ಭಾನುವಾರ, ಅಕ್ಟೋಬರ್ 6, 2019

ಭಗವಾನ್ ಶ್ರೀ ರಾಮ ವಿಷ್ಣು ಲೋಕಕ್ಕೆ ಪಯಣ ಮಾಡಿದ ರಹಸ್ಯ

ಭಗವಾನ್ ಶ್ರೀ ರಾಮ ಭೂಮಿಯ ಮೇಲೆ ಸರಿ ಸುಮಾರು 10 ಸಾವಿರ ವರ್ಷಗಳ ಕಾಲಕ್ಕಿಂತ ಹೆಚ್ಚು ಕಾಲ ರಾಜ್ಯಭಾರ ಮಾಡಿದ್ದಾನೆಂದು ಪುರಾಣಗಳಲ್ಲಿ ಉಲ್ಲಖವಾಗಿದೆ ಇಂತಹ ಶ್ರೀ ರಾಮ ಭೂ ಲೋಕವನ್ನು ಬಿಟ್ಟು ಮತ್ತೆ ವಿಷ್ಣು ಲೋಕಕ್ಕೆ ಹೋಗಲು ಕಾರಣವಾದಂತಹ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮ್ಮ ಜೊತೆ ಹಂಚಿಕೊಳ್ಳುತ್ತಾ ಇದ್ದೇವೆ. ಒಮ್ಮೆ ಭಗವಾನ್ ಶ್ರೀ ರಾಮನ ಆಸ್ಥಾನಕ್ಕೆ ಸಂತನೊಬ್ಬನ ಆಗಮನ ಆಗುತ್ತದೆ ಹೀಗೆ ಬಂದಂತಹ ಸಂತ ಭಗವಾನ್ ಶ್ರೀ ರಾಮನ ಬಳಿ ತಾನು ಏಕಾಂತದಲ್ಲಿ ಚರ್ಚೆ ಮಾಡಬೇಕು ಎಂದು ಕೇಳಿಕೊಳ್ಳುತ್ತಾನೆ.

ಆ ಸಂತನ ಮನವಿಗೆ ಸಮ್ಮತಿ ಸೂಚಿಸುವ ಭಗವಾನ್ ಶ್ರೀ ರಾಮ ಈ ಸಂತನನ್ನು ಒಂದು ಕೋಣೆ ಒಳಗೆ ಕರೆದುಕೊಂಡು ಹೋಗುತ್ತಾನೆ ಹೀಗೆ ಈ ಸಂತನನ್ನು ಕೊನೆ ಒಳಗೆ ಕರೆದು ಕೊಂಡು ಹೋಗುವ ಮುಂಚೆ ತಾನು ತನ್ನ ಲಕ್ಷ್ಮಣನನ್ನು ಕರೆದ ಶ್ರೀ ರಾಮ ತನ್ನ ಮತ್ತು ಈ ಸಂತನ ಚರ್ಚೆಗೆ ಯಾರೂ ಕೂಡ ಭಂಗ ತರದಂತೆ ನೋಡಿಕೋ ಎಂದು ಹೇಳಿ ಹೋಗುತ್ತಾನೆ ಅಷ್ಟೆ ಅಲ್ಲದೆ ಯಾರು ಕೂಡ ಈ ಕೋಣೆ ಒಳಗೆ ಪ್ರವೇಶ ಮಾಡಿದರೆ ಅಂತವರಿಗೆ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸುವುದಾಗಿ ಕೂಡ ಶ್ರೀ ರಾಮ ಲಕ್ಷ್ಮಣನ ಬಳಿ ಹೇಳಿ ಹೋಗುತ್ತಾನೆ. ಅಣ್ಣನ ಮಾತನ್ನು ಎಂದೂ ಮೀರದ ಲಕ್ಷಣ ಈ ಕೋಣೆಯನ್ನು ಅವನು ಕಾಯುತ್ತಾ ಇರುತ್ತಾನೆ.

ಹೀಗೆ ಸಂತನ ರೂಪದಲ್ಲಿ ಬಂದಿದ್ದು ಕಾಲದೇವ ಆಗಿರುತ್ತಾನೆ ಕಾಲದೇವ ಭಗವಾನ್ ಶ್ರೀ ರಾಮನ ಬಳಿ ತಾವು ಭೂ ಲೋಕಕ್ಕೆ ಬಂದ ಕಾರ್ಯ ಸಂಪೂರ್ಣಗೊಂಡಿದೆ ಈಗ ವಿಷ್ಣು ಲೋಕಕ್ಕೆ ತೆರಳುವ ಸಮಯ ಬಂದಿದೆ ಎಂದು ತಿಳಿಸುತ್ತಾನೆ ಅದೇ ಸಮಯಕ್ಕೆ ಸರಿಯಾಗಿ ಈ ಕೋಣೆ ಹತ್ತಿರ ದೂರ್ವಾಸ ಮುನಿಗಳು ಬರುತ್ತಾರೆ. ಬಂದವರು ಲಕ್ಷ್ಮಣನ ಬಳಿ ತಾನು ಈಗಲೇ ಶ್ರೀ ರಾಮನನ್ನು ನೋಡಬೇಕು ಎಂದು ಕೇಳಿ ಕೊಳ್ಳುತ್ತಾರೆ ಆಗ ಅದಕ್ಕೆ ಒಪ್ಪದ ಲಕ್ಷಣ ಅಣ್ಣನನ್ನು ಈಗ ನೋಡಲು ಸಾಧ್ಯವಿಲ್ಲ ಎಂದು ದೂರ್ವಾಸ ಮುನಿಗೆ ತಿಳಿಸುತ್ತಾರೆ.

ಇದರಿಂದ ಕೋಪಗೊಂಡ ದೂರ್ವಾಸ ಮುನಿಗಳು ಒಂದು ವೇಳೆ ನೀನು ಏನಾದರೂ ಈಗ ಶ್ರೀ ರಾಮನನ್ನು ಭೇಟಿ ಆಗಲು ನನ್ನನು ಬಿಡದಿದ್ದರೆ ಶ್ರೀ ರಾಮನಿಗೆ ಕಠೋರವಾದ ಶಾಪವನ್ನು ನೀಡುವುದಾಗಿ ಎಚ್ಚರಿಕೆ ನೀಡುತ್ತಾರೆ ದೂರ್ವಾಸ ಮುನಿಗಳ ಕೋಪ ಮತ್ತು ಶಾಪದ ಪ್ರಭಾವವನ್ನು ಅರಿತಿರುವ ಲಕ್ಷ್ಮಣ ಇಕ್ಕಟ್ಟಿಗೆ ಸಿಲುಕಿ ಕೊನೆಗೆ ಏನು ಮಾಡಬೇಕು ಎಂದು ತಿಳಿಯದ ಲಕ್ಷ್ಮಣ ತಾನೇ ಕೋಣೆ ಒಳಗೆ ಹೋಗುತ್ತಾನೆ ಹೀಗೆ ಚರ್ಚೆಯ ನಡುವೆ ಭಂಗ ತಂದ ಲಕ್ಷ್ಮಣನನ್ನು ನೋಡಿ ಶ್ರೀ ರಾಮ ಗಲಿ ಬಿಲಿ ಗೊಳ್ಳುತ್ತಾನೆ. ಆಗ ಲಕ್ಷ್ಮಣನನ್ನು ಹೊರಹಾಕುತ್ತಾರೆ. ಕೊನೆಗೆ ರಾಜ್ಯ ಭಾರವನ್ನು ತನ್ನ ಮತ್ತು ತನ್ನ ತಮ್ಮನ ಮಕ್ಕಳಿಗೆವಹಿಸಿ ಸರಯೂ ನದಿಯ ಬಳಿ ಶ್ರೀ ರಾಮ ಮುಳುಗಿ ವಿಷ್ಣು ದೇವನ ರೂಪದಲ್ಲಿ ದರ್ಶನ ಕೊಟ್ಟು ಎಲ್ಲರಿಗೂ ಆಶೀರ್ವಾದ ಮಾಡುತ್ತಾನೆ.

