥೆ

ಮಹಾಲಕ್ಷ್ಮೀ ಅವಿರ್ಭಜಿಸಿದ ಕಥೆ

ದೂರ್ವಾಸ ಮುನಿಗಳ ಶಾಪಕ್ಕೊಳಗಾದ ಇಂದ್ರ
ಇಂದ್ರ ಪುರಾಣದ ಪ್ರಕಾರ ಋಷಿ ದೂರ್ವಾಸರು ಇಂದ್ರ ದೇವನಿಗೆ ಪುಷ್ಪಮಾಲೆಯೊಂದನ್ನು ಅರ್ಪಿಸುವರು. 

ಆದರೆ ಇಂದ್ರದೇವನು ತುಂಬಾ ಅಂಹಕಾರದಿಂದ ವರ್ತಿಸಿ, ದೂರ್ವಾಸ ಮುನಿಗಳಿಗೆ ಅಪಮಾನ ಮಾಡುವರು. ತನಗಾದ ಅಪಮಾನವನ್ನು ಸಹಿಸಲು ಆಗದೆ ದೂರ್ವಾಸ ಮುನಿಗಳು ಇಂದ್ರನಿಗೆ ಶಾಪ ನೀಡುವರು. 

ಲಕ್ಷ್ಮೀ ದೇವಿಯು ಕರುಣಿಸುವಂತಹ ಸಮೃದ್ಧಿಯಾಗಿರುವ ಶ್ರೀ ಶ್ರೀಯು ದಕ್ಕದೆ ಇರಲಿ ಎಂದು ದೂರ್ವಾಸ ಮುನಿಗಳು ಇಂದ್ರನಿಗೆ ಶಾಪ ನೀಡುವರು.

ಶಾಪದ ಪ್ರಭಾವ
ಶಾಪದ ಪ್ರಭಾವದಿಂದಾಗಿ ಲಕ್ಷ್ಮೀ ದೇವಿಯು ಇಂದ್ರನನ್ನು ಬಿಟ್ಟು ಮಹಾಲಕ್ಷ್ಮೀ  ತೆರಳುವರು. 
ಇಂದ್ರನು ದೇವಲೋಕದ ರಾಜನಾಗಿರುವನು. ಇದರಿಂದ ಲಕ್ಷ್ಮೀ ದೇವಿಯು ಬಿಟ್ಟುಹೋದ ಪರಿಣಾಮ ಸಂಪೂರ್ಣ ಸ್ವರ್ಗಲೋಕ ಮತ್ತು ಮೃತ್ಯುಲೋಕ ಕೂಡ ಸಮಸ್ಯೆಗೆ ಒಳಗಾಗುತ್ತದೆ.

ದೇವತೆಗಳು ಬ್ರಹ್ಮದೇವರ ಮೊರೆ ಹೋದರು
ಸ್ವರ್ಗಲೋಕದ ಪರಿಸ್ಥಿತಿಯನ್ನು ನೋಡಿ ಏನೂ ತೋಚದೆ ಇಂದ್ರದೇವನು ಇತರ ದೇವದೇವತೆಗಳೊಂದಿಗೆ ಬ್ರಹ್ಮದೇವರನ್ನು ಭೇಟಿಯಾಗಲು ಹೋಗುವರು. 

ಬ್ರಹ್ಮದೇವರು ಇವರನ್ನು ವಿಷ್ಣು ದೇವರು ನೆಲೆಸಿರುವಂತಹ ವೈಕುಂಠಕ್ಕೆ ಕರೆದುಕೊಂಡು ಹೋಗುವರು.

 ವಿಷ್ಣುವಿಗೆ ದೇವಲೋಕದ ಸಮಸ್ಯೆ ಬಗ್ಗೆ ತಿಳಿದಾಗ, ಅಸುರರ ನೆರವಿನೊಂದಿಗೆ ಕ್ಷೀರಸಾಗರವನ್ನು ಮಂಥನ ಮಾಡುವಂತೆ ಸಲಹೆ ನೀಡುವರು. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಸಿಂಧು ಕನ್ಯೆಯಾಗಿ ಅವರಿಗೆ ಸಿಗುವರು ಎಂದು ವಿಷ್ಣು ದೇವರು ಹೇಳುವರು.

ಅಸುರರೊಂದಿಗೆ ದೇವತೆಗಳ ಮಾತುಕತೆ
ದೇವತೆಗಳು ಅಸುರರ ಬಳಿಗೆ ಹೋಗಿ ಕ್ಷೀರಸಾಗರದಲ್ಲಿ ದೊಡ್ಡ ಮಟ್ಟದ ಖಜಾನೆ ಇರುವುದಾಗಿ ಹೇಳುವರು. ಮಂಥನ ಮಾಡಿದರೆ ಆಗ ಖಜಾನೆಯು ಮೇಲೆ ಬರುವುದು ಎಂದು ಅಸುರರನ್ನು ದೇವತೆಗಳು ನಂಬಿಸುವರು. 

ಅಲ್ಲೊಂದು ಕಲಶವು ಇದ್ದು, ಅದರಲ್ಲಿ ಅಮೃತವಿದೆ ಮತ್ತು ಇದನ್ನು ಸೇವಿಸಿದರೆ ಅಮರರಾಗುವರು ಎಂದು ಅಸುರರಿಗೆ ದೇವತೆಗಳು ತಿಳಿಸುವರು. ಇದನ್ನು ಕೇಳಿದ ಅಸುರರು ದೇವತೆಗಳೊಂದಿಗೆ ಸೇರಿಕೊಂಡು ಸಮುದ್ರ ಮಂಥನ ಮಾಡಲು ತಯಾರಾಗುವರು.

ಸಮುದ್ರ ಮಂಥನ
ಎಲ್ಲಾ ದೇವತೆಗಳು ಹಾಗೂ ಅಸುರರು ಸೇರಿಕೊಂದು ಕ್ಷೀರಸಾಗರದ ಮಂಥನ ಆರಂಭಿಸಿದರು. ಇದಕ್ಕಾಗಿ ಅವರು ಮಂಡ್ರಾಚಲ ಬೆಟ್ಟವನ್ನು ಬಳಸಿಕೊಂಡರು. ಆದರೆ ಇದು ಮುಳುಗುತ್ತಿರುವುದನ್ನು ಕಂಡರು. 

ಈ ವೇಳೆ ವಿಷ್ಣುವು ತನ್ನ ಕೂರ್ಮಾವತಾರ ತಾಳಿ ತನ್ನ ಬೆನ್ನ ಮೇಲೆ ಪರ್ವತವನ್ನು ಇರಿಸಿಕೊಂಡ. ಸರ್ಪಗಳ ರಾಜನಾಗಿರುವಂತಹ ವಾಸುಕಿಯನ್ನು ಈ ಬೆಟ್ಟಕ್ಕೆ ಕಟ್ಟಲಾಯಿತು. 

ವಾಸುಕಿಯ ಮುಖದ ಭಾಗವನ್ನು ದೇವತೆಗಳು ಹಿಡಿಕೊಂಡರೆ, ಬಾಲವನ್ನು ಅಸುರರು ಹಿಡಿದುಕೊಂಡರು. ಇದರ ಬಳಿಕ ಅಸುರರು ಮುಖದ ಭಾಗವನ್ನು ಹಿಡಿಯಬೇಕೆಂದು ಹೇಳಿದರು. ಈ ವೇಳೆ ಸ್ಥಳ ಬದಲಾಯಿಸಲಾಯಿತು.

ಶಿವನು ವಿಷಕಂಠನಾದ
ಕ್ಷೀರಸಾಗರವನ್ನು ಮಂಥನ ಮಾಡುತ್ತಿರುವ ವೇಳೆ ಮೊದಲು ಬಂದ ವಸ್ತುವೇ ಕಠೋರ ವಿಷವಾಗಿರುವಂತಹ ಹಾಲಹಲ. 

ಈ ವೇಳೆ ಹಾಲಹಲವು ಭೂಮಿಯನ್ನು ನಷ್ಟ ಮಾಡಲಿದೆಯೆಂದು ತಿಳಿದ ಈಶ್ವರನು ಇದನ್ನು ಕುಡಿದು ತನ್ನ ಕಂಠದಲ್ಲಿ ಇರಿಸಿಕೊಂಡ. ಇದರಿಂದಾಗಿ ಆತ ನೀಲಕಂಠನಾದ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.ಕ್ಷೀರಸಾಗರವನ್ನು ಮಂಥನ ಮಾಡುವಂತಹ ವೇಳೆ 14 ಅಮೂಲ್ಯ ರತ್ನಗಳ ಸಹಿತ ಹಲವಾರು ವಸ್ತುಗಳು ಬಂದಿವೆ ಎಂದು ಪುರಾಣಗಳು ಹೇಳಿವೆ.

ಲಕ್ಷ್ಮೀ ದೇವಿಯು ಜನಿಸಿದಳು
ಅಂತಿಮವಾಗಿ ಲಕ್ಷ್ಮೀ ದೇವಿಯು ಪ್ರತ್ಯಕ್ಷರಾದರು. ದೇವದೇವತೆಗಳು ಹಾಗೂ ಅಸುರರು ಲಕ್ಷ್ಮೀ ದೇವಿಯ ಸೌಂದರ್ಯವನ್ನು ನೋಡಿ ಮೂಕವಿಸ್ಮಿತರಾದರು. 

ವಿಷ್ಣು ದೇವರು ಲಕ್ಷ್ಮೀ ದೇವಿಗೆ ತನ್ನ ಪವಿತ್ರ ಸಿಂಹಾಸನ ನೀಡುವರು. ವಿಶ್ವಕರ್ಮ ದೇವರು ಲಕ್ಷ್ಮೀದೇವಿಗೆ ತಾವರೆ ಹೂ ನೀಡುವರು ಮತ್ತು ಸಮುದ್ರರಾಜನು ಬಂಗಾರದ ಬಣ್ಣದ ಬಟ್ಟೆ ನೀಡುವನು. ಲಕ್ಷ್ಮೀ ದೇವಿಯು ಎಲ್ಲವನ್ನು ಪಡೆದುಕೊಂಡ ಬಳಿಕ ಆಕೆಯ ಕಣ್ಣುಗಳು ವಿಷ್ಣು ದೇವರನ್ನು ಹುಡುಕುತ್ತಲಿತ್ತು. 

ಆಕೆ ಅಂತಿಮವಾಗಿ ವಿಷ್ಣು ದೇವರನ್ನು ನೋಡುವರು ಮತ್ತು ಪುಷ್ಪಮಾಲೆಯನ್ನು ವಿಷ್ಣುವಿಗೆ ಅರ್ಪಿಸುವರು.

ಪುರಾಣಗಳ ಪ್ರಕಾರ
ಪುರಾಣಗಳ ಪ್ರಕಾರ ಲಕ್ಷ್ಮೀ ದೇವಿಯು ಋಷಿ ಭೃಗು ಮತ್ತು ಖಯಾತಿ ದೇವಿಯ ಪುತ್ರಿ. ಪಾರ್ವತಿ ದೇವಿಯ ತಂದೆ ರಾಜ ದಕ್ಷ ಮತ್ತು ಋಷಿ ಭೃಗು ಸೋದರರು. ಪಾರ್ವತಿ ದೇವಿಯು ಈಶ್ವರನನ್ನು ಮದುವೆಯಾಗಲು ಬಯಸಿದಂತೆ, ಲಕ್ಷ್ಮೀ ದೇವಿಯು ವಿಷ್ಣು ದೇವರನ್ನು ಮದುವೆಯಾದರು. 

ಆಕೆ ಸಮುದ್ರ ಮಧ್ಯದಲ್ಲಿ ವಿಷ್ಣುವಿನ ಪೂಜೆ ಮಾಡುವರು. ಇದರ ಬಳಿಕ ವಿಷ್ಣು ದೇವರು ಲಕ್ಷ್ಮೀ ದೇವಿಯನ್ನು ಮದುವೆಯಾಗಲು ಒಪ್ಪಿಕೊಳ್ಳುವರು. ಇದು ಲಕ್ಷ್ಮೀ ದೇವಿಯು ಹುಟ್ಟಿದ ಕಥೆ ಮತ್ತು ಅವರು ಸಂಪತ್ತಿನ ದೇವತೆಯಾಗಿರುವುದು.

ಇಂದು ಲಕ್ಷ್ಮೀ ದೇವಿಗೆ ಹಾಲಿನ ಅಭಿಷೇಕ ಪೂಜೆ ಸಲ್ಲಿಸಿ
ಶ್ರೀ ಸ್ತುತಿ ಹಾಗೂ ವಿಷ್ಣು ಸ್ತುತಿ ಹೇಳಿಕೊಳ್ಳಬೇಕು.

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

🌱 *ತುಳಸಿ* 🌱



🌱 *ತುಳಸಿ* 🌱

ಶ್ರೀ ತುಳಸಿ ದೇವಿ ಮಹಾತ್ಮೆ ಅವತಾರ ದೇವತೆಗಳು ದೈತ್ಯರು ಸಮುದ್ರಮಥನ ಕಾಲದಲ್ಲಿ ,ಐರಾವತ ಮೊದಲಾದ (ಹದಿನಾಲ್ಕು) ರತ್ನಗಳು ಉದ್ಭವವಾದವು.

 ಈ ಸಂದರ್ಭದಲ್ಲಿ ಅಮೃತವೂ ಹುಟ್ಟಿತು .ಅದನ್ನು ಕಂಡಾಗ ಶ್ರೀ ಕೃಷ್ಣ ಪರಮಾತ್ಮ ಅಮೃತ ಕಲಶದಲ್ಲಿ ಆನಂದ ಭಾಷ್ಪ ಸುರಿಸಿದ. ಇದರಿಂದ ತುಳಸಿ ದೇವಿ ಅವತಾರ ಆಯಿತು ,ಎಂದು ಪುರಾಣಗಳಿಂದ ಉಲ್ಲೇಖ ತಿಳಿಯುವುದು .

ಹಿಂದೊಮ್ಮೆ ಶ್ರೀಕೃಷ್ಣನ ತುಲಾಭಾರ ಸಂದರ್ಭದಲ್ಲಿ ರುಕ್ಮಿಣಿದೇವಿ ಒಂದು ತುಳಸಿ ದಳವನ್ನು ಹಾಕಿ ತುಲಾಭಾರ ಪೂರ್ಣ ಮಾಡಿದಳು.
 ಆಗ ತುಳಸಿಗೆ ತುಲನೀಯವಾದುದು( ಸಮಾನವಾದುದು) ಯಾವುದು ಇಲ್ಲ ಎಂದು ನಿರ್ಣಯವಾಯಿತು. 

ಆದ್ದರಿಂದ ಈ ಹೆಸರು ಎಂದು ಬ್ರಹ್ಮ ವೈವರ್ತ ಪುರಾಣ ದಲ್ಲಿ ಉಲ್ಲೇಖ ಲಭ್ಯ .

🕉️ *ಶ್ರೀ ತುಳಸಿ ಪೂಜಾ :*🕉️

ಕಾರ್ತಿಕ ಶುದ್ಧ ದ್ವಾದಶಿ ತಿಥಿ ಶ್ರೀ ವಿಷ್ಣುಯೋಗ  ನಿದ್ರೆಯಿಂದ ಎಳುತ್ತಾನೆ .ಆ ದಿನ ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ .

ತುಳಸಿಯೂ ಕಾರ್ತಿಕ ಮಾಸದಲ್ಲಿ ಅವತರಿಸಿದ್ದರಿಂದ ,ಕಾರ್ತಿಕ ದ್ವಾದಶಿ ವಿವಾಹ ನಡೆಯುವ ವಾಡಿಕೆ .
ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ ,ತುಳಸಿ ಎಲ್ಲಿ ಇದೆಯೋ ಅಲ್ಲಿ ಶ್ರೀಹರಿ ಸನ್ನಿಧಾನ.

🕉️ *ತುಳಸಿಯಲ್ಲಿ ಪ್ರಕಾರಗಳು :( ವಿಧಗಳು)* 🕉️

 ಶ್ರೀ ತುಳಸಿಯಲ್ಲಿ ನಾವು ಆರು, ಏಳು,  ವಿಧಗಳನ್ನು ಕಾಣಬಹುದು.
🌱 ಶ್ರೀ ತುಳಸಿ .
🌱ಕ್ಷುದ್ರ ಪತ್ರ .
🌱ಬಿಲ್ವ ಗಂಧ.
 🌱ವವ೯ರಿ.
🌱ರಕ್ತ  ತುಳಸಿ. 
🌱 ಕೃಷ್ಣ ತುಳಸಿ.
🌱ರಾಮ ತುಳಸಿ .
ಎನ್ನುವ ಪ್ರಭೇದಗಳನ್ನು ನಾವು ಕಾಣಬಹುದು.

ಬ್ರಾಹ್ಮಣಪ್ರಿಯ

🕉️ *ನಿತ್ಯ ತುಳಸಿ ಪೂಜಾ ವಿಧಾನ ಇದೆ .* 🕉️

👏🏻 *ಪ್ರಾರ್ಥನೆ* 👏🏻

*ತನ್ಮೂಲೇ ಸವ೯ತೀಥಾ೯ನೀ  ತನ್ಮಧ್ಯೆ ಸರ್ವದೇವತಾಂ*

*ತದಾಗ್ರೇ  ಸರ್ವ ವೇದಶ್ಚ ತುಳಸೀತ್ವಾಂ ನಮಾಮ್ಯಹಂ.॥*

🌱 *ತುಳಸಿ ತೆಗೆಯುವ ಮಂತ್ರ*🌱

*ಶ್ರೀಯ : ಪ್ರಿಯೇ ಶ್ರೀಯಾವಾಸೇ ನಿತ್ಯಂ ಶ್ರೀಧರ ವಲ್ಲಭೆ*

*ಭಕ್ತ್ಯಾ ದತ್ತಂ ವಯಾಟಿಘ್ಯ೯ ಹಿ ತುಳಸಿ ಪ್ರತಿಗೃಹ್ಯತಾಂ.॥*
 
ಹೇ ದೇವಿ ದೇವರ ಪೂಜೆಗಾಗಿ ನಿನ್ನ ಸಂಗ್ರಹ ಅಂತ ಪ್ರಾರ್ಥಿಸಬೇಕು .

*ವಿಧಾನ :*

🛑ಉಗುರು ಹತ್ತಬಾರದು.
 ✅ದ್ವಿದಳ .
✅ತ್ರಿದಳ, 
🛑 ಎಡಗೈ ಸ್ಪರ್ಶವಿಲ್ಲದೆ, 
✅ತಾಮ್ರ ಪಾತ್ರೆಯಲ್ಲಿ ಸಂಗ್ರಹಿಸಬೇಕು .

🚫 *ನಿಷೇಧ ದಿನಗಳು* 🚫

🛑ಸಂಕ್ರಮಣ ,
🛑ಹುಣ್ಣಿಮೆ ,
🛑ಅಮಾವಾಸ್ಯೆ ,
🛑ದ್ವಾದಶಿ ತಿಥಿ ,
🛑ರಾತ್ರಿ ಕಾಲ,
🛑ಸಂಧ್ಯಾಕಾಲ,
 🛑ಗ್ರಹಣ ಸಮಯ ,
ಇವು ವಜ್ಯ೯ ಸಮಯಗಳು .

ಶ್ರೀ ಇಂದಿರಾಪತಿ ದಾಮೋದರ ದೇವ ಈ ಮಾಸದ ನಿಯಾಮಕ ಅಧಿಪತಿ .
ಕಾರ್ತಿಕ ಮಾಸದಲ್ಲಿ  ಶ್ರೀ ತುಳಸಿ ದಾಮೋದರ ವಿವಾಹದ ನಂತರ ವಿವಾಹ ಮುಹೂರ್ತಗಳು ಲಭಿಸುವವು.
 ಸ್ಕಂದಪುರಾಣದಲ್ಲಿ ಶ್ರೀ ನಾರದರ ವಚನ : 

*ತುಳಸೀಕಾಷ್ಠ  ಸಂಭೂತೇ  ಮಾತೇ  ಕೃಷ್ಣ ಜನಪ್ರಿಯೆ।*

*ಬಿಭಮಿ೯ತ್ವಾ ಮಹಂ  ಕಂಠೇ ಕುರುಮಾಂ  ಕೃಷ್ಣ ವಲ್ಲಭಾಂ ॥*

   ವಿಧಿವತ್ತಾಗಿ ಶ್ರೀವಿಷ್ಣುವಿಗೆ ಅರ್ಪಿಸಿದ, ತುಳಸಿ ಮಾಲೆಯನ್ನು ಧರಿಸಿದರೆ ವಿಷ್ಣುಪದ  ಪ್ರಾಪ್ತಿ. 
ನಿರ್ಣಯ ಸಿಂಧುವಿನಲ್ಲಿ ಉಲ್ಲೇಖವಿದೆ.

ಎಲ್ಲಾ ಸಾಧನವಿದ್ದು ಶ್ರೀ ತುಳಸಿ ಇಲ್ಲದ ಪೂಜೆ, ವಲ್ಲನೊ ಹರಿ ಕೊಳ್ಳನೊ 
 ಎಂದು ದಾಸವಾಣಿ .ದೇವರ ಪೂಜೆ ,
ಪಿತೃ ಪೂಜೇ,ಮಾಡುವಾಗ ತುಳಸಿ ಮಾಲೆ ಧಾರಣೆ ಬೇಕು.

 ಇನ್ನು ಶ್ರೀ ತುಳಸಿಯ ಅನಂತ ನಾಮಗಳನ್ನು ನೋಡಿದಾಗ:

 ಸಂಸ್ಕೃತದಲ್ಲಿ ,
ತುಳಸಿ ,
ಸುಲಭಾ,
ಸುರನಾ ,
ಬಹುಮಂಜರಿ,
ಶೂ  ಲಕ್ಷ್ಮಿ, 
ದೇವ ದುಂದುಭಿ,
ಪಾವನಿ ,
ವಿಷ್ಣುಪ್ರಿಯಾ,
 ದಿವ್ಯ ,
ಭಾರತಿ ,
  ಹೀಗೆ ಅನೇಕ ನಾಮಗಳಿಂದ ಸಂಬೋಧಿಸುವರು.

*ಶ್ರೀ ತುಳಸಿಯ ಔಷಧೀಯ ಗುಣಗಳನ್ನು ನೋಡಿದಾಗ :* 

ತುಳಸಿಯದುವಿಶಿಷ್ಟ ಸುವಾಸನೆ,  ಅನೇಕ ಔಷಧಿ ಗುಣ ಹೊಂದಿದೆ. ಔಷಧಿ ವಲಯದಲ್ಲಿ ಇದರ ಬೇಡಿಕೆ ಅಧಿಕ ಹೊರದೇಶಗಳಲ್ಲಿಯೂ ಇದರ ಬೇಡಿಕೆಯಿದೆ.

 ಆಯುರ್ವೇದದಲ್ಲಿಯೂ ಅನೇಕ ರೀತಿಯ ಚಿಕಿತ್ಸೆಗೆ ಇದರ ಬಳಕೆ ಮಾಡುವರು .

ಯುರೋಪಿನಲ್ಲಿ ಆಹಾರವಾಗಿ ಬಳಸುತ್ತಾರೆ .ಇದು ಕೀಟನಾಶಕ ಗುಣವನ್ನು ಹೊಂದಿದೆ ,ಇನಫೆಕ್ಷನ್  ತಡೆಗಟ್ಟುವುದು.  ರೋಗ ಪ್ರತಿರೋಧಕ ಶಕ್ತಿ ವೃದ್ಧಿಗೆ ಪೂರಕ ಫಲಕಾರಿ. ಯ್ಯಾಂಟಿಬೆಕ್ಟೇರಿಯಲ್ಲ,  ಯಾಂಟಿವೈರಲ್,  ಯಾಂಟಿಸೆಪ್ಟಿಕ,   ಆಗಿಯೂ ಇದನ್ನು ಬಳಸುವರು.
ಈಜಿಪ್ತಿನಲ್ಲಿ ಆಹಾರ ಪದಾರ್ಥ ಕೆಡದಂತೆ ರಕ್ಷಿಸಲು ಇದರ ಬಳಕೆ ಉಂಟು,
 ತುಳಸಿತೈಲ  ನರರೋಗಕ್ಕೆ  ಉತ್ತಮ ಔಷಧೀಯ ಗುಣ ಹೊಂದಿರುವದು.ಒತ್ತಡ ಖಿನ್ನತೆ ನಿವಾರಕವೂ ಹೌದು ,ಶ್ವಾಸ ಸಂಬಂಧಿ ಜ್ವರ ನಿವಾರಕ ಹಾಗೂ ನೆಗಡಿಗೆ ಉಪಯುಕ್ತ ಔಷಧ ವಿದು.  ಬಹುಮುಖಿ ಗುಣಕಾರಿ ಸ್ವಭಾವ ತುಳಸಿ ಗುಣಧರ್ಮ.

*ವಾಸ್ತು ಪ್ರಕಾರ ತುಳಸಿ ಮನೆಯಲ್ಲಿ ಪ್ರತಿಷ್ಠಾಪನೆ:* 

1) ನೈರುತ್ಯ ಭಾಗ ಶ್ರೇಷ್ಠ ಎತ್ತರದ ಸ್ಥಳದಲ್ಲಿ ಸ್ಥಾಪಿಸಬೇಕು .

2) ಪೂರ್ವ ಮುಖ ದ್ವಾರದಲ್ಲಿ ಮನೆಯ ಆಗ್ನೇಯ ಪೂರ್ವದಲ್ಲಿ ಸೂಕ್ತ .

3) ಮೂರನೆಯ ಭಾಗ, ಪಶ್ಚಿಮ ನೈರುತ್ಯ ಭಾಗ ಮಧ್ಯಮ .

4) ಉತ್ತರ ವಾಯುವ್ಯ ಭಾಗ ಮಧ್ಯಮ .

5) ಈಶಾನ್ಯ ಆರೋಗ್ಯ ಹಾನಿ.

6) ದಕ್ಷಿಣ ಹಾಗೂ ಪಶ್ಚಿಮ ಭಾಗ ಮನೆಯಲ್ಲಿ ಗಿಡಗಳನ್ನು ನಡುವುದು ಸೂಕ್ತ,

 * ಇನ್ನು ಮರಗಳು ಹಗಲು ಇಂಗಾಲವನ್ನು ಗ್ರಹಿಸಿ ರಾತ್ರಿ ಸಮಯ ಆಮ್ಲಜನಕ ಗ್ರಹಿಸುವವು,  ಆದರೆ ತುಳಸಿ ಮಾತ್ರ ಹಗಲು ಹಾಗೂ ರಾತ್ರಿ ಪ್ರಾಣ ವಾಯುವನ ಬಿಡುವುದು.

For Daily updates join our Whatsapp group.

https://chat.whatsapp.com/G47EI51mAJ9HoNRApC0nfu

🌸 *ಕನಕದಾಸರು*🌸

🌸 *ಕನಕದಾಸರು*🌸

ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರಲ್ಲಿ ಕನಕದಾಸರು ಒಬ್ಬರು. 15-16ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಾಗಿದ್ದರು. 

ಇವರು ಆಧುನಿಕ ಕರ್ನಾಟಕದ ಕವಿ, ತತ್ವಜ್ಞಾನಿ, ಸಂಗೀತಗಾರ ಮತ್ತು ಸಂಯೋಜಕರಾಗಿದ್ದು, ಕೀರ್ತನೆ ಮತ್ತು ಉಗಾಭೋಗಕ್ಕೆ ಹೆಸರುವಾಸಿಯಾಗಿದ್ದಾರೆ.

 ಕೀರ್ತನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳವಾಗಿ ಕನ್ನಡ ಭಾಷೆಯಲ್ಲಿ ರಚಿಸಿ, ಎಲ್ಲಾ ಕಾಲಘಟ್ಟಕ್ಕೂ ಸಲ್ಲುವಂತೆ ಮಾಡಿದ್ದಾರೆ.

ಕನಕದಾಸರ ಕುರಿತಾದ ಕೆಲವು ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ:

1. ತಿಮ್ಮಪ್ಪ ನಾಯಕ ಕನಕದಾಸರ ಮೂಲ ಹೆಸರಾಗಿದ್ದು, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.

2. ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತರು. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತ್ಯಕ್ಕೆ ದಂಡನಾಯಕರಾದರು.

