ಮಂಗಳವಾರ, ಡಿಸೆಂಬರ್ 24, 2019

ಶಂಖದ ಮಹತ್ವ

" "
       
ಅತಿ ಪ್ರಾಚೀನ ಕಾಲದಿಂದಲೂ ಶಂಖದ ಕುರಿತು ವಿಶೇಷ ಉನ್ನತ ಗೌರವವಿದೆ.ಶಂಖವನ್ನು ದೇವತಶಕ್ತಿಯ ಅವಾಹನೆ ಮತ್ತು ರಾಕ್ಷಸ ಶಕ್ತಿಯ ಉಚ್ಛಾಟನೆಗೆ ಬಳಸಲಾಗುತ್ತದೆ.
ಶಂಖದ ಜಲದಲ್ಲಿ ಔಷಧಿಯ ಗುಣ ಇರುವುದರಿಂದ ಅದರ ನೀರನ್ನು ಪ್ರೋಕ್ಷಿಸಿಕೊಳ್ಳುವುದರಿಂದ ಹಲವಾರು ಚರ್ಮ ರೋಗ ನಿವಾರಣೆಯಾಗುತ್ತದೆ ಅದರಿಂದಲೇ ''ಶಂಖದಿಂದ ಬಂದ್ರೆ ತೀರ್ಥ"ಎಂಬಾ ನಾಣ್ಣುಡಿ ಜನರ ಮನದಲ್ಲಿ ಮನೆ ಮಾಡಿದೆ.

ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಮನೆಯ ಮೂಲೆ-ಮೂಲೆಯಿಂದ ಅಷ್ಟ ದಿಕ್ಕುಗಳಿಗೂ ಕೇಳುವಂತೆ ಶಂಖನಾದ ಮಾಡುತ್ತಿದ್ದರು. 

ಇದಕ್ಕೆ ಕಾರಣ ಶಂಖ ನಾದದಲ್ಲಿರುವ  ದುಷ್ಟ ಶಕ್ತಿಯ ಎದೆಯೊಡೆಯುವ ಶಕ್ತಿ. ಶಂಖದ ನಾದ ಎಲ್ಲಿಯವರೆಗೆ ಕೇಳಿಸುತ್ತದೋ, ಅಲ್ಲಿಯ ತನಕ ಯಾವ ದುಷ್ಟ ಶಕ್ತಿಗಳೂ ಸುಳಿಯಲಾರವು.

 ಮೃತ್ಯುವಿನ ತಾಂಡವವಾದ ರಣರಂಗದಲ್ಲಿ ಆಸುರೀ ಶಕ್ತಿಯ ಪ್ರಭಾವ ಇರಬಾರದು ಎನ್ನುವುದಕ್ಕಾಗಿ, ಯುದ್ದಕ್ಕೆ ತಮ್ಮವರನ್ನು ಸಿದ್ಧಗೊಳಿಸುವುದಕ್ಕಾಗಿ ಮತ್ತು ಶತ್ರುಗಳಿಗೆ ತಾವು  ಸಿದ್ಧ ಎನ್ನುವ ಸಂಕೇತ ಕೊಡಲು ಹಿಂದೆ ಶಂಖವನ್ನು ಬಳಸುತ್ತಿದ್ದರು.
ಶಂಖ ನಾದವು ವಾತಾವರಣದ ಋಣಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ.ಚದುರಿದ ಮನಸ್ಸನ್ನು ಏಕಾಗ್ರತೆಗೆ ತರುತ್ತದೆ.ಶಂಖನಾದ ಕೇಳುವ ಪವಿತ್ರ ವಲಯದಲ್ಲಿ ತಾಮಸೀ ಶಕ್ತಿ ಪ್ರವೇಶಿಸಲಾರವು.ಶಂಖವನ್ನು ಊದುವುದರಿಂದ ಎದೆ,ಕಂಠ ಹಾಗೂ ಶ್ವಾಸಕೋಷಗಳಿಗೆ ವ್ಯಾಯಮವಾಗುವುದಲ್ಲದೆ ರಕ್ತ ಸಂಚಾರ ಹತೋಟಿಯಲ್ಲಿರುತ್ತದೆ....
ನಮ್ಮಲ್ಲಿ ಶಂಖಕ್ಕೆ ವಿಶೇಷ ಸ್ಥಾನ ನೀಡಲಾಗಿದೆ,ಪುರೀಕ್ಷೇತ್ರವನ್ನು "ಶಂಖಪುರೀ" ಎನ್ನುತ್ತಿದ್ದರು.