ಮೈಸೂರು ಪಾಕ್ ಜನ್ಮ ತಾಳಿದ್ದು ಹೇಗೆ ಅಂದ್ರೆ

ಸಿಹಿ ತಿನಿಸುಗಳಲ್ಲಿ ಮೈಸೂರನ್ನು ದೇಶ ವಿದೇಶಗಳಿಗೆ ಪರಿಚಯ ಮಾಡುತ್ತಿರುವ ಏಕೈಕ ಸಿಹಿ ಅಂದರೆ ಅದು ಮೈಸೂರು ಪಾಕ್. ಇವತ್ತಿನ ಈ ಲೇಖನದಲ್ಲಿ ಮೈಸೂರು ಪಾಕ್ ಹೇಗೆ ಹುಟ್ಟಿದ್ದು ಎಂಬುದರ ಬಗ್ಗೆ ಒಂದು ಕುತೂಹಲಕಾರಿ ಮಾಹಿತಿ ನಾವು ನಿಮ್ಮ ಜೊತೆ ಹಂಚಿಕೊಳ್ಳುತ್ತೇವೆ. ಮೈಸೂರು ಅರಮನೆಯ ಪಾಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾ ಸುರ ಮಾದಪ್ಪ ನವರು ಮೈಸೂರು ಪಾಕವನ್ನು ಪರಿಚಯ ಮಾಡಿದರು ಕಾಕಸುರ ಮಾದಪ್ಪ ನವರಿ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ಜಯ ಚಾಮರಾಜೇಂದ್ರ ಒಡೆಯರ್ ಆಡಳಿತ ಅವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ಮಾಡುವಂತಹ ಕೆಲಸದ ಜವಾಬ್ಧಾರಿ ಹೊತ್ತುಕೊಂಡಿದ್ದರು.

ಕಾಕಾಸುರ ಮಾದಪ್ಪ ನವರು ರಾಜ ಕುಟುಂಬಕ್ಕೆ ಬೇಕಾದಂತಹ ಸಿಹಿ ಮತ್ತು ಖಾರ ಪದಾರ್ಥವನ್ನು ಕೂಡ ತಯಾರು ಮಾಡುತ್ತಿದ್ದರಂತೆ ಅದೊಂದು ದಿನ ಮಹಾರಾಜರು ಹೊಸ ಬಗೆಯ ಸಿಹಿ ತಿಂಡಿ ಒಂದನ್ನು ಮಾಡುವಂತೆ ಹೇಳಿದರು ಆಗ ಮಾದಪ್ಪನವರು ತಮಗೆ ತೋಚಿದ ರೀತಿಯಲ್ಲಿ ಒಂದು ಸಿಹಿ ತಿಂಡಿಯನ್ನು ಮಾಡಲು ಮುಂದಾದರು ಕಡಲೆ ಹಿಟ್ಟು ಸಕ್ಕರೆ ಎಣ್ಣೆ ಸೇರಿಸಿ ಒಂದು ಸಿಹಿ ತಿನಿಸನ್ನು ತಯಾರು ಮಾಡಿದರು ಹೀಗೆ ಮಾದಪ್ಪ ಅವರು ತಯಾರಿಸಿದ ಈ ಸಿಹಿ ತಿಂಡಿ ಮಹಾರಾಜರಿಗೆ ತುಂಬಾ ಇಷ್ಟವಾಯಿತು ಮತ್ತು ಮದಪ್ಪನವರ ಬಳಿ ಮಹಾರಾಜರು ಈ ಸಿಹಿ ತಿಂಡಿಯ ಹೆಸರು ಏನು ಎಂದು ಕೇಳಿದರು ಆಗ ಮಾದಪ್ಪ ಈ ಸಿಹಿ ತಿಂಡಿಗೆ ನಾನೂ ಏನು ಹೆಸರು ಇಟ್ಟಿಲ್ಲ ನೀವೇ ಯಾವುದಾದರೂ ಒಂದು ಹೆಸರು ಹೇಳಿ ಎಂದು ಹೇಳುತ್ತಾರೆ.

ಆಗ ಮಹಾರಾಜರು ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ ಹಾಗಾಗಿ ಮೈಸೂರು ಅರಮನೆಯಲ್ಲಿ ತಯಾರಾದ ಈ ರುಚಿ ಶುಚಿಯಾದ ಈ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಕರಿಯೋಣ ಎಂದು ಹೇಳುತ್ತಾರೆ ಅಂದಿನಿಂದ ಇಂದಿನವರೆಗೂ ಈ ಸಿಹಿ ತಿಂಡಿ ಮೈಸೂರು ಪಾಕ್ ಎಂದೇ ಪ್ರಸಿದ್ಧಿ ಆಗಿದೆ. ಕಾಕಸುರ ಮಾದಪ್ಪ ಭಟ್ಟರ ವಂಶಸ್ಥರು ಮೈಸೂರು ನಗರದಲ್ಲಿ ವಾಸವಾಗಿದ್ದು ಗುರು ಸ್ವೀಟ್ಸ್ ಎಂಬ ಅಂಗಡಿಯನ್ನು ಹೊಂದಿದ್ದಾರೆ. ಗುರು ಸ್ವೀಟ್ಸ್ ಇಂದಿಗೂ ಮೈಸೂರು ಪಾಕ್ ನ ರುಚಿಯನ್ನು ಉಳಿಸಿಕೊಂಡು ಬಂದಿದ್ದು ಅಂಗಡಿಯ ಮಾಹಿತಿ ಇದ್ದವರು ಈಗಲೂ ಅಲ್ಲಿಯೇ ಮೈಸೂರು ಪಾಕ್ ಖರೀದಿ ಮಾಡುತ್ತಾರೆ.

ಮೈಸೂರು ಮಲ್ಲಿಗೆ ಮೈಸೂರು ವಿಲ್ಯೆದೆಲೆ ಜೊತೆಗೆ ಮೈಸೂರು ಪಾಕ್ ಗೆ ಸಹಾ ಸ್ಥಾನ ಇದ್ದೇ ಇದೆ. ಈಗ ಎಲ್ಲರ ಬಾಯಿಯಲ್ಲಿ ಈ ಸಿಹಿ ತಿಂಡಿಯು ನೀರುರಿಸುತ್ತದೆ. ಇದು ಈಗ ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ ಸಮೃದ್ಧ ಸಿಹಿ ಭಕ್ಷ್ಯ ಆಗಿದೆ. ಇದನ್ನು ತುಪ್ಪದಿಂದ ತಯಾರಿಸಲಾಗುತ್ತದೆ. ಇದಕ್ಕೆ ಸಕ್ಕರೆ ಕಡಲೆಹಿಟ್ಟು ಎಣ್ಣೆ ತುಪ್ಪ ಏಲಕ್ಕಿ ಬಳಸಿ ಮಾಡಲಾಗುತ್ತದೆ. ಈ ಸಿಹಿಯ ರಚನೆ ಮಿಠಾಯಿ ಗಳಿಗೆ ಹೋಲುತ್ತದೆ. ಇದು ಸಾಂಪ್ರದಾಯಿಕವಾಗಿ ಮದುವೆ ಮತ್ತು ದಕ್ಷಿಣ ಭಾರತದ ಇತರೆ ಹಬ್ಬಗಳಲ್ಲಿ ಬಡಿಸಲಾಗುತ್ತದೆ.