3. ಕನಕದಾಸರು ದಂಡನಾಯಕರಾಗಿದ್ದಾಗ, ಯುದ್ಧವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಸೋತ ನಂತರ ವೈರಾಗ್ಯ ಉಂಟಾಗಿ ಯೋಧರಾಗಿ ತಮ್ಮ ವೃತ್ತಿಯನ್ನು ತ್ಯಜಿಸಿ ಹರಿಭಕ್ತರಾದರಂತೆ.

4. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ಇವರಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತ, ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರಾದರು. *ಬ್ರಾಹ್ಮಣ ಪ್ರಿಯ.* ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತನಾಮ ಕಾಗಿನೆಲೆಯ ಆದಿಕೇಶವರಾಯ ಎಂಬುದಾಗಿದೆ.

5. 15 - 16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು. ಈ ವ್ಯವಸ್ಥೆಯ ಕುರಿತು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.

6. ಕರ್ನಾಟಕ ಸಂಗೀತಕ್ಕಾಗಿ ಕನ್ನಡ ಭಾಷೆಯಲ್ಲಿ ಸಂಯೋಜನೆ ಮಾಡಿದ್ದಾರೆ. ಇತರ ಹರಿದಾಸರಂತೆ, ಅವರು ಸರಳ ಕನ್ನಡ ಭಾಷೆ ಸಂಯೋಜನೆಗಳಿಗೆ ಬಳಸಿದರು. ಜನಸಾಮಾನ್ಯರಿಗ ಸುಲಭವಾಗಿ ಅರ್ಥವಾಗುವುದು ಇದರ ಹಿಂದಿನ ಉದ್ದೇಶವಿರಬಹುದು.

7. ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿರುವುದಲ್ಲದೇ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿವೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:

ಮೋಹನತರಂಗಿಣಿ

ನಳಚರಿತ್ರೆ

ರಾಮಧಾನ್ಯ ಚರಿತೆ

ಹರಿಭಕ್ತಿಸಾರ

ನೃಸಿಂಹಸ್ತವ

For Daily updates join our whatsapp group .

https://chat.whatsapp.com/GxqY0y3STRqF3firzyTl2p

ಸಂಕಷ್ಟಹರ ಚತುರ್ಥಿ ವ್ರತ



🔯 *ಸಂಕಷ್ಟಹರ ಚತುರ್ಥಿ ವ್ರತ* 🔯

ಸಂಕಷ್ಟ ಚತುರ್ಥಿಯು ಮಂಗಳವಾರದಂದು ಬಂದರೆ ಅದಕ್ಕೆ 'ಅಂಗಾರಕಿ" ಎಂಬ ವಿಶೇಷ ಮಹತ್ವ. ಅಂಗಾರ ಅಂದರೆ ಸಂಸ್ಕೃತದಲ್ಲಿ ಕೆಂಡ ಎಂದರ್ಥ. ಕೆಂಡದಂತೆ ನಿಗಿನಿಗಿ ಹೊಳೆಯುವುದು ಅಂಗಾರಕ - ಮಂಗಳಗ್ರಹ. ಮಂಗಳನನ್ನು ಭೂಮಿಪುತ್ರನೆಂದೂ ಪುರಾಣಗಳು ಹೇಳುತ್ತವೆ. ಭೂಮಿಪುತ್ರನಾದ್ದರಿಂದ ಭೌಮ. ಮಂಗಳವಾರಕ್ಕೆ ಭೌಮವಾರವೆಂದೂ ಹೆಸರಿದೆ. ಭೂಲೋಕಕ್ಕೆ ಗಣೇಶ ಅಧಿದೇವತೆಯಾಗಿರುವಂತೆಯೇ ಮಂಗಳಕ್ಕೂ ಕೂಡ. ಅದಕ್ಕೆಂದೇ ಮಂಗಳವಾರ ಸಂಕಷ್ಟಿ ಬಂದರೆ ಅದಕ್ಕೆ 'ಅಂಗಾರಕಿ"ಯೆಂಬ ವಿಶೇಷ. 

ಅಂಗಾರಿಕಾ ಸಂಕಷ್ಟಿ🕉

ಚೌತಿ ಎಂದ ಕೂಡಲೇ ಎಲ್ಲರ ಮನದಲ್ಲಿ ಮೂಡುವ ಮೊದಲ ಚಿತ್ರವೇ ಗಣಪತಿ.
ಅದರಲ್ಲೂ ನಾವು ಎರಡು ವಿಧದಲ್ಲಿ ಚತುರ್ಥಿ ನೋಡಬಹುದು.
೧.ಶುಕ್ಲ ಚೌತಿ
ಭಾದ್ರಪದ ಈ ಶುಕ್ಲ ಚೌತಿ ವಿನಾಯಕ ಚೌತಿ.

೨.ಕೃಷ್ಣ ಚೌತಿ

ಕೃಷ್ಣ ಪಕ್ಷದಲ್ಲಿ ಬರುವ ಚೌತಿಯನ್ನು ಕೃಷ್ಣ ಚೌತಿಯನ್ನು ಅಥವಾ ಸಂಕಷ್ಟಿ ಚೌತಿ ಎಂತಲೂ ಕರೆಯಲಾಗುತ್ತದೆ. ಮಂಗಳವಾರದಿಂದ ದಿನ ಕೃಷ್ಣ ಚೌತಿ ಬಂದರೆ ಅದಕ್ಕೆ ಅಂಗಾರಿಕ ಸಂಕಷ್ಟಿ ಎಂದು ಕರೆಯುತ್ತಾರೆ.

ಅಂಗಾರಿಕ ಸಂಕಷ್ಠಿ🕉 ಅಂದರೆ ಗಣಪತಿಗೆ ಎಲ್ಲಿಲ್ಲದ ಪ್ರೀತಿ. ಮಂಗಳ ಅಥವಾ ಕುಜಗ್ರಹನಿಗೆ ಇರುವ ಇನ್ನೊಂದು ಹೆಸರೇ ಅಂಗಾರಕ. ಈ ಅಂಗಾರಕನು ಗಣಪತಿಯನ್ನು ಒಲಿಸಿಕೊಂಡಿರುವ ಕಾರಣದಿಂದ ಮಂಗಳವಾರವು ಗಣಪತಿಗೆ ಅತ್ಯಂತ ಪ್ರಿಯವಾದ ವಾರವಾಗಿದೆ. ಆದುದರಿಂದಲೇ ಗಣಪನು ಮಂಗಳವಾರದಂದು ವಿಶೇಷ ವರಪ್ರದನಾಗಿರುತ್ತಾನೆ. ಇನ್ನು  ಅದರ ಜೊತೆಗೆ ಸಂಕಷ್ಠಿಯು ಸೇರಿದರೆ ಕೇಳಬೇಕೆ?
ಇನ್ನು ಅವನು ಕೊಡುವ ಅನುಗ್ರಹಕ್ಕೆ ಎಣೆಯೇ ಇಲ್ಲದಂತಾಗುವುದು.

ಮಂಗಲಂ ನಿತ್ಯ ಕಲ್ಯಾಣಂ ಲಕ್ಷ್ಮೀ ಸೌಭಾಗ್ಯವರ್ಧನಂ|
ಲಕ್ಷ್ಮೀ ಮನೋರಥಂ ಪ್ರಾಪ್ತಿಕರಂ ಪಂಚಾಂಗಂ ಫಲಮುತ್ತಮಂ||
ತಿಥೇಶ್ಚ ಶ್ರಿಯಮಾಪ್ನೋತಿ ವಾರದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗ ನಿವಾರಣಂ||
ಕರಣಾತ್ ಚಿಂತಿತಂ ಕಾರ್ಯಂ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾ ಸ್ನಾನಫಲಂ ಲಭೇತ್

For Daily updates join our whatsapp group.

https://chat.whatsapp.com/IN7RfavN6I50nw6HmGJvUz

ಗೋವಾ ಹೋಗಿ ಕ್ರಿಸ್ಮಸ್, ನ್ಯೂ ಇಯರ್ ಆಚರಿಸುತ್ತ ಸೇಂಟ್ ಕ್ಸೇವಿಯರ್ ಶವದರ್ಶನ ಮಾಡುವ ಹಿಂದುಗಳು ಇದನ್ನ ಓದಲೇಬೇಕು

ಗೋವಾ ಹೋಗಿ ಕ್ರಿಸ್ಮಸ್, ನ್ಯೂ ಇಯರ್ ಆಚರಿಸುತ್ತ ಸೇಂಟ್ ಕ್ಸೇವಿಯರ್ ಶವದರ್ಶನ ಮಾಡುವ ಹಿಂದುಗಳು ಇದನ್ನ ಓದಲೇಬೇಕು

ಮೊನ್ನೆ ಮೊನ್ನೆಯಷ್ಟೆ ಗೋಮಂತ(ಗೋವಾ)ಕ್ಕೆ ಹೋಗಿದ್ದೆ, ಗೋವಾಕ್ಕೆ ಹೊಸವರ್ಷ, ಕ್ರಿಸ್ಮಸ್ ಅಥವ ಬೀಚ್ ಪಾರ್ಟಿ ಮಾಡಬೇಕೆಂದೇನೂ ಹೋದವನಲ್ಲ, ಅಚಾನಕ್ಕಾಗಿ ಕೆಲಸದ ನಿಮಿತ್ತ ತೆರಳಿದ್ದೆ.

ಮೊದಲ ಬಾರಿಗೆ ಗೋವಾಕ್ಕೆ ಭೇಟಿ ನೀಡಿದ್ದರಿಂದ ಸಹಜವಾಗಿಯೇ ಗೋವಾ ಸುತ್ತಾಡಿ ಬಂದೆ, ಗೋವಾದಲ್ಲಿ ಅನೇಕ ಜನ ಬೀಚ್, ಪಾರ್ಟಿ, ಗುಂಡು, ತುಂಡು, ಕ್ರಿಸ್ಮಸ್, ನ್ಯೂಯೀಯರ್ ಅಂತಲೇ ಹೋಗೋದು ಹೆಚ್ಚು.

ಅದರಲ್ಲೂ ಓಲ್ಡ್ ಗೋವಾನಲ್ಲಿರೋ ಕ್ಸೇವಿಯರ್ ಚರ್ಚ್ ಗೆ ಹೋಗಿ ಅಲ್ಲಿ 500 ವರ್ಷಗಳಿಂದ ಸಂರಕ್ಷಿಸಿಟ್ಟಿರೋ ಕೊ-ಳೆ-ತ ಕ್ಸೇವಿಯರನ ಹೆಣ ನೋಡೋಕೂ ಅಜ್ಞಾನಿ ಹಿಂದುಗಳು ಕ್ರಿಶ್ಚಿಯನ್ನರಿಗಿಂತಲೂ ಹೆಚ್ಚು ಭೇಟಿ ಕೊಡುತ್ತಾರೆ.

ಆದರೆ ಗೋವೆಯ ಇತಿಹಾಸ, ಕೊಲೆಗಡುಕ ಕ್ಸೇವಿಯರನ ಬಗ್ಗೆ ಗೊತ್ತಿರದ ನಮ್ಮ ಅಜ್ಞಾನಿ ಹಿಂದುಗಳು ಅಲ್ಲಿಗೆ ಹೋಗಿ ಕ್ಯಾಂಡಲ್ ಹಚ್ಚಿ ಆತನನ್ನ ದೇವರೆಂದು ನಂಬಿ “ತಮ್ಮ ಕಷ್ಟಕಾರ್ಪಣ್ಯ ನೀಗಿಸು ತಂದೆ” ಅಂತ ಬೇಡಿಕೊಂಡು ಬರೋದನ್ನ ನೋಡಿದರೆ ಹೊಟ್ಟೆ ಉರಿಯುತ್ತೆ.

*ಅಷ್ಟಕ್ಕೂ ಗೋವೆಯಲ್ಲಿ ಕೊಲೆಗಡುಕ ಕ್ಸೇವಿಯರನ ಹೆ-ಣ ಸಂರಕ್ಷಿಸಿಟ್ಟಿರೋದಾದರೂ ಯಾಕೆ?*

ಒಂದು ಸಾಮ್ರಾಜ್ಯಶಾಹಿ (Imperialism)
ರಾಷ್ಟ್ರದ ಪ್ರತಿನಿಧಿಗಳು ಇನ್ನೊಂದು ನೆಲದ ನಂಬಿಕೆ, ಧರ್ಮ ಶ್ರದ್ಧೆಗಳನ್ನು ಅಗೌರವ ತೋರುವುದು, ನೆತ್ತರ ಹರಿಸಿ, ಮತಾಂತರದಿಂದ ತಮ್ಮ ಧರ್ಮಸ್ಥಾಪನೆ ಮಾಡಿದುದರಿಂದ ಮುಂದೆ ಆತ ಅದೇ ದೇಶದ ನೆಲದಲ್ಲಿ ಮಹಾನ್ ಸಂತ, ದೇವತಾ ಪುರುಷನೆಂಬ ಗೌರವಾದರಗಳಿಗೆ ಪಾತ್ರನಾಗುತ್ತಾನೆಂದರೆ, ಆ ನೆಲದ ರಾಷ್ಟ್ರೀಯ ಸ್ವಾಭಿಮಾನಕ್ಕೆ ಎಷ್ಟರ ಮಟ್ಟಿಗೆ ಅವಮಾನ ಅಂತ ನೀವೇ ಯೋಚನೆ ಮಾಡಿ.

ಪೋರ್ಚುಗೀಸರಿಂದ ಮತ್ತು ಕ್ರೈಸ್ತರಿಂದ ಗೋವಾದ ದೇವರು (ಗೋಂಯ್ಚೊ ಸಾಯ್ಬ್) ಎಂದು ವರ್ಣಿಸುತ್ತಾರೆ.

1543 ರಲ್ಲಿ ಭಾರತಕ್ಕೆ ಬಂದು ಮತಾಂತರ ಸಹಿತ ಕ್ರೈಸ್ತ ಮತ (religion) ಪ್ರಚಾರ ಮಾಡಿದ ಕ್ಯಾಥೋಲಿಕ್ ಮತಪ್ರಚಾರಕ ಫ್ರಾನ್ಸಿಸ್ ಕ್ಸೇವಿಯರ್‌ನ ಶವದರ್ಶನ ಆರಾಧನೆ ಕಾರ್ಯಕ್ರಮ (ಪ್ರತಿ 10 ವರ್ಷಗಳಿಗೊಮ್ಮೆ) ಗೋವಾದ ಕ್ಯಾಥಡ್ರಲ್ ಚರ್ಚ್‌ನಲ್ಲಿ ನವೆಂಬರ್ 22 ರಿಂದ ಜನವರಿ 4 ರವರೆಗೆ ನಡೆಯುತ್ತದೆ.

ಅಮಾಯಕ(ಅಜ್ಞಾನಿ) ಹಿಂದುಗಳು ಸೇರಿದಂತೆ ಎಲ್ಲರೂ ಆತನ ಕ್ರೂರತ್ವದ ಅರಿವಿಲ್ಲದೇ ಅವನ ಆರಾಧನೆಯಲ್ಲಿ ಪಾಲ್ಗೊಂಡು ತಮ್ಮ ಕಷ್ಟನಷ್ಟ ಸರಿಪಡಿಸು ತಂದೆಯೇ ಎಂದು ಆತನ ಶವದ ಮುಂದೆ ಕ್ಯಾಂಡಲ್ ಹಚ್ಚಿ ಹರಕೆ ಹೊತ್ತು ಪ್ರಾರ್ಥಿಸುತ್ತಾರೆ.
ಕ್ಯಾಥೋಲಿಕ್ ಮತ ಪ್ರಚಾರಕನಾಗಿದ್ದ ಕ್ಸೇವಿಯರ್ ಸಂತನಂತೆ ಮುಖವಾಡ ಧರಿಸಿ 1543 ರಲ್ಲಿ ಪೋರ್ಚುಗೀಸ್ ವೈಸ್‌ರಾಯ್ ಜತೆ ಭಾರತಕ್ಕೆ ಬಂದು, ಗೋವಾದಲ್ಲಿ ಕ್ರೈಸ್ತ ಮತ ಪ್ರಚಾರ ನಡೆಸಿದ. ಆ ಸಮಯದಲ್ಲಿ ಬ್ರಾಹ್ಮಣರು, ಪುರೋಹಿತರು, ವಿದ್ವಾಂಸರು, ಧರ್ಮಾಧಿಕಾರಿ, ಗಣ್ಯ ವ್ಯಾಪಾರಸ್ಥ ಹೀಗೆ ಎಲ್ಲರಿಂದ ಗೌರವ ಗಳಿಸಿ ಧರ್ಮದ ರಕ್ಷಕರೆನಿಸಿಕೊಂಡಿದ್ದ.

ಮತಾಂತರದ ರೂವಾರಿ, ಕ್ರೌರ್ಯದ ಪಿತಾಮಹ
ಭಾರತ ದೇಶದಲ್ಲಿ ಆಳವಾಗಿ ಜರನರಲ್ಲಿ ಬೇರುಬಿಟ್ಟ ಸನಾತನ ಧರ್ಮ ವಿಗ್ರಹಾರಾಧನೆಯನ್ನು ಭಾರತದ ನೆಲದಿಂದ ಬುಡಸಹಿತ ಕಿ-ತ್ತು ಕ್ರೈಸ್ತ ಮತವನ್ನು ಬೇರೂರಿಸುವ ಉದ್ದೇಶದಿಂದ ಕೇವಲ 36 ವಯಸ್ಸಿನ ಕ್ಸೇವಿಯರ್ ಇಲ್ಲಿನ ಜಾತಿ, ಮತ, ಧರ್ಮವನ್ನು ಕೂಲಂಕುಶವಾಗಿ ಅಧ್ಯಯನ ನಡೆಸಿ ತಿಳಿದುಕೊಂಡಿದ್ದ.

ಬ್ರಾಹ್ಮಣರು ಆ ಸಮಯದಲ್ಲಿ ಪ್ರಭಾವಿಗಳಾಗಿದ್ದರು, ಹೀಗಾಗಿ ಬ್ರಾಹ್ಮಣರನ್ನ ನಮ್ಮ ಧರ್ಮಕ್ಕೆ ಮತಾಂತರಗೊಳಿಸಬಹುದೆಂಬ ನೆಲೆಯಲ್ಲಿ ಕಪಟಿ ಕ್ಸೇವಿಯರನು ಅನೇಕ ಯೋಜನೆಗಳನ್ನು ವೈಸ್‌ರಾಯ್‌ನ ಬೆಂಬಲದೊಂದಿಗೆ ರೂಪಿಸಿದ. ಇದರ ಪರಿಣಾಮವೇ ವ್ಯಾಪಕ ಮತಾಂತರ, ದಬ್ಬಾಳಿಕೆ, ಧಾರ್ಮಿಕ ಹಿಂಸಾಚಾರ ಮಾಡಿದ.

ಬ್ರಾಹ್ಮಣ ವರ್ಗವನ್ನು ದಮನಿಸಲು ಪೋರ್ಚುಗಲ್ ರಾಜನಿಗೆ ಪತ್ರ ಬರೆದು ಭಾರತಕ್ಕೆ ಜಲಮಾರ್ಗವಾಗಿ ಕ್ರೈಸ್ತ ಪಾದ್ರಿಗಳನ್ನ ಹಿಂಸೆ ನೀಡಲು ಜನರ ಸಮೂಹವನ್ನೇ ಕರೆಸಿಕೊಂಡನು. ವೈಸ್‌ರಾಯ್‌ನಿಂದ ಆದೇಶ ಪಡೆದು ಬ್ರಾಹ್ಮಣರ ಗಮನ ಕೇಂದ್ರೀಕರಿಸಿ ಈ ಕೆಳಗಿನ ಕಾನೂನುಗಳನ್ನು ಜಾರಿಗೂ ತಂದನು.

1. ಯಾರೂ ಕೂಡಾ ತಲೆಗೆ, ಜುಟ್ಟು ಇಟ್ಟುಕೊಳ್ಳಬಾರದು.
2. ಮನೆ ಮುಂದೆ ತುಳಸಿಕಟ್ಟೆ ನಿಷಿದ್ಧ

3. ಜನಿವಾರ ಧರಿಸಬಾರದು

4. ದೇವರ ಪ್ರತಿಮೆ ಇಟ್ಟು ಪೂಜೆ, ಯಜ್ಞ ಮಾಡುವ ಹಾಗಿಲ್ಲ.

5. ವೇದಗಳನ್ನು ಓದಬಾರದು, ತಾಳೆಗರಿಯನ್ನು ಸುಟ್ಟು ಹಾಕಬೇಕು. ಜ್ಯೋತಿಷ್ಯ ಹೇಳಬಾರದು.

6. ಮದುವೆ, ಉಪನಯನ ಸಂಸ್ಕಾರ ಏರ್ಪಡಿಸಬಾರದು…

ಎಂಬಿತ್ಯಾದಿ ಕಾನೂನುಗಳಿಂದ ಸಂತ್ರಸ್ತರಾದ ಬ್ರಾಹ್ಮಣರು ಮೊದಲು ಪ್ರತಿಭಟಿಸಿದರೂ ಅಮಾನವೀಯ ಕ್ಸೇವಿಯರನ ಕ್ರೂರ ಪ್ರತಿಕ್ರಿಯೆಯಿಂದಾಗಿ ಹೆದರಿದ ಬ್ರಾಹ್ಮಣರು ಮುಂತಾದವರಲ್ಲಿ ಕೆಲವರು ತಮ್ಮ ಸ್ಥಾನ, ಮಾನ, ಪ್ರಾಣ ಉಳಿಸಿಕೊಳ್ಳಲು ರಾಜ್ಯ ಬಿಟ್ಟು ಪಕ್ಕದ ರಾಜ್ಯಗಳಿಗೆ ಪಲಾಯನ ಮಾಡಬೇಕಾಯಿತು. ಬಹುತೇಕರು ಕಾನೂನನ್ನು ಒಪ್ಪಿ ಅಲ್ಲಿರಬೇಕಾಯಿತು. ಉಳಿದ ಶ್ರೀಮಂತರು ತಮ್ಮ ಆಸ್ತಿ ರಕ್ಷಣೆಗಾಗಿ ಕ್ರೈಸ್ತ ಮತಕ್ಕೆ ಮತಾಂತರಗೊಳ್ಳಬೇಕಾಯಿತು.

ಇವರಿಗೆ ದನದ ಮಾಂಸ, ಹಂದಿ ಮಾಂಸ ತಿನ್ನುವಂತೆ ಪ್ರೇರೇಪಿಸಿ ಧರ್ಮ ಭ್ರಷ್ಟರನ್ನಾಗಿ ಮಾಡಿಸುವಲ್ಲಿ “ಸಂತ” ಫ್ರಾನ್ಸಿಸ್ ಕ್ಸೇವಿಯರ್ ಯಶಸ್ವಿಯಾದ. ಇವನ ದಬ್ಬಾಳಿಕೆಯಿಂದ ಮತಾಂತರಗೊಂಡರೂ, ಕ್ರಿಶ್ಚಿಯನ್‌ರಂತೆ ನಟಿಸಿದರೂ ಹಿಂದುಗಳು ಮನೆಯಲ್ಲಿ ಗುಟ್ಟಾಗಿ ನಾಮ ಬಳಿದುಕೊಳ್ಳದೇ ಸಂಧ್ಯಾವಂದನೆ ಮಾಡಿ ಗಂಟೆ ಜಾಗಟೆ ಶಬ್ದವಿಲ್ಲದೇ ಪೂಜೆ, ಜಪ, ತಪವನ್ನು ಆಚರಿಸಿಕೊಳ್ಳುತ್ತಿದ್ದರು.

ಇದನ್ನು ತನ್ನ ಗುಪ್ತಚರರಿಂದ ತಿಳಿದುಕೊಂಡ ಕಪಟಿ ಸಂತನು ಕೋಪಗೊಂಡು ಅಂತಹವರನ್ನು ಹಿಡಿದು ಕ್ರೂರ ಶಿಕ್ಷೆಯನ್ನು ವಿಧಿಸಿದನು. (ಇತಿಹಾಸದಲ್ಲಿ ಇದು ‘Br-utal In-qu-isit-ion’ ಎಂದೇ ದಾಖಲಾಗಿದೆ).

*ಮಂತ್ರ, ಧಾರ್ಮಿಕ ಪ್ರವಚನ ನೀಡಿದ ನಾಲಿಗೆಯನ್ನು ಕತ್ತರಿಸುವುದು*

ಕಾದ ಕಬ್ಬಿಣದಿಂದ ಕಣ್ಣು ಕುರುಡಾಗಿಸಿ ಧರ್ಮ ಗ್ರಂಥಗಳನ್ನು ಓದದಂತೆ ಮಾಡುವುದು,

ಉಗುರುಗಳನ್ನು ಕಿತ್ತು ಬೆರಳಿಗೆ ಖಾರ ಎರಚುವುದು,

ಸೂಜಿ ಚುಚ್ಚುವುದು, ಸುಡುವುದು, ನಾಮವಿದ್ದ ಚರ್ಮ ಸುಲಿಯುವುದು,

ಆರೋಪಿಯ ಹೊಟ್ಟೆ ಹರಿದು ಕರುಳು ಹೊರಗೆಳೆಯುವುದು, ಈಟಿಯಿಂದ ಹೆಂಗಸರ ಎದೆ ಭಾಗವನ್ನು ತಿವಿಯುವುದು ಮೈ ಮೇಲೆ ಆ್ಯಸಿಡ್ ಸಿಂಪಡಿಸುವುದು,

ಮೊಳೆ ಹೊಡೆದ ಬೂಟುಗಳಿಂದ ಬ್ರಾಹ್ಮಣರ ದೇಹವನ್ನು ತಿವಿದು ತಿವಿದು ಮೂಳೆಗಳನ್ನು ಪುಡಿಗಟ್ಟುತ್ತಿದ್ದ.

ಹೀಗೆ ಮನಬಂದಂತೆ ಶಿಕ್ಷಿಸಿ ವಿಕೃತಾನಂದ ಪಡುತ್ತಿದ್ದವನು ಕ್ಸೇವಿಯರ್

ಸೂಚನೆ: ಭಾರತದಲ್ಲಿ ಕ್ರೂರಿ ಪೋರ್ಚುಗೀಸರಿಗೆ ಸಂಬಂಧಿಸಿದ ಈ ದಾಖಲೆಗಳು ಲಿಸ್ಬನ್ನಿನ ಪತ್ರಾಗಾರ ಇಲಾಖೆ ಪ್ರಕಟಿಸಿದ ‘The Agents of Portugues Diplomacy in India’ ಎಂಬ ಆಕರ ಗ್ರಂಥದಲ್ಲಿ ಸಿಗುತ್ತದೆ (ಪ್ರಕಟಣೆ 1952- ಗೋವಾ).

ಇದ್ಯಾವುದರ ಮಾಹಿತಿಯ ಅರಿವಿಲ್ಲದ ಅಜ್ಞಾನಿ ಹಿಂದುಗಳು ಕ್ಸೇವಿಯರನ ಶವದರ್ಶನ ಮಾಡಿ ಕ್ಯಾಂಡೆಲ್ ಹಚ್ಚಿ ಪ್ರಾರ್ಥಿಸುತ್ತಾರೆ! ನಮ್ಮ ಇತಿಹಾಸದ ಅರಿವಿಲ್ಲದಿದ್ದರೆ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತವೆ.

ಇಷ್ಟಕ್ಕೂ ತೃಪ್ತಿಗೊಳ್ಳದ ಕ್ರೂರಿ ಕ್ಸೇವಿಯರನು, ಮುಂದಿನ ಹಂತವಾಗಿ ಸ್ಥಳೀಯ ಹಿಂದು ಅರಸರೊಳಗೆ ಐಕ್ಯತೆ ಇಲ್ಲದ್ದನ್ನು ದುರುಪಯೋಗಪಡಿಸಿಕೊಂಡು ಗೋವಾವನ್ನು ಸಂಪೂರ್ಣವಾಗಿ ಗೆದ್ದು ಹಿಂದು ಆಲಯಗಳನ್ನು, ದೈವಜ್ಞ ಬ್ರಾಹ್ಮಣರ ಮೂಲ ಕುಲದೇವರುಗಳ ದೇವಸ್ಥಾನಗಳನ್ನೂ ನಾಶ ಮಾಡಿ ಮೂರ್ತಿ ಭಂಗ ಮಾಡಲು ಆಜ್ಞೆಯನ್ನು ಹೊರಡಿಸಿದನು. ಗೋಮಂತಕ ಪ್ರದೇಶದಲ್ಲೆಡೆ ದೇವಳ, ಧರ್ಮಗ್ರಂಥ, ತಾಳೆಗರಿ ದಾಖಲೆಗಳು, ವೇದ ಮಂತ್ರ ಸಾಹಿತ್ಯಗಳನ್ನು ಮನೆ – ಮಂದಿರದೊಳಕ್ಕೆ ನುಗ್ಗಿ ನಿರಂತರ ನಾಶ ಮಾಡಲಾಯಿತು.