ದಕ್ಷಿಣಾವರ್ತ ಶಂಖವು ಅನಂತ ತತ್ವವನ್ನೂ,ವಿಷ್ಣು ತತ್ವವನ್ನು ಸೂಚಿಸುತ್ತದೆ.
ವಾಮಾವರ್ತ ಶಂಖವು ಲಯ ತತ್ವವನ್ನೂ,ಶಿವ ತತ್ವವನ್ನು ಸೂಚಿಸುತ್ತದೆ.
ಸ್ಪಟಿಕ ಶಂಖವನ್ನು  ಮಹಾಲಕ್ಷ್ಮಿಯ ಸಂಕೇತವಾಗಿ ಬಳಸುತ್ತೇವೆ.
ಶಂಖದಲ್ಲಿ  ನಾರಾಯಣನಿಗೆ ಮಾಡಿದ ಅಭಿಷೇಕವು  ಪವಿತ್ರ ಪುಣ್ಯ ನದಿ ಜಲಕ್ಕೆ ಸಮಾನಾದದ್ದು.

ಮಹಾಭಾರತದಲ್ಲಿ ಶಂಖದ ಉಲ್ಲೇಖವನ್ನು ಕಾಣಬಹುದು.
ಕೃಷ್ಣನು '#ಪಾಂಚಜನ್ಯ'
ಅರ್ಜುನ '#ದೇವದತ್ತ'
ಭೀಮನು '#ಪೌಂಡ್ರ'
ನಕುಲನು '#ಸುಘೋಷ'
ಸಹದೇವನು '#ಮಣಿಪುಷ್ಪಕ'
ಯುಧಿಷ್ಟಿರನು '#ಅನಂತ_ವಿಜಯ'
ಹೀಗೆ ಇನ್ನೂ ಮುಂತಾದ ಶಂಖಗಳನ್ನು ಧರ್ಮಸ್ಥಾಪನೆಯ ಯುದ್ಧ ಘೋಷವಾಗಿ ಬಳಸಲಾಯಿತು...

ಶಂಖ ಬಹಳ ದೊಡ್ಡ ದುಷ್ಟ ಸಂಹಾರಕ ಶಕ್ತಿ.

ಅಪೆಂಡಿಕ್ಸ್ ನಿವಾರಣೆ ಮಾಡಲು ಇರುವ ಕೆಲವು ನೈಸರ್ಗಿಕ ಮನೆಮದ್ದುಗಳು; ಶಸ್ತ್ರಚಿಕಿತ್ಸೆಗೆ ಮೊರೆ ಹೋಗುವ ಮುನ್ನ ಒಮ್ಮೆ ಹೀಗೆ ಮಾಡಿ ನೋಡಿ..

ಈ ಬರದಿಂದ ಸಾಗುತ್ತಿರುವ ಜೀವನಕ್ಕೆ ಒಂದಿಷ್ಟು ಕಾಯಿಲೆಗಳು ಕೂಡ ವರವಾಗಿವೆ. ಅದರಂತ ಪ್ರತಿಯೊಬ್ಬರಿಗೂ ಒಂದಿಲ್ಲದೊಂದು ಕಾಯಿಲೆಗಳು ಬರುತ್ತಿವೆ. ಇವುಗಳನ್ನು ಹೋಗಲಾಡಿಸುವಲ್ಲಿ ಪೂರ್ತಿ ಜೀವನವೇ ಮುಗಿದುಹೊಗುತ್ತೆ ಆದರೆ ಮುನ್ನೆಚ್ಚರಿಕೆಯಾಗಿ ಕೆಲವು ವಿಧಾನಗಳನ್ನು ಮಾಡಿಕೊಂಡರೆ ಮುಂದೆ ಬರುವ ಅಥವಾ ಬಂದಿರುವ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಹಲವು ಅಧ್ಯಯನಗಳು ಹೇಳುತ್ತಿವೆ. ಅಂತಹ ಕಾಯಿಲೆಗಳಲ್ಲಿ ಬರುವ ಅಪೆಂಡಿಕ್ಟಿಸ್ ಈಗೀಗ ತನ್ನ ಹಾವಳಿಯನ್ನು ಹೆಚ್ಚು ಮಾಡಿದ್ದು, ಜನರ ನೆಮ್ಮದಿಯನ್ನು ಕೆಡಸುತ್ತಿದೆ. ಆದರೆ ಇದರಿಂದ ತಪ್ಪಿಸಿಕೊಳ್ಳಲು ಕೆಲವು ಮನೆಮದ್ದುಗಳು ಇಲ್ಲಿವೆ ನೋಡಿ.