ಹಾಲಿನ ಜೊತೆ ಈ ಆಹಾರಗಳನ್ನು ತಿಂದರೆ ಅದು ವಿಷ ಆಗುತ್ತದೆ

ಹಾಲು ನಮ್ಮ ದೇಹಕ್ಕೆ ಒಳ್ಳೆಯ ಶಕ್ತಿಯನ್ನು ನೀಡುವ ಆಹಾರ ದ್ರವ ಪದಾರ್ಥಗಳಲ್ಲಿ ಒಂದು ದಿನ ಹುಟ್ಟುವುದರಿಂದ ದಿನ ಕೊನೆವರೆಗೆ ಹಾಲು ನಮ್ಮ ದಿನ ನಿತ್ಯದ ಜೀವನಕ್ಕೆ ಬಹಳ ಮುಖ್ಯ ಅಷ್ಟೆ ಅಲ್ಲದೇ ತಾಯಿಯ ಎದೆ ಹಾಲನ್ನು ಹೊರತು ಪಡಿಸಿದರೆ ಇಡೀ ಪ್ರಪಂಚವನ್ನೇ ಎಲ್ಲಾ ಜೀವ ರಾಶಿಗಳನ್ನು ಕಾಪಾಡುವುದು ಈ ಹಾಲು ಮನೆಯಲ್ಲಿ ಆಸ್ಪತ್ರೆಯಲ್ಲಿ ಶಾಲೆಗಳಲ್ಲಿ ಹೆಚ್ಚಾಗಿ ಟೀ ಅಂಗಡಿ ಅಥವಾ ಹೋಟೆಲ್ಗಳಲ್ಲಿ ಈ ಹಾಲನ್ನು ಹೆಚ್ಚಾಗಿ ಬಳಸುತ್ತಾರೆ ಈ ಹಾಲು ನಮ್ಮ ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುತ್ತದೆ.

ಆದರೆ ಈ ಹಾಲು ಸೇವನೆಯೂ ಮುನ್ನ ಹಾಲು ಸೇವನೆಯ ನಂತರ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬಾರದು ಸೇವಿಸಿದ್ದೇ ಆದರೆ ನಮ್ಮ ಆರೋಗ್ಯಕ್ಕೆ ತುಂಬಾ ತೊಂದರೆಗಳನ್ನು ನಾವು ಎದುರಿಸಬೇಕಾಗುತ್ತದೆ ಆದ್ದರಿಂದ ಈ ಲೇಖನದಲ್ಲಿ ಹಾಲಿನ ಜೊತೆ ತಿನ್ನ ಬಾರದ ಕೆಲವು ಆಹಾರ ಪದಾರ್ಥಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದು ಕೊಳ್ಳೋಣ ಈ ಲೇಖನವನ್ನು ಪೂರ್ತಿಯಾಗಿ ಓದಿ. ನಮ್ಮ ಶರೀರಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವ ಹಾಲಿನ ಜೊತೆ ಮೀನಿನ ಸಾರನ್ನು ತಿನ್ನಬಾರದು ಅಂದರೆ ಮೀನಿನ ಮಾಂಸವನ್ನು ತಿನ್ನಬಾರದು.

ಇದರಿಂದ ನಮ್ಮ ದೇಹದಲ್ಲಿ ತುಂಬಾ ಬದಲಾವಣೆ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ ಆದ್ದರಿಂದ ತಿಂದ 2 ಗಂಟೆಯ ನಂತರ ಹಾಲನ್ನು ಕುಡಿಯ ಬಹುದು ಅಥವಾ ತಿಂದ 2 ಗಂಟೆಯ ನಂತರ ಹಾಲನ್ನು ಕುಡಿಯಬಹುದು. ಮೊಸರನ್ನು ಪ್ರತಿಯೊಬ್ಬರೂ ತಿನ್ನುತ್ತಾರೆ ಅದರಿಂದ ನಮಗೆ ತುಂಬಾ ಆರೋಗ್ಯಕರ ಸಹಾ ಇದೆ ಆದರೆ ಮೊಸರು ತಿಂದ ನಂತರ ಹಾಲನ್ನು ಕುಡಿದರೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಂತಿ ಹೊಟ್ಟೆ ನೋವು ಅಸಿಡಿಟಿ ಅಂತಹ ಕೆಲವು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ನಾವು ಮೊಸರು ತಿಂದ 2 ಗಂಟೆಯ ನಂತರ ಮಾತ್ರ ಹಾಲನ್ನು ಕುಡಿಯಬಹುದು. ಉಪ್ಪು ಮತ್ತು ಹಾಲನ್ನು ಒಂದೇ ಬಾರಿ ಸೇವಿಸಬಾರದು ಇದು ಆಯುರ್ವೇದದಲ್ಲಿ ತಿಳಿಸಿದ್ದಾರೆ ಆದ್ದರಿಂದ ಉಪ್ಪಿನ ಜೊತೆ ಹಾಲನ್ನು ಕುಡಿಯಬಾರದು.

ಹುಳಿ ಇರುವ ಹಣ್ಣುಗಳು ಅಥವಾ ಆಹಾರ ಹುಳಿ ಇರುವ ಹಣ್ಣುಗಳಲ್ಲಿ ಸಿಟ್ರಿಕ್ ಆಸಿಡ್ ಇರುತ್ತದೆ ಇದು ಹಾಲಿನ ಜೊತೆ ಬೆರೆತರೆ ನಮ್ಮ ಶರೀರವನ್ನು ಅನಾರೋಗ್ಯದ ಗೂಡು ಆಗಿಸುತ್ತದೆ ಇದಕ್ಕೆ ಹುಲಿ ಇರುವ ಹಣ್ಣುಗಳು ಅಥವಾ ಆಹಾರ ಪದಾರ್ಥಗಳನ್ನು ತಿಂದ 2 ಗಂಟೆಯ ನಂತರ ಮಾತ್ರ ಹಾಲನ್ನು ಕುಡಿಯಬೇಕು ಹಾಗಾಗಿ ಇದರಿಂದ ಈ ಪದಾರ್ಥಗಳ ಜೊತೆ ಯಾವುದೇ ಕಾರಣಕ್ಕೂ ಹಾಲನ್ನು ಕುಡಿಯಬಾರದು ಅಥವಾ ಸೇವಿಸಬಾರದು ಹಾಲು ನಮ್ಮ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ನಾವು ತಿಳಿಸಿದ ಆಹಾರದ ಜೊತೆ ಹಾಲನ್ನು ತೆಗೆದು ಕೊಳ್ಳುವುದರಿಂದ ಅಷ್ಟೆ ಅಪಾಯ ಸಹಾ ಈ ಒಂದು ಹಾಲು ಹಾಗಾಗಿ ಇದರಿಂದ ಗಮನವಿಟ್ಟು ಹಾಲನ್ನು ಕುಡಿಯುವ ಮುಂಚೆ ಅಥವಾ ನಂತರ ಇವುಗಳನ್ನು ಕುಡಿಯಬೇಡಿ.