ಸೈತಾನನಾಗಿದ್ದ ಸಂತ ಫ್ರಾನ್ಸಿಸ್ ಕ್ಸೇವಿಯರನಿಗೆ ಫೋರ್ಚುಗಲ್ ಅರಸ, ಸ್ಥಳೀಯ ಪಾದ್ರಿ, ಆರ್ಚ್ ಬಿಷಪರ ಪ್ರೋತ್ಸಾಹವಿತ್ತು.

ಬ್ರಾಹ್ಮಣರು ಹಾಗೂ ಇತರ ಜಾತಿಯ ಹಿಂದುಗಳು ತಮ್ಮ ಕುಲದೇವರ ದೇವಾಲಯಗಳ ನಾಶವನ್ನು ಕಣ್ಣಾರೆ ಅಸಹಾಯಕರಾಗಿ ನೋಡಬೇಕಾಯಿತು. ಮೂಲ ಕುಲದೇವರ ಮೂರ್ತಿಗಳನ್ನು ಗುಪ್ತವಾಗಿ ಬೇರೆಡೆಗೆ ಸಾಗಿಸಿ ಪ್ರತಿಷ್ಠಾಪಿಸಿದರು. ಈ ಬಗ್ಗೆ ವಿವರಿಸಲು ಇಲ್ಲಿ ಪುಟಗಳೇ ಸಾಲದು.

ಈ ಸಂತ ಸೈತಾನ ಬಿತ್ತಿದ ಮತಾಂತರದ ದೌರ್ಜನ್ಯದ ವಿಷಬೀಜವು ಕ್ಸೇವಿಯರನ ಮರಣಾನಂತರವೂ ಬಂದ ಆಡಳಿತ ಮುಖ್ಯಸ್ಥರಿಂದ ಕ್ರಿ.ಶ. 1810 ರಲ್ಲಿ ಬ್ರಿಟಿಷರು ಬರುವವರೆಗೂ ಮುಂದುವರೆಯಿತು.

ಇಂತಹ ರಕ್ತ ಚರಿತ್ರೆ ಹೊಂದಿರುವ ಈತನನ್ನು ‘ಗೋವಾದ ದೇವರು – ಮಹಾನ್ ಸಂತ’ ಎಂದು ವೈಭವೀಕರಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಹುಟ್ಟುತ್ತದೆ.

ಹೀಗೆ ಹಿಂದುಗಳ ರಕ್ತದ ಕೋಡಿ ಹರಿಸಿ ಮತಾಂತರಿಸಿದವನು ಪೋರ್ಚುಗೀಸರಿಗೆ ದೇವರಾಗೇ ಕಾಣುತ್ತಾನಲ್ಲವೇ? ಆತ ಹರಿಸಿದ್ದ ಹಿಂದುಗಳ ರಕ್ತ ಪೋರ್ಚುಗೀಸ್ ಕ್ರಿಶ್ಚಿಯನ್ನರಿಗೆ pride ಎಂದೇ ಹೇಳಬಹುದು ಆದ್ದರಿಂದಲೇ ಆತನನ್ನ ಸಂತ(Saint) ಅಂತ ಕರೆದು ಆತನ ಶವವನ್ನ ಭಾರತ ಬಿಟ್ಟು ಹೋಗುವಾಗ ಇಲ್ಲೇ ಗೋವೆಯಲ್ಲಿ ಬಿಟ್ಟು ಹೋದರು.

ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ಈಗಿಲ್ಲ. ಮತಾಂತರಿ ಕ್ಸೇವಿಯರ್‌ನ ಕೊಳೆತ ಪಾರ್ಥಿವ ಶರೀರದ ಶವವನ್ನು ಗೋವಾದಲ್ಲಿಟ್ಟಿರುವುದು ದೇಶದ ಹಾಗೂ ನಮ್ಮಂತಹ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವಂತದ್ದು. ಹಾಗಾಗಿ ಆ ಪಾಪಿಯ ಶರೀರವನ್ನು ಫ್ರಾನ್ಸ್ ಗೆ ಕಳುಹಿಸಬೇಕೆಂದು ಹೇಳುವ *“ಫ್ರಾನ್ಸಿಸ್ ಕ್ಸೇವಿಯರ್ ಸಂತ್ರಸ್ತರ ಹೋರಾಟ ಸಮಿತಿ”* ಯ ಅಕ್ಷೇಪ ನ್ಯಾಯಯುತವಾಗಿದೆ.

ಈತನೊಬ್ಬನೇ ಈ ರೀತಿಯಾದ ಕ್ರೌರ್ಯವೆಸಗಿಲ್ಲ, ಭಾರತವನ್ನಾಳಲು ಬಂದ ಎಲ್ಲ ವಿದೇಶಿ ಮುಸ್ಲಿಂ ಕ್ರಿಶ್ಚಿಯನ್ ಹಿಂದುಗಳ ಮೇಲೆ ಇದೇ ರೀತಿಯ ನರಸಂಹಾರ, ಮಾನಹರಣ, ಮತಾಂತರ ಮಾಡಿದವರೇ!!

ಆದರೆ ಇಂತಹ ಸೈತಾನರ ಇತಿಹಾಸದ ಅರಿವಿಲ್ಲದ ಅಜ್ಞಾನಿ ಹಿಂದುಗಳು ಕ್ರಿಸ್ಮಸ್, ಹೊಸವರ್ಷ, ಪೀರ್, ದರ್ಗಾ ಅಂತ ಅಲ್ಲಿಗೆ ಹೋಗಿ ಕ್ಯಾಂಡಲ್ ಹಚ್ಚೋದು, ಚಾದರ್ ಸಮರ್ಪಿಸೋದನ್ನ ನೋಡಿದರೆ ಹಿಂದುಗಳು ಯಾಕೆ ಇಂದಿಗೂ ಭಾರತದಲ್ಲಿ ಗುಲಾಮರಾಗಿ ಸೆಕ್ಯೂಲರಿಸಮ್ಮಿನ ಹೆಸರಮೇಲೆ ಶೋಷಣೆಗೊಳಗಾಗುತ್ತಿದ್ದಾರೆ ಅನ್ನೋದು ಅರ್ಥವಾಗುತ್ತೆ.

ಜಾಗೃತ ಹಿಂದು
Copied

🚩 *ಭಾರತದ ಭವ್ಯ ಋಷಿ ಪರಂಪರೆ* 🚩 🔥 *ಅಗಸ್ತ್ಯ ಮುನಿ* 🔥

🚩 *ಬ್ರಾಹ್ಮಣ ಪ್ರಿಯ* 🚩

🚩 *ಭಾರತದ ಭವ್ಯ ಋಷಿ ಪರಂಪರೆ* 🚩
   
🔥 *ಅಗಸ್ತ್ಯ ಮುನಿ* 🔥

🕉️ಕನ್ಯಾಕುಮಾರಿಯಿಂದ ಬದರಿಕಾಶ್ರಮದವರೆಗೆ,  ಮತ್ತೆ ಶ್ರೀಲಂಕಾ, ಜಾವಾ, ವಿಯೆಟ್ನಾಂ, ಇಂಡೋನೇಷಿಯಾ, ಕಾಂಬೋಡಿಯ,ಥೈಲ್ಯಾಂಡ್  ಮತ್ತು ಮಲಯಾ  ದೇಶಗಳಲ್ಲಿ ಸಹ ಇಂದಿಗೂ ಗೌರವಿಸಲ್ಪಡುತ್ತಿರುವ  ಹೆಸರು ಅಗಸ್ತ್ಯರದು.

🕉️ ತಮಿಳರು  ಅಕ್ಕತ್ತಿಯರ್, ಅಗಸ್ತಿಯರ್ ಎಂದು, ಥಾಯ್ ಭಾಷೆಯಲ್ಲಿ  ಅಕ್ಕೂಟ್  ಎಂದು  ಮಲಯದಲ್ಲಿ  ಅಂಗಸ್ತ  ಎಂದು  ಕರೆಯಲ್ಪಡುವ ಇವರು  ಸಪ್ತರ್ಷಿಗಳಲ್ಲಿ  ಒಬ್ಬರು. 

🕉️ಪೌರಾಣಿಕ ಹಿನ್ನೆಲೆ  - ನಮ್ಮ ಪುರಾಣಗಳ ಮೊತ್ತ ಮೊದಲ ಪ್ರಣಾಳ ಶಿಶು  ಅಗಸ್ತ್ಯರು. ಮಿತ್ರ ಮತ್ತು ವರುಣರು  ಅಪ್ಸರೆ  ಊರ್ವಶಿಯಲ್ಲಿ ಮೋಹಗೊಂಡು  ತಮ್ಮ ರೇತಸ್ಸನ್ನು  ಮಡಕೆಯೊಳಗೆ ವಿಸರ್ಜನೆ ಮಾಡಿದಾಗ ಅದನ್ನು ವಿಶೇಷವಾದ ರೀತಿಯಲ್ಲಿ ಕಾಪಾಡಿದಾಗ  ಜನಿಸಿದವರು  ಅಗಸ್ತ್ಯರು. ಆದ್ದರಿಂದ ಇವರಿಗೆ ಕುಂಭಸಂಭವ, ಕುಂಭ,ಕಳಶಜ ಎಂಬ ಹೆಸರುಗಳು ಇವೆ.  ಪಿತೃಗಳ ಮೋಕ್ಷಕ್ಕೆ ಲೋಪಾಮುದ್ರೆಯನ್ನು  ಸೃಷ್ಟಿಸಿ ಆಕೆಯನ್ನು ಅವಂತಿಯ  ರಾಜನಿಗೆ ಇತ್ತು  ವಯಸ್ಸಿಗೆ ಬಂದ ಮೇಲೆ ಆಕೆಯನ್ನು  ವಿವಾಹವಾದ ಅಗಸ್ತ್ಯರು ಆಕೆಯ ಬಯಕೆಯಂತೆ  ಧನಾಕಾಂಕ್ಷಿಗಳಾಗಿ  ಇಲ್ವಲ ಎಂಬ  ರಾಕ್ಷಸನ ಬಳಿ ಬರುತ್ತಾರೆ. ಆತನು ತನ್ನ ಸಹೋದರ ವಾತಾಪಿಯನ್ನು ಆಡಾಗಿ  ಮಾರ್ಪಡಿಸಿ ಬ್ರಾಹ್ಮಣರಿಗೆ  ಬಡಿಸಿ  ನಂತರ ಮೃತ ಸಂಜೀವಿನಿ ವಿದ್ಯಾ ಪ್ರಯೋಗದಿಂದ ಆತ ಬ್ರಾಹ್ಮಣರ ಹೊಟ್ಟೆ ಸೀಳಿಕೊಂಡು ಬರುವಂತೆ ಮಾಡಿ  ಒಂಭತ್ತು ಸಹಸ್ರ ಬ್ರಾಹ್ಮಣರನ್ನು ಕೊಂದು ಅವರ  ಸ್ವತ್ತನ್ನು  ವಶಪಡಿಸಿಕೊಂಡಿರುತ್ತಾನೆ.  ವಾತಾಪಿ  ಜೀರ್ಣೋಭವ  ಎಂದು  ಅವನನ್ನು ಮುಗಿಸಿದ  ಅಗಸ್ತ್ಯರು ಇಲ್ವಲ ನೀಡಿದ ಅಪಾರ  ಧನ  ಕನಕಗಳೊಂದಿಗೆ ಮರಳುತ್ತಾರೆ. ಸಮುದ್ರದ ಒಳಗೆ  ಅಡಗಿದ  ರಾಕ್ಷಸರನ್ನು  ಕೊಲ್ಲಲು ಸಮುದ್ರವನ್ನೇ  ಆಪೋಶನ ತೆಗೆದುಕೊಂಡು ದೇವತೆಗಳಿಗೆ  ನೆರವಾಗುತ್ತಾರೆ. ಯೋಗಸಮಾಧಿಯಲ್ಲಿದ್ದ  ಪರಶಿವನನ್ನು ಆರಾಧಿಸುತ್ತಾ ಸಪ್ತರ್ಷಿಗಳು  ಮಹಾಮೇರುವಿನಲ್ಲೇ  ಸ್ಥಿತರಾಗಲು ಭೂಮಿಯ ಭಾರ ಒಂದೆಡೆಗೆ  ವಾಲಿದಾಗ ಪರಶಿವನ  ಆದೇಶದಂತೆ  ಸಮಭಾರ  ಮಾಡಲು  ದಕ್ಷಿಣಕ್ಕೆ  ಬರುತ್ತಾರೆ. ದಾರಿಯಲ್ಲಿ ಮಹಾಮೇರುವಿನೊಡನೆ  ಸ್ಪರ್ಧೆ ಹೂಡಿ  ಬೆಳೆಯುತ್ತಿರುವ  ವಿಂಧ್ಯ ಪರ್ವತವನ್ನು  ಉಪಾಯಮಾಡಿ  ತಡೆಯುತ್ತಾರೆ. ದಕ್ಷಿಣ ಭಾರತದಲ್ಲಿ ಅವರ ಕಮಂಡಲದ ಗಂಗೆಯನ್ನೇ ಗಣಪತಿ ಉರುಳಿಸಿ  ಬಿಡಲು  ಅದು  ಕಾವೇರಿ ಎನಿಸಿಕೊಳ್ಳುತ್ತದೆ. 

🕉️ನಾಲ್ಕು ವೇದಗಳಲ್ಲಿ, ರಾಮಾಯಣ, ಮಹಾಭಾರತ,ಪದ್ಮಪುರಾಣ,ಮತ್ಸ ಪುರಾಣಗಳಲ್ಲಿ  ಅಗಸ್ತ್ಯರ ಉಲ್ಲೇಖ ಇದೆ. ತಮಿಳು ಪುರಾತನ ಗ್ರಂಥ  ಪುನರಾರೂರು,ಮೊದಲನೇ  ಶತಮಾನದ ಬೌದ್ಧ ಗ್ರಂಥಗಳಲ್ಲಿ  ಅಗಸ್ತ್ಯರ ಹೆಸರು ಬರುತ್ತದೆ. ಐದನೇ ಶತಮಾನದಲ್ಲಿ  ಕಟ್ಟಲ್ಪಟ್ಟ ದೇವಾಲಯಗಳು ಅಗಸ್ತ್ಯರ ವಿಗ್ರಹ ಹೊಂದಿವೆ. 

🕉️ಪ್ರಸ್ತುತ ಭಾರತದಲ್ಲಿ ರುದ್ರ ಪ್ರಯಾಗದಲ್ಲಿ ಅಗಸ್ತ್ಯಮುನಿ  ದೇವಸ್ಥಾನ, ಕನೌಜ್,  ಸಾಂಗ್ಲಿ, ತಂಜಾವೂರು,ಕನ್ಯಾಕುಮಾರಿ, ತಿರುವನಂತಪುರಮ್, ತಿರುನೆಲ್ವೇಲಿ, ಮಧುರೈ  ಮುಂತಾದ ಕಡೆಗಳಲ್ಲಿ ಅಗಸ್ತ್ಯರ ವಿಗ್ರಹ ದೇವಳಗಳಲ್ಲಿ  ಕಂಡು ಬರುತ್ತದೆ. ದೇಶಾದ್ಯಂತ  ಏಳುನೂರು ಆಶ್ರಮಗಳು ಅಗಸ್ತ್ಯರ ಹೆಸರಿನಲ್ಲಿ ಇವೆ. 

💐 *ಅಗಸ್ತ್ಯರ ಕೊಡುಗೆಗಳು* 💐

💟1. ಋಗ್ವೇದದ  ಒಂದು  ಭಾಗದ  ರಚನೆ 

💟2. ಲಲಿತಾ  ಸಹಸ್ರ ನಾಮವನ್ನು  ಹಯಗ್ರೀವ  ದೇವರಿಂದ  ಕಲಿತು  ಲೋಕಕ್ಕೆ ನೀಡಿದ್ದು. 

💟3. ಶ್ರೀ ರಾಮನು  ರಾವಣನ ಮೇಲೆ ವಿಜಯ ಸಾಧಿಸಲು  ನೆರವಾಗಲು  ಆದಿತ್ಯ ಹೃದಯ ಉಪದೇಶ ಮಾಡಿದ್ದು. 

💟4. ಲಕ್ಷ್ಮಿ ಸ್ತೋತ್ರ,  ಸರಸ್ವತಿ ಸ್ತೋತ್ರ  ರಚನೆ. 

💟5. ಅಗಸ್ತ್ಯ ಸಂಹಿತೆ  ರಚನೆ 

💟6. ಬ್ಯಾಟರಿ  ಸೆಲ್  ಅನ್ನು  1800 ರಲ್ಲಿ  ಅಲೆಸಾಂಡ್ರೋ  ವೋಲ್ಟಾ  ಕಂಡು ಹಿಡಿದ  ಎನ್ನುತ್ತದೆ ಆಧುನಿಕ ವಿಜ್ಞಾನ.ಆದರೆ  ಸಹಸ್ರಾರು ವರ್ಷಗಳ ಹಿಂದೆ ಅಗಸ್ತ್ಯರು ಮಡಕೆಯೊಳಗೆ ಬ್ಯಾಟರಿ ನಿರ್ಮಾಣ ಮಾಡಿದ್ದರು. 

💟7. ಇಂದಿಗೂ ಪ್ರಚಲಿತವಿರುವ  ವಿಶ್ವದ  ಅತ್ಯಂತ ಪ್ರಾಚೀನ ಸಮರಕಲೆ  ಕಳರಿಪಯಟ್  ನ ಜನಕ  ಅಗಸ್ತ್ಯರು. 

💟8. ತಮಿಳು ಭಾಷೆಯ ಜನಕ. ಅಗತ್ತಿಯಮ್  ಅವರ  ವ್ಯಾಕರಣ ಗ್ರಂಥ. 

💟9. ಸಿದ್ಧ  ಔಷಧ  ವಿದ್ಯೆ  ಇಂದಿಗೂ ಪ್ರಸ್ತುತ. ಜನಕ  ಅಗಸ್ತ್ಯರು 

💟10. ಇಂದು  ಆಕ್ಕ್ಯುಪ್ರೆಷರ್  ಎಂದು  ಕರೆಯಲ್ಪಡುವ ವರ್ಮಮ್  ತಂತ್ರಜ್ಞಾನ ಅಗಸ್ತ್ಯರದು. ದೇಹದ  ಸೂಕ್ಷ್ಮ ಸ್ಥಳಗಳನ್ನು  ಸ್ಪರ್ಶಿಸುವ  ಮೂಲಕ  ರೋಗ ನಿವಾರಣೆ. 

💟11. ಇಂದಿಗೂ ಪ್ರಚಲಿತವಿರುವ  ನಾಡಿಜ್ಯೋತಿಷ್ಯ  ಅಗಸ್ತ್ಯರು ನೀಡಿದ ಕೊಡುಗೆ. 

💟12. ಕ್ರಿಯಾಯೋಗವನ್ನು  ಪರಶಿವನು  ಪಾರ್ವತಿಗೂ, ಪಾರ್ವತಿ ಕಾರ್ತಿಕೇಯನಿಗೂ  ಅವನು  ಅಗಸ್ತ್ಯರಿಗೂ  ತಿಳಿಸಿದ  ಎಂದು ನಂಬಿಕೆ. 

🕉️ಇತ್ತೀಚಿನ ಕ್ರಿಯಾಯೋಗಿಗಳಾದ  ಪರಮಹಂಸ ಯೋಗಾನಂದ (ಆಟೋಬಯಾಗ್ರಫಿ  ಆಫ್  ಯೋಗಿ) ಅವರ  ಗುರು  ಯುಕ್ತೇಶ್ವರ  ಗಿರಿಯವರು  ಮಹಾವತಾರಿ  ಬಾಬಾ  ಎಂಬ  ತೇಜಸ್ವಿ ಮಹಾಪುರುಷರ  ದರ್ಶನ ಮಾಡಿದ  ಅನುಭವವನ್ನು ವರ್ಣಿಸಿದ್ದಾರೆ. ಮಹಾವತಾರಿ ಬಾಬಾ ಕಳೆದ  ಎರಡು ಸಾವಿರ ವರ್ಷಗಳಿಂದಲೂ  ಅಸ್ತಿತ್ವದಲ್ಲಿ  ಇದ್ದಾರೆ. ಅವರ  ಕ್ರಿಯಾಯೋಗ ಗುರುಗಳು ಅಗಸ್ತ್ಯರು. ಶ್ರೀ  ಎಂ. ( ಮಮ್ತಾಜ್ ಅಲಿ- ಮಧುಕರನಾಥಜಿ) ಅವರೂ  ಸಹ ತಮ್ಮ ಗುರುಗಳಾದ  ಮಹೇಶ್ವರನಾಥಜಿಯವರ ಮೂಲಕ  ಮಹಾವತಾರಿ ಬಾಬಾರ  ದರ್ಶನ ಮಾಡಿದ್ದಾಗಿ  ಬರೆದುಕೊಂಡಿದ್ದಾರೆ.

*ಇವೆಲ್ಲ  ಅನೂಹ್ಯವೂ  ನಮ್ಮ ತಿಳುವಳಿಕೆಯ  ವ್ಯಾಪ್ತಿಗೆ  ಮೀರಿದ್ದೂ  ಅಲ್ಲವೇ  ?*

For daily updates join our whatsapp group.

https://chat.whatsapp.com/LL3RhQiQFtcCq70BbBPY5a

⛔ *ಮಹಾಭಾರತದಲ್ಲಿ ಅತ್ಯಂತ ಅಪಾಯಕಾರಿಯಾದ ದೈವಿಕ ಅಸ್ತ್ರಗಳು ಯಾರ ಯಾರ ಬಳಿ ಇತ್ತು ಗೊತ್ತಾ?*


⛔ *ಮಹಾಭಾರತದಲ್ಲಿ ಅತ್ಯಂತ ಅಪಾಯಕಾರಿಯಾದ ದೈವಿಕ ಅಸ್ತ್ರಗಳು ಯಾರ ಯಾರ ಬಳಿ ಇತ್ತು ಗೊತ್ತಾ?*

⚡ದ್ರೋಣನ ಬಳಿ ಬ್ರಹ್ಮಾಸ್ತ್ರಕ್ಕಿಂತಲೂ ಶಕ್ತಿಯುತವಾದ *'ಬ್ರಹ್ಮಾಶಿರಸ್'* ಎಂಬ ಅಸ್ತ್ರವಿತ್ತು. 

⚡ಭೀಷ್ಮನ ಬಳಿ *'ಪ್ರಶ್ವಪಾಸ್ತ್ರ'* ಎಂಬ ಅಸ್ತ್ರವಿತ್ತು. ಅದರ ಮುಂದೆ ಭಗವಾನ್ ಪರಶುರಾಮನು ಹಿಮ್ಮೆಟ್ಟಬೇಕಾಯಿತು.

⚡ಅರ್ಜುನನ ಬಳಿ *'ಪಾಶುಪತಾಸ್ತ್ರ'* ಇತ್ತು ಮತ್ತು
ಶ್ರೀಕೃಷ್ಣನ ಬಳಿ *'ಸುದರ್ಶನ ಚಕ್ರ'* ವಿತ್ತು. 
 
⚡ಆದರೆ ಮಹಾಭಾರತದಂತಹ ಮಾರಣಾಂತಿಕ ಯುದ್ಧದಲ್ಲಿ ಅವರಲ್ಲಿ ಯಾರೂ ಸಹ ತಮ್ಮದೇ ಆದ ಆ ದಿವ್ಯ ದೈವಿಕಾಸ್ತ್ರಗಳನ್ನು ಬಳಸಲಿಲ್ಲ ಏಕೆಂದರೆ ಅದರ ಭೀಕರ ಪರಿಣಾಮಗಳ ಬಗ್ಗೆ ಅವರಿಗೆ ಚನ್ನಾಗಿ ತಿಳಿದಿತ್ತು.

⚡ಆದರೆ ಅಶ್ವತ್ಥಾಮನು ಕೋಪದಿಂದ ತನ್ನ ಬಳಿಯಿದ್ದ *ನಾರಾಯಣಾಸ್ತ್ರದಿಂದ* ಮೊದಲು ಸಾವಿರಾರು ಮುಗ್ಧ ಸೈನಿಕರ ಪ್ರಾಣವನ್ನು ಬಲಿ ತೆಗೆದುಕೊಂಡನು ಮತ್ತು ಅನಂತರ ತನ್ನ ಅತ್ಯಲ್ಪತನದಲ್ಲಿ ಉಪಪಾಂಡವರನ್ನು ಸಂಹರಿಸಿ ಪಾಂಡವರನ್ನು ಸಂತಾನಹೀನರನ್ನಾಗಿ ಮಾಡಲು *ಬ್ರಹ್ಮಶಿರಸಾಸ್ತ್ರವನ್ನು* ಬಳಸಿದನು.

⚡ಇದೇ ಒಂದು ಪ್ರಮುಖ ಸಂಗತಿ. ಒಬ್ಬ ಮಹಾನ್ ಯೋಧ ಮತ್ತು ಕ್ರೂರ ಪಶುರೂಪಿ ಸಣ್ಣ ಮನುಷ್ಯನ ನಡುವಿನ ವ್ಯತ್ಯಾಸ ತಿಳಿಯಬೇಕು.   

*'ನಿಮ್ಮ ಜ್ಞಾನ ಮತ್ತು ಶಕ್ತಿಯನ್ನು ನಿಯಂತ್ರಣದಲ್ಲಿಡಿ'*

⚡ಯಾವ ವ್ಯಕ್ತಿಯು, ತನ್ನ ಕೈಯಲ್ಲಿ ನೂರಾರು ಪರಮಾಣು ಅಸ್ತ್ರಗಳನ್ನು ಚಲಾಯಿಸುವ ಶಕ್ತಿ ಹೊಂದಿರುವನೋ, 
ಯಾವ ವ್ಯಕ್ತಿಯು, ತನ್ನ ಪೈಲಟ್‌ಗಳಲ್ಲಿ ಒಬ್ಬನನ್ನು ಶತ್ರುವು ವಶಪಡಿಸಿಕೊಂಡಾಗ, ಯಾರು ವಿಶ್ವಪ್ರಸಿದ್ಧ ಮತ್ತು ವಿಶ್ವದ ಅತ್ಯಂತ ವೇಗದ ಕ್ಷಿಪಣಿ ಬ್ರಹ್ಮೋಸ್ ಅನ್ನು ಹೊಂದಿದ್ದರೂ ಅದನ್ನು ಪಾಕಿಸ್ತಾನದ ಮೇಲೆ ಪ್ರಯೋಗಿಸದೇ ಇದ್ದು,    
ಯಾವ ವ್ಯಕ್ತಿಯು, ತನ್ನ ದೇಶದ ಮೇಲೆ ಭಯೋತ್ಪಾದಕ ದಾಳಿಯು ತೀವ್ರವಾದಾಗ ಶತ್ರುವಿನ ಪ್ರದೇಶದೊಳಗೇ ಪ್ರವೇಶಿಸಿ ಮರ್ಧನ ಮಾಡುವವನು,
ಯಾವ ವ್ಯಕ್ತಿಯು, ಮೊದಲು ಡೋಕ್ಲಾಮ್‌ನಲ್ಲಿ ಮತ್ತು ಅನಂತರ ಗಾಲ್ವಾನ್‌ನಲ್ಲಿ ಚೀನಾವನ್ನು ಮಂಡಿಯೂರಿಸುವ ವಿಶ್ವ ಶಕ್ತಿಯನ್ನು ಹೊಂದಿರುವವನು, 
ಆ ವ್ಯಕ್ತಿಗೆ, ಯಃಕಚ್ಚಿತ್ ಟಿಕಾಯತ್ ಗ್ಯಾಂಗ್ ಮತ್ತು ಖಲಿಸ್ತಾನಿ ದೇಶದ್ರೋಹಿಗಳಂತಹ ಬೆರಳೆಣಿಕೆಯ ಗೂಂಡಾಗಳ ಮಗ್ಗುಲು ಮುರಿಯಲು ಸಾಧ್ಯವಿಲ್ಲವೇ?

