🤩 *ಕಾಯಾ ವಾಚಾ ಮನಸಾ .......ಅಂದರೆ ಏನು?* 🤩
ಕಾಯಾ (ಕಾಯೇನ )...ಅಂದರೆ ನಮ್ಮ ಶರೀರದಿಂದ,
ವಾಚಾ ....ಅಂದರೆ ನಮ್ಮ ಮಾತಿನಿಂದ,
ಮನಸಾ.....ಅಂದರೆ ನಮ್ಮ ಮನಸ್ಸಿನಿಂದ ಎಂದು ಅರ್ಥ.
ಇವುಗಳನ್ನೇ *“ತ್ರಿಕರಣ”* ಎಂಬ ಶಬ್ದದಿಂದ ಕರೆಯುತ್ತಾರೆ.
ನಮ್ಮ ಜೀವನದಲ್ಲಿ ಈ ಮೂರು ವಿಷಯಗಳಿಗೆ ಮಹತ್ವದ ಸ್ಥಾನವಿದೆ.
ನಮ್ಮ ಮನಸ್ಸು ,ಮಾತು ಮತ್ತು ಕರ್ಮಗಳು
ಪವಿತ್ರವಾಗಿರಲಿ. ತ್ರಿಕರಣಶುದ್ಧಿಯೇ ಎಲ್ಲಾ ಧರ್ಮಗ್ರಂಥಗಳ ಮೂಲ ಉದ್ದೇಶ!!!
ತ್ರಿಕರಣಶುದ್ಧತೆಯೇ ನಮ್ಮ ಸನಾತನ ಸಂಸ್ಕೃತಿಯ ಎಲ್ಲಾ ಆಚಾರ-ವಿಚಾರ- ತಪಸ್ಸಿನ ಗುರಿ.
*ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ|*
ಅಂದರೆ ನಮ್ಮ ಮನಸ್ಸಿನ ಶುದ್ಧಿಗಾಗಿಯೇ ಒಳ್ಳೆಯ ಕರ್ಮಾಚರಣೆಗಳನ್ನು ಮಾಡಬೇಕು,ಯಾವುದೇ ವಸ್ತು-ವಿಷಯಗಳನ್ನು ಪಡೆಯಲು ಅಲ್ಲ!!
ತ್ರಿಕರಣಶುದ್ಧರಾದವರೇ ನಿಜವಾದ ಸಾಧುಗಳು! ಅವರೇ ತೀರ್ಥಸ್ವರೂಪರು! ಅಂತಹ ಸಾಧುಗಳ - ಸಜ್ಜನರ ದರ್ಶನವೇ ನಮ್ಮ ಜೀವನದ ನಿಜವಾದ ಭಾಗ್ಯ!!
ಸುಭಾಷಿತ -
*ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಂ|*
*ಮನಸ್ಯನ್ಯತ್ ವಚಸ್ಯನ್ಯತ್ ಕರ್ಮಣ್ಯನ್ಯತ್ ದುರಾತ್ಮನಾಮ್||*
ಮನಸ್ಸು-ಮಾತು ಮತ್ತು ಕೆಲಸದಲ್ಲಿ ಒಂದೇ ರೀತಿಯಿರುವುದು ಮಹಾತ್ಮರ ಲಕ್ಷಣ.
ಮನಸ್ಸಿನಲ್ಲಿ ,ಮಾತಿನಲ್ಲಿ , ಕೆಲಸದಲ್ಲಿ ಬೇರೆ ಬೇರೆಯಾಗಿರುವುದು ದುರ್ಜನರ ಲಕ್ಷಣ.
For daily updates join our Whatsapp group.
https://chat.whatsapp.com/KK9bCJ63ZSa3vol1vYABqF
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