ನೂರೆಂಟು ಖಾಯಿಲೆಗಳಿಗೆ ರಾಮ ಬಾಣ ಒಂದು ತೊಂಡೆಕಾಯಿ

ತೊಂಡೆಕಾಯಿ ಹೆಚ್ಚು ಫೈಬರ್ ಅಂಶವನ್ನು ಹೊಂದಿರುತ್ತದೆ ಇದರಲ್ಲಿ ವಿಟಮಿನ್ ಎ ಬಿ1 ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ ಇದ್ದಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತದೆ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವುದರಲ್ಲಿ ಇದು ಉಪಯೋಗಕ್ಕೆ ಬರುತ್ತದೆ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ತೊಂಡೆಕಾಯಿ ತಿನ್ನುವುದರಿಂದ ಇದು ನಿಮಗೆ ರಾಮಬಾಣ ಇದ್ದಂತೆ ವಾರಕ್ಕೆ ಒಮ್ಮೆ ಆದರೂ ತೊಂಡೆಕಾಯಿ ತಿಂದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಈ ತೊಂಡೆಕಾಯಿಯಲ್ಲಿ ಉತ್ತಮ ಆರೋಗ್ಯ ಅಂಶಗಳೇ ಇವೆ ಈ ಲೇಖನದಲ್ಲಿ ತೊಂಡೆಕಾಯಿ ಬಗ್ಗೆ ತಿಳಿಯೋಣ ಈ ಲೇಖನ ಪೂರ್ತಿಯಾಗಿ ಓದಿರಿ.

ಸ್ನೇಹಿತರೆ ತೊಂಡೆಕಾಯಿ ಹೆಚ್ಚಾಗಿ ಸೇವಿಸುವುದರಿಂದ ಕಫ ಸಮಸ್ಯೆ ದೂರವಾಗುತ್ತದೆ ತೊಂಡೇಕಾಯಿಯಲ್ಲಿ ಇರುವ ಬೀಜಗಳು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಮಲವಿಸರ್ಜನೆ ಸಂಬಂಧಿಸಿದ ಕಾಯಿಲೆಗಳನ್ನು ಗುಣ ಪಡಿಸುತ್ತದೆ ದೇಹದ ಯಾವುದೇ ಭಾಗದಲ್ಲಿ ಹುಳು ಕಚ್ಚಿ ಗಾಯ ಆದರೆ ತೊಂಡೆಕಾಯಿ ಎಲೆಯನ್ನು ಚಚ್ಚಿ ಹಚ್ಚುವುದರಿಂದ ಅದು ನಿವಾರಣೆ ಆಗುತ್ತದೆ ವಿಟಮಿನ್ ಸಿ ವಿಟಮಿನ್ ಬಿ2 ವಿಟಮಿನ್ ಬಿ3 ಹೇರಳವಾಗಿ ಸಿಗುವ ತೊಂಡೆಕಾಯಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ತೊಂಡೆಕಾಯಿ ಎಲೆ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿದರೆ ದೇಹದ ಉಷ್ಣತೆ ಕಡಿಮೆ ಆಗುತ್ತದೆ.

ಎರಡು ಚಮಚ ತೊಂಡೆಕಾಯಿ ಎಲೆ ರಸವನ್ನು ಅರ್ಧ ಬಟ್ಟಲು ಮೊಸರಿನ ಜೊತೆ ದಿನಕ್ಕೆ 2 ಬಾರಿ ಸೇವಿಸಿದರೆ ಬೇಧಿ ನಿಲ್ಲುತ್ತದೆ. ತೊಂಡೆಕಾಯಿ ಹಸಿ ಹಣ್ಣನ್ನು ದಿನಕ್ಕೆ ಎರಡರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದು ಆಗುತ್ತದೆ ಹಾಗೂ ಮಧುಮೇಹ ಗುಣಮುಖ ಆಗುತ್ತದೆ ದೇಹದಲ್ಲಿ ಗುಳ್ಳೆಗಳು ಮತ್ತು ಕಜ್ಜಿ ಆಗಿದ್ದರೆ ತೊಂಡೆಕಾಯಿ ಎಲೆಯನ್ನು ಜಜ್ಜಿ ಈ ಜಾಗಕ್ಕೆ ಲೇಪಿಸಿದರೆ ಈ ಒಂದು ಗುಳ್ಳೆಗಳು ಕಡಿಮೆ ಆಗುತ್ತದೆ. ಋತುಸ್ರಾವದ ಸಮಯದಲ್ಲಿ ತೊಂಡೆಕಾಯಿ ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆ ಆಗುತ್ತದೆ ತೊಂಡೆಕಾಯಿ ಅಲ್ಲಿ ಕಡಿಮೆ ಕ್ಯಾಲೋರಿಗಳು ಇರುತ್ತದೆ ಮತ್ತು ಹೆಚ್ಚು ಹೊತ್ತು ನಮ್ಮ ಹೊಟ್ಟೆ ತುಂಬಿದ ಹಾಗೆ ಇರುತ್ತದೆ ಇದರಿಂದ ನಾವು ಸ್ವಲ್ಪವಾಗಿ ತೂಕವನ್ನು ಕಳೆದುಕೊಳ್ಳಬಹುದು.

ಒಂದು ಲೋಟ ತೊಂಡೆಕಾಯಿ ಎಲೆ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜೊತೆ ಕುದಿಸಿ ತಯಾರಿಸಿದ ಎಣ್ಣೆಯನ್ನು ಚರ್ಮದ ಕಾಯಿಲೆಗೆ ಇದನ್ನು ಉಪಯೋಗಿಸಬಹುದು. ಪೊಟ್ಯಾಷಿಯಂ ಹೆಚ್ಚಿರುವ ತೊಂಡೆಕಾಯಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಣ್ಣುಗಳು ಉರಿ ಆಗುತ್ತಿದ್ದರೆ ಒಂದು ಲೋಟ ನೀರಿಗೆ ಒಂದು ಲೋಟ ತೊಂಡೆಕಾಯಿ ಎಲೆಯ ರಸ ಸೇರಿಸಿ ಒಂದು ಲೋಟ ರಸ ಆಗುವ ವರೆಗೆ ಚೆನ್ನಾಗಿ ಕುದಿಸಿ ಈ ರಸವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಕಣ್ಣಿನ ಉರಿ ಕಡಿಮೆ ಆಗುತ್ತದೆ.

ಒಂದು ಲೋಟ ತೊಂಡೆಕಾಯಿ ಎಲೆ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜೊತೆ ಕುದಿಸಿ ಈ ಎಣ್ಣೆಯನ್ನು ಚರ್ಮದ ಜೊತೆ ಹಚ್ಚಿದರೆ ಸೋಯಾಸಿಸ್ ಅಂತಹ ಚರ್ಮದ ಸಮಸ್ಯೆ ಕಡಿಮೆ ಆಗುತ್ತದೆ ತೊಂಡೆಕಾಯಿ ಕಫದ ಸಮಸ್ಯೆ ನಿವಾರಿಸುತ್ತದೆ ಅಲ್ಲದೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ ಸಂಧಿ ಊತಗಳು ಇದ್ದರೆ ತೊಂಡೆ ಗಿಡದ ಎಲೆಗಳನ್ನು ಬೇವಿನ ಎಲೆಗಳ ಜೊತೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಊತ ಇರುವ ಜಾಗದಲ್ಲಿ ಲೇಪನ ಮಾಡಿದರೆ ಈ ಊತ ಕಡಿಮೆ ಆಗುತ್ತದೆ. ಎಳೆಯ ತೊಂಡೆಕಾಯಿ ಬಾಯಿಗೆ ಹಾಕಿ ಚೆನ್ನಾಗಿ ಆಗಿದರೆ ಬಾಯಿ ಹುಣ್ಣು ಕಡಿಮೆ ಆಗುತ್ತದೆ.