For Daily updates join our Whatsapp group.

https://chat.whatsapp.com/LL3RhQiQFtcCq70BbBPY5a

ಇಂದು ವೈಕುಂಠ ಏಕಾದಶಿ*


🙏🏻 *ಇಂದು ವೈಕುಂಠ ಏಕಾದಶಿ*  🙏🏻

ಇದರಲ್ಲಿ ಎರಡು ಪದಗಳು ಸೇರಿಕೊಂಡಿವೆ. ಒಂದು “ವೈಕುಂಠ”, 
ಎರಡನೆಯದು "ಏಕಾದಶೀ", ಮೊದಲು ಇವುಗಳ ಸ್ಥೂಲ ಅರ್ಥ :
“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂದೂ ಹೆಸರಿದೆ. ಸರ್ವಶಬ್ದವಾಚ್ಯನಾದುದು ಒಂದು ಕಾರಣವಾದರೆ, ಎರಡನೆಯದು ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠಾ ಎಂಬವಳಲ್ಲಿ  ವೈಕುಂಠ ನಾಮಕನಾಗಿ ಅವತರಿಸಿದನು. ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.
ಇನ್ನು “ಏಕಾದಶೀ” ಎಂದರೆ
 ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶೀ” ಒಂದು ವ್ರತ. 

ಏಕಾದಶಿಯ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, *ಅಸತಿ ಬಾಧಕೇ* ನಿತ್ಯ ನೈಮಿತ್ತಿಕ ಕರ್ಮ ಬೇಗನೇ ಮುಗಿಸಿ ಭೋಜನ(ಪಾರಣೆ)ಮಾಡಬೇಕು.
ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು  ಭೋಜನ ಮಾಡಿ, ಭೋಗಗಳನ್ನು ಪರಿತ್ಯಜಿಸಿ, ದಿನತ್ರಯ ವ್ರತಮಹಂ ಕರಿಷ್ಯೇ ಎಂದು ದೇಶಕಾಲಾದಿ ಸಂಕಲ್ಪ ಪೂರ್ವಕವಾಗಿ ಪ್ರಾರ್ಥಿಸಬೇಕು.ಮರುದಿನ ಏಕಾದಶೀ ಪರಿಶುದ್ಧ ಉಪವಾಸ ಮಾಡಬೇಕು. 

ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.
 ಎಂದರೆ ಶುಚಿರ್ಭೂತನಾಗಿ ಎಡೆಬಿಡದೇ ಭಗವಂತನ ಸ್ಮರಣೆ ಮಾಡುತ್ತಿರುವುದು ಎಂದರ್ಥ.
ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. 

ಹೀಗೆ ಎಡಬಿಡದೇ ಏಕಾದಶೀ ವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಮಹಾಕವಿ ಕಾಳಿದಾಸ ಹೇಳಿರುವಂತೆ : *“ಶರೀರಮಾಧ್ಯಂ ಖಲು ಧರ್ಮಸಾಧನಂ”*, ಧರ್ಮ ಸಂಪಾದನೆಗೆ, ಸ್ವಸ್ಥ ಶರೀರ ಅತ್ಯಗತ್ಯ.

*ವೈಕುಂಠ ಏಕಾದಶಿಯ ಬಗ್ಗೆ ಕಥೆ ಇಂತಿದೆ :*
 
ಭಾಗವತೋತ್ತಮನಾದ ನಂದಗೋಪನು ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೇ ಆಚರಿಸುತ್ತಿದ್ದನು.

ಒಮ್ಮೆ ಏಕಾದಶೀ ವ್ರತ ಆಚರಿಸಿ, ಮರುದಿನ ಅಲ್ಪ ದ್ವಾದಶೀ ಇದ್ದುದ್ದರಿಂದ ಬ್ರಾಹ್ಮೀ ಮುಹೂರ್ತಕ್ಕೂ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ.
 ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನು ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು.
ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ಧಿ ಮುಟ್ಟಿಸಿದರು. 

ಸರ್ವಜ್ಞನಾದ ಶ್ರೀಕೃಷ್ಣ ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣ ಲೋಕಕ್ಕೆ ಬಂದನು.
         
ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. 
       
ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.
ನಂದಗೋಪನಿಗೆ ಪರಮಾನಂದವಾಯಿತು. 
 ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯ ಸ್ವಾಗತ ಮುಂತಾದವುಗಳನ್ನು ಎಳೆ ಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು .

ಶ್ರೀಕೃಷ್ಣ ಸಾಕ್ಷಾತ್ ಪರಮೇಶ್ವರನೇ ನಿಜ. ಆದರೆ ಅವನ ನಿಜ ರೂಪ ಅರಿಯಲಾರೆವು ಎಂದು ಪರಿತಪಿಸಿದರು.
ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿ ಬರುವಂತೆ ತಿಳಿಸಿದ, ಅದರಂತೆ ಅವರೆಲ್ಲಾ ಮಾಡಲಾಗಿ ಅವರ ಕಣ್ಣಿಗೆ ಆ ಮಡುವಿನಲ್ಲಿ ವೈಕುಂಠ ಕಾಣಿಸಿತು,

 ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು .ಮತ್ತೂ ದೃಢವಾಯಿತು. ಎಲ್ಲರೂ ಧನ್ಯರಾದರು. ಬಹುಷಃ ಈ ಕಾರಣಕ್ಕೂ ಇಂದಿನ ಏಕಾದಶಿಯನ್ನು “ವೈಕುಂಠ ಏಕಾದಶೀ” ಎಂದು ಕರೆದಿರಬಹುದೆಂದು ಊಹಿಸಬಹುದು.

ಪುರಾಣಗಳಿಗೆ ಮಹತ್ತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಅತಿ ಸುಂದರವಾಗಿ ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ.
 ಲೋಕೋಪಕಾರಕ್ಕಾಗಿ ವ್ಯಾಸರು ಹದಿನೆಂಟು ಪುರಾಣಗಳನ್ನು ರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು. ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿಯಾಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಏಕಾದಶೀ ವ್ರತ.
ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಸಕಲ ನದೀನದ ಸ್ನಾನದಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. 

ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ ಸಂಪಾದಿಸಿದ ಸಕಲ ಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.
ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನನ್ನು ವೈಕುಂಠ ದ್ವಾರದ ಮೂಲಕ ಪ್ರವೇಶಿಸಿ ದರ್ಶನ ಮಾಡಬೇಕು . 

ಹೀಗೆ ಮಾಡಿದರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಎನ್ನುವುದು ನಂಬಿಕೆ. ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಸ್ನಾನವನ್ನು ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರ ಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ. 
ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.
 
ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ವೈಷ್ಣವ ಆಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆ ಭಗವಂತನ ದರ್ಶನಕ್ಕಾಗಿ ಕಾದಿರುತ್ತಾರೆ.
ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ.

ಆದ ಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ.
ಈ ಒಂದು ಏಕಾದಶಿ ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪಾವಿತ್ರತೆಯನ್ನು ಹೊಂದಿರುವ ಕಾರಣ ಇದನ್ನು ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.
 ಮುಕ್ಕೋಟಿ ಏಕಾದಶಿ ದಿನ ಹಾಲಾಹಲ, ಅಮೃತ ಎರಡೂ ಹುಟ್ಟಿದವು. ಈ ದಿನವೇ ಶಿವನು ಹಾಲಾಹಲ ನುಂಗಿದ. 
ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು , ಹೋಮ, ಹವನ ಜಪ ,ತಪಗಳು ನಡೆಯುತ್ತವೆ .ಈ ದಿನ ಉಪವಾಸ ಹಾಗೂ ಜಾಗರಣೆ ಮಾಡಿದರೆ ಒಳ್ಳೆಯದಂತೆ . 
ವಿಷ್ಣು ಪುರಾಣದ ಪ್ರಕಾರ ಇಬ್ಬರು ರಾಕ್ಷಸರು ತನಗೆ ವಿರೋಧವಾಗಿದ್ದರೂ ವೈಕುಂಠ ಏಕಾದಶಿ ದಿನ ತನ್ನ ಬಾಗಿಲನ್ನು ತೆರೆದಿರುತ್ತಾರಂತೆ ಈ ಕಥೆಯನ್ನು ಕೇಳಿದವರಿಗೆ ಮೋಕ್ಷ ಪ್ರಾಪ್ತಿಯಾಗುವಂತೆ ವೈಕುಂಠದ ಬಾಗಿಲನ್ನು ತೆರೆದಿಡುವಂತೆ ಬೇಡಿಕೊಳ್ಳುತ್ತಾರೆ.
 
ಆದುದರಿಂದ ಎಲ್ಲಾ ವಿಷ್ಣು ದೇವಾಲಯದ ಬಾಗಿಲುಗಳನ್ನು ಆ ದಿನ ತೆಗೆದಿರುತ್ತಾರೆ . ಮಾಮೂಲಿ ದಿನಗಳಲ್ಲಿ ಉತ್ತರ ದ್ವಾರಗಳನ್ನು ಮುಚ್ಚಿರುತ್ತಾರೆ .
ಆದರೆ, ವೈಕುಂಠ ಏಕಾದಶಿಯ ದಿನ ಬಾಗಿಲನ್ನು ತೆರೆದಿರುತ್ತಾರೆ .
ವೈಕುಂಠ ಏಕಾದಶಿ ದಿನ ತಿರುಮಲೆಯ ದೇವಾಲಯದಲ್ಲಿರುವ ಉತ್ತರ ದ್ವಾರವನ್ನು ತೆರೆದಿರುತ್ತಾರೆ. ಪದ್ಮ ಪುರಾಣದ ಪ್ರಕಾರ ವಿಷ್ಣುವಿನಿಂದ ಬಂದ ಶಕ್ತಿಯಿಂದ ಮೊರಾ (ಮುರ)ಎಂಬ ರಾಕ್ಷಸನನ್ನು ಸಂಹರಿಸಿದ ದಿನವಂತೆ . 
ಮೊರಾ ಎಂಬ ರಾಕ್ಷಸನು ಅಂದು ಅಕ್ಕಿಯಲ್ಲಿ ಅಡಗಿ ಕುಳಿತಿರುತ್ತಾನಂತೆ ಆದುದರಿಂದ ಅಂದು ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥವನ್ನು ತಿನ್ನ ಬಾರದು .

ಮುಕ್ಕೋಟಿ ಏಕಾದಶಿ ಒಂದು ದಿನ ಉಪವಾಸವಿದ್ದರೆ ಮಿಕ್ಕ 23 ಏಕಾದಶಿಗಳಲ್ಲಿ ಉಪವಾಸ ವಿದ್ದಂತೆಯೇ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.
ಮೊರಾ ಎಂದರೆ ರಾಜಸಿಕ ಹಾಗೂ ತಾಮಸಿಕ ಗುಣಗಳಿಗೆ ಪ್ರತೀಕ , ಉಪವಾಸವಿರುವುದರ ಮೂಲಕ ಇವುಗಳನ್ನು ಜಯಿಸಿ ಮುಕ್ತಿ ಮಾರ್ಗಕ್ಕೆ ಸನಿಹವಾಗುವರಂತೆ....

For Daily updates join our whatsapp group.

https://chat.whatsapp.com/Cuby6EcECJwBr89vPjBBJl*  🙏🏻

ಇದರಲ್ಲಿ ಎರಡು ಪದಗಳು ಸೇರಿಕೊಂಡಿವೆ. ಒಂದು “ವೈಕುಂಠ”, 
ಎರಡನೆಯದು "ಏಕಾದಶೀ", ಮೊದಲು ಇವುಗಳ ಸ್ಥೂಲ ಅರ್ಥ :
“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂದೂ ಹೆಸರಿದೆ. ಸರ್ವಶಬ್ದವಾಚ್ಯನಾದುದು ಒಂದು ಕಾರಣವಾದರೆ, ಎರಡನೆಯದು ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠಾ ಎಂಬವಳಲ್ಲಿ  ವೈಕುಂಠ ನಾಮಕನಾಗಿ ಅವತರಿಸಿದನು. ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.
ಇನ್ನು “ಏಕಾದಶೀ” ಎಂದರೆ
 ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶೀ” ಒಂದು ವ್ರತ. 

ಏಕಾದಶಿಯ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, *ಅಸತಿ ಬಾಧಕೇ* ನಿತ್ಯ ನೈಮಿತ್ತಿಕ ಕರ್ಮ ಬೇಗನೇ ಮುಗಿಸಿ ಭೋಜನ(ಪಾರಣೆ)ಮಾಡಬೇಕು.
ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು  ಭೋಜನ ಮಾಡಿ, ಭೋಗಗಳನ್ನು ಪರಿತ್ಯಜಿಸಿ, ದಿನತ್ರಯ ವ್ರತಮಹಂ ಕರಿಷ್ಯೇ ಎಂದು ದೇಶಕಾಲಾದಿ ಸಂಕಲ್ಪ ಪೂರ್ವಕವಾಗಿ ಪ್ರಾರ್ಥಿಸಬೇಕು.ಮರುದಿನ ಏಕಾದಶೀ ಪರಿಶುದ್ಧ ಉಪವಾಸ ಮಾಡಬೇಕು. 

ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.
 ಎಂದರೆ ಶುಚಿರ್ಭೂತನಾಗಿ ಎಡೆಬಿಡದೇ ಭಗವಂತನ ಸ್ಮರಣೆ ಮಾಡುತ್ತಿರುವುದು ಎಂದರ್ಥ.
ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. 

ಹೀಗೆ ಎಡಬಿಡದೇ ಏಕಾದಶೀ ವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಮಹಾಕವಿ ಕಾಳಿದಾಸ ಹೇಳಿರುವಂತೆ : *“ಶರೀರಮಾಧ್ಯಂ ಖಲು ಧರ್ಮಸಾಧನಂ”*, ಧರ್ಮ ಸಂಪಾದನೆಗೆ, ಸ್ವಸ್ಥ ಶರೀರ ಅತ್ಯಗತ್ಯ.

*ವೈಕುಂಠ ಏಕಾದಶಿಯ ಬಗ್ಗೆ ಕಥೆ ಇಂತಿದೆ :*
 
ಭಾಗವತೋತ್ತಮನಾದ ನಂದಗೋಪನು ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೇ ಆಚರಿಸುತ್ತಿದ್ದನು.

ಒಮ್ಮೆ ಏಕಾದಶೀ ವ್ರತ ಆಚರಿಸಿ, ಮರುದಿನ ಅಲ್ಪ ದ್ವಾದಶೀ ಇದ್ದುದ್ದರಿಂದ ಬ್ರಾಹ್ಮೀ ಮುಹೂರ್ತಕ್ಕೂ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ.
 ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನು ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು.
ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ಧಿ ಮುಟ್ಟಿಸಿದರು. 

ಸರ್ವಜ್ಞನಾದ ಶ್ರೀಕೃಷ್ಣ ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣ ಲೋಕಕ್ಕೆ ಬಂದನು.
         
ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. 
       
ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.
ನಂದಗೋಪನಿಗೆ ಪರಮಾನಂದವಾಯಿತು. 
 ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯ ಸ್ವಾಗತ ಮುಂತಾದವುಗಳನ್ನು ಎಳೆ ಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು .

ಶ್ರೀಕೃಷ್ಣ ಸಾಕ್ಷಾತ್ ಪರಮೇಶ್ವರನೇ ನಿಜ. ಆದರೆ ಅವನ ನಿಜ ರೂಪ ಅರಿಯಲಾರೆವು ಎಂದು ಪರಿತಪಿಸಿದರು.
ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿ ಬರುವಂತೆ ತಿಳಿಸಿದ, ಅದರಂತೆ ಅವರೆಲ್ಲಾ ಮಾಡಲಾಗಿ ಅವರ ಕಣ್ಣಿಗೆ ಆ ಮಡುವಿನಲ್ಲಿ ವೈಕುಂಠ ಕಾಣಿಸಿತು,

 ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು .ಮತ್ತೂ ದೃಢವಾಯಿತು. ಎಲ್ಲರೂ ಧನ್ಯರಾದರು. ಬಹುಷಃ ಈ ಕಾರಣಕ್ಕೂ ಇಂದಿನ ಏಕಾದಶಿಯನ್ನು “ವೈಕುಂಠ ಏಕಾದಶೀ” ಎಂದು ಕರೆದಿರಬಹುದೆಂದು ಊಹಿಸಬಹುದು.

ಪುರಾಣಗಳಿಗೆ ಮಹತ್ತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಅತಿ ಸುಂದರವಾಗಿ ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ.
 ಲೋಕೋಪಕಾರಕ್ಕಾಗಿ ವ್ಯಾಸರು ಹದಿನೆಂಟು ಪುರಾಣಗಳನ್ನು ರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು. ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿಯಾಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಏಕಾದಶೀ ವ್ರತ.
ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಸಕಲ ನದೀನದ ಸ್ನಾನದಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. 

ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ ಸಂಪಾದಿಸಿದ ಸಕಲ ಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.
ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನನ್ನು ವೈಕುಂಠ ದ್ವಾರದ ಮೂಲಕ ಪ್ರವೇಶಿಸಿ ದರ್ಶನ ಮಾಡಬೇಕು . 

ಹೀಗೆ ಮಾಡಿದರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಎನ್ನುವುದು ನಂಬಿಕೆ. ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಸ್ನಾನವನ್ನು ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರ ಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ. 
ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.
 
ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.

ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ವೈಷ್ಣವ ಆಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆ ಭಗವಂತನ ದರ್ಶನಕ್ಕಾಗಿ ಕಾದಿರುತ್ತಾರೆ.
ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ.

ಆದ ಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ.
ಈ ಒಂದು ಏಕಾದಶಿ ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪಾವಿತ್ರತೆಯನ್ನು ಹೊಂದಿರುವ ಕಾರಣ ಇದನ್ನು ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.
 ಮುಕ್ಕೋಟಿ ಏಕಾದಶಿ ದಿನ ಹಾಲಾಹಲ, ಅಮೃತ ಎರಡೂ ಹುಟ್ಟಿದವು. ಈ ದಿನವೇ ಶಿವನು ಹಾಲಾಹಲ ನುಂಗಿದ. 
ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು , ಹೋಮ, ಹವನ ಜಪ ,ತಪಗಳು ನಡೆಯುತ್ತವೆ .ಈ ದಿನ ಉಪವಾಸ ಹಾಗೂ ಜಾಗರಣೆ ಮಾಡಿದರೆ ಒಳ್ಳೆಯದಂತೆ . 
ವಿಷ್ಣು ಪುರಾಣದ ಪ್ರಕಾರ ಇಬ್ಬರು ರಾಕ್ಷಸರು ತನಗೆ ವಿರೋಧವಾಗಿದ್ದರೂ ವೈಕುಂಠ ಏಕಾದಶಿ ದಿನ ತನ್ನ ಬಾಗಿಲನ್ನು ತೆರೆದಿರುತ್ತಾರಂತೆ ಈ ಕಥೆಯನ್ನು ಕೇಳಿದವರಿಗೆ ಮೋಕ್ಷ ಪ್ರಾಪ್ತಿಯಾಗುವಂತೆ ವೈಕುಂಠದ ಬಾಗಿಲನ್ನು ತೆರೆದಿಡುವಂತೆ ಬೇಡಿಕೊಳ್ಳುತ್ತಾರೆ.
 
ಆದುದರಿಂದ ಎಲ್ಲಾ ವಿಷ್ಣು ದೇವಾಲಯದ ಬಾಗಿಲುಗಳನ್ನು ಆ ದಿನ ತೆಗೆದಿರುತ್ತಾರೆ . ಮಾಮೂಲಿ ದಿನಗಳಲ್ಲಿ ಉತ್ತರ ದ್ವಾರಗಳನ್ನು ಮುಚ್ಚಿರುತ್ತಾರೆ .
ಆದರೆ, ವೈಕುಂಠ ಏಕಾದಶಿಯ ದಿನ ಬಾಗಿಲನ್ನು ತೆರೆದಿರುತ್ತಾರೆ .
ವೈಕುಂಠ ಏಕಾದಶಿ ದಿನ ತಿರುಮಲೆಯ ದೇವಾಲಯದಲ್ಲಿರುವ ಉತ್ತರ ದ್ವಾರವನ್ನು ತೆರೆದಿರುತ್ತಾರೆ. ಪದ್ಮ ಪುರಾಣದ ಪ್ರಕಾರ ವಿಷ್ಣುವಿನಿಂದ ಬಂದ ಶಕ್ತಿಯಿಂದ ಮೊರಾ (ಮುರ)ಎಂಬ ರಾಕ್ಷಸನನ್ನು ಸಂಹರಿಸಿದ ದಿನವಂತೆ . 
ಮೊರಾ ಎಂಬ ರಾಕ್ಷಸನು ಅಂದು ಅಕ್ಕಿಯಲ್ಲಿ ಅಡಗಿ ಕುಳಿತಿರುತ್ತಾನಂತೆ ಆದುದರಿಂದ ಅಂದು ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥವನ್ನು ತಿನ್ನ ಬಾರದು .

ಮುಕ್ಕೋಟಿ ಏಕಾದಶಿ ಒಂದು ದಿನ ಉಪವಾಸವಿದ್ದರೆ ಮಿಕ್ಕ 23 ಏಕಾದಶಿಗಳಲ್ಲಿ ಉಪವಾಸ ವಿದ್ದಂತೆಯೇ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.
ಮೊರಾ ಎಂದರೆ ರಾಜಸಿಕ ಹಾಗೂ ತಾಮಸಿಕ ಗುಣಗಳಿಗೆ ಪ್ರತೀಕ , ಉಪವಾಸವಿರುವುದರ ಮೂಲಕ ಇವುಗಳನ್ನು ಜಯಿಸಿ ಮುಕ್ತಿ ಮಾರ್ಗಕ್ಕೆ ಸನಿಹವಾಗುವರಂತೆ....

For Daily updates join our whatsapp group.

https://chat.whatsapp.com/Cuby6EcECJwBr89vPjBBJl

ಋಷಿ, ಮುನಿ, ಮಹರ್ಷಿ, ಸಾಧು, ಸಂತರ ನಡುವಿನ ವ್ಯತ್ಯಾಸವೇನು ಗೊತ್ತೇ..?* 🤔


  ‌   ‌      ‌      ‌    ‌    ‌    ‌     ‌    ‌     ‌    ‌     ‌      ‌    ‌  ‌      ‌    ‌           *ಋಷಿ, ಮುನಿ, ಮಹರ್ಷಿ, ಸಾಧು, ಸಂತರ ನಡುವಿನ ವ್ಯತ್ಯಾಸವೇನು ಗೊತ್ತೇ..?* 🤔

ವೈದಿಕ ಪರಂಪರೆಯಲ್ಲಿ ಋಷಿ, ಮುನಿಗಳಿಗೆ, ಸಾಧು, ಸಂತರಿಗೆ ವಿಶಿಷ್ಟ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ಋಷಿ, ಮುನಿಗಳು, ಸಾಧು, ಸಂತರು ಎಲ್ಲರೂ ಒಂದೇ ಎನ್ನುವ ಭಾವನೆ ಹೆಚ್ಚಿನವರದ್ದು. ಆದರೆ, ಇವರೆಲ್ಲರೂ ಭಿನ್ನ ಭಿನ್ನವೆಂಬುದೇ ಆಶ್ಚರ್ಯಕರ. ಹೌದು, ಸಾಧು, ಸಂತರೇ ಬೇರೆ. ಋಷಿ, ಮುನಿಗಳೇ ಬೇರೆ. ಹಾಗಾದರೆ ಸಾಧುಗಳು ಎಂದರೆ ಯಾರು..? ಸಂತರು ಎಂದರೆ ಯಾರು..? ಋಷಿಗಳಿಗೂ ಮುನಿಗಳಿಗೂ ಏನು ವ್ಯತ್ಯಾಸ..?

ಪ್ರಾಚೀನ ಕಾಲದಿಂದಲೂ ಋಷಿಗಳು ಮತ್ತು ಮುನಿಗಳು ಭಾರತದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ ಏಕೆಂದರೆ ಅವರನ್ನು ಸಮಾಜದ ಪ್ರವರ್ತಕರು ಎಂದು ಪರಿಗಣಿಸಲಾಗಿತ್ತು. ಅವರು ತಮ್ಮ ಜ್ಞಾನ ಮತ್ತು ದೃಢತೆಯ ಬಲದ ಮೇಲೆ ಸಾಮಾಜಿಕ ಕಲ್ಯಾಣ ಕಾರ್ಯಗಳನ್ನು ಮಾಡುತ್ತಿದ್ದರು ಮತ್ತು ಜನರನ್ನು ಸಮಸ್ಯೆಗಳಿಂದ ಮುಕ್ತಗೊಳಿಸುತ್ತಿದ್ದರು. ಇಂದಿಗೂ, ಅನೇಕ ಸಂತರು ಮತ್ತು ಸಾಧುಗಳನ್ನು ತೀರ್ಥಯಾತ್ರೆಗಳಲ್ಲಿ, ಕಾಡುಗಳಲ್ಲಿ ಮತ್ತು ಪರ್ವತಗಳಲ್ಲಿ ಕಾಣಬಹುದು. ಆದರೆ ಸಾಧುಗಳು, ಸಂತರು, ಋಷಿಮುನಿಗಳು, ಮಹರ್ಷಿಗಳು ಇತ್ಯಾದಿಗಳೆಲ್ಲರೂ ವಿಭಿನ್ನರು ಎಂಬುದು ನಿಮಗೆ ಗೊತ್ತೇ..? ಹೆಚ್ಚಿನ ಜನರಲ್ಲಿ ಇವರೆಲ್ಲರೂ ಒಂದೇ ಎನ್ನುವ ಭಾವನೆಯಿದೆ. ಅದರೆ ಇವರೆಲ್ಲರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಋಷಿ, ಮಹರ್ಷಿ, ಮುನಿ, ಸಾಧು ಮತ್ತು ಸಂತರ ನಡುವಿನ ವ್ಯತ್ಯಾಸಗಳೇನು..? ಅವರ ಬಗ್ಗೆ ಇರುವ ನಂಬಿಕೆಗಳೇನು.?
​ ‌    ‌                                                                                🚩 *ಋಷಿ* 🚩

ಋಷಿ ಎಂಬುದು ವೈದಿಕ ಭಾಷೆಯ ಸಂಸ್ಕೃತ ಪದ. ವೈದಿಕ ಸ್ತೋತ್ರಗಳ ಸೃಷ್ಟಿಕರ್ತರಿಗೆ ಮಾತ್ರ ಋಷಿಯ ಸ್ಥಾನಮಾನವಿದೆ. ಋಷಿಗಳು ನೂರಾರು ವರ್ಷಗಳ ಧ್ಯಾನ ಅಥವಾ ತಪಸ್ಸಿನಿಂದಾಗಿ ಉನ್ನತ ಮಟ್ಟದ ಜ್ಞಾನ ಮತ್ತು ತಿಳುವಳಿಕೆಯನ್ನು ಹೊಂದಿರುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಋಷಿಮುನಿಗಳು ವೈದಿಕ ಕಾಲಿನ ಗೃಹಸ್ಥ ಆಶ್ರಮದಿಂದ ಬರುತ್ತಿದ್ದರು. ಕೋಪ, ದುರಾಸೆ, ಮೋಹ, ಅಹಂ ಮತ್ತು ಅಸೂಯೆ ಇತ್ಯಾದಿಗಳನ್ನು ತ್ಯಜಿಸಿ, ಸಂಯಮದ ಜೀವನ ಶೈಲಿಯನ್ನು ನಡೆಸುತ್ತಿದ್ದರು.

ಋಷಿಮುನಿಗಳು ತಮ್ಮ ತಪಸ್ಸಿನ ಮೂಲಕ ದೈವೀ ಶಕ್ತಿಗೆ ಹತ್ತಿರವಾಗುತ್ತಿದ್ದರು. ಮತ್ತು ಅವರ ಜ್ಞಾನವನ್ನು ತಮ್ಮ ಶಿಷ್ಯರಿಗೂ ಧಾರೆ ಎರೆಯುತ್ತಿದ್ದರು. ಅವರಿಗೆ ಭೌತಿಕ ವಸ್ತುವನ್ನು ಮತ್ತು ಅದರ ಹಿಂದೆ ಅಡಗಿರುವ ಶಕ್ತಿಯನ್ನು ನೋಡಲು ಸಾಧ್ಯವಾಗುತ್ತಿತ್ತು. ನಮ್ಮ ಪುರಾಣಗಳಲ್ಲಿ, ಕಶ್ಯಪ, ಪುಲಹ, ಪುಲಸ್ತ್ಯ, ಅತ್ರಿ, ಅಂಗೀರಸ, ವಸಿಷ್ಠ ಮತ್ತು ಭೃಗು ಎಂಬ ಮಹಾನ್‌ ಸಪ್ತ ಋಷಿಗಳ ಬಗ್ಗೆ ಉಲ್ಲೇಖವಿದೆ.