1. ಮಜ್ಜಿಗೆ

ಮಜ್ಜಿಗೆ ಎಲ್ಲರಿಗೂ ಸಾಮಾನ್ಯವಾಗಿ ಸಿಗುವ ಪಾನೀಯವಾಗಿದ್ದು, ಅಪೆಂಡಿಕ್ಟಿಸ್ ನೋವಿಗೆ ತುಂಬಾ ಸುಲಭ ಹಾಗೂ ಸಾಮಾನ್ಯವಾಗಿ ಸಿಗುವ ಔಷಧಿ ಇದಾಗಿದೆ. ಕೊತ್ತಂಬರಿ, ಪುದೀನಾ ಎಲೆಗಳು, ತುರಿದ ಸೌತೆಕಾಯಿ, ತುರಿದ ಶುಂಠಿ ಹಾಕಿಕೊಂಡು ತಯಾರಿಸಿದ ಮಜ್ಜಿಗೆಯು ಪರ ಜೈವಿಕ ಪರಿಣಾಮ ಬೀರುವುದು. ತಾಜಾತನ ಉಂಟು ಮಾಡುವ ಪಾನೀಯವಾಗಿದೆ. ದಿನಕ್ಕೆ ಒಂದು ಲೋಟ ಮಜ್ಜಿಗೆ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ತುಂಬಾ ಸಹಕಾರಿ ಆಗಿರಲಿದೆ.

2. ಜೇನುತುಪ್ಪ ಮತ್ತು ಲಿಂಬೆ

ಊಟದ ಕ್ರಮದಿಂದ ಮಲಬದ್ಧತೆ ಬಂದು ಅಪೆಂಡಿಕ್ಟಿಸ್ ಗೆ ಬಹು ದೊಡ್ಡ ಕಾರಣ ಎಂದು ಹೇಳಲಾಗುತ್ತದೆ. ಜೇನುತುಪ್ಪ ಮತ್ತು ಲಿಂಬೆ ರಸವು ಮಲಬದ್ಧತೆ ಸುಧಾರಣೆ ಮಾಡುವುದು ಮತ್ತು ಕರುಳಿನ ಕ್ರಿಯೆ ಸರಾಗಗೊಳಿಸುವುದು. ಇದರಿಂದಾಗಿ ಅಪೆಂಡಿಕ್ಟಿಸ್ ನ ನೋವಿಗೆ ಇದರಿಂದ ಶಮನ ಸಿಗುವುದು. ಒಂದು ಲೋಟ ಬಿಸಿ ನೀರಿಗೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿ ಕುಡಿಯಿರಿ. ಇದು ಕರುಳಿನ ಅನಿಯಮಿತ ಚಲನೆ ಸಮಸ್ಯೆಯನ್ನು ನಿವಾರಣೆ ಮಾಡುವುದು. ಎಂದು ಹಲವು ಅಧ್ಯಯನಗಳು ತಿಳಿಸಿವೆ.