ಕಹಿ ಎಂದು ಮೂಗು ಮುರಿಯುವರೇ ಹಾಗಲಕಾಯಿ ತಿಂದರೆ ಇಷ್ಟು ಲಾಭ ನಿಮಗೆ ಸಿಗುತ್ತದೆ

ಸ್ನೇಹಿತರೆ ನಾವು ಪ್ರತಿ ದಿನ ಸೇವಿಸುವ ಆಹಾರ ಪದಾರ್ಥಗಳಲ್ಲಿ ಈ ಹಾಗಲಕಾಯಿ ಸಹಾ ಒಂದು ಆದರೆ ಈ ಹಾಗಲಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಷ್ಟೆ ಅಲ್ಲದೇ. ಅತಿಯಾಗಿ ಹಾಗಲಕಾಯಿ ಸೇವಿಸಿದರೆ ಇದು ನಮ್ಮ ದೇಹಕ್ಕೆ ವಿಷವೂ ಸಹಾ ಆದ್ದರಿಂದ ಇದರಿಂದ ಆಗುವ ಉಪಯೋಗಗಳ ಬಗ್ಗೆ ಮತ್ತು ಅನಾರೋಗ್ಯಕರ ಅಂಶಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಯೋಣ. ಈ ಲೇಖನ ಪೂರ್ತಿಯಾಗಿ ಓದಿರಿ. ಹಾಗಲಕಾಯಿ ಎಂದ ತಕ್ಷಣ ಕಹಿ ಅಂತ ಎಲ್ಲರೂ ಹಿಂದೆ ಸರಿಯುತ್ತಾರೆ ಆದರೆ ಮಧುಮೇಹದಿಂದ ನರಳಾಡುತ್ತ ಇರುವ ರೋಗಿಗಳು ಹಾಗಲಕಾಯಿಯನ್ನು ಅತಿಯಾಗಿ ತಿಂದರೆ ರೋಗ ಅತೀ ಬೇಗ ಗುಣಮುಖ ಆಗುತ್ತದೆ ಹಾಗಲಕಾಯಿ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುವುದರಿಂದ ರಕ್ತ ಶುದ್ಧಿ ಆಗುತ್ತದೆ ಕರುಳಿನ ಹುಣ್ಣು ಮೂಲ ವ್ಯಾಧಿ ಮತ್ತು ಕೆಮ್ಮನ್ನು ನಿವಾರಿಸುತ್ತದೆ.

ಕಹಿಯ ರುಚಿಯನ್ನು ಹೊಂದಿರುವ ಇತರ ಆಹಾರಗಳ ಮಾದರಿ ಹಾಗಲಕಾಯಿ ಆಹಾರ ಪಚನವನ್ನ ಚುರುಕು ಮಾಡುವಂತೆ ಮಾಡುತ್ತದೆ. ಅಲ್ಲದೆ ಈ ರೀತಿಯಾಗಿ ಅಜೀರ್ಣ ಮತ್ತು ಮಲಬದ್ಧತೆ ಚಿಕಿತ್ಸೆಗೆ ಇದು ಉತ್ತಮ ಆಹಾರ ಹಾಗಲಕಾಯಿ ಡಯಾಬಿಟೀಸ್ ಅನ್ನು ತಡೆಗಟ್ಟುವಲ್ಲಿ ಅಥವಾ ಅದನ್ನು ನಿಷ್ಕ್ರಿಯ ಗೊಳಿಸಲೂ ಸಹಕಾರಿ ಆಗುತ್ತದೆ ಹಾಗಲಕಾಯಿ ಡಯಾಬಿಟೀಸ್ ರೋಗಿಗಳಿಗೆ ಒಂದು ರಾಮಬಾಣ ಇದ್ದಂತೆ ಅಷ್ಟೆ ಅಲ್ಲದೆ ಹಾಗಲಕಾಯಿ ನಮ್ಮ ಹೊಟ್ಟೆಯಲ್ಲಿ ಬೆಳೆಯುವ ಜಂತು ಹುಳುಗಳನ್ನು ಹೋಗಲಾಡಿಸುವಲ್ಲಿ ಹೆಚ್ಚಿನ ಕೆಲಸ ಮಾಡುತ್ತದೆ ಹಾಗಲಕಾಯಿ ಗೆ ಕಹಿ ಎನ್ನುವ ಅಂಶ ಕಿನ್ವೆನ್ ಎಂಬ ಸಂಯುಕ್ತ ದಿಂದ ಬರುತ್ತದೆ ಎಂದು ಹೇಳಲಾಗುತ್ತದೆ.

ಹಾಗಲಕಾಯಿ ಮಲೇರಿಯಾ ರೋಗವನ್ನು ತಡೆಗಟ್ಟುವಲ್ಲಿ ಮತ್ತು ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಕಾರಿ ಆಗುತ್ತದೆ ಎಂದು ಏಷ್ಯಾದಲ್ಲಿ ಸಾಂಪ್ರದಾಯಕವಾಗಿ ಇದನ್ನು ಬಳಸುತ್ತಾ ಬರುತ್ತಿದ್ದಾರೆ ಹಾಗಲಕಾಯಿ ಹೆಚ್ ಐ ವಿ ಸೋಂಕಿತ ರೋಗಿಗಳಿಗೆ ಉಪಯುಕ್ತ ಆಹಾರ ಅಂತ ಕೆಲವು ಪರೀಕ್ಷೆಗಳಲ್ಲಿ ಗೊತ್ತಾಗಿದೆ. ಹಾಗಲಕಾಯಿಯನ್ನು ಬೇಧಿ ಉದರಶೂಲ ಜ್ವರ ಸುಟ್ಟ ಗಾಯಗಳು ನೋವಿನಿಂದ ಕೂಡಿದ ಸ್ರಾವ ಕಜ್ಜಿ ಹಾಗೂ ಚರ್ಮದ ಇತರ ಸಮಸ್ಯೆಗಳನ್ನು ಒಳಗೊಂಡಂತೆ ಹಲವಾರು ಇತರ ರೋಗಗಳಿಗೆ ಸಾಂಪ್ರದಾಯಕವಾಗಿ ಔಷಧಿಯಾಗಿ ಇದನ್ನು ಆಗಿನ ಕಾಲದಿಂದ ಬಳಸುತ್ತಾ ಬಂದಿದ್ದಾರೆ.

ಇದನ್ನು ಸಂತಾನ ನಿಯಂತ್ರಣದಲ್ಲಿ ಗರ್ಭ ಸ್ರಾವಕ ಆಗಿ ಶಿಶುವಿನ ಜನನಕ್ಕೆ ಸಹಕಾರಿ ಆಗಲು ಸಹಾ ಬಳಸಲಾಗುತ್ತದೆ. ಸ್ನೇಹಿತರೆ ನಾವು ಯಾವುದೇ ಆಹಾರ ಆಗಲಿ ನಿಯಮಿತವಾಗಿ ಸೇವಿಸಬೇಕು ಅತೀ ಹೆಚ್ಚು ಸೇವಿಸಿದರೆ ಏನಾಗುತ್ತದೆ ಎಂದು ಈಗ ತಿಳಿಯೋಣ ಈ ಹಾಗಲಕಾಯಿ ಅನ್ನು ಅತಿ ಹೆಚ್ಚಾಗಿ ಸೇವಿಸಿದರೆ ಗರ್ಭವತಿ ಮಹಿಳೆ ಹಾಗಲಕಾಯಿ ತಿಂದರೆ ಗರ್ಭಪಾತ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಫರ್ಟಿಲಿಟಿ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಾ ಇರುವವರು ಮಹಿಳೆ ಅಥವಾ ಪುರುಷ ಆಗಬಹುದು ಇದನ್ನು ಸೇವಿಸಬಾರದು ಏಕೆಂದರೆ ಇದರಿಂದ ಔಷಧಿ ಪ್ರಭಾವ ಕಡಿಮೆ ಆಗುತ್ತದೆ ಹಾಗಲಕಾಯಿ ಜಾಸ್ತಿ ತಿನ್ನುವುದರಿಂದ ಲಿವರ್ ನಲ್ಲಿ ಲಿವರ್ ಸೆಪ್ಟಿಕ್ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿರಿ.