🚩​ *ಮಹರ್ಷಿ*🚩

ಜ್ಞಾನ ಮತ್ತು ತಪಸ್ವಿಗಳ ಅತ್ಯುನ್ನತ ಮಿತಿಯನ್ನು ತಲುಪುವ ವ್ಯಕ್ತಿಯನ್ನು ಮಹರ್ಷಿ ಎಂದು ಕರೆಯಲಾಗುತ್ತದೆ. ಇವರನ್ನು ಬ್ರಹ್ಮರ್ಷಿಗಳೆಂದು ಪರಿಗಣಿಸಲಾಗುತ್ತಿತ್ತು. ಪ್ರತಿಯೊಬ್ಬ ವ್ಯಕ್ತಿಯಲ್ಲೂ 3 ರೀತಿಯ ದೃಷ್ಟಿಗಳಿರುತ್ತದೆ. ಜ್ಞಾನ ದೃಷ್ಟಿ, ದಿವ್ಯ ದೃಷ್ಟಿ ಮತ್ತು ಪರಮ ದೃಷ್ಟಿ. ಯಾವ ವ್ಯಕ್ತಿ ಜ್ಞಾನದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುತ್ತಾನೆಯೋ ಆ ವ್ಯಕ್ತಿಯನ್ನು ಋಷಿ ಎಂದು ಕರೆಯಲಾಗುತ್ತದೆ.

ಯಾವ ವ್ಯಕ್ತಿಯಲ್ಲಿ ದೈವಿಕ ದೃಷ್ಟಿ ಜಾಗೃತೆಗೊಂಡಿರುತ್ತದೆಯೋ ಆ ವ್ಯಕ್ತಿಯನ್ನು ಮಹರ್ಷಿ ಎಂದು ಕರೆಯಲಾಗುತ್ತದೆ ಮತ್ತು ಯಾವ ವ್ಯಕ್ತಿಯ ಅಂತಿಮ ದೃಷ್ಟಿ ಅಥವಾ ಪರಮ ದೃಷ್ಟಿ ಎಚ್ಚೆತ್ತುಕೊಳ್ಳುತ್ತದೆಯೋ ಆತನನ್ನು ಬ್ರಹ್ಮರ್ಷಿ ಎಂದು ಕರೆಯಲಾಗುತ್ತದೆ. ಕೊನೆಯ ಮಹರ್ಷಿಗಳೆಂದರೆ ಅವರೇ ದಯಾನಂದ ಸರಸ್ವತಿ. ಇವರು ಮೂಲ ಮಂತ್ರಗಳನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಜಗತ್ತಿಗೆ ವ್ಯಾಖ್ಯಾನಿಸಿದರು. ಇದರ ನಂತರ, ಇಲ್ಲಿಯವರೆಗೆ ಯಾವುದೇ ವ್ಯಕ್ತಿ ಮಹರ್ಷಿಗಳಾಗಿಲ್ಲ. 

🚩 *ಮುನಿ*🚩

ಮುನಿ ಎಂಬ ಪದದ ಅರ್ಥ ಮೌನ. ಅಂದರೆ ಮುನಿಗಳು ಬಹಳ ಕಡಿಮೆ ಮಾತನಾಡುತ್ತಾರೆ. ಋಷಿ ಮುನಿಗಳು ಮೌನ ಪ್ರಮಾಣವಚನವನ್ನು ಸ್ವೀಕರಿಸಿ ವೇದ ಮತ್ತು ಗ್ರಂಥಗಳ ಜ್ಞಾನವನ್ನು ಪಡೆದುಕೊಳ್ಳುತ್ತಾರೆ. ಆಧ್ಯಾತ್ಮಿಕ ಅಭ್ಯಾಸವನ್ನು ಸಾಧಿಸಿದ ಮತ್ತು ಮೌನವಾಗಿದ್ದ ಋಷಿಮುನಿಗಳು ಸನ್ಯಾಸಿಗಳ ಸ್ಥಾನಮಾನವನ್ನು ಪಡೆದರು. ಅಂತಹ ಕೆಲವು ಋಷಿಮುನಿಗಳು ಸಂತನ ಸ್ಥಾನಮಾನವನ್ನು ಹೊಂದಿದ್ದರು, ಅವರು ದೇವರನ್ನು ಜಪಿಸುತ್ತಿದ್ದರು ಮತ್ತು ಅವರು ನಾರದ ಮುನಿಯಂತಹ ಮುನಿಯ ನಾಮವನ್ನು ಜಪಿಸುತ್ತಿದ್ದರು.

ಋಷಿಮುನಿಗಳು ಮಂತ್ರಗಳನ್ನು ಪಠಿಸುತ್ತಾರೆ ಮತ್ತು ಅವರ ಜ್ಞಾನದಿಂದ ತಮ್ಮ ಭವಿಷ್ಯದ ಅರಿವನ್ನು ಹೊಂದಿರುತ್ತಿದ್ದರು. ಋಷಿಮುನಿಗಳು ಧರ್ಮಗ್ರಂಥಗಳನ್ನು ರಚಿಸುತ್ತಾರೆ ಮತ್ತು ಸಮಾಜದ ಕಲ್ಯಾಣಕ್ಕೆ ದಾರಿ ತೋರಿಸುತ್ತಾರೆ. ಮೌನ ಅಭ್ಯಾಸದ ಜೊತೆಗೆ, ದಿನಕ್ಕೆ ಕೇವಲ ಒಂದು ಬಾರಿ ಊಟ ಮಾಡುತ್ತಿದ್ದರು. ಮತ್ತು 28 ಗುಣಗಳನ್ನು ಹೊಂದಿದ್ದರು. ಇವರನ್ನೇ ನಾವು ಋಷಿಗಳು ಎಂದು ಕರೆಯುತ್ತೇವೆ.

​ 🚩 *ಸಾಧು* 🚩

ಧ್ಯಾನವನ್ನು ಅಭ್ಯಾಸ ಮಾಡುವ ವ್ಯಕ್ತಿಯನ್ನು ಸನ್ಯಾಸಿ ಎಂದು ಕರೆಯಲಾಗುತ್ತದೆ. ಸನ್ಯಾಸಿಯಾಗಲು ಒಬ್ಬರು ವಿದ್ವಾಂಸರಾಗಬೇಕಾಗಿಲ್ಲ ಏಕೆಂದರೆ ಯಾರಾದರೂ ಕೂಡ ಅಭ್ಯಾಸ ಮಾಡಬಹುದು. ಪ್ರಾಚೀನ ಕಾಲದಲ್ಲಿ, ಅನೇಕ ಜನರು ಸಮಾಜದಿಂದ ದೂರ ಸರಿದರು ಅಥವಾ ಸಮಾಜದಲ್ಲಿ ವಾಸಿಸುತ್ತಿರುವಾಗಲೇ ಯಾವುದೋ ಒಂದು ವಿಷಯವನ್ನಿಟ್ಟುಕೊಂಡು ಅದರ ಬಗ್ಗೆ ಆಳವಾಗಿ ಅಭ್ಯಾಸವನ್ನು ಮಾಡುತ್ತಿದ್ದರು. ಮತ್ತು ಅದರಿಂದ ನಿರ್ದಿಷ್ಟ ಜ್ಞಾನವನ್ನು ಪಡೆಯುತ್ತಿದ್ದರು.

ಕೆಲವೊಮ್ಮೆ ಋಷಿ ಎಂಬ ಪದವನ್ನು ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿಯ ನಡುವೆ ಪ್ರತ್ಯೇಕಿಸಲು ಬಳಸಲಾಗುತ್ತದೆ. ಇದಕ್ಕೆ ಕಾರಣವೆಂದರೆ, ಆಧ್ಯಾತ್ಮಿಕ ಅಭ್ಯಾಸದ ಮೂಲಕ ಒಬ್ಬರು ನೇರ, ಸರಳ ಮತ್ತು ಸಕಾರಾತ್ಮಕ ಚಿಂತನೆಯ ವ್ಯಕ್ತಿಯಾಗುತ್ತಾರೆ. ಜನರಿಗೆ ಸಹಾಯ ಮಾಡಲು ಅವರು ಯಾವಾಗಲೂ ಮುಂದಾಗುತ್ತಾರೆ. ಸಾಧು ಎಂದರೆ ಸಂಸ್ಕೃತದಲ್ಲಿ ಒಬ್ಬ ಸಂಭಾವಿತ ವ್ಯಕ್ತಿ ಮತ್ತು ಅದಕ್ಕೂ ಒಳ್ಳೆಯ ಅರ್ಥವೆಂದರೆ 6 ದುರ್ಗುಣಗಳನ್ನು ತ್ಯಜಿಸಿದವರೇ ಸಾಧು. ಅಂದರೆ ಕಾಮ, ಕೋಪ, ದುರಾಸೆ, ಮೋಹ, ಮದ ಮತ್ತು ಮಾತ್ಸರ್ಯ. ಇವೆಲ್ಲವನ್ನೂ ತ್ಯಜಿಸಿದವರಿಗೆ ಸನ್ಯಾಸಿ ಎಂಬ ಬಿರುದನ್ನು ನೀಡಲಾಗುತ್ತದೆ.

​ 🚩 *ಸಂತ*🚩

ಸಂತ ಎಂಬ ಪದವು ಶಾಂತ ಎನ್ನುವ ಸಂಸ್ಕೃತ ಪದವಾಗಿದೆ. ಸತ್ಯವನ್ನು ಅಭ್ಯಾಸ ಮಾಡುವ ಮತ್ತು ಪ್ರಬುದ್ಧನಾದ ವ್ಯಕ್ತಿಯನ್ನು ಸಂತ ಎಂದು ಕರೆಯುತ್ತಾರೆ. ಉದಾಹರಣೆಗೆ - ಸಂತ ಕಬೀರ್‌ದಾಸ್, ಸಂತ ತುಳಸಿದಾಸ್, ಸಂತ ರವಿದಾಸ್. ದೇವರ ನಿಜವಾದ ಭಕ್ತರನ್ನು ಅಥವಾ ದೈವಿಕ ಪುರುಷರನ್ನು ಸಂತರು ಎಂದೂ ಕರೆಯುತ್ತಾರೆ. ಋಷಿಮುನಿಗಳು ಸಂತರಾಗಲು ಸಾಧ್ಯವಿಲ್ಲ ಏಕೆಂದರೆ ಅವರು ಮನೆ ಬಿಟ್ಟು ಮೋಕ್ಷವನ್ನು ಪಡೆಯಲು ಹೋಗುತ್ತಾರೆ, ಅಂದರೆ ಅವರು ತೀವ್ರವಾದ ಜೀವನ ಶೈಲಿಯನ್ನು ಹೊಂದಿರುತ್ತಾರೆ. ಜಗತ್ತು ಮತ್ತು ಆಧ್ಯಾತ್ಮಿಕತೆಯ ನಡುವೆ ಸಮತೋಲನವನ್ನು ಸೃಷ್ಟಿಸುವ ವ್ಯಕ್ತಿಯನ್ನು ಸಂತ ಎಂದು ಕರೆಯಲಾಗುತ್ತದೆ. ಸಂತನೊಳಗಿನ ಪ್ರವೃತ್ತಿ ಶಾಂತ ಸ್ವಭಾವದಲ್ಲಿ ಮಾತ್ರ ವಾಸಿಸುತ್ತದೆ. ಸಂತನಾಗಿರುವುದು ಸದ್ಗುಣ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತದೆ.

For Daily updates join our whatsapp group 

https://chat.whatsapp.com/Cuby6EcECJwBr89vPjBBJl

✳️ *ತಲೆ ನೋವು ನಿವಾರಿಸಬಲ್ಲ ಆಹಾರಗಳು* ✳️


✳️ *ತಲೆ ನೋವು ನಿವಾರಿಸಬಲ್ಲ ಆಹಾರಗಳು*  ✳️

ಮೈಗ್ರೇನ್ ಮತ್ತು ತಲೆನೋವುಗಳನ್ನು ಪ್ರಚೋದಿಸುವಂತಹ ಆಹಾರಗಳ ಬಗ್ಗೆ ನಾವು ಎಲ್ಲವನ್ನೂ ಕೇಳಿದ್ದೇವೆ. 

ಅದರ ಜತೆಗೆ ತಲೆನೋವನ್ನು ನಿವಾರಿಸಲು ಸಹಾಯ ಮಾಡುವ ಆಹಾರಗಳು ಇವೆ ಎಂಬುದು ಗೊತ್ತೇ? ನಿಮ್ಮ ದೈನಂದಿನ ಆಹಾರದ ಭಾಗವಾಗಿ ನೀವು ಇವುಗಳನ್ನು ಸೇವಿಸಿದರೆ ನಿಜಕ್ಕೂ ಪರಿಣಾಮಕಾರಿಯಾಗಿರುತ್ತದೆ.
    
ತಲೆ ನೋವು; ಅದು ಯಾವಾಗ ಬಂದು ಒಕ್ಕರಿಸತ್ತೆ ಎಂದು ಹೇಳಲಾಗುವುದಿಲ್ಲ. ಬಂದ ಮೇಲೆ ದಿನವಿಡಿ ಕಾಡುವ, ಕೆಲವೊಮ್ಮೆ ದೀರ್ಘಕಾಲದವರೆಗೆ ಕಾಡುತ್ತಲೇ ಇರುವ ಬರಲು ಕಾರಣ ಒಂದೇ ಇರಬೇಕಿಲ್ಲ. ಒತ್ತಡ , ಕೆಲಸ ಜಾಸ್ತಿಯಾದರೆ, ಸರಿಯಾಗಿ ಆಹಾರ ಸೇವಿಸದಿದ್ದರೆ, ನಿದ್ರಾ ಹೀನತೆ- ಹೀಗೆ ಹಲವಾರು ಕಾರಣಕ್ಕೆ ಸಹಿಸಲಾರದಷ್ಟು ತಲೆ ನೋವು ಬಂದುಬಿಡುತ್ತೆ. 

ಆಗ ನೀವು ಮಾತ್ರೆ ನುಂಗಿ ಬಿಡುತ್ತೀರ. ಆದರೆ ಹೀಗೆ ತಲೆ ನೋವು ಬಂದಾಗೆಲ್ಲ ಮಾತ್ರೆ ಸೇವಿಸುವುದು ನಿಜಕ್ಕೂ ಒಳ್ಳೆಯದಲ್ಲ. 

ಅದು ರೂಢಿಯಾಗಿ ಬಿಡುತ್ತದೆ. ಅದರ ಜತೆಗೆ ಪೇನ್ ಕಿಲ್ಲರ್ ನುಂಗಿ ಬಿಡುತ್ತೀರ. ಆದರೆ ನೋವು ನಿವಾರಕ ಮಾತ್ರೆಯನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದಲ್ಲ ಎಂಬುವುದು ನಿಮಗೆ ತಿಳಿದಿರಬಹುದು. 

ಮೈಗ್ರೇನ್ ಮತ್ತು ತಲೆನೋವುಗಳನ್ನು ಪ್ರಚೋದಿಸುವಂತಹ ಆಹಾರಗಳ ಬಗ್ಗೆ ನಾವು ಎಲ್ಲವನ್ನೂ ಕೇಳಿದ್ದೇವೆ. ಅದರ ಜತೆಗೆ ತಲೆನೋವನ್ನು ನಿವಾರಿಸಲು ಸಹಾಯ ಮಾಡುವ ಆಹಾರಗಳು ಇವೆ ಎಂಬುದು ಗೊತ್ತೇ? ನಿಮ್ಮ ದೈನಂದಿನ ಆಹಾರದ ಭಾಗವಾಗಿ ನೀವು ಇವುಗಳನ್ನು ಸೇವಿಸಿದರೆ ನಿಜಕ್ಕೂ ಪರಿಣಾಮಕಾರಿಯಾಗಿರುತ್ತದೆ

💥 *ತಲೆನೋವು ತೊಡೆದುಹಾಕಲು 9 ಸಲಹೆಗಳು* 💥
*

ತಲೆನೋವಿಗೆ ಸಾಮಾನ್ಯ ಆಹಾರ ಪ್ರಚೋದಕಗಳು ಇಲ್ಲಿವೆ: ಬಾಳೆ ಹಣ್ಣು, ಬೀನ್ಸ್, ಚಾಕೊಲೇಟ್,  ಚೀಸ್, ಟೊಮೆಟೊಗಳು . ಆಲ್ಕೊಹಾಲ್ ಕೂಡಾ ತಲೆ ನೋವಿಗೆ ಕಾರಣವಾಗಬಹುದು.

ಫೈಬರ್+ ಪ್ರೊಟೀನ್‌ಯುಕ್ತ ಆಹಾರ
ಉಪವಾಸ ಮತ್ತು ಊಟವನ್ನು ತಪ್ಪಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ತಲೆ ನೋವು ಬರುತ್ತದೆ. ಹೀಗಾಗಿ ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿರುವ ಆಹಾರ ಸೇವಿಸುವುದು ಒಳ್ಳೆಯದು. 

ನೀವು ಸೇವಿಸುವ ಆಹಾರ ಆಮ್ಲಜನಕ ಮತ್ತು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಆ ಶಕ್ತಿಯು ಖಾಲಿಯಾದ ನಂತರ, ನಿಮ್ಮ ಮೆದುಳಿಗೆ ಆಹಾರ ಬೇಕಾಗುತ್ತದೆ. ಅಗತ್ಯ ಪೋಷಕಾಂಶಗಳ ಕೊರತೆ ಎದೆಗುಂದಿಸುವ ನೋವನ್ನು ಉಂಟುಮಾಡಬಹುದು.

ಏನು ಮಾಡಬೇಕು: ಪ್ರತಿ ಮೂರು ನಾಲ್ಕು ಗಂಟೆಗಳವರೆಗೆ ಸ್ವಲ್ಪ ಸ್ವಲ್ಪ ಆಹಾರ ಸೇವಿಸುತ್ತೀರಿ. 

*ವಿಟಾಮಿನ್ ಇ*

ವಿಟಮಿನ್ ಇ ಈಸ್ಟ್ರೊಜೆನ್ ಮಟ್ಟವನ್ನು ಸ್ಥಿರಗೊಳಿಸುತ್ತದೆ, ಅವಧಿಗೆ ಸಂಬಂಧಿಸಿದ ಮೈಗ್ರೇನ್‌ಗಳನ್ನು ನಿವಾರಿಸುತ್ತದೆ.

ಏನು ಮಾಡಬೇಕು: ಎಳ್ಳಿನ ಬೀಜಗಳನ್ನು ತಿನ್ನಿರಿ. ವಿಟಮಿನ್ ಇ ಜೊತೆಗೆ, ಎಳ್ಳು ಕೂಡ ಎಲ್-ಆರ್ಜಿನೈನ್ ಭರಿತವಾಗಿರುತ್ತದೆ. ಇದು ಒತ್ತಡದ ತಲೆನೋವು ಮತ್ತು ಮೈಗ್ರೇನ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಿಟರೂಟ್ ಮತ್ತು ಬಿಟರೂಟ್ ರಸ ಸಹ ಉತ್ತಮ.

ಹೈ ಮೆಗ್ನಿಷಿಯಂ + ಕೊಬ್ಬು

ಮೆಗ್ನಿಷಿಯಂ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಮೆದುಳಿನಲ್ಲಿ ಮೈಗ್ರೇನ್-ಪ್ರಚೋದಿಸುವ ವಿದ್ಯುತ್ ಸಂಕೇತಗಳನ್ನು ಉತ್ಪತ್ತಿ ಮಾಡುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಕೊಬ್ಬು ರಕ್ತದೊತ್ತಡವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.

ಏನು ಮಾಡಬೇಕು: ಮೆಗ್ನಿಷಿಯಂ ಭರಿತ ಆಹಾರಗಳಾದ ಮೀನು, ಬೀನ್ಸ್ ಮತ್ತು ಗಾಢ ಹಸಿರು, ಎಲೆಗಳ ತರಕಾರಿಗಳು ಮತ್ತು ಕುಂಬಳಕಾಯಿ ಬೀಜಗಳನ್ನು ಸೇವಿಸಿ. 

ಮೆಗ್ನಿಷಿಯಂ ವರ್ಧಕ ಆಹಾರಗಳಾದ ಸೂಪ್, ಸಲಾಡ್ ಸೇವಿಸಿ. 

*ಕೆಫೀನ್*

ಕೆಲವರು ವಾರಾಂತ್ಯದಲ್ಲಿ ತಲೆ ನೋವನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣ ವಾರದ 5 ದಿನ ಕಚೇರಿಗಳಗಲ್ಲಿ ಪದೇ ಪದೇ ಟೀ, ಕಾಫಿ ಕುಡಿಯುವ ಚಟ. ಉಳಿದ 2 ದಿನ ಎಂದಿನಂತೆ ಕಾಫಿ, ಟೀ ಕುಡಿಯದಿರುವುದರಿಂದ ಅಂತವರಿಗೆ ತಲೆ ನೋವು ಒಕ್ಕರಿಸಿಕೊಳ್ಳುತ್ತದೆ. 

ಕೆಫೀನ್ ತಲೆ ನೋವಿಗೆ ಕಾರಣವೂ ಆಗಬಲ್ಲದು, ಮದ್ದು ಆಗಬಲ್ಲದು. 

ಏನು ಮಾಡಬೇಕು: ಹೀಗಾಗಿ ನಿಮ್ಮ ಆಹಾರದಲ್ಲಿ ಕೆಫೀನ್‌ನ್ನು ನಿಧಾನವಾಗಿ ತಗ್ಗಿಸುತ್ತ ಬನ್ನಿ. ದಿನಕ್ಕೆ ಒಂದು ಅಥವಾ ಎರಡು ಸಲ ಮಾತ್ರ ಸೇವಿಸುವ ರೂಢಿ ಬೆಳೆಸಿಕೊಳ್ಳಿ.

*ಒಮೆಗಾ 3*

ಈ ಅದ್ಭುತ ಪೌಷ್ಟಿಕಾಂಶವು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವಲ್ಲಿ ರಾಮ ಬಾಣ. ರಕ್ತದೊತ್ತಡ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ .

ಏನು ಮಾಡಬೇಕು: ನಿಮ್ಮ ಆಹಾರದಲ್ಲಿ ಅಗಸೆ ಬೀಜ ಸೇವಿಸಿ

*ವಿಟಾಮಿನ್ ಡಿ*

ವಿಟಮಿನ್ ಡಿ ಕೊರತೆ ಇದ್ದರೆ ತಲೆ ನೋವು ಕಾಣಿಸಿಕೊಳ್ಳಬಹುದು. ಸೂರ್ಯನ ಬೆಳಕು ಕಡಿಮೆ ಇರುವ ದಿನಗಳು ವಿಟಾಮಿನ್ ಡಿ ಕೊರತೆಗೆ ಕಾರಣವಾಗಿ ತಲೆ ನೋವು ಬರಬಹುದು. 

ಏನು ಮಾಡಬೇಕು: ನಿಮ್ಮ ಸ್ವಲ್ಪ ಸಮಯವನ್ನು ಎಳೆ ಬಿಸಿಲಲ್ಲಿ ಕಳೆಯಿರಿ.

*ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ*

ನಿರ್ಜಲೀಕರಣ ಸಹ ತಲೆನೋವು ಬರಲು ಪ್ರಮುಖ ಕಾರಣ. ನಮ್ಮ ಮೆದುಳಿನ 75% ನೀರಿನಿಂದ ತುಂಬಿರುತ್ತದೆ. ನಿರ್ಜಲೀಕರಣಗೊಂಡಾಗ ನೀರನ್ನು ಹಿಡಿದಿಡಲು ಮೆದುಳು ಹಿಸ್ಟಮಿನ್‌ಗಳನ್ನು ಉತ್ಪಾದಿಸುತ್ತದೆ. ಇದು ನೋವು ಮತ್ತು ಸಾಮಾನ್ಯ ಆಯಾಸಕ್ಕೆ ಕಾರಣವಾಗಬಹುದು.

ಏನು ಮಾಡಬೇಕು: ದಿನಕ್ಕೆ ಕನಿಷ್ಠ 7, 8 ಗ್ಲಾಸ್ ನೀರು ಕುಡಿಯಿರಿ . ತುಂಬಾ ನೀರು ಕುಡಿಯುವುದು ಇಷ್ಟವಾಗಲ್ಲವೆಂದರೆ ಹೆಚ್ಚಿನ ನೀರಿನಂಶವಿರುವ ಸವತೆಕಾಯಿ, ಕಲ್ಲಂಗಡಿಯಂತಹ ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸಿ.

*ಶುಂಠಿ*

ಶುಂಠಿ ಹಲವಾರು ಪೋಷಕಾಂಶಗಳನ್ನು ಹೊಂದಿದ್ದು ಮೈಗ್ರೇನ್ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಏನು ಮಾಡಬೇಕು: ಶುಂಠಿ ಚಹಾದೊಂದಿಗೆ ದಿನವನ್ನು ಪ್ರಾರಂಭಿಸಿ.

For Daily updates join our whatsapp group.

https://chat.whatsapp.com/Cuby6EcECJwBr89vPjBBJl

ನಾವು ಸತ್ತ ಮೇಲೆ ದಹನ ಸಂಸ್ಕಾರ ಮಾಡಿದರೆ ನಮ್ಮ ದೇಹವೆಲ್ಲಾ ಮತ್ತು ಮೂಳೆಗಳು ಸಹ ಸುಟ್ಟು ಬೂದಿ ಯಾಗುತ್ತದೆ.


ನಾವು ಸತ್ತ ಮೇಲೆ ದಹನ ಸಂಸ್ಕಾರ ಮಾಡಿದರೆ ನಮ್ಮ ದೇಹವೆಲ್ಲಾ ಮತ್ತು ಮೂಳೆಗಳು ಸಹ ಸುಟ್ಟು ಬೂದಿ ಯಾಗುತ್ತದೆ.

ಆದರೆ ಹಲ್ಲುಗಳು ಮಾತ್ರ ಬೂದಿಯಾಗುವುದಿಲ್ಲ.ದೇಹವನ್ನು ಸುಟ್ಟು ಹಾಕುವ ಬದಲು ಹೂತರೂ ಸಹ ದೇಹ ಮಣ್ಣಿನಲ್ಲಿ ಲೀನ ವಾದರೂ 20 ವರ್ಷಗಳನಂತರ ಭೂಮಿ ಅಗೆದು ನೋಡಿದಾಗಲೂ ಸಹ ಹಲ್ಲುಗಳು ಕದಲದೇ ಹಾಗೆ ಇರುತ್ತದೆ.

ಇಷ್ಟು ಗಟ್ಟಿಯಾಗಿ ನಮ್ಮ ಹಲ್ಲುಗಳು ತಯಾರಾಗುತ್ತದೆ.ಯಾವ ಹಲ್ಲುಗಳು ಮಣ್ಣಿನಲ್ಲಿ,ಬೆಂಕಿಯಲ್ಲಿ ಕರಗುವುದಿಲ್ಲವೋ ಅಂತಹ ಹಲ್ಲುಗಳನ್ನ 20 ದಿನಗಳು ಯಾವುದಾದರೂ ಕೂಲ್ ಡ್ರಿಂಕ್ಸ್ ನಲ್ಲಿ ಇಟ್ಟು ಪರಿಶೀಲಿಸಿದರೆ  ಅದು ಸಂಪೂರ್ಣವಾಗಿ ಕರಗಿ ಹೋಗುತ್ತದೆ.

ಅವು ಬಣ್ಣ ಬದಲಾಯಿಸಿ ಪುಡಿ ಪುಡಿಯಾಗುತ್ತದೆ.ನಾವು ಹುಟ್ಟಿದ ನಂತರ ದಿಂದ ಎಷ್ಟೇ ವಯಸ್ಸಾದರೂ 50 ಟನ್ ಆಹಾರವನ್ನು ಈ ಹಲ್ಲುಗಳಿಂದ ಪುಡಿ ಮಾಡಿರುತ್ತೇವೆ.ಎಂತಹ ಆಹಾರವನ್ನಾದರೂ ಕರಗಿಸುವ ಇಂತಹ ಹಲ್ಲುಗಳು ಬರೀ ಕೂಲ್ ಡ್ರಿಂಕ್ಸ್ ಗಳಿಂದ ಹಾಳಾಗುತ್ತೆ ಎಂದರೆ ಕೂಲ್ ಡ್ರಿಂಕ್ಸ್ ನಲ್ಲಿ ಎಷ್ಟು ವಿಷವಿರುತ್ತದೆ ಎಂದು ನಂಬುವಿರಾ?