3. ಶುಂಠಿ

ಶುಂಠಿಯನ್ನು ಸಾಂಪ್ರದಾಯಿಕವಾಗಿ ಹೊಟ್ಟೆಯ ಉರಿಯೂತದ ಸಮಸ್ಯೆಗೆ ಬಳಸಲಾಗುತ್ತದೆ. ಶುಂಠಿಯ ಗಿಡದ ಬೇರಿನಲ್ಲಿ 6-ಜಿಂಜೆರೊಲ್ ಎನ್ನುವಂತಹ ಅಂಶವಿದೆ. ಸಂಶೋಧನೆ ಮಾಡಿದ ವೇಳೆ ಈ ಅಂಶವು ಗಡ್ಡೆಯ ಕೋಶಗಳ ಉರಿಯೂತ ನಿವಾರಣೆ ಮಾಡುತ್ತದೆ ಎಂದು ಕಂಡುಬಂದಿದೆ. ಅಪೆಂಡಿಕ್ಟಿಸ್ ನೋವಿನ ವೇಳೆ ರೋಗಿಗಳಲ್ಲಿ ಕಂಡುಬರುವಂತಹ ವಾಂತಿ ಅಥವಾ ವಾಕರಿಕೆ ನಿವಾರಣೆಗೆ ಶುಂಠಿಯು ತುಂಬಾ ಪರಿಣಾಮಕಾರಿ. ಶುಂಠಿ ತುಂಡುಗಳು ಅಥವಾ ಇದರ ರಸ ಕುಡಿದರೆ ಆಗ ದೇಹದಲ್ಲಿನ ಉರಿಯೂತ ಕಡಿಮೆ ಆಗಿ ನೋವು ಶಮನವಾಗುವುದು.

4. ತರಕಾರಿ ಜ್ಯೂಸ್

ತರಕಾರಿ ಜ್ಯೂಸ್-ನಲ್ಲಿ ಸಾಮಾನ್ಯವಾಗಿ ನಾರಿನಾಂಶವು ಅಧಿಕವಾಗಿರುವ ಆಹಾರ ಸೇವನೆ ಮಾಡಿ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಕ್ಯಾರೆಟ್, ಸೌತೆಕಾಯಿ, ಬೀಟ್ ರೂಟ್, ಕ್ರಾನ್ಬೇರಿ, ಮೂಲಂಗಿ, ಬಸಳೆಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ. ಇದು ನೋವು ನಿವಾರಣೆ ಮಾಡುವುದು, ರಕ್ತವನ್ನು ನಿರ್ವಿಷಗೊಳಿಸುವುದ, ಸೋಂಕಿನ ವಿರುದ್ಧ ಹೋರಾಡುವುದು ಮತ್ತು ಜೀರ್ಣಕ್ರಿಯೆನ್ನು ಸರಾಗವಾಗಿಸುವುದು. ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ತರಕಾರಿ ಜ್ಯೂಸ್ ಸೇರಿಸಿಕೊಂಡು ಅಪೆಂಡಿಕ್ಟಿಸ್ ನೋವಿನಿಂದ ಮುಕ್ತಿ ಪಡೆಯಿರಿ.

ಮಂಗಳವಾರ, ಡಿಸೆಂಬರ್ 17, 2019

ವಾಸ್ತು ದೋಷ ಹಾಗೂ ಆರೋಗ್ಯದ ಸಮಸ್ಯೆಗಳಿಗೆ ಎಕ್ಕೆಯಲ್ಲಿದೆ ಮದ್ದು

ಹೌದು ಸ್ನೇಹಿತರೆ ಈ ಎಕ್ಕದ ಗಿಡವನ್ನ ನಾವು ಸರ್ವೇ ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪ್ರತಿದಿನ ಕಾಣುತ್ತಿರುತ್ತೇವೆ, ಆದರೆ ಇದನ್ನ ನಾವು ಒಂದು ಸಾಮಾನ್ಯ ಗಿಡವಷ್ಟೇ ಎಂದು ತಿಳಿದಿರುತ್ತೇವೆ, ಆದರೆ ಆಗೇ ತಿಳಿದುಕೊಳ್ಳುವುದು ತಪ್ಪು ಅನಿಸುತ್ತದೆ ಯಾಕೆಂದರೆ ಈ ಎಕ್ಕದ ಗಿಡದಲ್ಲಿ ಹಲವು ವಿಶೇಷತೆಗಳಿವೆ. ಈ ಎಕ್ಕದ ಗಿಡದಲ್ಲಿ ಎರಡು ಬಗೆಗಳಿವೆ, ಒಂದು ಬಿಳಿ ಎಕ್ಕದ ಗಿಡ, ಇನ್ನೊಂದು ಕೆಂಪು ಬಣ್ಣದ ಎಕ್ಕದ ಗಿಡ. ಇದರಲ್ಲಿ ಬಿಳಿ ಬಣ್ಣದ ಎಕ್ಕದ ಗಿಡಕ್ಕೆ ಬಹಳ ವಿಶೇಷವಾದ ಸ್ಥಾನಮಾನವಿದೆ.