ಸೀಬೆ ಎಂದು ನಿರ್ಲಕ್ಷ್ಯ ಬೇಡ ಇದ್ರಲ್ಲಿ ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಇದೆ

ಚಿಕ್ಕವರಿದ್ದಾಗ ಹೆಚ್ಚಾಗಿ ತಿಂದ ಹಣ್ಣುಗಳಲ್ಲಿ ಒಂದು ಸೀಬೆ ಇದನ್ನು ಚೇಪೆ ಕಾಯಿ ಪೇರಲೆ ಕಾಯಿ ಎಂದು ಕೂಡ ಕರೆಯುತ್ತಾರೆ ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುತ್ತದೆ ಈ ಚೇಪೇ ಕಾಯಿ ತುಂಬಾ ಪೋಷಕಾಂಶಗಳ ಗೂಡು ಆಗಿರುತ್ತದೆ ಈ ಚೇಪೆ ಕಾಯಿಯಲ್ಲಿ ತುಂಬಾ ಆರೋಗ್ಯಕಾರಿ ಅಂಶಗಳು ಇದ್ದಾವೆ ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಪೇರಲೆ ಕಾಯಿಯಲ್ಲಿ ಇರುವ ವಿಟಮಿನ್ ಸಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ನಮ್ಮನ್ನು ಕಾಡುವ ಶೀತ ನೆಗಡಿ ಕೆಮ್ಮು ದೂರವಾಗುತ್ತದೆ. ವಿಟಮಿನ್ ಸಿ ಗೆ ಕ್ಯಾನ್ಸರ್ ಕಾರಕ ಗಳನ್ನು ದೂರ ಮಾಡುವ ಶಕ್ತಿ ಇರುತ್ತದೆ.

ಆದ್ದರಿಂದ ಈ ಸೀಬೆ ಕಾಯಿ ಸೇವನೆಯಿಂದ ತುಂಬಾ ಕ್ಯಾನ್ಸರ್ ಕಾಯಿಲೆಗಳನ್ನು ನಾವು ದೂರ ಇಡಬಹುದು ಈ ಸೀಬೆ ಕಾಯಿಯ ಬೀಜವು ಥೈರಾಯ್ಡ್ ಗ್ರಂಥಿ ಗೆ ಆರೋಗ್ಯಕಾರಿ ಅಂಶವಾಗಿ ಕೆಲಸ ಮಾಡುತ್ತದೆ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಈ ಸೀಬೆ ಕಾಯಿಯಲ್ಲಿ ಇದೆ ಇದರಲ್ಲಿ ಇರುವ ಆಂಟಿ ಬ್ಯಾಕ್ಟೀರಿಯಲ್ ಗುಣವು ಜೀರ್ಣಾಂಶವನ್ನು ಆರೋಗ್ಯವಾಗಿ ಇರಿಸುತ್ತದೆ ಸೀಬೆ ಕಾಯಿಯನ್ನು ತಿನ್ನುವುದರಿಂದ ದೇಹದಲ್ಲಿ ಪೊಟ್ಯಾಷಿಯಂ ಸೋಡಿಯಂ ಸಮತೋಲನದಲ್ಲಿ ಇರುತ್ತದೆ ಅಧಿಕ ರಕ್ತದ ಒತ್ತಡ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ ಇದರಿಂದ ನಮ್ಮ ಹೃದಯದ ಆರೋಗ್ಯ ಚೆನ್ನಾಗಿ ಇರುತ್ತದೆ. ಸೀಬೆ ಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಚರ್ಮದ ರೋಗವನ್ನು ಕಾಪಾಡುತ್ತದೆ ಪ್ರತಿ ದಿನ ಒಂದು ಸೀಬೆ ಕಾಯಿ ತಿಂದರೆ ಚರ್ಮವು ಆರೋಗ್ಯವಾಗಿ ಇರುತ್ತದೆ ಕಪ್ಪು ಮಚ್ಚೆಗಳು ಬರುವುದನ್ನು ಕಡಿಮೆ ಮಾಡುತ್ತದೆ.

ಈ ಸೀಬೆ ಕಾಯಿಯಲ್ಲಿ ವಿಟಮಿನ್ ಎ ಹೆಚ್ಚಾಗಿ ಇರುವುದರಿಂದ ಕಣ್ಣಿನ ಆರೋಗ್ಯವನ್ನು ಇದು ಕಾಪಾಡುತ್ತದೆ ನಮ್ಮ ಬಾಯಿಯಲ್ಲಿ ಆಗುವ ಅಲ್ಸರ್ ಹುಣ್ಣುಗಳಂತ ಅನಾರೋಗ್ಯವನ್ನು ದೂರ ಇಡುವುದರಲ್ಲಿ ಈ ಸೀಬೆ ಕಾಯಿ ಉತ್ತಮ ಕೆಲಸ ಮಾಡುತ್ತದೆ ನಮ್ಮ ಹಲ್ಲುಗಳ ಮಧ್ಯೆ ಕಾಡುವ ಇನ್ಫೆಕ್ಷನ್ ಅನ್ನು ಇದು ಬಗೆ ಹರಿಸುತ್ತದೆ ಈ ಸೀಬೆ ಕಾಯಿಯಲ್ಲಿ ನಾರಿನ ಸತ್ವ ಹೆಚ್ಚಾಗಿ ಇರುತ್ತದೆ. ಹೀಗಾಗಿ ಒಂದು ಹಣ್ಣು ತಿಂದರೆ ಹೊಟ್ಟೆ ತುಂಬಿದ ರೀತಿ ಇರುತ್ತದೆ ಅಜೀರ್ಣ ಇದ್ದಾಗ ವಾಂತಿ ಇದ್ದಾಗ ನಾಲ್ಕು ಸೀಬೆ ಮರದ ಎಲೆಗಳನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಬಿಸಿ ಬಿಸಿ ಆಗಿ ಕುಡಿದರೆ

ಇದರಿಂದ ನಮಗೆ ಅಜೀರ್ಣ ಸಮಸ್ಯೆ ವಾಂತಿ ಸಮಸ್ಯೆ ದೂರ ಆಗುತ್ತದೆ ನಮ್ಮ ದೇಹವನ್ನು ಆರೋಗ್ಯವಾಗಿ ಇರಿಸುತ್ತದೆ. ಈ ಸೀಬೆ ಕಾಯಿ ಮರದ ಎಲೆಗಳಿಂದ ತಯಾರಿಸಿದ ಟೀ ಕುಡಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಒಂದೇ ಹಂತದಲ್ಲಿ ಇರುವ ಹಾಗೆ ಇದು ನಮಗೆ ಸಹಕರಿಸುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ತಿಳಿಸಿರಿ ಹಾಗೆಯೇ ಈ ಲೇಖನ ಉಪಯುಕ್ತ ಅನಿಸಿದರೆ ಈ ಲೇಖನವನ್ನು ನಿಮ್ಮ ಆಪ್ತರಿಗೆ ಶೇರ್ ಮಾಡಲು ಮಾತ್ರ ಮರೆಯದಿರಿ.

