ಭಾನುವಾರ, ಅಕ್ಟೋಬರ್ 6, 2019

ಕಹಿ ಎಂದು ಮೂಗು ಮುರಿಯುವರೇ ಹಾಗಲಕಾಯಿ ತಿಂದರೆ ಇಷ್ಟು ಲಾಭ ನಿಮಗೆ ಸಿಗುತ್ತದೆ

ಸ್ನೇಹಿತರೆ ನಾವು ಪ್ರತಿ ದಿನ ಸೇವಿಸುವ ಆಹಾರ ಪದಾರ್ಥಗಳಲ್ಲಿ ಈ ಹಾಗಲಕಾಯಿ ಸಹಾ ಒಂದು ಆದರೆ ಈ ಹಾಗಲಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಷ್ಟೆ ಅಲ್ಲದೇ. ಅತಿಯಾಗಿ ಹಾಗಲಕಾಯಿ ಸೇವಿಸಿದರೆ ಇದು ನಮ್ಮ ದೇಹಕ್ಕೆ ವಿಷವೂ ಸಹಾ ಆದ್ದರಿಂದ ಇದರಿಂದ ಆಗುವ ಉಪಯೋಗಗಳ ಬಗ್ಗೆ ಮತ್ತು ಅನಾರೋಗ್ಯಕರ ಅಂಶಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಯೋಣ. ಈ ಲೇಖನ ಪೂರ್ತಿಯಾಗಿ ಓದಿರಿ. ಹಾಗಲಕಾಯಿ ಎಂದ ತಕ್ಷಣ ಕಹಿ ಅಂತ ಎಲ್ಲರೂ ಹಿಂದೆ ಸರಿಯುತ್ತಾರೆ ಆದರೆ ಮಧುಮೇಹದಿಂದ ನರಳಾಡುತ್ತ ಇರುವ ರೋಗಿಗಳು ಹಾಗಲಕಾಯಿಯನ್ನು ಅತಿಯಾಗಿ ತಿಂದರೆ ರೋಗ ಅತೀ ಬೇಗ ಗುಣಮುಖ ಆಗುತ್ತದೆ ಹಾಗಲಕಾಯಿ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುವುದರಿಂದ ರಕ್ತ ಶುದ್ಧಿ ಆಗುತ್ತದೆ ಕರುಳಿನ ಹುಣ್ಣು ಮೂಲ ವ್ಯಾಧಿ ಮತ್ತು ಕೆಮ್ಮನ್ನು ನಿವಾರಿಸುತ್ತದೆ.

ಕಹಿಯ ರುಚಿಯನ್ನು ಹೊಂದಿರುವ ಇತರ ಆಹಾರಗಳ ಮಾದರಿ ಹಾಗಲಕಾಯಿ ಆಹಾರ ಪಚನವನ್ನ ಚುರುಕು ಮಾಡುವಂತೆ ಮಾಡುತ್ತದೆ. ಅಲ್ಲದೆ ಈ ರೀತಿಯಾಗಿ ಅಜೀರ್ಣ ಮತ್ತು ಮಲಬದ್ಧತೆ ಚಿಕಿತ್ಸೆಗೆ ಇದು ಉತ್ತಮ ಆಹಾರ ಹಾಗಲಕಾಯಿ ಡಯಾಬಿಟೀಸ್ ಅನ್ನು ತಡೆಗಟ್ಟುವಲ್ಲಿ ಅಥವಾ ಅದನ್ನು ನಿಷ್ಕ್ರಿಯ ಗೊಳಿಸಲೂ ಸಹಕಾರಿ ಆಗುತ್ತದೆ ಹಾಗಲಕಾಯಿ ಡಯಾಬಿಟೀಸ್ ರೋಗಿಗಳಿಗೆ ಒಂದು ರಾಮಬಾಣ ಇದ್ದಂತೆ ಅಷ್ಟೆ ಅಲ್ಲದೆ ಹಾಗಲಕಾಯಿ ನಮ್ಮ ಹೊಟ್ಟೆಯಲ್ಲಿ ಬೆಳೆಯುವ ಜಂತು ಹುಳುಗಳನ್ನು ಹೋಗಲಾಡಿಸುವಲ್ಲಿ ಹೆಚ್ಚಿನ ಕೆಲಸ ಮಾಡುತ್ತದೆ ಹಾಗಲಕಾಯಿ ಗೆ ಕಹಿ ಎನ್ನುವ ಅಂಶ ಕಿನ್ವೆನ್ ಎಂಬ ಸಂಯುಕ್ತ ದಿಂದ ಬರುತ್ತದೆ ಎಂದು ಹೇಳಲಾಗುತ್ತದೆ.