ನಿಧಾನವಾಗಿ ನಮ್ಮನ್ನು ನಮ್ಮದೇಹ ವನ್ನು ಹಾಳು ಮಾಡುವ ಕೆಲಸ ಮಾಡುತ್ತದೆ.ಅಂತಹ ಗಟ್ಟಿ ಹಲ್ಲನ್ನೇ ನಾಶ ಮಾಡುವ ಡ್ರಿಂಕ್ಸ್ ಗಳಿಗೆ ನಮ್ಮ ಕರುಳು, ನರಗಳು, ದೇಹದ ಕಣಗಳು,ಲೆಕ್ಕವೇ.
ದಯವಿಟ್ಟು *Say no to cool Drinks*....

ದಯವಿಟ್ಟು ಕಬ್ಬಿನ ಹಾಲು, ಎಳನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್ ನ್ನು ಕುಡಿಯಿರಿ.

*ಸರ್ವೇ ಜನಾಃ ಸುಖಿನೋ ಭವಂತು*

For Daily updates join our whatsapp group.

https://chat.whatsapp.com/Cuby6EcECJwBr89vPjBBJl

ಕಂಡದ್ದನ್ನು ಬಯಸುವುದೇ *ಕಾಮ.*



⛔ಕಂಡದ್ದನ್ನು ಬಯಸುವುದೇ *ಕಾಮ.*

⛔ಬಯಸಿದ್ದು ಸಿಗದಾಗ ಉಂಟಾಗುವುದೇ 
*ಕ್ರೋಧ.*

⛔ದೊರೆತರೂ ಇನ್ನಷ್ಟು ಬೇಕೆಂಬುದೇ 
*ಲೋಭ.*

⛔ಇನ್ನಷ್ಟು ದೊರೆತಾಗ,ಕೈ ಬಿಟ್ಟು ಹೋಗಬಾರದೆಂಬುದೇ *ಮೋಹ.*

⛔ಕೈ ಬಿಟ್ಟು ಹೋಗದೆ ತನ್ನಲ್ಲಿಯೇ ಉಳಿದಾಗ, ತನ್ನ ಬಳಿ ಮಾತ್ರ ಇದೆ ಎಂಬ ಜಂಭವೇ 
*ಮದ.*

⛔ತನ್ನಲ್ಲಿರುವುದು ಬೇರೊಬ್ಬನಲ್ಲಿ ಇದೆ ಎಂದು ತಿಳಿದು ಬಂದಾಗ ಉಂಟಾಗುವುದೇ 
*ಮತ್ಸರ.*

For Daily updates join our whatsapp group.

https://chat.whatsapp.com/KK9bCJ63ZSa3vol1vYABqF

ಮೊಟ್ಟೆ, ಮತ್ತು "ಹಾಲು" ಶಾಕಾಹಾರವೇ ? ಮಾಂಸಾಹಾರವೇ "?* 😨



*"ಮೊಟ್ಟೆ,   ಮತ್ತು  "ಹಾಲು"     ಶಾಕಾಹಾರವೇ ? ಮಾಂಸಾಹಾರವೇ "?* 😨

*ಉತ್ತರ:* ಮೊದಲನೆಯದಾಗಿ ನಾವು ಶಾಕಾಹಾರವೆಂದರೆ ಏನು? ಮಾಂಸಾಹಾರವೆಂದರೆ ಏನು? ಎಂಬ ವಿಷಯದ ಬಗ್ಗೆ ವಿವರಣೆಯನ್ನು ಪರಿಶೀಲಿಸೋಣ. ಈ ಭೂಮಿಯ ಮೇಲೆ ಚರಾಚರ ಸೃಷ್ಟಿ (ಜನನ) ಎನ್ನುವುದನ್ನು ನಾಲ್ಕು ವಿಧಗಳಾಗಿ ವಿಭಜಿಸಿ ಅರ್ಥ ಮಾಡಿಕೊಳ್ಳಲಾಗಿದೆ.
ಇವುಗಳನ್ನು,
1. ಜರಾಯುಜಗಳು
2. ಅಂಡಜಗಳು
3. ಸ್ವೇದಜಗಳು
4. ಉದ್ಭೀಜಗಳು
ಎಂದು ಕರೆಯುತ್ತಾರೆ.

1. *ಜರಾಯುಜಗಳು:* " ಗರ್ಭದಲ್ಲಿನ ಪಿಂಡವನ್ನು ಆವರಿಸಿ  ಹುಟ್ಟಿರುವವು. ಮನುಷ್ಯರು, ಪಶುಗಳು.

2. *ಅಂಡಜಗಳು:* ಮೊಟ್ಟೆಯಿಂದ ಹುಟ್ಟುವ ಪಕ್ಷಿಗಳು, ಹಾವುಗಳು ಮೊದಲಾದವು.

3. *ಸ್ವೇದಜಗಳು:* ಬೆವರಿನಿಂದ ಹುಟ್ಟುವ ಸೊಳ್ಳೆಗಳು, ತಿಗಣೆಗಳು ಮೊದಲಾದವು.

4. *ಉದ್ಭೀಜಗಳು:* ಬೀಜವನ್ನು ಒಡೆದು ಜನ್ಮಿಸುವ ವೃಕ್ಷ, ಬಳ್ಳಿಗಳು ಮೊದಲಾದವು.

ಇನ್ನು ಇದರಲ್ಲಿ ಎರಡು ವಿಧಗಳು: "ಚರ ಸೃಷ್ಟಿ", "ಅಚರ ಸೃಷ್ಟಿ".

ಜರಾಯುಜಗಳು, ಅಂಡಜಗಳು, ಸ್ವೇದಜಗಳು " ಚರ ಸೃಷ್ಟಿ " ಎಂದು, ಉದ್ಭೀಜಗಳು ಮಾತ್ರ "ಅಚರ ಸೃಷ್ಟಿ" ಎಂದು ಹೇಳಲಾಗಿದೆ. "ಚರ" ಎಂದರೆ ಕದಲುವಂತಹವು. ಇದಕ್ಕೆ ಉದಾಹರಣೆ ಮನುಷ್ಯರು, ಪಶುಗಳು, ಪಕ್ಷಿಗಳು, ಹಾವುಗಳು, ಸೊಳ್ಳೆಗಳು, ತಿಗಣೆಗಳು, ಕ್ರಿಮಿ ಕೀಟಗಳು, ಇವು ಚಲಿಸುವಿಕೆಯನ್ನು ಹೊಂದಿರುತ್ತವೆ. ಇವು ಮುಖ್ಯವಾಗಿ ತಮ್ಮ ಚಲನೆಯನ್ನು ತಮ್ಮನ್ನು ತಾವು ಕಾಪಾಡಿಕೊಳ್ಳುವ ಕ್ರಮದಲ್ಲೂ, ತಮ್ಮ ಆಹಾರವನ್ನು ಹುಡುಕುವ ಪ್ರಯತ್ನದಲ್ಲೂ ಬಳಸಿಕೊಳ್ಳುತ್ತವೆ. ಇವು ರಜೋ ಗುಣ, ತಮೋ ಗುಣ ಸ್ವಭಾವಿಗಳು, ಆದ್ದರಿಂದ ಇವು ಧರಿಸುವ ಶರೀರಗಳನ್ನು ದೋಷಪೂರಿತವೆಂದು, ದುರ್ಗಂಧವನ್ನು ಆವರಿಸುವ ವಿಧದಲ್ಲಿ ಭಾವಿಸಿ ಇವುಗಳನ್ನು "ಮಾಂಸವೆಂದು", ಮಾಂಸಾಹಾರವೆಂದು ಪೂರ್ವಿಕರು ಹೇಳಿದ್ದಾರೆ. 

🔺 *ಇನ್ನು ಉಳಿದದ್ದು, ಉದ್ಭೀಜಗಳು:* ಬೀಜದಿಂದ ಬರುವಂತಹುದನ್ನು ಉಚ್ಛವಾದವು ಎಂದು ಕರೆದಿದ್ದಾರೆ. ಇವು ಸಾಧ್ಯವಾದಷ್ಟು ಸೂರ್ಯನ ಶಾಖ ಹೊಂದುವುದಕ್ಕೆ ಆಕಾಶದ ಕಡೆಗೆ ಸಾಗುತ್ತವೆ. ಇವು ಸತ್ವಗುಣ ಪೂರಿತವಾಗಿವೆ. ಆದ್ದರಿಂದ ಇವುಗಳನ್ನು " ಶಾಕಾಹಾರ " ವೆಂದು ಕರೆದಿದ್ದಾರೆ.

🔺 ಚರ ಸೃಷ್ಟಿಯನ್ನು ಆಹಾರಕ್ಕಾಗಿ ಬಳಸಬಾರದು ಎಂದು ಯಜ್ಞವಲ್ಕ್ಯ ಸ್ಮೃತಿ ಹೇಳುತ್ತದೆ. ಜಿಂಕೆಯೊಂದರ ಕಾಲನ್ನು ನಾವು ಕತ್ತರಿಸಿದರೆ, ಅದು ಜೀವನ ಪರ್ಯಂತ ಕುಂಟುತ್ತಾ ಇರುತ್ತದೆ ಹೊರತು ಅದು ಬೇರೊಂದು ಕಾಲನ್ನು ಬೆಳೆಸಿಕೊಳ್ಳಲಾರದು. ಹಾಗೆಯೇ ತನಗೆ ಒಂದು ಕಡೆ ಆಹಾರವೇನು ಸಿಗದಿದ್ದರೆ ಬೇರೆ ಕಡೆಗೆ ಹೋಗಬಲ್ಲಂತಹ ರಜೋಗುಣವನ್ನು ಜಿಂಕೆ, ಮಾನವ, ಹಾವು, ತಿಗಣೆಯಂತಹ ಚರಾ ಸೃಷ್ಟಿ ಹೊಂದಿದ ಪ್ರಾಣಿಗಳಲ್ಲಿ ಇರುತ್ತದೆ.

🔺 ಆದರೆ, ಅಚರ ಸೃಷ್ಟಿ ಇದಕ್ಕೆ ಭಿನ್ನವಾದದ್ದು. ಒಂದು ಗಿಡಮರದ ರೆಂಬೆ ಕೊಂಬೆಯನ್ನು ಕತ್ತರಿಸಿದರೆ, ಅದು ಬೇರೊಂದು ಕೊಂಬೆಯನ್ನು ಬೆಳೆಸಿಕೊಳ್ಳುತ್ತದೆ. ಗಿಡವು ತನ್ನ ಎಲೆಗಳನ್ನು ಸಮೃದ್ಧಿಯಾಗಿ ಉದುರಿಸುತ್ತವೆ, ತನ್ನ ಹಣ್ಣುಗಳನ್ನು ಉದುರಿಸುತ್ತವೆ. ಹಾಗೆಯೇ ಭತ್ತದಂತಹ ಗಿಡಗಳ ಧಾನ್ಯವನ್ನು, ಆ ಗಿಡವು ಪ್ರಕೃತಿ ಸಿದ್ಧವಾಗಿ ಸತ್ತು ಹೋದ ನಂತರವೇ ನಾವು ಆ ಬೆಳೆಯನ್ನು ಕತ್ತರಿಸಿ ಬೀಜಗಳನ್ನು ಮನೆಗೆ ತಂದುಕೊಳ್ಳುತ್ತೇವೆ. ಈ ಅಚರ ಸೃಷ್ಟಿ ತಮಗೆ ಆಹಾರ ಸಿಗಲಿಲ್ಲವೆಂದು ಬೇರೊಂದು ಕಡೆಗೆ ಚಲಿಸುವುದಿಲ್ಲ. ಇವುಗಳಲ್ಲಿ ಸತ್ವ ಗುಣವಿದೆ (ಸತ್ವಂ ಸುಖೇ ಸಂಜಾಯತಿ). ಆದ್ದರಿಂದ ಮಾವು, ಗೋಧಿ, ಬಾರ್ಲಿ, ಎಳ್ಳು ಗಳಂತಹುದನ್ನು ಭುಜಿಸಿದರೆ, ಸತ್ವ ಗುಣ ವೃದ್ಧಿಯಾಗಿ, ಆಲೋಚನೆಯಲ್ಲಿ ಕ್ರೂರತ್ವ ನಶಿಸಿ, ಮನುಷ್ಯನು ಆರೋಗ್ಯಪೂರ್ಣ ಜೀವನವನ್ನು ನಡೆಸುತ್ತಾನೆ. ಆದ್ದರಿಂದಲೇ, ಶಾಕಾಹಾರವನ್ನು ಭುಜಿಸುವುದರಿಂದ ಮಾನವನು ಸುಖವನ್ನು ಹೊಂದಿ, ಕೈವಲ್ಯವನ್ನು ಹೊಂದಬಹುದು ಎಂದು ಸಾಧನಾ ಗ್ರಂಥದಲ್ಲಿ ಋಷಿಗಳು ಬೋಧಿಸಿದ್ದಾರೆ.

🔺 ಈ ಶಾಕಾಹಾರ, ಮಾಂಸಾಹಾರ ಚರ್ಚೆ ಎನ್ನುವುದು ಜರಾಯುಜಗಳಲ್ಲೇ ಸಾಧ್ಯ. ಮಾನವರು ಜರಾಯುಜರಿಂದಲೇ ಹುಟ್ಟುತ್ತಾರೆ. ತಾಯಿ ಹಾಲು ಕುಡಿದು ಬೆಳೆಯುತ್ತಾರೆ. ಆದುದರಿಂದ, ಜರಾಯುಜಗಳಾದ ಹಸುಗಳು, ಜಿಂಕೆಗಳು, ಕುದುರೆಗಳಂತಹುದರ ಹಾಲನ್ನು ಇವರು ಕುಡಿಯಬಹುದು ಎಂದು ಹೇಳಿದ್ದಾರೆ. ಈ ಹಾಲು ಎನ್ನುವುದನ್ನು ತಮ್ಮ ಮಗುವು ಕುಡಿಯುವುದಕ್ಕಿಂತ ಎರಡು ಪಟ್ಟು ಅಧಿಕವಾಗಿಯೇ ಜರಾಯುಜಗಳು ಉತ್ಪತ್ತಿ ಮಾಡುತ್ತವೆ. ಆದ್ದರಿಂದ 'ಕರು' ಕುಡಿದು ಉಳಿದ ಹಾಲನ್ನು ಈ ಜರಾಯುಜಗಳು ಸಹಜವಾಗಿಯೇ ವಿಸರ್ಜಿಸುತ್ತವೆ. ಅಂದರೆ ನೀವು ಹಾಲು ಕರೆಯದಿದ್ದರೂ ಹೆಚ್ಚಾದ ಹಾಲನ್ನು, ಯಾವ ಒಂದು ಗಿಡಕ್ಕೋ ತನ್ನ ಕೆಚ್ಚಲನ್ನು ಒತ್ತಿ ಹಿಡಿದು ಸುರಿಸುತ್ತವೆ. ಆದ್ದರಿಂದ, ಇಂತಹ ಹಾಲನ್ನು ಶೇಖರಿಸುವುದರಿಂದ, ಅವುಗಳಿಗೆ ಪ್ರಾಣಹಾನಿ ಆಗುವುದಿಲ್ಲ. ಇದು ಖಚಿತವಾಗಿ ಶಾಕಾಹಾರವೇ! 

🔺 ಆದರೆ ಇದಕ್ಕೆ ಒಂದು ನಿಯಮವಿದೆ. ಉದ್ಭೀಜಗಳನ್ನು ತಿಂದು ಬದುಕುವ "ಜರಾಯುಜಗಳ" ಹಾಲು ಮಾತ್ರವೇ ಶಾಕಾಹಾರ - ಅಂದರೆ ಹುಲ್ಲು ತಿಂದು ಹಾಲು ನೀಡುವ ಹಸುವಿನ ಹಾಲು ಮಾತ್ರ ಶಾಕಾಹಾರ.

🔺 ಆದರೆ, ಬೇರೆಯವುಗಳನ್ನು ತಿಂದು ಹಾಲು ನೀಡುವ ಜರಾಯುಜಗಳ ಹಾಲು 'ಮಾಂಸಾಹಾರ' - ಅಂದರೆ ಹಸುವನ್ನು ತಿಂದು ಹಾಲು ಕೊಡುವ ಹುಲಿಯ ಹಾಲು ಮಾಂಸಾಹಾರ! ಮಾನವರು ಸ್ವತಃ ಉದ್ಭೀಜಗಳನ್ನು ತಿಂದು ಬದುಕುವ ಜರಾಯುಜಗಳು.

🔺 ಮೊಟ್ಟೆಯು ಮಾಂಸಾಹಾರ. Sterile egg, ಇದರಲ್ಲಿ ಮಾತೃಗರ್ಭದಲ್ಲಿದ್ದಾಗಲೇ ಅದರ ಜೀವವನ್ನು ಕೆಲವು ರಸಾಯನಗಳನ್ನು ಉಪಯೋಗಿಸಿ, ಅದು ಬೆಳೆಯದಿರುವಂತೆ ಸಾಯಿಸುತ್ತಾರೆ. ಹಾಗಾಗಿ ಅದು ಹುಟ್ಟಿದ ನಂತರವೂ ಬೆಳೆಯದೇ ಮೊಟ್ಟೆಯಂತೆ ಇದ್ದು ಹೋಗುತ್ತದೆ. ಆ ಮೊಟ್ಟೆಯಿಂದ ಮರಿಯು ಹೊರಗೆ ಬಾರದಂತೆ ರಾಸಾಯನಿಕಗಳನ್ನು ಬಳಸಿರುತ್ತಾರೆ. ಆದ್ದರಿಂದ ಅದು ಶಾಕಾಹಾರ ಎನ್ನುವುದು ವ್ಯರ್ಥ ವಾದ.

🔺 ಯಾವುದು ಸೂಕ್ಷ್ಮವಾಗಿ ಚಲಿಸುತ್ತದೆಯೋ, ಚಲಿಸಿ ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆಯೋ, ಚಲಿಸುವಂತಹ ತನ್ನಂತಹ ಪ್ರತಿರೂಪಕ್ಕೆ ಜನ್ಮ ನೀಡುತ್ತದೆಯೋ - ಅದನ್ನು ತಿನ್ನುವುದು ಮಾಂಸಾಹಾರ, ಆದುದರಿಂದ ಮೊಟ್ಟೆಯು ಖಚಿತವಾಗಿ ಮಾಂಸವೇ ! ಆದರೆ ಹಾಲು ಶಾಕಾಹಾರ.

🔺 ಯಾವುದು ಚಲಿಸದೇ, ತನ್ನ ರೆಂಬೆ ಕೊಂಬೆಗಳನ್ನು ಇನ್ನಷ್ಟು ಬೆಳೆಸಿಕೊಳ್ಳುತ್ತದೆಯೋ, ಎಲೆಗಳನ್ನು ಚಿಗುರಿಸಿಕೊಳ್ಳಬಲ್ಲದೋ, ಅದು ಶಾಕಾಹಾರ.

ಮೀನುಗಳು "ಅಂಡಜಗಳೇ" ಅಂದರೆ ಮೊಟ್ಟೆಯಿಂದ ಹುಟ್ಟಿದ್ದು. ಚಲನೆ ಹೊಂದಿರುವಂತಹುವು. ಆದ್ದರಿಂದ ಮೀನುಗಳು ಸಹ ಮಾಂಸಾಹಾರವೆಂದು ಪರಿಗಣಿಸಲ್ಪಡುತ್ತವೆ. ಪ್ರತಿ ಜೀವಿಗೆ ತನ್ನ ಸ್ವತಃ ಸಿದ್ಧವಾದ ಆಹಾರವಿರುತ್ತದೆ. ಜಿಂಕೆಗಳು, ಹಸುಗಳು, ಕುದುರೆಗಳು ಹುಲ್ಲನ್ನು ಮೇಯುತ್ತವೆ. ಹುಲಿಗಳು, ಸಿಂಹಗಳು, ಹದ್ದುಗಳು ಮಾಂಸವನ್ನು ತಿನ್ನುತ್ತವೆ.

ಮಾನವರು ಹಣ್ಣು, ತರಕಾರಿಗಳು, ಕೆಲ ವಿಧವಾದ ಬಿದುರು ಹಾಗೂ ಬಿದುರಿನ ಕಾಳುಗಳನ್ನು ( ಭತ್ತ, ಗೋಧಿ, ಮೊದಲಾದವುಗಳನ್ನು) ತಿನ್ನುತ್ತಾರೆ. ಮನುಷ್ಯನ ಶರೀರದ ನಿರ್ಮಾಣಕೃತಿಯ ಅಂತರ್ಗತವಾದ ಜೀರ್ಣಾಶಯವು, ಈ ವಿಷಯವನ್ನು ನಿರ್ಧರಿಸುತ್ತವೆ. ಮಾನವರ ಕರುಳುಗಳ ಸರಾಸರಿ ಏಳು ಮೀಟರ್ ಉದ್ದವಿರುತ್ತದೆ. ಇವು ಬೇರೆ ಶಾಕಾಹಾರ ಜರಾಯುಜಗಳಾದ ಜಿಂಕೆ, ಸಾರಂಗ, ಹಸುಗಳನ್ನು ಹೋಲುವ ನಿರ್ಮಾಣವಾಗಿರುತ್ತವೆ. ಹುಲಿ, ಸಿಂಹದಂತಹ ಸಹಜಸಿದ್ಧವಾದ ಮಾಂಸಾಹರ ಜರಾಯುಜಗಳ ಹೊಟ್ಟೆಯಲ್ಲಿನ ಕರುಳುಗಳು ಒಂದು ಮೀಟರ್ ಉದ್ದ ಕೂಡ ಇರುವುದಿಲ್ಲ, ಏಕೆಂದರೆ ಇವು ಮಾಂಸವನ್ನು ತಿನ್ನುತ್ತವೆ. ಮಾಂಸ ಎಂದರೆ ಈಗಾಗಲೇ ಒಂದು ಪ್ರಾಣಿಯು ತಿಂದು ಅರಗಿಸಿಕೊಂಡು ಬಲವಾಗಿ ಬದಲಿಸಿಕೊಂಡ ಪದಾರ್ಥ. ಆದುದರಿಂದ, ಪುನಃ ಮಾಂಸವನ್ನು ಅರಗಿಸಿಕೊಳ್ಳಬೇಕಾದ ಅಗತ್ಯ ಇದರ ಕರುಳುಗಳಿಗೆ ಇರುವುದಿಲ್ಲ. ಕರುಳಿನ ಮೇಲೆ ಭಾರವೂ ಬೀಳುವುದಿಲ್ಲ. ಅದಕ್ಕಾಗಿಯೇ ಸಹಜಸಿದ್ಧವಾಗಿ ಮಾಂಸ ತಿನ್ನುವ ಪ್ರಾಣಿಗಳ ಕರುಳು ಚಿಕ್ಕದಾಗಿರುತ್ತವೆ. ಹಾಗಾಗಿ ಮಾನವರು ಸಹಜವಾಗಿ ಶಾಕಾಹಾರ ಜೀವಿಗಳು.
(ಶಾಸ್ತ್ರ ಸಂಗ್ರಹಿತ)

For daily updates join our Whatsapp group.

https://chat.whatsapp.com/KK9bCJ63ZSa3vol1vYABqF

🤩 *ಕಾಯಾ ವಾಚಾ ಮನಸಾ .......ಅಂದರೆ ಏನು?* 🤩



🤩 *ಕಾಯಾ ವಾಚಾ ಮನಸಾ .......ಅಂದರೆ ಏನು?* 🤩

ಕಾಯಾ (ಕಾಯೇನ )...ಅಂದರೆ ನಮ್ಮ ಶರೀರದಿಂದ,
ವಾಚಾ ....ಅಂದರೆ ನಮ್ಮ ಮಾತಿನಿಂದ,
ಮನಸಾ.....ಅಂದರೆ ನಮ್ಮ ಮನಸ್ಸಿನಿಂದ ಎಂದು ಅರ್ಥ.

ಇವುಗಳನ್ನೇ *“ತ್ರಿಕರಣ”* ಎಂಬ ಶಬ್ದದಿಂದ ಕರೆಯುತ್ತಾರೆ.

ನಮ್ಮ ಜೀವನದಲ್ಲಿ ಈ ಮೂರು ವಿಷಯಗಳಿಗೆ ಮಹತ್ವದ ಸ್ಥಾನವಿದೆ.

ನಮ್ಮ ಮನಸ್ಸು ,ಮಾತು ಮತ್ತು ಕರ್ಮಗಳು
ಪವಿತ್ರವಾಗಿರಲಿ. ತ್ರಿಕರಣಶುದ್ಧಿಯೇ ಎಲ್ಲಾ ಧರ್ಮಗ್ರಂಥಗಳ ಮೂಲ ಉದ್ದೇಶ!!!

ತ್ರಿಕರಣಶುದ್ಧತೆಯೇ ನಮ್ಮ ಸನಾತನ ಸಂಸ್ಕೃತಿಯ  ಎಲ್ಲಾ ಆಚಾರ-ವಿಚಾರ- ತಪಸ್ಸಿನ  ಗುರಿ.

*ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ|*

ಅಂದರೆ ನಮ್ಮ  ಮನಸ್ಸಿನ ಶುದ್ಧಿಗಾಗಿಯೇ ಒಳ್ಳೆಯ  ಕರ್ಮಾಚರಣೆಗಳನ್ನು ಮಾಡಬೇಕು,ಯಾವುದೇ ವಸ್ತು-ವಿಷಯಗಳನ್ನು  ಪಡೆಯಲು ಅಲ್ಲ!!

ತ್ರಿಕರಣಶುದ್ಧರಾದವರೇ ನಿಜವಾದ ಸಾಧುಗಳು! ಅವರೇ ತೀರ್ಥಸ್ವರೂಪರು! ಅಂತಹ ಸಾಧುಗಳ - ಸಜ್ಜನರ  ದರ್ಶನವೇ ನಮ್ಮ ಜೀವನದ ನಿಜವಾದ ಭಾಗ್ಯ!!

 ಸುಭಾಷಿತ - 

*ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಂ|*

*ಮನಸ್ಯನ್ಯತ್ ವಚಸ್ಯನ್ಯತ್ ಕರ್ಮಣ್ಯನ್ಯತ್ ದುರಾತ್ಮನಾಮ್||*
ಮನಸ್ಸು-ಮಾತು ಮತ್ತು ಕೆಲಸದಲ್ಲಿ ಒಂದೇ ರೀತಿಯಿರುವುದು ಮಹಾತ್ಮರ ಲಕ್ಷಣ.

ಮನಸ್ಸಿನಲ್ಲಿ ,ಮಾತಿನಲ್ಲಿ , ಕೆಲಸದಲ್ಲಿ ಬೇರೆ ಬೇರೆಯಾಗಿರುವುದು ದುರ್ಜನರ ಲಕ್ಷಣ.

For daily updates join our Whatsapp group.

https://chat.whatsapp.com/KK9bCJ63ZSa3vol1vYABqF

🚩 *ವಾದಿರಾಜ ಜಯಂತಿ* 🚩



🚩 *ವಾದಿರಾಜ ಜಯಂತಿ* 🚩

*ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |*

*ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ ||*

ಇಂದು ವಾದಿರಾಜ ಗುರುಸಾರ್ವಭೌಮರ ಜಯಂತಿ. ವಾದಿರಾಜರ ಬೃಂದಾವನವಿರುವ ಶಿರಸಿಯ ಸೋಂದಾ ವಾದಿರಾಜ ಮಠ, ಜನ್ಮಸ್ಥಳವಾದ ಕುಂದಾಪುರ ತಾಲೂಕಿನ ಹೂವಿನಕೆರೆ ಮಠ ಸಹಿತ ವಿವಿಧೆಡೆಗಳಲ್ಲಿ ಸಾವಿರಾರು ಮಂದಿ ಭಕ್ತರು ವಾದಿರಾಜರಿಗೆ ಶರಣಾಗಿ ಕೃತಾರ್ಥರಾಗುವರು.