ನಮ್ಮ ಹಿಂದೂ ಪುರಾಣದಲ್ಲಿ ಈ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ, ರಥಸಪ್ತಮಿಯ ದಿನದಂದು ಈ ಎಕ್ಕದ ಗಿಡದ ಎಲೆಗಳನ್ನ ಧರಿಸಿ ನದಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಮ್ಮ ಹಿಂದೂ ಪುರಾಣ ಹೇಳುತ್ತದೆ. ಬಿಳಿ ಎಕ್ಕದ ಗಿಡದ ಎಲೆಗಳನ್ನ ವಿಶೇಷವಾಗಿ ಗಣೇಶ ಪೂಜೆಗೆಂದು ಬಳಸುತ್ತಾರೆ, ಬಿಳಿ ಎಕ್ಕದ ಗಿಡ ಹೆಚ್ಚಾಗಿ ಕಂಡುಬರುವುದಿಲ್ಲ. ಈ ಎಕ್ಕದ ಗಿಡದ ಎಲೆಗಳನ್ನ ಆಗಿನ ಕಾಲದಲ್ಲಿ ಆಯುರ್ವೇದದ ಔಷಧವಾಗಿ ಬಳಸುತಿದ್ದರು.

ಈ ಗಿಡವು ನಮ್ಮ ದೇಹದ ಚರ್ಮ ಮತ್ತು ಮೂಳೆಗಳ ಸಮಸ್ಯೆಗಳಿಗೆ ರಾಮಬಾಣವಿದ್ದಂತೆ. ಈ ಗಿಡದ ಎಲೆಗಳಿಗೆ ಸ್ವಲ್ಪ ಉಪ್ಪು ಬೆರೆಸಿ ನುಣ್ಣಗೆ ರುಬ್ಬಿ ಮೂಳೆಗಳ ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಗಾಯಗಳಿದ್ದರೆ ಇದರ ಎಲೆಗಳನ್ನ ಒಣಗಿಸಿ ಅದನ್ನ ಪುಡಿ ಮಾಡಿಟ್ಟುಕೊಂಡು ಗಾಯಗಳ ಮೇಲೆ ಹಚ್ಚಿದರೆ ಎಂತಹ ಗಾಯಗಳಾಗಿದ್ದರು ಬೇಗ ಗುಣವಾಗುತ್ತವೆ.

ಈ ಗಿಡದ ಬೇರನ್ನ ನಾವು ಮಲಗುವ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಕೆಟ್ಟ, ಹಾಗೂ ಭಯ ಬೀಳಿಸುವಂತಹ ಕನಸುಗಳು ಬೀಳುವುದಿಲ್ಲ, ಹಾಗು ಹೀಗೆ ಮಾಡುವುದರಿಂದ ಗ್ರಹ ದೋಷಗಳು ಸಹ ನಿವಾರಣೆಯಾಗುತ್ತವೆ. ಪುರಾಣಗಳ ಪ್ರಕಾರ ಬಿಳಿ ಎಕ್ಕದ ಗಿಡದ ಬೇರಿನಲ್ಲಿ ಗಣಪತಿ ನೆಲೆಸಿದ್ದಾನೆ ಎಂಬುದಾಗಿದೆ, ಆದ್ದರಿಂದ ಬಿಳಿ ಎಕ್ಕದ ಗಿಡವನ್ನ ಹಿಂದೂಗಳು ಈಗಲೂ ಸಹ ಪೂಜೆ ಮಾಡುತ್ತಾರೆ. ಮನೆಯ ಮುಂದೆ ಬಿಳಿ ಎಕ್ಕೆಯ ಗಿಡ ಇದ್ರೆ ಯಾವುದೇ ರೀತಿಯ ವಾಸ್ತು ದೋಷ ಇದ್ರೆ ನಿವಾರಣೆಯಾಗುತ್ತದೆ. ಇನ್ನು ಬಿಳಿ ಎಕ್ಕೆಯ ಹೂವು ಮನೆಯ ಬಾಗಿಲಿಗೆ ತೋರಣವಾಗಿ ಕಟ್ಟುವುದರಿಂದ ಮನೆಯಲ್ಲಿನ ದೃಷ್ಟಶಕ್ತಿಗಳು ಮನೆಯಿಂದ ಹೊರಹೋಗುತ್ತವೆ. ಹೀಗೆ ಅನೇಕ ಉಪಯೋಗಗಳನ್ನು ಎಕ್ಕೆಯಿಂದ ಪಡೆಯಬಹುದಾಗಿದೆ.