ಹಾಗಲಕಾಯಿ ಮಲೇರಿಯಾ ರೋಗವನ್ನು ತಡೆಗಟ್ಟುವಲ್ಲಿ ಮತ್ತು ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಕಾರಿ ಆಗುತ್ತದೆ ಎಂದು ಏಷ್ಯಾದಲ್ಲಿ ಸಾಂಪ್ರದಾಯಕವಾಗಿ ಇದನ್ನು ಬಳಸುತ್ತಾ ಬರುತ್ತಿದ್ದಾರೆ ಹಾಗಲಕಾಯಿ ಹೆಚ್ ಐ ವಿ ಸೋಂಕಿತ ರೋಗಿಗಳಿಗೆ ಉಪಯುಕ್ತ ಆಹಾರ ಅಂತ ಕೆಲವು ಪರೀಕ್ಷೆಗಳಲ್ಲಿ ಗೊತ್ತಾಗಿದೆ. ಹಾಗಲಕಾಯಿಯನ್ನು ಬೇಧಿ ಉದರಶೂಲ ಜ್ವರ ಸುಟ್ಟ ಗಾಯಗಳು ನೋವಿನಿಂದ ಕೂಡಿದ ಸ್ರಾವ ಕಜ್ಜಿ ಹಾಗೂ ಚರ್ಮದ ಇತರ ಸಮಸ್ಯೆಗಳನ್ನು ಒಳಗೊಂಡಂತೆ ಹಲವಾರು ಇತರ ರೋಗಗಳಿಗೆ ಸಾಂಪ್ರದಾಯಕವಾಗಿ ಔಷಧಿಯಾಗಿ ಇದನ್ನು ಆಗಿನ ಕಾಲದಿಂದ ಬಳಸುತ್ತಾ ಬಂದಿದ್ದಾರೆ.

ಇದನ್ನು ಸಂತಾನ ನಿಯಂತ್ರಣದಲ್ಲಿ ಗರ್ಭ ಸ್ರಾವಕ ಆಗಿ ಶಿಶುವಿನ ಜನನಕ್ಕೆ ಸಹಕಾರಿ ಆಗಲು ಸಹಾ ಬಳಸಲಾಗುತ್ತದೆ. ಸ್ನೇಹಿತರೆ ನಾವು ಯಾವುದೇ ಆಹಾರ ಆಗಲಿ ನಿಯಮಿತವಾಗಿ ಸೇವಿಸಬೇಕು ಅತೀ ಹೆಚ್ಚು ಸೇವಿಸಿದರೆ ಏನಾಗುತ್ತದೆ ಎಂದು ಈಗ ತಿಳಿಯೋಣ ಈ ಹಾಗಲಕಾಯಿ ಅನ್ನು ಅತಿ ಹೆಚ್ಚಾಗಿ ಸೇವಿಸಿದರೆ ಗರ್ಭವತಿ ಮಹಿಳೆ ಹಾಗಲಕಾಯಿ ತಿಂದರೆ ಗರ್ಭಪಾತ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಫರ್ಟಿಲಿಟಿ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಾ ಇರುವವರು ಮಹಿಳೆ ಅಥವಾ ಪುರುಷ ಆಗಬಹುದು ಇದನ್ನು ಸೇವಿಸಬಾರದು ಏಕೆಂದರೆ ಇದರಿಂದ ಔಷಧಿ ಪ್ರಭಾವ ಕಡಿಮೆ ಆಗುತ್ತದೆ ಹಾಗಲಕಾಯಿ ಜಾಸ್ತಿ ತಿನ್ನುವುದರಿಂದ ಲಿವರ್ ನಲ್ಲಿ ಲಿವರ್ ಸೆಪ್ಟಿಕ್ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