ಹದಿನೈದನೆಯ ಶತಮಾನದ ಅಂತ್ಯದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೂವಿನಕೆರೆ ಎಂಬ ಕುಗ್ರಾಮದಲ್ಲಿ ಜನಿಸಿದ ವಾದಿರಾಜರ ಪೂರ್ವಾಶ್ರಮದ ಹೆಸರು ಭೂವರಾಹ. ಇವರ ತಂದೆ ರಾಮಾಚಾರ್ಯರು ಹಾಗೂ ಮತ್ತು ತಾಯಿ ಸರಸ್ವತಿದೇವಿ.

ವಾದಿರಾಜ ಗುರುಗಳ ಜನ್ಮಸ್ಥಳ, ಈಗ ಇಲ್ಲಿ ವಾದಿರಾಜರ ಗುಡಿ ಇದೆ. ವಾದಿರಾಜರ ಶೀಲಾ ಮೂರ್ತಿ.

120 ವರ್ಷಗಳ ಕಾಲ ದೇಹಧಾರಿಯಾಗಿದ್ದ ವಾದಿರಾಜರ ಆರಾದ್ಯ ದೈವ ಹಯವದನ. ತಮ್ಮ ಎಂಟನೆಯ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರು, ೧೧೨ ವರ್ಷಗಳ ಕಾಲ ಸನ್ಯಾಸಿಯಾಗಿದ್ದವರು. ಆರಂಭದಲ್ಲಿ ಉಡುಪಿಯನ್ನು ತಮ್ಮ ಸಾಧನಾ ತಾಣವನ್ನಾಗಿಸಿದ್ದ ವಾದಿರಾಜ ಗುರುಗಳು, ಬಳೊಕ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಕ್ಷೇತ್ರಕ್ಕೆ ತೆರಳಿದವರು. ನಂತರ ಅಲ್ಲಿಯೇ ಬೃಂದಾವನಸ್ಥರಾದರು.

ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ‘ಹಯವದನ’ ಎಂಬ ಕಾವ್ಯನಾಮದಲ್ಲಿ ಅನೇಕ ಮೇರು ಕೃತಿಗಳನ್ನು ರಚಿಸಿರುವ ವಾದಿರಾಜ ಗುರುಗಳ 343 ಕೀರ್ತನೆಗಳು ಇದುವರೆಗೆ ಲಭ್ಯವಾಗಿವೆ. ಇದರಲ್ಲಿ 9 ದೀರ್ಘ ಕೃತಿಗಳು.

ವಿಜಯನಗರ ಅರಸರು ವಾದಿರಾಜರನ್ನು ಸನ್ಮಾನಿಸುವ ಮೂಲಕ ಧನ್ಯತೆ ಅನುಭವಿಸಿದ್ದರು. ಅಂದು ‘ಕುಡುಮ’ ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ‘ಧರ್ಮಸ್ಥಳ’ವೆಂದು ನಾಮಕರಣ ಮಾಡಿ, ಇಲ್ಲಿ ಅಣ್ಣಪ್ಪ ಪಂಜುರ್ಲಿ ದೈವವನ್ನು ಪ್ರತಿಷ್ಠಾಪನೆ ಮಾಡಿದವರು ವಾದಿರಾಜ ಗುರುಸಾರ್ವಭೌಮರು.

ವಾದಿರಾಜ ಗುರುಗಳು ರಚಿಸಿದ ಕೆಲವು ದೇವರನಾಮಗಳು

ಆವರೀತಿಯಿಂದ ನೀಯೆನ್ನ ಪಾಲಿಪೆ
ಕುದುರೆ ಬಂದಿದೆ,ಚೆಲುವ ಕುದುರೆ ಬಂದಿದೆ
ತಾಳುವಿಕೆಗಿಂತನ್ಯ ತಪವು ಇಲ್ಲ
ದವಳಗಂಗೆಯ ಗಂಗಾಧರ ಮಹಾಲಿಂಗ
ದುಮ್ಮಿ ಸಾಲೆನ್ನಿ
ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನ
ರಾಜಬೀದಿಯೊಳಗಿಂದ ಕಸ್ತೂರಿ ರಂಗ
ಲೋಕಭರಿತನೋ ರಂಗ
ವೇಣುನಾದಪ್ರಿಯ.
ವಾದಿರಾಜ ಗುರುಸಾರ್ವಭೌಮರ ಮೇಲೆ ರಚಿಸಲ್ಪಟ್ಟ ಹಾಡುಗಳು
ರಾಜರ ಭಾಗ್ಯವಿದು
ಕನ್ದಿ ಕನ್ದಿ ರಾಜರ ಕನ್ದಿ
ವಾದಿರಾಜರ ಗುರುಗಲಾದ ಮುಖ್ಯಪ್ರಾನ
ಮೇರು ಕೃತಿ

ಮಹಾಭಾರತ ಲಕ್ಷಾಲಂಕಾರ, ತೀರ್ಥ ಪ್ರಬಂಧ

ದೀರ್ಘ ಗೀತೆ
ಶ್ರೀ ಲಕ್ಷ್ಮೀ ಶೋಭಾನೆ (ಸೋಬಾನೆ)

ಇತರ ಕೃತಿಗಳು
ಆಧಿಕರಣ – ನಾಮಾವಳಿ
ಈಶಾವಸ್ಯೋಪನಿಷದ್ ಭಾಷ್ಯ ಟೀಕಾ ಪ್ರಕಾಶಿಕ
ಉಪನ್ಯಾಸಸಾರರತ್ನಮಾಲಾ
ಏಕಾದಶಿ ನಿರ್ಣಯ
ಕೇನೋಪನಿಷದ್ ಟೀಕಾ
ಗುಂಡ – ಕ್ರಿಯೆ
ತೈತ್ತೋರೀಯೋಪನಿಷದ್ ಟೀಕಾ
ನ್ಯಾಯ ರತ್ನಾವಲಿ
ಪಾಖಂಡ ಮತ ಖಂಡನಮ್
ಭಾವ -ಪ್ರಕಾಶಿಕ
ಭೂಗೋಳ ವರ್ಣನಮ್
ಯುಕ್ತಿಮಲ್ಲಿಕಾ
ರುಕ್ಮಿಣೀಶ ವಿಜಯ
ಲಕ್ಷಾಭರಣ ಟೀಕಾ
ವೈಕುಂಠ ವರ್ಣನೆ
ಸರಸಭಾರತಿ ವಿಲಾಸ
ಸ್ತೋತ್ರಗಳು
ಹಯಗ್ರೀವ ಸ್ತುತಿ
ಹಯಗ್ರೀವ ದಂಡಕಮ್
ಚಕ್ರ ಸ್ತುತಿ
ಪರಮ ಸ್ತುತಿ
ದಶಾವತಾರ ಸ್ತೋತ್ರಮ್
ವ್ಯಾಸ ಸ್ತುತಿ
ಋಣಮೋಚನ ಸ್ತೋತ್ರಮ್

For daily updates join our Whatsapp group.

https://chat.whatsapp.com/BWd1rZSvpWv4zuKafY6M1V

ರಾಮನುಜಾಚಾರ್ಯರ ಪಾರ್ಥಿವ ಶರೀರ !!!

ರಾಮನುಜಾಚಾರ್ಯರ ಪಾರ್ಥಿವ ಶರೀರ !!!
ಶ್ರೀ. ರಾಮನುಜಾಚಾರ್ಯರು, ತಮ್ಮ120ನೇ ವಯಸ್ಸಿನಲ್ಲಿ 1137ನೇ ಇಸವಿಯಲ್ಲಿ ತನ್ನ ಶಿಷ್ಯರನ್ನೆಲ್ಲ ಒಂದೆಡೆ ಸೇರಿಸಿ ತಮ್ಮದೇ ಒಂದು ಶಿಲಾವಿಗ್ರಹವನ್ನು ರೂಪಿಸುತ್ತಾರೆ. ವಿಗ್ರಹ ತಯಾರಾದ ನಂತರ ಒಂದು ಶುಭದಿನ ಕಾವೇರಿನದಿಯಲ್ಲಿ ಮಿಂದು ತನ್ನದೇ ಶಿಲಾವಿಗ್ರಹದ ಮುಂದೆ ಕುಳಿತು ಶಿಷ್ಯರಿಗೆ ಎಪ್ಪತ್ತಾರು ಆದೇಶಗಳನ್ನು ಭೋಧಿಸಿದರು. 
ನಂತರ ತಾನು ಜೀರ್ಣವಾಗಿರುವ ಶರೀರವನ್ನು ಬಿಟ್ಟು ಈ ಶಿಲಾವಿಗ್ರಹದಲ್ಲಿ ಲೀನವಾಗುತ್ತೇನೆ ಎಂದು ತಿಳಿಸಿ ವಿಗ್ರಹದಲ್ಲಿ ಲೀನವಾದರು. ಆದರೆ ಶಿಷ್ಯಗಣ ಅವರ ದೇಹದ ಅಂತ್ಯಸಂಸ್ಕಾರಕ್ಕೆ ಒಪ್ಪಲಿಲ್ಲ. ಆದುದರಿಂದ ಅವರ ಮೃತದೇಹಕ್ಕೆ ಕಾವೇರಿ ನೀರಿನ ಅಭಿಷೇಕ ಮಾಡಿ ಕರ್ಪೂರದ ಹಾಗೂ ಚಂದನದ ಕುಂಕುಮದ ಲೇಪನ ಹಾಗೂ ಅವರ ಶಿಲಾ ವಿಗ್ರಹದ ಪಕ್ಕದಲ್ಲಿಯೇ ಇಡಲಾಯಿತು. 
ಶ್ರೀ. ರಾಮನುಜಾಚಾರ್ಯರ ಪಾರ್ಥಿವ ಶರೀರವನ್ನು  ತಮಿಳುನಾಡಿನ ಶ್ರೀರಂಗಂ ಶ್ರೀರಂಗನಾಥಸ್ವಾಮಿ ದೇವಾಲಯದ ಐದನೇ ಪ್ರಾಕಾರದಲ್ಲಿ, ಸುಮಾರು 900 ವರ್ಷಗಳಿಂದ ಸಂರಕ್ಷಿಸಿ ಇಡಲಾಗಿದೆ...
ಈ ದೇಹಕ್ಕೆ ವರ್ಷಕ್ಕೆ ಎರಡು ಸಲ ಕರ್ಪೂರ ಚಂದನ ಕೇಸರಿಯನ್ನು ಬಿಟ್ಟರೆ, ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. 
ಅವರ ದೇಹಾಂತ್ಯ ಆದ ನಂತರವೂ ಇಷ್ಟು ವರ್ಷಗಳ ಕಾಲ ಆದೇಹ ಕೆಡದೇ ಇದೆ ಎಂದರೆ ಅವರ ತಪಃ ಶಕ್ತಿ ಎಂತಹುದಾಗಿರಬೇಕು?
"ಓಂ ನಮೋ ನಾರಾಯಣಾಯ"

🙏🙏🙏

ಮಾಹಿತಿ: ಸುವರ್ಣಬಾಬು

ಪೂಜೆಯ ವಿಧಗಳು – Types of worship* 🕉️



🕉️ *ಪೂಜೆಯ ವಿಧಗಳು – Types of worship* 🕉️

प्रथमा प्रतिमा पूजा,
जप स्तोत्रादि मध्यमा |
उत्तमा मानसि पूजा,
सोहं भावः उत्तमोत्तमा ||

ಪ್ರಥಮಾ ಪ್ರತಿಮಾ ಪೂಜಾ, ಜಪಸ್ತೋತ್ರಾಣಿ ಮಧ್ಯಮಾ |
ಉತ್ತಮಾ ಮಾನಸೀ ಪೂಜಾ,
ಸೋಹಂ ಪೂಜೋತ್ತಮೋತ್ತಮಾ ||

ಅಂದರೆ ಪ್ರಥಮ ಹಂತದಲ್ಲಿ ಮೂರ್ತಿಪೂಜೆ, ಎರಡನೇ ಹಂತದಲ್ಲಿ ಮಂತ್ರ-ಜಪ, ಸ್ತೋತ್ರ ಪಾರಾಯಣ ಇತ್ಯಾದಿ ಮೂರನೇ ಉತ್ತಮ ಹಂತದಲ್ಲಿ ಧ್ಯಾನದ ಮೂಲಕ  ಬ್ರಹ್ಮ-ಮಾನಸ ಪೂಜೆ ಮತ್ತು ಅಂತಿಮವಾದ ನಾಲ್ಕನೇ ಹಂತದಲ್ಲಿ ಸೋಹಂ ಭಾವನೆ ಅಂದರೆ ತನ್ನಲ್ಲಿಯೇ ದೇವರನ್ನು ಕಂಡುಕೊಳ್ಳುವುದು–ಇವು ಪೂಜೆಯ ಹಂತಗಳು. 

Worshipping the idol is the first step. Better than this is repetition of the holy names or chanting holy verses. Better still is contemplation and the last and highest state is to realize, "I am He".

OR

Bhakti (devotion) begins with worshiping an Idol. Japa, Stotra(muttering prayer and chanting mantras) is medium. Best type of Devotion is to worship God in Mind and
Experiencing God in Self (considering one Self as God because God is present in everyone) is the Superior most form of Worship/Bhakti.

  *ಇದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಹಿಜಾಬ್ ಕೇಸಿನ ವಿಚಾರಣೆಯ ಸಂದರ್ಭದಲ್ಲಿ ಇಂದು ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಕೃಷ್ಣ ಶ್ರೀಪಾದ ದೀಕ್ಷಿತರು ಉಲ್ಲೇಖಿಸಿದ ವೇದದ ಶ್ಲೋಕ ಮತ್ತು ಅದರ ಭಾವಾರ್ಥ.*

 For daily updates join our whatsapp group.

https://chat.whatsapp.com/LwD8ZlckqiD9rfNWhHftjU

ಯಾರಿಂದ ಆಹಾರ ಸ್ವೀಕರಿಸಿದರೆ ಪಾಪ ಬರುತ್ತದೆ..?* 🙄


*ಯಾರಿಂದ ಆಹಾರ ಸ್ವೀಕರಿಸಿದರೆ ಪಾಪ ಬರುತ್ತದೆ..?* 🙄

*ಗರುಡ ಪುರಾಣದಲ್ಲಿದೆ ಇದಕ್ಕೆ ಉತ್ತರ* 🕉️

ಗರುಡ ಪುರಾಣದ ಪ್ರಕಾರ ನಾವು ಕೆಲವೊಂದು ವ್ಯಕ್ತಿಗಳಿಂದ ಆಹಾರವನ್ನು ಸ್ವೀಕರಿಸಿದರೆ ಆತನ ಪಾಪಗಳಲ್ಲಿ ನಮಗೂ ಪಾಲು ದೊರೆಯುತ್ತದೆಯಂತೆ. ಹಾಗಾದರೆ ಯಾವೆಲ್ಲಾ ವ್ಯಕ್ತಿಗಳಿಂದ ನಾವು ಆಹಾರವನ್ನು ಸ್ವೀಕರಿಸಬಾರದು ಗೊತ್ತಾ..?

ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ವಿಶೇಷ ಮಹತ್ವವಿದೆ. ಈ ಪುರಾಣವನ್ನು ವೇದವ್ಯಾಸ ಸಂಯೋಜಿಸಿದ ಪುರಾಣವಾಗಿದೆ. ಈ ಪುರಾಣವನ್ನು ಓದಿದರೆ ಮಾನವ ಜೀವನಕ್ಕೆ ಅವಶ್ಯಕವಿರುವ ಸಾಕಷ್ಟು ಉತ್ತಮ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಗರುಡ ಪುರಾಣದ ಪ್ರಕಾರ ನಾವು ಪಾಪ ಮಾಡಿದವರಿಂದ ಆಹಾರವನ್ನು ಸೇವಿಸಿದರೂ ಕೂಡ ಅವರ ಪಾಪದಲ್ಲಿ ನಮಗೂ ಪಾಲು ಸಿಗುತ್ತದೆಯಂತೆ. ಹಾಗಾದರೆ ಯಾವೆಲ್ಲಾ ವ್ಯಕ್ತಿಗಳಿಂದ ಆಹಾರವನ್ನು ಸೇವಿಸಿದರೆ ಪಾಪ ಸುತ್ತಿಕೊಳ್ಳುತ್ತದೆ ಗೊತ್ತಾ..?

🕉️ *ಅಪರಾಧಿಯಿಂದ ಆಹಾರವನ್ನು ಸೇವಿಸಿದರೆ ಪಾಪ ನಮಗೂ ಸೇರುತ್ತದೆ*

ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ನ್ಯಾಯಾಲಯದಲ್ಲಿ ಅಥವಾ ಕಾನೂನಿನಿಂದ ತಪ್ಪಿತಸ್ಥನೆಂದು ಸಾಬೀತಾದರೆ ಆ ವ್ಯಕ್ತಿಯಿಂದ ಎಂದಿಗೂ ಆಹಾರವನ್ನು ಸೇವಿಸಬಾರದು. ನ್ಯಾಯದ ವಿರುದ್ಧವಾಗಿ ತಪ್ಪು ಮಾಡಿದವನ ಕೈಯಿಂದ ಆಹಾರವನ್ನು ಸೇವಿಸಿದರೆ ಆತನ ಪಾಪದಲ್ಲಿನ ಪಾಲು ನಮಗೂ ಸೇರುತ್ತದೆ. ಅಪರಾಧಿಯಿಂದ ಆಹಾರ ಸೇವಿಸುವುದು ನಮ್ಮ ವೈಯಕ್ತಿಕ ಜೀವನದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ.

🕉️ *​ಮೋಸದಿಂದ ಹಣ ಗಳಿಸುವವರಿಂದ ಆಹಾರ ಸೇವಿಸಬಾರದು*

ಇಂದಿನ ಯುಗದಲ್ಲಿ ಸಾಕಷ್ಟು ತಮ್ಮಲ್ಲಿರುವ ಹಣವನ್ನು ಬಡ್ಡಿಗೆ ನೀಡುತ್ತಾರೆ. ಅದರಲ್ಲೂ ಬಡ್ಡಿಗೆ ಹಣ ತೆಗೆದುಕೊಂಡವನ ಸ್ಥಿತಿ ಗತಿಯನ್ನು ನೋಡದೇ ಆತನಿಂದ ಎಷ್ಟಾಗುತ್ತದೆಯೋ ಅಷ್ಟು ಹಣವನ್ನು ಬಡ್ಡಿಯೆನ್ನುವ ಹೆಸರಿನಲ್ಲಿ ಮೋಸದಿಂದ ಕಿತ್ತುಕೊಳ್ಳುತ್ತಾರೆ. ಬಡ್ಡಿಯ ಹೆಸರಿನಲ್ಲಿ ಬಡ ಜನರ ಜೀವ ಹಿಂಡುವವರಿಂದ ಎಂದಿಗೂ ಆಹಾರ ಮಾತ್ರವಲ್ಲ, ಒಂದಿಷ್ಟು ನೀರನ್ನು ಕೂಡ ಕುಡಿಯಬಾರದೆಂದು ಗರುಡ ಪುರಾಣ ಹೇಳುತ್ತದೆ.

🕉️ *​ಈ ಮಹಿಳೆಯರಿಂದ ಆಹಾರವನ್ನು ಸೇವಿಸದಿರಿ*

ಗ್ರಂಥಗಳ ಪ್ರಕಾರ, ಓರ್ವ ಮಹಿಳೆಗೆ ತಾನು ನಡೆಯುತ್ತಿರುವ ಹಾದಿ ಧರ್ಮದ ಮಾರ್ಗವಲ್ಲವೆಂದು ತಿಳಿದಿದ್ದರೂ ಆಕೆ ಇಚ್ಛೆಯಿಂದ ಅದೇ ಹಾದಿಯಲ್ಲಿ ತೊಡಗಿದರೆ ಆಕೆಯಿಂದ ಆಹಾರವನ್ನು ತೆಗೆದುಕೊಳ್ಳಬಾರದು. ಅಂತಹ ಮಹಿಳೆಯರಿಂದ ಆಹಾರ ಸೇವಿಸುವುದು ಮನುಷ್ಯ ಧರ್ಮಕ್ಕೆ ಅವಮಾನ ಎನ್ನಲಾಗುತ್ತದೆ. ತಿಳಿಯದೇ ಮಾಡುವ ತಪ್ಪಿಗೆ ಕ್ಷಮೆಯಿದೆ ಆದರೆ ತಿಳಿದು ತಿಳಿದು ಮಾಡುವ ತಪ್ಪಿಗೆ ಕ್ಷಮೆ ಎಲ್ಲಿದೆ ಅಲ್ಲವೇ..?

🕉️ *​ರೋಗಿಯಿಂದ ಕೂಡ ಆಹಾರವನ್ನು ಸೇವಿಸಬಾರದು*

ಒಬ್ಬ ವ್ಯಕ್ತಿಯು ಸಾಂಕ್ರಾಮಿಕ ರೋಗದಿಂದ ಅಥವಾ ಗುಣಪಡಿಸಲಾಗದಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ಆ ವ್ಯಕ್ತಿಯಿಂದ ಎಂದಿಗೂ ಆಹಾರವನ್ನು ಸೇವಿಸಬಾರದು. ಆತನ ಪಾಪದಿಂದ ಕೆಲವೊಮ್ಮೆ ಆ ವ್ಯಕ್ತಿಯು ಅನಾರೋಗ್ಯವನ್ನು ಅನುಭವಿಸುತ್ತಿರಬಹುದು ಒಂದು ವೇಳೆ ನೀವು ಆತನಿಂದ ಆಹಾರವನ್ನು ಸೇವಿಸಿದರೆ ನಿಮಗೂ ಕೂಡ ಆತನ ಪಾಪ ಸುತ್ತಿಕೊಳ್ಳಬಹುದು ಹಾಗೂ ವೈಜ್ಞಾನಿಕವಾಗಿ ಹೇಳುವುದಾದರೆ ಆ ಸೋಂಕು ನಿಮಗೂ ಕೂಡ ಹರಡಬಹುದು.

🕉️ *​ಮಂಗಳಮುಖಿಯರಿಂದ ಆಹಾರವನ್ನು ತೆಗೆದುಕೊಳ್ಳದಿರಿ*

ಗರುಡ ಪುರಾಣದ ಪ್ರಕಾರ, ಮಂಗಳಮುಖಿಯರಿಂದ ಎಂದಿಗೂ ಆಹಾರವನ್ನು ತೆಗೆದುಕೊಳ್ಳಬಾರದು. ಮಂಗಳಮುಖಿಯರಿಗೆ ನಾವು ದಾನ ಮಾಡಿದರೆ ಪುಣ್ಯವು ನಮ್ಮದಾಗುತ್ತದೆ. ಆದರೆ ಮಂಗಳಮುಖಿಯರಿಂದ ನಾವು ಆಹಾರವನ್ನು ತೆಗೆದುಕೊಳ್ಳಬಾರದು. ಯಾಕೆಂದರೆ ನಮ್ಮಂತೆಯೇ ಅವರಿಗೆ ಹಲವಾರು ಜನರು ದಾನವನ್ನು ನೀಡುತ್ತಾರೆ. ಅದರಲ್ಲಿ ಪಾಪ ಮಾಡಿದವರೂ ಇರುತ್ತಾರೆ, ಪುಣ್ಯ ಮಾಡಿದವರೂ ಕೂಡ ಇರುತ್ತಾರೆ. ಆದ್ದರಿಂದ ಮಂಗಳಮುಖಿಯರಿಗೆ ದಾನ ನೀಡಿ ಆದರೆ ಅವರಿಂದ ಆಹಾರವನ್ನು ಸ್ವೀಕರಿಸದಿರಿ.

🕉️ *ಕೋಪಿಷ್ಟರಿಂದ ಆಹಾರವನ್ನು ತೆಗೆದುಕೊಳ್ಳದಿರುವುದೇ ಲೇಸು*

ಮನುಷ್ಯನ ದೊಡ್ಡ ಶತ್ರುವೆಂದರೆ ಅದು ಅವರ ಕೋಪ. ಕೋಪವನ್ನು ಹೊಂದಿರುವ ವ್ಯಕ್ತಿಯು ಮಾನವ ಭಾವನೆಗಳನ್ನು ಮರೆತುಬಿಡುತ್ತಾನೆ. ಆದ್ದರಿಂದ ಯಾವಾಗಲೂ ಕೋಪಿಷ್ಟರಿಂದ ಆಹಾರವನ್ನು ಸ್ವೀಕರಿಸಬಾರದು. ಕೋಪಿಷ್ಟರಿಂದ ಆಹಾರ ಸ್ವೀಕರಿಸಿದರೆ ಅದು ನಮ್ಮ ಜೀವನದ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆ.

🕉️ *​ಮೋಸ ಮಾಡುವವರಿಂದ ಆಹಾರ ತೆಗೆದುಕೊಳ್ಳದಿರಿ*

ಮೋಸದ ಗುಣವುಳ್ಳ ವ್ಯಕ್ತಿಗಳಿಂದ ಎಂದಿಗೂ ಕೂಡ ಆಹಾರವನ್ನು ತೆಗೆದುಕೊಳ್ಳಬಾರದು. ಮೋಸ ಮಾಡುವುದು ಅತ್ಯಂತ ಪಾಪ ಯಾಕೆಂದರೆ ಅದು ಮೋಸ ಹೋದ ವ್ಯಕ್ತಿಗೆ ಮಾತ್ರ ನೋವನ್ನು ನಿಡುವುದಿಲ್ಲ, ಆತನ ಸುತ್ತಮುತ್ತಲಿರುವ ಇತರರಿಗೂ ಕೂಡ ನೋವನ್ನುಂಟು ಮಾಡುತ್ತದೆ. ಮೋಸದ ಗುಣವುಳ್ಳ ವ್ಯಕ್ತಿಗಳನ್ನು ಎಂದಿಗೂ ನಂಬಬಾರದು.

🕉️ *ದಯೆಯಿಲ್ಲದ ವ್ಯಕ್ತಿಗಳಿಂದ ಆಹಾರವನ್ನು ತೆಗೆದುಕೊಳ್ಳಬಾರದು*

ಹೃದಯದಲ್ಲಿ ದಯೆಯಿಲ್ಲದವರಿಂದ ಮತ್ತು ಇತರರ ಬಗ್ಗೆ ಮಾನವೀಯತೆಯನ್ನು ಹೊಂದಿರದ ವ್ಯಕ್ತಿಗಳಿಂದ ಎಂದಿಗೂ ಕೂಡ ಆಹಾರವನ್ನು ಸ್ವೀಕರಿಸಬಾರದು. ಸಹಾನುಭೂತಿ ಹೊಂದಿರುವ ವ್ಯಕ್ತಿಗಳಿಂದ ಆಹಾರವನ್ನು ಸೇವಿಸಿದರೆ ನಮ್ಮ ಪಾಪ ಕರ್ಮಗಳು ಕೂಡ ಕಡಿಮೆಯಾಗುತ್ತದೆ. ನಮ್ಮ ಪುಣ್ಯವು ಹೆಚ್ಚಾಗುತ್ತದೆ.

🕉️ *​ಮಾದಕ ವ್ಯಸನಿಗಳಿಂದ ದೂರವಿರಬೇಕು*

ಗರುಡ ಪುರಾಣದ ಪ್ರಕಾರ, ಮಾದಕ ವ್ಯಸನಿಗಳಿಂದ ಅಥವಾ ಮಾದಕ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಯಿಂದ ಆಹಾರವನ್ನು ತೆಗೆದುಕೊಳ್ಳಬಾರದು. ಮಾದಕ ವಸ್ತುಗಳು ಯಾವಾಗಲು ಒಂದು ಮನೆಯನ್ನು, ಒಂದು ಸಂಸಾರವ್ನನು ಅಥವಾ ಓರ್ವ ವ್ಯಕ್ತಿಯನ್ನು ಹಾಳುಮಾಡುತ್ತದೆಯೇ ಹೊರತು ಯಾರಿಗೂ ಕೂಡ ಒಳಿತನ್ನು ಮಾಡಲಾರದು. ಆದ್ದರಿಂದ ಅಂತಹ ವ್ಯಕ್ತಿಗಳಿಂದ ಆಹಾರವನ್ನು ಸೇವಿಸಿದರೆ ಅವರ ಪಾಪದಲ್ಲಿ ನಾವು ಕೂಡ ಪಾಲು ತೆಗೆದುಕೊಂಡಂತೆ.

