ಮಹಾಲಕ್ಷ್ಮೀ ಅವಿರ್ಭಜಿಸಿದ ಕಥೆ
ದೂರ್ವಾಸ ಮುನಿಗಳ ಶಾಪಕ್ಕೊಳಗಾದ ಇಂದ್ರ
ಇಂದ್ರ ಪುರಾಣದ ಪ್ರಕಾರ ಋಷಿ ದೂರ್ವಾಸರು ಇಂದ್ರ ದೇವನಿಗೆ ಪುಷ್ಪಮಾಲೆಯೊಂದನ್ನು ಅರ್ಪಿಸುವರು.
ಆದರೆ ಇಂದ್ರದೇವನು ತುಂಬಾ ಅಂಹಕಾರದಿಂದ ವರ್ತಿಸಿ, ದೂರ್ವಾಸ ಮುನಿಗಳಿಗೆ ಅಪಮಾನ ಮಾಡುವರು. ತನಗಾದ ಅಪಮಾನವನ್ನು ಸಹಿಸಲು ಆಗದೆ ದೂರ್ವಾಸ ಮುನಿಗಳು ಇಂದ್ರನಿಗೆ ಶಾಪ ನೀಡುವರು.
ಲಕ್ಷ್ಮೀ ದೇವಿಯು ಕರುಣಿಸುವಂತಹ ಸಮೃದ್ಧಿಯಾಗಿರುವ ಶ್ರೀ ಶ್ರೀಯು ದಕ್ಕದೆ ಇರಲಿ ಎಂದು ದೂರ್ವಾಸ ಮುನಿಗಳು ಇಂದ್ರನಿಗೆ ಶಾಪ ನೀಡುವರು.
ಶಾಪದ ಪ್ರಭಾವ
ಶಾಪದ ಪ್ರಭಾವದಿಂದಾಗಿ ಲಕ್ಷ್ಮೀ ದೇವಿಯು ಇಂದ್ರನನ್ನು ಬಿಟ್ಟು ಮಹಾಲಕ್ಷ್ಮೀ ತೆರಳುವರು.
ಇಂದ್ರನು ದೇವಲೋಕದ ರಾಜನಾಗಿರುವನು. ಇದರಿಂದ ಲಕ್ಷ್ಮೀ ದೇವಿಯು ಬಿಟ್ಟುಹೋದ ಪರಿಣಾಮ ಸಂಪೂರ್ಣ ಸ್ವರ್ಗಲೋಕ ಮತ್ತು ಮೃತ್ಯುಲೋಕ ಕೂಡ ಸಮಸ್ಯೆಗೆ ಒಳಗಾಗುತ್ತದೆ.
ದೇವತೆಗಳು ಬ್ರಹ್ಮದೇವರ ಮೊರೆ ಹೋದರು
ಸ್ವರ್ಗಲೋಕದ ಪರಿಸ್ಥಿತಿಯನ್ನು ನೋಡಿ ಏನೂ ತೋಚದೆ ಇಂದ್ರದೇವನು ಇತರ ದೇವದೇವತೆಗಳೊಂದಿಗೆ ಬ್ರಹ್ಮದೇವರನ್ನು ಭೇಟಿಯಾಗಲು ಹೋಗುವರು.
ಬ್ರಹ್ಮದೇವರು ಇವರನ್ನು ವಿಷ್ಣು ದೇವರು ನೆಲೆಸಿರುವಂತಹ ವೈಕುಂಠಕ್ಕೆ ಕರೆದುಕೊಂಡು ಹೋಗುವರು.
ವಿಷ್ಣುವಿಗೆ ದೇವಲೋಕದ ಸಮಸ್ಯೆ ಬಗ್ಗೆ ತಿಳಿದಾಗ, ಅಸುರರ ನೆರವಿನೊಂದಿಗೆ ಕ್ಷೀರಸಾಗರವನ್ನು ಮಂಥನ ಮಾಡುವಂತೆ ಸಲಹೆ ನೀಡುವರು. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಸಿಂಧು ಕನ್ಯೆಯಾಗಿ ಅವರಿಗೆ ಸಿಗುವರು ಎಂದು ವಿಷ್ಣು ದೇವರು ಹೇಳುವರು.
