ಸ್ವಲ್ಪ ಉಪ್ಪು ಸೇರಿಸಿದ ಬಿಸಿ ನೀರಿನಲ್ಲಿ ಪನೀರನ್ನು ಅದ್ದಿ ಗ್ರೇವಿ ತಯಾರಿಸಿದರೆ ಪನೀರ್ ಬೇಗ ಮೃದುವಾಗುತ್ತದೆ.
ಬೇಯಿಸುವ ಮೊದಲು ತರಕಾರಿಗಳನ್ನು ಚೆನ್ನಾಗಿ ಹುರಿದು ಬೇಯಿಸಿದರೆ ಬೇಗನೇ ಬೇಯುತ್ತವೆ ಜೊತೆಗೆ ಅವುಗಳ ರುಚಿಯೂ ದುಪ್ಪಟ್ಟಾಗುತ್ತದೆ. ಇನ್ನೊಂದು ವಿಷಯವೇನೆಂದರೆ ಫ್ರಿಜ್ ನಿಂದ ತೆಗೆದ ತರಕಾರಿಗಳನ್ನು ತಕ್ಷಣ ಉಪಯೋಗಿಸಬೇಡಿ.
ಅಡುಗೆಗೆ ಬಳಸುವ ಪ್ರತಿಯೊಂದು ಸಾಮಗ್ರಿ ಬೇಯಲು ಅದರದೆ ಆದ ನಿರ್ದಿಷ್ಟ ಸಮಯವಿರುತ್ತದೆ. ಉದಾಹರಣೆಗೆ ಅಡುಗೆ ಮಾಡುವಾಗ ಮೊದಲು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ನಂತರ ಟೊಮ್ಯಾಟೋ ಹಾಕಿ ಹುರಿಯಬೇಕು.
ತರಕಾರಿಗಳಲ್ಲಿನ ಪೋಷಕಾಂಶಗಳು ಮತ್ತು ಬಣ್ಣಗಳನ್ನು ಹಾಗೇ ಉಳಿಸಲು, ಅವುಗಳನ್ನು ಸ್ಟೀಮಿಂಗ್ ಅಥವಾ ಸ್ಟೈರ್ ಪ್ರೈ ಮಾಡಿ. ಇದರಿಂದ ಪೋಷಕಾಂಶ ನಷ್ಟವಾಗುವುದಿಲ್ಲ.
ನೀವು ತರಕಾರಿಗಳನ್ನು ಹುರಿಯುವಾಗ ಅವನ್ನು ಒಂದು ಪಾನ್ ನಲ್ಲಿ ಹಾಕಿ ಎಣ್ಣೆಯನ್ನು ಸ್ಪ್ರೇ ಮಾಡಿ. ಇದು ಅಡುಗೆಯ ಸಮಯದಲ್ಲಿ ತರಕಾರಿಗಳು ಎಣ್ಣೆಯನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
ಬಟಾಟೆ ಉಪಯೋಗಿಸುವ ಮುಂಚಿನ ದಿನ ಫ್ರಿಡ್ಜಿಂದ ಹೊರಗೆ ತೆಗೆದಿಡಿ. ನಂತರ ಬಟಾಣಿಯನ್ನು ಬೇಯಿಸುವಾಗ ಸ್ವಲ್ಪ ಸಕ್ಕರೆ ಹಾಕಿದರೆ ಅದರ ಹಸಿರು ಬಣ್ಣ ಹಾಗೆಯೇ ಉಳಿಯುತ್ತದೆ.
ತೊಗರಿ ಬೇಳೆಗೆ ಒಂದು ಚಮಚ ಎಣ್ಣೆ ಹಾಕಿ ಬೇಯಿಸಿದರೆ ಅದು ಉಕ್ಕದೆ ಸುಲಭವಾಗಿ ಬೇಯುತ್ತದೆ.
ಆಲೂಗಡ್ಡೆ ಬೇಗನೆ ಬೇಯಬೇಕಿದ್ದರೆ ಸ್ವಲ್ಪ ಹೊತ್ತು ಉಪ್ಪಿನ ನೀರಲ್ಲಿ ನೆನೆಸಿಟ್ಟು ನಂತರ ಬೇಯಿಸಿ.
ಆಲೂಗಡ್ಡೆ ಬೇಗನೆ ಬೇಯಬೇಕಿದ್ದರೆ ಸ್ವಲ್ಪ ಹೊತ್ತು ಉಪ್ಪಿನ ನೀರಲ್ಲಿ ನೆನೆಸಿಟ್ಟು ನಂತರ ಬೇಯಿಸಿ.
ಬೇಯಿಸಿದ ನೂಡಲ್ಸ್ ಅಥವಾ ಪಾಸ್ತಾವನ್ನು ತಂಪು ನೀರಿಗೆ ಹಾಕಿದರೆ ಸುಲಭವಾಗಿ ಎಳೆಗಳನ್ನು ಬೇರ್ಪಡಿಸಬಹುದು.
ಉಪ್ಪಿಟ್ಟು, ಅವಲಕ್ಕಿಯಂಥ ಸಾಮಾನ್ಯ ತಿಂಡಿಗೆ ಉಪ್ಪು ಜಾಸ್ತಿಯಾದರೆ ಇನ್ನಷ್ಟು ನಿಂಬೆರಸ ಹಿಂಡಿದರೆ ಉಪ್ಪಿನಂಶ ಕಡಿಮೆಯಾಗುತ್ತದೆ.
ಸಾಮಾನ್ಯವಾಗಿ ಗಡಿಬಿಡಿಯಲ್ಲಿ ಅಡಿಗೆ ಮಾಡುವಾಗ ಆಹಾರದಲ್ಲಿ ಉಪ್ಪು ಹೆಚ್ಚಾಗಿದ್ದರೆ ತಲೆ ಕೆಡಿಸಿಕೊಳ್ಳಬೇಡಿ ಅದಕ್ಕೆ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಹಾಕಿ ಬಿಡಿ. ಆಲೂಗಡ್ಡೆ ಉಪ್ಪನ್ನು ಹೀರಿಕೊಳ್ಳುತ್ತದೆ.
ಮೊಸರು ಹುಳಿಹುಳಿಯಾಗಿದ್ದರೆ ಅದಕ್ಕೆ ಸ್ವಲ್ಪ ನೀರು ಸೇರಿಸಿ ಎರಡು ತಾಸು ಬಿಡ್ಡು ನೀರನ್ನು ಬಸಿದರೆ ಮೊಸರು ಮತ್ತೆ ಸಿಹಿಯಾಗಿರುತ್ತದೆ.