ಲೇಡಿ ಫಿಂಗರ್ ನಲ್ಲಿದೆ ದುಪ್ಪಟ್ಟು ಆರೋಗ್ಯ ಲಾಭ

ನೋಡೋದಕ್ಕೆ ಮಹಿಳೆಯರ ಬೆರಳಿನ ಅಷ್ಟು ಆಕಾರ ಇರದ ಬೆಂಡೆಕಾಯಿಗೆ ಲೇಡಿ ಫಿಂಗರ್ ಅಂತ ಪಟ್ಟ ಕೊಟ್ಟಿದ್ದಾರೆ. ಸಾಮಾನ್ಯವಾಗಿ ವರ್ಷವಿಡೀ ಸಿಗುವ ಈ ಬೆಂಡೆಕಾಯಿ ಸಹಾ ಒಂದು ವಿಟಮಿನ್ ಗಳು ಖನಿಜಗಳು ಪೋಷಕಾಂಶಗಳ ಒಂದು ಗೂಡಾಗಿದೆ ಈ ಅದಕ್ಕಾಗಿ ಮನೆಗಳಲ್ಲಿ ಈ ಬೆಂಡೆಕಾಯಿಯನ್ನು ಅಡುಗೆಗೆ ಬಳಸುತ್ತಾರೆ ಅದಲ್ಲದೆ ಇದರಲ್ಲಿನಿರುವ ಕರಗದ ನಾರು ಮಲಬದ್ಧತೆಯನ್ನು ಕಾಪಾಡುತ್ತದೆ ಮಧುಮೇಹಿಗಳಿಗೆ ಇದು ರಾಮ ಬಾಣ ಇದ್ದಂತೆ ಇಷ್ಟೆಲ್ಲಾ ಉಪಯೋಗ ಇರುವ ಬೆಂಡೆಕಾಯಿಯನ್ನು ಪ್ರತಿ ದಿನ ಮೂರು ಅಥವಾ ನಾಲ್ಕು ಬೆಂಡೆಕಾಯಿ ಕತ್ತರಿಸಿ ಅದನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಮರುದಿನ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ತುಂಬಾ ಲಾಭಗಳು ಇವೆ ಹೀಗೆ ಬೆಂಡೆಕಾಯಿ ಅಲ್ಲಿ ಇರುವ ಅನೇಕ ಗುಣಗಳನ್ನು ನೀವು ಕೇಳಿದರೆ ಖಂಡಿತ ಶಾಕ್ ಆಗುವಿರಿ.

ಸರ್ವ ರೋಗಕ್ಕೂ ರಾಮಬಾಣ ಆಗಿರುವ ಬೆಂಡೆಕಾಯಿಯ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಇದರಲ್ಲಿ ನಾರಿನ ಅಂಶ ಸತು ಕ್ಯಾಲ್ಸಿಯಂ ರಿಪಾಪ್ಲೋರಿನ್ ಫೋಲಿಕ್ ಆಸಿಡ್ ವಿಟಮಿನ್ ಸಿ ವಿಟಮಿನ್ ಬಿ6 ವಿಟಮಿನ್ ಎ ಮೆಗ್ನೀಷಿಯಂ ಮತ್ತು ಇನ್ನು ಹಲವು ರೀತಿಯ ಪೋಷಕಾಂಶಗಳು ಇವೆ. ರಾತ್ರಿಯಲ್ಲಿ ನೆನಸಿಟ್ಟ ಬೆಂಡೆಕಾಯಿಯ ನೀರನ್ನು ಕುಡಿದರೆ ಕಿಡ್ನಿ ಸಮಸ್ಯೆ ಕೊಲೆಸ್ಟ್ರಾಲ್ ಸಮಸ್ಯೆ ಮತ್ತು ಅಸ್ತಮಾ ವನ್ನೂ ನಿವಾರಿಸಿಕೊಳ್ಳಬಹುದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಬೆಂಡೆಕಾಯಿ ತಿನ್ನುವುದರಿಂದ ಯಾವ ರೀತಿಯ ಆರೋಗ್ಯದ ಲಾಭಗಳು ಇದಾವೆ ಅಂದರೆ ಬೆಂಡೆಕಾಯಿ ಅಲ್ಲಿ ಇರುವ ನಾರಿನ ಅಂಶ ಗ್ಯಾಸ್ಟ್ರಿಕ್ ನಿಂದಾ ಉಂಟಾಗುವ ಸಮಸ್ಯೆಯನ್ನು ನಿವಾರಿಸಬಲ್ಲದು.

ಇದು ಗ್ಯಾಸ್ ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ ಬೆಂಡೆಕಾಯಿ ನಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತದೆ ಇದರಲ್ಲಿ ಇರುವ ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಂಡೆಕಾಯಿ ಬೇಯಿಸಿ ಅಥವಾ ಹಸಿಯಾಗಿ ತಿಂದರೆ ಅದರಲ್ಲಿರುವ ನಾರಿನ ಅಂಶವು ದೇಹದಲ್ಲಿ ರಕ್ತದ ಅಂಶವನ್ನು ನಿಯಂತ್ರಿಸುತ್ತದೆ. ಬೆಂಡೆಕಾಯಿ ಅಲ್ಲಿ ವಿಟಮಿನ್ ಎ ಲುಟೈನ್ ಮತ್ತು ಬೀಟಾ ಕೆರೋಟಿನ್ ಅಂಶಗಳು ಇರುತ್ತೆ ಮತ್ತು ಕಣ್ಣಿನ ದೃಷ್ಟಿಯನ್ನು ಚುರುಕು ಗೊಳಿಸುತ್ತದೆ ಬೆಂಡೆಕಾಯಿ ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ.

ಇದರಲ್ಲಿ ತುಂಬಾ ಕಡಿಮೆ ಮಟ್ಟದ ಕ್ಯಾಲೋರಿಗಳು ಇರುತ್ತದೆ ಇದರಲ್ಲಿ ಯಾವುದೇ ರೀತಿಯ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಅಂಶ ಇರುವುದಿಲ್ಲ ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಮತ್ತು ಕೊಲೆಸ್ಟ್ರಾಲ್ ಅನ್ನು ಬೆಂಡೆಕಾಯಿ ಹೊರಹಾಕುತ್ತದೆ. ನಮಗೆ ಬೆಂಡೆಕಾಯಿ ತಿನ್ನಲು ಇಷ್ಟ ಆಗಲಿಲ್ಲ ಅಂದರೆ ಅದನ್ನು ನೆನಸಿಟ್ಟ ನೀರನ್ನು ಕುಡಿದರೂ ಒಳ್ಳೆಯದು. ಪುರಾತನ ಕಾಲದಲ್ಲಿ ಭಾರತದಲ್ಲಿ ಐಬೀಸ್ ಮತ್ತು ಅಲ್ಸರ್ ಕಾಯಿಲೆ ಗುಣ ಪಡಿಸಲು ಬೆಂಡೆಕಾಯಿಯನ್ನು ಉಪಯೋಗಿಸುತ್ತಾ ಇದ್ದರು. ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೆಂಡೆಕಾಯಿ ಹೊರ ಹಾಕುತ್ತವೆ. ಬೆಂಡೆಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಮತ್ತು ಹೆಚ್ಚಿನ ಪ್ರಮಾಣದ ನಾರು ಇರುತ್ತದೆ.