ಅಸುರರೊಂದಿಗೆ ದೇವತೆಗಳ ಮಾತುಕತೆ
ದೇವತೆಗಳು ಅಸುರರ ಬಳಿಗೆ ಹೋಗಿ ಕ್ಷೀರಸಾಗರದಲ್ಲಿ ದೊಡ್ಡ ಮಟ್ಟದ ಖಜಾನೆ ಇರುವುದಾಗಿ ಹೇಳುವರು. ಮಂಥನ ಮಾಡಿದರೆ ಆಗ ಖಜಾನೆಯು ಮೇಲೆ ಬರುವುದು ಎಂದು ಅಸುರರನ್ನು ದೇವತೆಗಳು ನಂಬಿಸುವರು.
ಅಲ್ಲೊಂದು ಕಲಶವು ಇದ್ದು, ಅದರಲ್ಲಿ ಅಮೃತವಿದೆ ಮತ್ತು ಇದನ್ನು ಸೇವಿಸಿದರೆ ಅಮರರಾಗುವರು ಎಂದು ಅಸುರರಿಗೆ ದೇವತೆಗಳು ತಿಳಿಸುವರು. ಇದನ್ನು ಕೇಳಿದ ಅಸುರರು ದೇವತೆಗಳೊಂದಿಗೆ ಸೇರಿಕೊಂಡು ಸಮುದ್ರ ಮಂಥನ ಮಾಡಲು ತಯಾರಾಗುವರು.
ಸಮುದ್ರ ಮಂಥನ
ಎಲ್ಲಾ ದೇವತೆಗಳು ಹಾಗೂ ಅಸುರರು ಸೇರಿಕೊಂದು ಕ್ಷೀರಸಾಗರದ ಮಂಥನ ಆರಂಭಿಸಿದರು. ಇದಕ್ಕಾಗಿ ಅವರು ಮಂಡ್ರಾಚಲ ಬೆಟ್ಟವನ್ನು ಬಳಸಿಕೊಂಡರು. ಆದರೆ ಇದು ಮುಳುಗುತ್ತಿರುವುದನ್ನು ಕಂಡರು.
ಈ ವೇಳೆ ವಿಷ್ಣುವು ತನ್ನ ಕೂರ್ಮಾವತಾರ ತಾಳಿ ತನ್ನ ಬೆನ್ನ ಮೇಲೆ ಪರ್ವತವನ್ನು ಇರಿಸಿಕೊಂಡ. ಸರ್ಪಗಳ ರಾಜನಾಗಿರುವಂತಹ ವಾಸುಕಿಯನ್ನು ಈ ಬೆಟ್ಟಕ್ಕೆ ಕಟ್ಟಲಾಯಿತು.
ವಾಸುಕಿಯ ಮುಖದ ಭಾಗವನ್ನು ದೇವತೆಗಳು ಹಿಡಿಕೊಂಡರೆ, ಬಾಲವನ್ನು ಅಸುರರು ಹಿಡಿದುಕೊಂಡರು. ಇದರ ಬಳಿಕ ಅಸುರರು ಮುಖದ ಭಾಗವನ್ನು ಹಿಡಿಯಬೇಕೆಂದು ಹೇಳಿದರು. ಈ ವೇಳೆ ಸ್ಥಳ ಬದಲಾಯಿಸಲಾಯಿತು.
ಶಿವನು ವಿಷಕಂಠನಾದ
ಕ್ಷೀರಸಾಗರವನ್ನು ಮಂಥನ ಮಾಡುತ್ತಿರುವ ವೇಳೆ ಮೊದಲು ಬಂದ ವಸ್ತುವೇ ಕಠೋರ ವಿಷವಾಗಿರುವಂತಹ ಹಾಲಹಲ.
ಈ ವೇಳೆ ಹಾಲಹಲವು ಭೂಮಿಯನ್ನು ನಷ್ಟ ಮಾಡಲಿದೆಯೆಂದು ತಿಳಿದ ಈಶ್ವರನು ಇದನ್ನು ಕುಡಿದು ತನ್ನ ಕಂಠದಲ್ಲಿ ಇರಿಸಿಕೊಂಡ. ಇದರಿಂದಾಗಿ ಆತ ನೀಲಕಂಠನಾದ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.ಕ್ಷೀರಸಾಗರವನ್ನು ಮಂಥನ ಮಾಡುವಂತಹ ವೇಳೆ 14 ಅಮೂಲ್ಯ ರತ್ನಗಳ ಸಹಿತ ಹಲವಾರು ವಸ್ತುಗಳು ಬಂದಿವೆ ಎಂದು ಪುರಾಣಗಳು ಹೇಳಿವೆ.