For daily updates join our Whatsapp group.

https://chat.whatsapp.com/LwD8ZlckqiD9rfNWhHftjU

🕉️ *ಮಹಾಶಿವರಾತ್ರಿಯ ತತ್ತ್ವ* 🕉️

🕉️ *ಮಹಾಶಿವರಾತ್ರಿಯ ತತ್ತ್ವ*  🕉️
    
ಪ್ರತಿವರ್ಷವೂ ಮಾಘ ಬಹುಳ ಚತುರ್ದಶಿಯಂದು ಪ್ರಾಪ್ತವಾಗುವ ಮಹಾಶಿವರಾತ್ರಿಯ ಅನುಷ್ಠಾನವು ವಿಶ್ವಾದ್ಯಂತ ಅನೇಕ ಭಕ್ತರಿಂದ ಆಚರಿಸಲ್ಪಡುತ್ತದೆ. 

ಶಿವನ ಆರಾಧನೆಗೆ ಮುಖ್ಯವಾದ ದಿನವೇ ಶಿವರಾತ್ರಿಯು. ಇದು ಹಿಂದೂಪಂಚಾಂಗದ ಪ್ರಕಾರ ಪ್ರತಿ ಮಾಸದ ಕೃಷ್ಣಪಕ್ಷದ ಚತುರ್ದಶಿಯ ದಿನ ಪ್ರಾಪ್ತವಾಗುತ್ತದೆ. ಇದನ್ನು 'ಮಾಸಶಿವರಾತ್ರಿ'ಯೆಂದು ಕರೆಯುತ್ತಾರೆ, ಆದ್ದರಿಂದಲೇ ಮಾಘಮಾಸದಲ್ಲಿ ಬರುವ ಶಿವರಾತ್ರಿಗೆ 'ಮಹಾಶಿವರಾತ್ರಿ' ಎಂಬ ವಿಶೇಷವಾದ ಹೆಸರಿದೆ. 
    
ರಾತ್ರಿಯು ಯಾವಾಗಲೂ ಜೀವರಿಗೆ ಭಯಂಕರವಾದುದು. ಎಲ್ಲಾ ಪದಾರ್ಥಗಳೂ ಕಗ್ಗತ್ತಲೆಯಲ್ಲಿ ಮುಳುಗಿರುವಾಗ ಏನೊಂದೂ ಕೆಲಸವು ಸಧ್ಯವಾಗುವದಿಲ್ಲ ಹಾಗೂ ಪ್ರಾಣಿಗಳಿಗೆಲ್ಲ ನಿದ್ರೆಯ ಸಮಯವೂ ರಾತ್ರಿಯೇ ಆಗಿದೆ ಕೆಲವೇ ಭೂತ ಪ್ರೇತಪಿಶಾಚಾದಿ ಸತ್ತ್ವಗಳಿಗೂ ಗೂಬೆ ಮುಂತಾದವುಗಳಿಗೂ ರಾತ್ರಿಯ ಚಟುವಟಿಕೆಯ ಕಾಲವಾಗಿರಬಹುದು, ಆದರೆ ಸಾಮಾನ್ಯವಾಗಿ ಎಲ್ಲರಿಗೂ ರಾತ್ರಿಯು ಅಮಂಗಳಕರವು ಹೀಗಿರುವಲ್ಲಿ 'ಶಿವರಾತ್ರಿ' ಎಂದು ರಾತ್ರಿಯನ್ನು ಮಂಗಳಕರವೆಂತ ಕರೆಯಲು ಕಾರಣವೇನು? 

ಆ ರಾತ್ರಿಗೆ ಮಂಗಳತ್ವವು ಉಂಟಾಗುವದಕ್ಕೆ ನಿಮಿತ್ತವೇನಾದರೂ ಇರಬಹುದೆ? ಎಂದು ಯಾರಾದರೂ ಕೇಳಬಹುದಾಗಿದೆ. ಇದಕ್ಕೆ ಉತ್ತರವನ್ನು ಒಂದು ಗೀತಾಶ್ಲೋಕದಿಂದ ಕಂಡುಹಿಡಿಯಲು ಯತ್ನಿಸೋಣ. ಹೇಗೆಂದರೆ: *'ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮಿ'* ಎಂಬ ಪದ್ಯವು ಗೀತಾಪಾಠಕರಿಗೆಲ್ಲ ಪರಿಚಿತವೇ ಆಗಿದೆ. 

ಎಲ್ಲಾ ಪ್ರಾಣಿಗಳಿಗೂ ಕತ್ತಲೆಯಾಗಿರುವಲ್ಲಿ ಸಂಯಮಿಯು ಎಚ್ಚತ್ತಿರುವನು - ಎಂಬ ಅಭಿಪ್ರಾಯವು ಇಲ್ಲಿದೆ. ಇದರ ಪ್ರಕಾರ ಆತ್ಮವಸ್ತುವು ಎಲ್ಲಾ ಪ್ರಾಣಿಗಳಿಗೂ ಕತ್ತಲೆಯಂತೆ ತಿಳಿಯದೆ ಇದೆ. ತಮ್ಮೊಳಗೆ ಇದ್ದು ಕೊಂಡಿರುವ ಈ ಪ್ರಕಾಶಮಯವಾದ ಜ್ಯೋತಿಯನ್ನು ಸಂಸಾರಿಗಳಾದ ಪ್ರಾಣಿಗಳು ಅರಿಯದೆ ನಿದ್ರೆಮಾಡುತ್ತಿವೆ - ಎಂದರೆ ಎಂಥ ಅನರ್ಥವಾಯಿತು? 'ದೀಪದ ಬುಡದಲ್ಲಿಯೇ ಕತ್ತಲೆ' ಎಂದಂತೆ ಆತ್ಮ(ತಾನು) ವಸ್ತುವಿನ ವಿಷಯದಲ್ಲಿಯೇ ಅಜ್ಞಾನಿಗಳಾಗಿರುವ ನಮಗೆ ಅದು ರಾತ್ರಿಯಂತಿರುತ್ತದೆ. ಇಂಥ ಆತ್ಮತತ್ತ್ವದ ವಿಷಯದಲ್ಲಿ ಜ್ಞಾನಿಯು ಎಚ್ಚರವಾಗಿರುತ್ತಾನೆ - ಎಂದರೆ ಅದನ್ನು ಸಂಪೂರ್ಣವಾಗಿ ತಿಳಿದು ಆ ಪರಂಜ್ಯೋತಿಯಲ್ಲಿಯೇ ನೆಲೆನಿಂತಿರುತ್ತಾನೆ - ಎಂದು ಗೀತಾವಾಕ್ಯದ ಅರ್ಥ. 

ಇದಕ್ಕೆ ಅನುಸಾರವಾಗಿ ರಾತ್ರಿ ಎಂಬುದು ಶಿವವಾಗಿದೆ - ಎಂದು ಹೇಳುವಾಗ ಶಿವರಾತ್ರಿಯು ಆತ್ಮಜ್ಞಾನದ ಪರ್ಯಾಯಶಬ್ದವಾಗಲಿದೆ, ಆದ್ದರಿಂದ 'ಶಿವರಾತ್ರಿ' ಎಂದರೂ 'ಬ್ರಹ್ಮಜ್ಞಾನ'ವೆಂದರೂ ಒಂದೇ ಅರ್ಥ. 

ಇದು ಜ್ಞಾನಿಗಳಿಗೇ ಮಿಸಲು ಎಂದು ಬೇರೆ ಹೇಳಬೇಕಾಗಿಲ್ಲ. 
    
ಈಗ 'ಮಹಾಶಿವರಾತ್ರಿ' ಹೇಗಾಗುತ್ತದೆ - ಎಂಬುದನ್ನು ಅಲೋಚಿಸೋಣ, ವರ್ಷಕ್ಕೊಮ್ಮೆ 'ಮಹಾಶಿವರಾತ್ರಿ'ಯು ಬರುವಂತೆ ಪ್ರತಿಯೊಬ್ಬ ಮಾನವನ ಜೀವನದಲ್ಲಿಯೂ ಒಮ್ಮೆ ಮಹಾಶಿವರಾತ್ರಿಯು ಬರಬಹುದಾಗಿದೆ. ಹೇಗೆಂದರೆ: ಯಾವನು ತನ್ನ ಸ್ವರೂಪವನ್ನು ಅರಿತುಕೊಳ್ಳುವದಕ್ಕಾಗಿ ಪ್ರಾಪಂಚಿಕವಿಷಯಗಳಿಂದ ನಿವೃತ್ತನಾಗಿ ಶಮಾದಿಸಾಧನಗಳಿಂದ ಕೂಡಿ ಸದ್ಗುರುವನ್ನು ಬಳಿಸಾರಿ ಶ್ರವಣಾದಿಗಳಿಂದ ಆತ್ಮತತ್ತ್ವವನ್ನು ತಿಳಿದುಕೊಂಡು ಮುಂದೆ ಮನನನಿದಿಧ್ಯಾಸನಗಳಿಂದ ಆ ತತ್ತ್ವವನ್ನು ತನ್ನಲ್ಲಿಯೇ ಕಂಡುಕೊಂಡು ಯಾವಾಗ ನೆಲೆನಿಲ್ಲುವನೋ ಆ ದಿನವೇ ಎಂದರೆ ಜ್ಞಾನಪ್ರಾಪ್ತಿಯಾದ ಕಾಲವೇ ಅವನಿಗೆ 'ಮಹಾಶಿವರಾತ್ರಿ'ಯಾಗುವದು. 

ಬುದ್ಧನಿಗೆ ಜ್ಞಾನೋದಯವಾದದ್ದು ವೃಷಭತೀರ್ಥಂಕರರಿಗೆ ಜ್ಞಾನಕಲ್ಯಾಣವಾದದ್ದು ಎಂದು ಮುಂತಾಗಿ ಆಯಾ ಮತದವರು ಹೇಳುವಂತೆ ಸನಾತನಧರ್ಮಾವಲಂಬಿಗಳಾದ ನಾವು ನಮ್ಮ ನಮ್ಮ 'ಮಹಾಶಿವರಾತ್ರಿ'ಯ ದಿನವನ್ನು ಸಾಧಿಸಿಕೊಳ್ಳಬೇಕಾಗಿದೆ. ಅಲ್ಲಿಯವರೆಗೂ ನಾವು ಎಷ್ಟು ಶಿವರಾತ್ರಿವ್ರತಗಳು, ಉಪವಾಸ, ಜಾಗರಣ-ಗಳನ್ನು ಮಾಡಿದರೂ ಅವು ಕೇವಲ ಸಾಂಕೇತಿಕವೇ ಆಗುವವು. 

ಮುಖ್ಯಾರ್ಥದಲ್ಲಿ 'ಮಹಾಶಿವರಾತ್ರಿ'ಯಾಗಬೇಕಾದರೆ ನಾವು ಅನುಭವ ಪರ್ಯಂತವಾದ ಆತ್ಮಜ್ಞಾನದಲ್ಲಿಯೇ ನೆಲೆನಿಂತು ಸ್ಥಿತಪ್ರಜ್ಞರೇ ಆಗಬೇಕು ಅದೂ ಕೂಡ ನಾವು ಬದುಕಿರುವಾಗಲೇ ಆಗಬೇಕು. 
   
 ಶಿವರಾತ್ರಿಯು 'ವ್ರತ'ವು ಹೇಗಾಗುತ್ತದೆ? 'ವ್ರತ' ಎಂದರೆ ನಿಯಮಪರಿಪಾಲನೆ - ಎಂದರ್ಥ. ಸತ್ಯವ್ರತ, ಪತಿವ್ರತೆ - ಮುಂತಾದ ಶಬ್ದಗಳಲ್ಲಿ ವ್ರತಶಬ್ದವು ಅಡಕವಾಗಿರುವದನ್ನು ಗಮನಿಸಿರಿ. ಅದರಂತೆ ಅತ್ಮವ್ರತ ನಿಷ್ಠರಾಗಲು ಸಜ್ಜಾಗುವದೇ ಶಿವರಾತ್ರಿವ್ರತವು ಆತ್ಮನೆಂಬ ವಸ್ತುವು ಪ್ರತ್ಯಕ್ ಎಂದರೆ ಎಲ್ಲಕ್ಕಿಂತ ತೀರ ಒಳಗೆ ಇದ್ದುಕೊಂಡಿದೆಯಾದ್ದರಿಂದ ಅದನ್ನು ಮುಟ್ಟಲು ಮಾಡಬೇಕಾದ ವಿಶೇಷಪ್ರಯತ್ನಗಳಿಗೆ 'ವ್ರತ'ವೆಂದು ಹೆಸರು.

 ಸಾಂಕೇತಿಕವಾಗಿ ಶಿವರಾತ್ರಿಯ ದಿನ ಉಪವಾಸ, ಜಾಗರಣಾದಿ - ಕೆಲವು ನಿಯಮಗಳನ್ನು ಶಾಸ್ತ್ರದಲ್ಲಿ ಗೊತ್ತುಪಡಿಸಿದ್ದಾರೆ. ಹೇಗೆಂದರೆ:ಒಂದು ದಿನದಮಟ್ಟಿಗೆ ನಮ್ಮ ಶರೀರೇಂದ್ರಿಯಗಳ ವ್ಯವಹಾರಗಳಲ್ಲಿ ಅತ್ಯಗತ್ಯವಾದದ್ದು ಹೊರತು ಉಳಿದವುಗಳಿಗೆ 'ರಜಾ'ಕೊಡಬೇಕೆಂಬರ್ಥವು ತಾನೇ ಸಿದ್ಧವಾಗುವದು. ಆ ದಿನ ಚತುರ್ದಶೀ ತಿಥಿಯು ಇರುವದರಿಂದ ಐದು ಕಮೇಂದ್ರಿಯಗಳು ಐದು ಜ್ಞಾನೇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ - ಎಂಬ ನಮ್ಮ ಹದಿನಾಲ್ಕು ವಿಧವಾದ ಉಪಾಧಿವರ್ಗಕ್ಕೆ ವ್ಯವಹಾರದಿಂದ ವಿಶ್ರಾಂತಿಯನ್ನು ಕೊಡಿಸುವದು ಮುಖ್ಯಕರ್ತವ್ಯವಾಗಿದೆ. 

ಹಾಗಾದರೆ ಉಸಿರಾಡದೆ, ಶರೀರವನ್ನಳ್ಳಾಡಿಸದೆ ಬದುಕಿರುವದು ಹೇಗೆ? ಎಂದು ಕೇಳಬಹುದು. ಅದಕ್ಕೆ ಸಮಾಧಾನವೇನೆಂದರೆ: ಬಹುರ್ಮುಖವಾಗಿರುವ ಈ ಸಂಘಾತವನ್ನು ಆತ್ಮನಕಡೆಗೆ ತಿರುಗಿಸುವದು ಮಾತ್ರ ಇಲ್ಲಿ ಪ್ರಕೃತವು ಅಷ್ಟೇ ಹೊರತು ಎಲ್ಲಾ ಶರೀರವ್ಯಾಪಾರಗಳನ್ನೂ 'ಬಂದ್' ಮಾಡುವ ಅವಶ್ಯಕತೆಯಿರುವದಿಲ್ಲ. ಇದೇ ವ್ರತವು. 

    ಈಗ ಉಪವಾಸವೆಂದರೇನು? ಕೆಲವರು ಅನ್ನವನ್ನು ತಿನ್ನದೆ ಬೇರೇನಾದರೂ ಆಹಾರವನ್ನು ತೆಗೆದುಕೊಳ್ಳುವದೇ ಉಪವಾಸವೆಂದು ಭಾವಿಸುತ್ತಾರೆ. ಸಂಪೂರ್ಣ ನಿರಾಹಾರವು ಸಾದ್ಯವಾಗುವದಿಲ್ಲವೆಂತ ಅವರ ಭಾವನೆ ಆದರೆ ಶಾಸ್ತ್ರವು ಅವನವನ ದೈಹಿಕಸ್ಥಿತಿಗನುಗುಣವಾಗಿ, ಭಗವಚ್ಚಿಂತನೆಗೆ ಅಡ್ಡಿಯಾಗದಂತೆ ಲಘುವಾದ ಆಹಾರಸೇವೆನೆಯನ್ನು ಮಿತವಾಗಿ ಒಮ್ಮೆ ಮಾತ್ರ ಸ್ವೀಕರಿಸಲು ಅವಕಾಶವನ್ನು ನೀಡಿದೆಯಾದ್ದರಿಂದ, ಫಲಾಹಾರಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡದೆ, ಉಪ-ಭಗವಂತನ ಸಮೀಪದಲ್ಲಿ ವಾಸ ಇದ್ದುಕೊಂಡಿರುವ ರೂಪವಾದ ಉಪವಾಸವನ್ನು ಆಚರಿಸಬೇಕು. ಇದಕ್ಕಾಗಿ ಕೈಗಳಿಂದ ಪೂಜೆ, ಬಾಯಿಂದ ಸ್ತೋತ್ರಪಾಠಗಳೂ, ಭಜನೆ, ಶರೀರದಂಡ ಪ್ರದಕ್ಷಿಣಾಧಿಗಳು, ಮನಸ್ಸಿನಿಂದ ಮಂತ್ರಾವೃತ್ತಿ - ಮುಂತಾದ ಸಾಧನಗಳನ್ನು ಬಳಸಬಹುದಾಗಿದೆ. ಶಿವನಿಗೆ ಪ್ರಿಯವಾದ ಪದಾರ್ಥಗಳ ಸಮರ್ಪಣೆ, ಮನಸ್ಸಿನ ಒಲವಿಗೆ ತಕ್ಕಂತೆ ಆಯಾ ಉಪಾಯಗಳನ್ನು ಕೈಗೊಂಡು ಶಿವರಾತ್ರಿಯನ್ನು ಸಂಪೂರ್ಣವಾಗಿ 'ವ್ರತ'ವಾಗಿ ಮಾರ್ಪಡಿಸಿಕೊಳ್ಳಬಹುದಾಗಿದೆ. 
    
ಹೀಗೆಯೇ "ಜಾಗರಣ"ದ ಅರ್ಥವನ್ನು ತಿಳಿಯಬೇಕು. ಈ ಸಾದನವು 'ಸ್ವಲ್ಪ' ಕಷ್ಟಸಾಧ್ಯವಾದದು. ಸಾಮಾನ್ಯವಾದ ಅರ್ಥದಲ್ಲಿ ನಿದ್ರೆಮಾಡದೆ ಎಚ್ಚರವಾಗಿರುವದು ಎಂಬಿದು ಅರ್ಥವಾದರೂ ಆಧ್ಯಾತ್ಮಿಕಜಾಗರಣವು "ಜಾಗರ್ತಿ ಸಂಯಮಿ' ಎಂದು ಭಗವಂತನು ತಿಳಿಸಿರುವ ಅರ್ಥದಲ್ಲೇ ಸಮನ್ವಿತವಾಗಿರುವದು. ಹೇಗೆಂದರೆ ಎಷ್ಟೇ ಶಾಸ್ತ್ರಗಳನ್ನು ಓದಲಿ, ವಿದ್ಯಾವಂತನಾಗಿರಲಿ ಅವನು ಆತ್ಮವಿದ್ಯೆಯೊಂದನ್ನು ಕಲಿಯದೆ ಇದ್ದರೆ ನಿದ್ರೆ ಮಾಡಿದ್ದಂತೆಯೇ ಎಂದು ಭಾವಿಸಲಾಗಿದೆ. 'ಅನಾದಿಮಾಯಾ ನಿದ್ರೆ' ಎಂಬ ಹೆಸರಿನಿಂದ ವೇದಾಂತಾಚಾರ್ಯರು ಕರೆದಿರುವ ಈ ಸ್ಥಿತಿಯು ಈಗಿನ ಪ್ರಾಪಂಚಿಕರಿಗೆಲ್ಲ ಅನ್ವಯಿಸುತ್ತದೆ. ಇದರಲ್ಲಿ ಬಡವ, ಬಲ್ಲಿದ, ವಿದ್ಯಾವಂತ, ದಡ್ಡ, ಉಚ್ಚ, ನೀಚಗಳೆಂಬ ಭೇದವಿಲ್ಲ ಬ್ರಹ್ಮವಿದ್ಯಾವಿಹೀನರಾದ ಎಲ್ಲ ಜೀವರೂ ಮಾಯಾನಿದ್ರಾಮೋಹಿತರೆಂದೇ ತೀರ್ಮಾನವು. 

ಈ ಅಭಿಪ್ರಾಯದಲ್ಲಿ ಆತ್ಮ ಜ್ಞಾನಿಯೊಬ್ಬನೇ ಎಚ್ಚರವಾಗಿರುವವನೆಂದು ನಿಶ್ಚಯಿಸಲಾಗಿದೆ. ಆದ್ದರಿಂದ ಜಾಗರಣವೆಂದರೆ ನಾವು ವರ್ಷಕ್ಕೊಮ್ಮೆ ಒಂದು ರಾತ್ರಿ ಅದೂಕೂಡ ಏನೇನೋ ಲೌಕಿಕೋಪಾಯಗಳಿಂದ ನಿದ್ದೆಗೆಟ್ಟಮಾತ್ರಕ್ಕೆ ಸಾಧಿಸಿದಂತೆ ಆಯಿತೆಂದು ಭಾವಿಸಿದರೆ ನಮ್ಮಂಥ ಮೂರ್ಖರು ಬೇರೆ ಇಲ್ಲ, ಆದ್ದರಿಂದ ಮುಖ್ಯಾರ್ಥದ ಜಾಗರಣವು ನಮಗೆ ದೊರಕಬೇಕಾದರೆ ನಮ್ಮ ಜನ್ಮ ಜನ್ಮಾಂತರಗಳ ಪ್ರಯತ್ನವೂ ಸಾಕಾಗಲಾರದು. 

ನಿತ್ಯ ಜಾಗರೂಕನಾದ ಮಹಾದೇವನ ಅಪಾರವಾದ ಕರುಣೆಯು ನಮ್ಮ ಮೇಲೆ ಹರಿದಾಗ ಮಾತ್ರ ನಾವು ಜಾಗರಣೆಯ ಫಲವನ್ನು ಪೂರ್ಣವಾಗಿ ಪಡೆದುಕೊಂಡೇವು. 
    
ಇನ್ನು ಶಿವರಾತ್ರಿಯ ಶಬ್ದದಲ್ಲಿ ಅಡಗಿರುವ 'ಶಿವ' ತತ್ತ್ವದ ಬಗ್ಗೆ ವಿಚಾರ ಮಾಡೋಣ. ಶಿವಮ್, ಭದ್ರಮ್, ಕಲ್ಯಾಣಮ್, ಮಂಗಳಮ್, ಶುಭಮ್ - ಇವೆಲ್ಲವೂ ಪರ್ಯಾಯ ಶಬ್ದಗಳು, ಪರಮೇಶ್ವರನಿಗೆ ಶಿವನೆಂಬ ಹೆಸರು ವೇದದಿಂದಲೇ ಬಂದಿರುತ್ತದೆ. 'ವಶ ಕಾಂತೌ' ಎಂಬ ಧಾತುವಿನಿಂದ ಹುಟ್ಟಿರುವ ಈ ಶಬ್ದವು ಲೋಕಕ್ಕೆಲ್ಲ ಇಷ್ಟನಾದವನೂ ಎಲ್ಲ ಪ್ರಾಣಿಗಳಿಂದಲೂ ಪೂಜಿಸಲ್ಪಡುವವನೂ ಆದವನೇ ಶಿವನು ಎಂದು ತಿಳಿಸುತ್ತದೆ. ಪೌರಾಣಿಕರ ದೃಷ್ಟಿಯಿಂದಲೂ ಶಿವನು ಸಕಲ ಭೂತಗಳಿಗೂ ಆರಾಧ್ಯನು ವಿಷ್ಣುವನ್ನಾದರೊ, ರಾಕ್ಷಸರು ಪೂಜಿಸುವದಿಲ್ಲ. ದ್ವೇಷಿಸುತ್ತಾರೆ, ಆದರೆ ದೇವ-ರಾಕ್ಷಸ ಕಿನ್ನರ ಗಂಧರ್ವಾದಿ ಮನುಷ್ಯರವರೆಗಿನ ಯಾವ ಬುದ್ಧಿಜೀವಿಗಳೂ ಶಿವನನ್ನು ದ್ವೇಷಿಸುವದಿಲ್ಲ. ಇವರೆಲ್ಲರಿಗೂ ಶಿವನೇ ಪೂಜ್ಯನು; ವರದನು, ಆಶುತೋಷ (ಬೇಗನೆ ಒಲಿಯುವವನು) ಎಂಬ ಬಿರುದನ್ನು ಹೊತ್ತಿರುವ ಶಿವನು ಮಹಾದೇವನೆಂದೂ ಶಂಕರನೆಂದೂ ವಿಶ್ವೇಶ್ವರನೆಂದೂ ಅನ್ವರ್ಥನಾಮಗಳನ್ನು ಪಡೆದಿರುತ್ತಾನೆ. ಪ್ರತಿಯೊಬ್ಬನ, ಆತ್ಮಲಿಂಗನಾದ ಶಿವನು ಎಲ್ಲರಿಗೂ ಪರಮಪ್ರಿಯನಾಗಿರುವದರಲ್ಲಿ ಆಶ್ಚರ್ಯವೇನಿದೆ? ಭೂಮಿಯೇ ಮುಂತಾದ ಪಂಚ ಮಹಾಭೂತಗಳೊಡನೆ ಅಷ್ಟಮೂರ್ತಿರೂಪದಿಂದ ಜಗತ್ತನ್ನೆಲ್ಲ ವ್ಯಾಪಿಸಿಕೊಂಡು ಯೋಗಿಗಳ ಹೃದಯದಲ್ಲಿ ನೆಲಸಿರುವವನೂ ಸರ್ವಪ್ರಾಣಿಗಳ ಅಂತರಾತ್ಮನೂ ಆದ ಶಿವನನ್ನು ಒಂದಲ್ಲ ಒಂದು ರೀತಿಯಿಂದ ಎಲ್ಲರೂ ತಿಳಿದೇ ಇದ್ದಾರೆ. 

ಆದರೆ ಅವನನ್ನು 'ಶಿವ'ನೆಂದೇ ಖಚಿತವಾಗಿ ನಿಶ್ಚಯಿಸಿಕೊಂಡ ದಿನವೇ ಶಿವರಾತ್ರಿಯಾಗುವದು. ಇಂಥ ಶಿವರಾತ್ರಿಯನ್ನು ಆಚರಿಸುವ ಮಹಾತ್ಮರು ಶಿವಸ್ವರೂಪರೇ ಎಂದು ಧಾರಾಳವಾಗಿ ಹೇಳಬಹುದು. 
    

ಅಧ್ಯಾತ್ಮದೃಷ್ಟಿಯಿಂದ ಶಿವ, ವಿಷ್ಣು ಮುಂತಾಗಿ ಎಲ್ಲಾ ನಾಮಗಳೂ ಒಬ್ಬ ಭಗವಂತನದೇ ಆಗಿವೆ. ವಿಷ್ಣು ಎಂದರೆ ಸರ್ವವ್ಯಾಪಕನೆಂದೂ ಶಿವನೆಂದರೆ ಮಂಗಳಸ್ವರೂಪನೆಂದೂ ಭಾವಿಸಿ ನೀವು ಭಗವಂತನ ಕಡೆಗೆ ಹೊರಡಲು ಸಿದ್ಧರಾಗೋಣ. ನಿಮ್ಮ ಮನೋಬುದ್ಧಿಗಳನ್ನು ಆ ಪರಮಾತ್ಮನ ಕಡೆಗೆ ತಿರುಗಿಸೋಣ, ಅದಕ್ಕಾಗಿ ನಮ್ಮ ಎಲ್ಲಾ ಸಾಧನಗಳನ್ನೂ ವಿನಿಯೋಗಿಸಿ. ಜಾತಿಮತಗಳ ಬೇದವನ್ನೆಣಿಸದೆ ನಿಮ್ಮ 'ಆತ್ಮ'ನೇ ಶಿವನೆಂದು ಸಾರುವ 'ಶಿವೋಹಂ' ಎಂಬ ಬಲ್ಲವರ ಅನುಭವದಲ್ಲಿ ಶ್ರದ್ಧೆಯಿಟ್ಟು ಸಾಧಿಸಿಕೊಳ್ಳೋಣ.   

For Daily updates join our Whatsapp group.

https://chat.whatsapp.com/CygMUXTVPfHDvs3NjoydRj