ಚುನಾವಣೆಯಲ್ಲಿ ಬೆರಳಿಗೆ ಹಚ್ಚುವ ಬಣ್ಣ ಈ ಗಿಡದಿಂದ ತಯಾರಿಸಲಾಗುತ್ತದೆ

ಸಾಂಪ್ರದಾಯಿಕ ಹಾಗೂ ಔಷಧಿ ಮೌಲ್ಯಗಳಿರುವ ಕಾಡುಗೆರು ಮರ ಕೇವಲ ಕಾಡುಗಳಲ್ಲಿ ಮಾತ್ರವೇ ಕಂಡು ಬರುವ ವೃಕ್ಷವಾಗಿದೆ. ಅನಕಾರ್ಡಿಎಸಿಯೇ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಸೆಮಿಕಾರ್ಪಸ್ ಅನಕಾರ್ಡಿಯಮ್ ಸಂಸ್ಕ್ರುತದಲ್ಲಿ ಅಗ್ನಿಮುಖ ಆಹ್ವಲ ಅಂತಸತ್ವ ಎಂದು ಕರೆಯುವ ಈ ವೃಕ್ಷವನ್ನು ಕನ್ನಡದಲ್ಲಿ ಕಾಡುಗೆರು ಗುಡ್ಡೆಗೆರು ಕಾಡುಗೋಡುಂಬೆಮರ ಎಂದರೆ ಆಂಗ್ಲಭಾಷೆಯಲ್ಲಿ ಇಂಡಿಯನ್ ನಟ್ ಟ್ರಿ ಮಾರ್ಕಿಂಗ್ ನಟ್ ಟ್ರಿ ದೊಬಿ ನಟ್ ಟ್ರಿ ಮಲಕಾಬಿನ್ ಮರೆನಿನಟ್ ವಾರ್ನೆಸ್ಟ್ ಟ್ರಿ ಮುಂತಾದ ಹೆಸರುಗಳಿವೆ. ಈ ವೃಕ್ಷದ ಮೂಲ ಭಾರತವೇ ಆಗಿದ್ದು ಭಾರತ ಮಲೇಷಿಯಾ ಚೀನಾ ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಕಂಡುಬರುತ್ತದೆ.

ಮಧ್ಯಮ ಪ್ರಮಾಣದ ಕಾಡುಗಳಲ್ಲಿ ಕಂಡುಬರುವ ಕಾಡುಗೆರುಮರ ಒರಿಯಂಟಲ್ ಕ್ಯಾಶುನೆಟ್ ಜಾತಿಗೆ ಸೇರಿದ ವೃಕ್ಷವಾಗಿದ್ದು ಸುಮಾರು 45 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲ ಮರವಾಗಿದ್ದು ಮಾಸಲು ಬಿಳಿ ಬಣ್ಣದ ತೊಗಟೆಗಳಿಂದ ಕೂಡಿದ್ದು 30 ಸೆಂಟಿಮೀಟರ್ ಉದ್ದ ಹಾಗೂ 18 ಸೆಂಟಿಮೀಟರ್ ಅಗಲವಾದ ಅಂಡಾಕಾರದ ದೊಡ್ಡ ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ. ಮೇ ಹಾಗೂ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಬಿಳಿಯ 5 ದಳಗಳಿಂದ ಕುಡಿದ ಪುಟ್ಟದಾದ ನಕ್ಷತ್ರಾಕಾರದ ಹೂವುಗಳಿರುತ್ತವೆ. ಡಿಸೆಂಬರ್ ಮಾರ್ಚ್ ತಿಂಗಳ ಅವಧಿಯಲ್ಲಿ ಹಣ್ಣುಗಳಾಗುತ್ತವೆ. ಹಣ್ಣಿನ ಕೆಳಭಾಗದಲ್ಲಿ ಕಪ್ಪು ಬೀಜಗಳಿರುತ್ತವೆ. ಫೆನಾಲಿಕ್ ಸ್ಟಿರಾಲ್ಸ್ ಗ್ಲೈಕೋಸೈಡ್ಸ್ ಸ್ಟ್ಯಾನಿನ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿಂದ ಕೂಡಿರುವ ಕಾಡುಗೆರುಮರದ ಹಣ್ಣು ಬೀಜಗಳು ಹಾಗೂ ಮರದ ಅಂಟನ್ನು ಆಯುರ್ವೇದ ಸಾಂಪ್ರದಾಯಿಕ ಹೋಮಿಯೋಪತಿ ಯುನಾನಿ ಹಾಗೂ ಸಿಧ್ದವೈದ್ಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ.

ಹಿಂದಿನ ಕಾಲದಲ್ಲಿ ಅಗಸರು ಬಟ್ಟೆ ಗುರುತಿಸಲು ಈ ಮರದ ಹಣ್ಣುಗಳನ್ನು ಬಳಸುತ್ತಿದ್ದರಿಂದ ಈ ಮರವನ್ನು ಧೋಬಿನೇಟ್ ಟ್ರಿ ಎಂದು ಕೂಡ ಕರೆಯುತ್ತಿದ್ದರು ಇದರ ಹಣ್ಣು ಹಾಗೂ ಬೀಜಗಳಿಂದ ತಯಾರಾದ ಬಣ್ಣವೂ ಜಲನಿರೋಧಕ ಗುಣಗಳಿಂದ ಕೂಡಿದ್ದು ಅಗಸರು ಅಲ್ಲದೆ ಇಂದಿಗೂ ಚುನಾವಣೆಗಳಲ್ಲಿ ಬೆರಳಿಗೆ ಹಾಕಲಾಗುವ ಬಣ್ಣವನ್ನು ಈ ಮರದ ಹಣ್ಣು ಹಾಗೂ ಬೀಜಗಳಿಂದ ತಯಾರಿಸಲಾಗುತ್ತದೆ. ಆಯುರ್ವೇದದಲ್ಲಿ ಕಫ ನಿವಾರಿಸಲು ಬಳಸುವ ಈ ಕಾಡುಗೆರನ್ನು ಲೈಂಗಿಕ ಶಕ್ತಿ ಹೆಚ್ಚಿಸಲು ಹೃದಯ ಉಸಿರಾಟದ ತೊಂದರೆ ಕ್ಯಾನ್ಸರ್ ರಕ್ತದೊತ್ತಡ ನರಗಳ ಅಸ್ವಸ್ಥತೆಗಳ ಜೊತೆಗೆ ಮಹಿಳೆಯರಿಗೆ ಜನನ ನಿಯಂತ್ರಣಕ್ಕಾಗಿಯೂ ಸಹ ಬಳಸಲಾಗುತ್ತದೆ.

ಇದರ ಹಣ್ಣು ತಿನ್ನುವುದರಿಂದ ಕಾಮೋತ್ತೇಜನ ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇದರ ಬೀಜಗಳಿಂದ ತಯಾರಿಸಲಾಗುವ ಎಣ್ಣೆಯನ್ನು ಮಂಡಿ ಹಾಗೂ ಬೆನ್ನುನೋವು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದರ ಗಂಭೀರವಾದ ಅಡ್ಡಪರಿಣಾಮ ಇಲ್ಲದಿದ್ದರೂ ಕೂಡ ಶುದ್ಧಿಕರಣಗೊಳಿಸದ ಇದರ ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸುವುದು ಹಲವರಿಗೆ ಅಲರ್ಜಿ ಹಾಗೂ ಮೈಮೇಲೆ ದೊಡ್ಡ ದೊಡ್ಡ ಗುಳ್ಳೆಗಳು ಹಾಗೂ ಗಾಯಗಳನ್ನು ಮಾಡುತ್ತದೆ. ವೈದ್ಯರ ಸಲಹೆಯ ಹೊರತು ಇದರ ಉತ್ಪನ್ನಗಳನ್ನು ಬಳಸುವಂತಿಲ್ಲ ಮೂತ್ರಪಿಂಡದ ಸಮಸ್ಯೆ ಇರುವವರು ಉಷ್ಣ ಹಾಗೂ ಪಿತ್ತಪ್ರಧಾನ ಶರೀರದವರು ಗರ್ಭಿಣಿ ಹಾಗೂ ಸ್ತನ್ಯಪಾನ ಮಾಡಿಸುವ ಸ್ತ್ರೀಯರು ಇವುಗಳನ್ನು ಬಳಸುವಂತಿಲ್ಲ.