ಲಕ್ಷ್ಮೀ ದೇವಿಯು ಜನಿಸಿದಳು
ಅಂತಿಮವಾಗಿ ಲಕ್ಷ್ಮೀ ದೇವಿಯು ಪ್ರತ್ಯಕ್ಷರಾದರು. ದೇವದೇವತೆಗಳು ಹಾಗೂ ಅಸುರರು ಲಕ್ಷ್ಮೀ ದೇವಿಯ ಸೌಂದರ್ಯವನ್ನು ನೋಡಿ ಮೂಕವಿಸ್ಮಿತರಾದರು.
ವಿಷ್ಣು ದೇವರು ಲಕ್ಷ್ಮೀ ದೇವಿಗೆ ತನ್ನ ಪವಿತ್ರ ಸಿಂಹಾಸನ ನೀಡುವರು. ವಿಶ್ವಕರ್ಮ ದೇವರು ಲಕ್ಷ್ಮೀದೇವಿಗೆ ತಾವರೆ ಹೂ ನೀಡುವರು ಮತ್ತು ಸಮುದ್ರರಾಜನು ಬಂಗಾರದ ಬಣ್ಣದ ಬಟ್ಟೆ ನೀಡುವನು. ಲಕ್ಷ್ಮೀ ದೇವಿಯು ಎಲ್ಲವನ್ನು ಪಡೆದುಕೊಂಡ ಬಳಿಕ ಆಕೆಯ ಕಣ್ಣುಗಳು ವಿಷ್ಣು ದೇವರನ್ನು ಹುಡುಕುತ್ತಲಿತ್ತು.
ಆಕೆ ಅಂತಿಮವಾಗಿ ವಿಷ್ಣು ದೇವರನ್ನು ನೋಡುವರು ಮತ್ತು ಪುಷ್ಪಮಾಲೆಯನ್ನು ವಿಷ್ಣುವಿಗೆ ಅರ್ಪಿಸುವರು.
ಪುರಾಣಗಳ ಪ್ರಕಾರ
ಪುರಾಣಗಳ ಪ್ರಕಾರ ಲಕ್ಷ್ಮೀ ದೇವಿಯು ಋಷಿ ಭೃಗು ಮತ್ತು ಖಯಾತಿ ದೇವಿಯ ಪುತ್ರಿ. ಪಾರ್ವತಿ ದೇವಿಯ ತಂದೆ ರಾಜ ದಕ್ಷ ಮತ್ತು ಋಷಿ ಭೃಗು ಸೋದರರು. ಪಾರ್ವತಿ ದೇವಿಯು ಈಶ್ವರನನ್ನು ಮದುವೆಯಾಗಲು ಬಯಸಿದಂತೆ, ಲಕ್ಷ್ಮೀ ದೇವಿಯು ವಿಷ್ಣು ದೇವರನ್ನು ಮದುವೆಯಾದರು.
ಆಕೆ ಸಮುದ್ರ ಮಧ್ಯದಲ್ಲಿ ವಿಷ್ಣುವಿನ ಪೂಜೆ ಮಾಡುವರು. ಇದರ ಬಳಿಕ ವಿಷ್ಣು ದೇವರು ಲಕ್ಷ್ಮೀ ದೇವಿಯನ್ನು ಮದುವೆಯಾಗಲು ಒಪ್ಪಿಕೊಳ್ಳುವರು. ಇದು ಲಕ್ಷ್ಮೀ ದೇವಿಯು ಹುಟ್ಟಿದ ಕಥೆ ಮತ್ತು ಅವರು ಸಂಪತ್ತಿನ ದೇವತೆಯಾಗಿರುವುದು.
ಇಂದು ಲಕ್ಷ್ಮೀ ದೇವಿಗೆ ಹಾಲಿನ ಅಭಿಷೇಕ ಪೂಜೆ ಸಲ್ಲಿಸಿ
ಶ್ರೀ ಸ್ತುತಿ ಹಾಗೂ ವಿಷ್ಣು ಸ್ತುತಿ ಹೇಳಿಕೊಳ್ಳಬೇಕು.
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