ಈ ಗಿಡದ ಹಾಲು ವಿಷವಾದರೂ ಇದು ಸೌಂದರ್ಯಕ್ಕೆ ಬಹಳ ಉಪಯುಕ್ತಕಾರಿ. ಈ ಗಿಡದ ಎಲೆಯಿಂದ ಬರುವ ಹಾಲಿಗೆ ಸ್ವಲ್ಪ ಅರಿಶಿಣವನ್ನ ಬೆರೆಸಿ ಕಣ್ಣಿಗೆ ತಾಗದಂತೆ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಬೆವರು ಗುಳ್ಳೆಗಳಾಗಿದ್ದರೆ ಆ ಗುಳ್ಳೆಗಳಿಗೆ ಎಕ್ಕದ ಹಾಲನ್ನ ತಾಕಿಸಿದರೆ ಗುಳ್ಳೆಗಳು ಒಣಗುತ್ತವೆ. ನಮಗೆ ಗಾಯಗಳಾಗಿ ಹೆಚ್ಚು ರಕ್ತ ಬರುತ್ತಿದ್ದರೆ ಬೇಗ ಎಕ್ಕದ ಗಿಡದ ಹಾಲನ್ನ ಹಚ್ಚುವುದರಿಂದ ರಕ್ತ ಬರುವುದನ್ನ ತಡೆಯಬಹುದು. ಎಕ್ಕೆ ಗಿಡ ಹಾಲನ್ನು ಬಳಸುವಾಗ ಎಚ್ಚರ ಕಣ್ಣಿಗೆ ಬೀಳದಂತೆ ಕಾಳಜಿವಹಿಸಿ.

ಗ್ಯಾಸ್ಟ್ರಿಕ್ ನಿವಾರಿಸುವ ಸುಲಭ ಮನೆಮದ್ದುಗಳಿವು!

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆ ಗ್ಯಾಸ್ರ್ಟಿಕ್ ಎಂದರೆ ಖಂಡಿತ ತಪ್ಪಾಗಲಾರದು. ಇದು ನಮಗೆ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದು ಕೆಲವೊಮ್ಮೆ ತಿಳಿಯುವುದಿಲ್ಲ. ಈ ಸಮಸ್ಯೆಯಿಂದ ಬಹಳಷ್ಟು ತೊಂದರೆಯನ್ನ ಅನುಭವಿಸಬೇಕಾಗುತ್ತದೆ. ಇದಕ್ಕೆ ವಯಸ್ಸಿನ ಅಂತರವಿಲ್ಲ ಇದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಕಾಡುವಂತದ್ದು. ಗ್ಯಾಸ್ಟ್ರಿ ಸಮಸ್ಯೆಗೆ ಹಲವು ಕಾರಣಗಳಿವೆ ಒತ್ತಡ ಚಡಪಡಿಕೆ ಭಯ ಆತಂ, ಕೋಪದ ಕಾರಣ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದ ಕಾರಣ ಈ ಸಮಸ್ಯೆ ನಮ್ಮನ್ನ ಕಾಡುತ್ತದೆ. ಇಂತಹ ಸಮಸ್ಯೆಗೆ ನಾವಿಂದು ಒಳ್ಳೆಯ ಮನೆಮದ್ದುಗಳನ್ನ ತಿಳಿಸಿಕೊಡಿಡುತ್ತೇವೆ ನೀವು ಕೂಡ ಇವುಗಳನ್ನ ಬಳಸಿ ನಿಮ್ಮ ಗ್ಯಾಸ್ರ್ಟಿಕ್ ಸಮಸ್ಯಗೆ ಪರಿಹಾರವನ್ನ ಕಂಡುಕೊಳ್ಳಿ.

ಒಂದು ಲೋಟ ಮಜ್ಜಿಗೆಗೆ ಒಂದು ಚಮಚ ಜೀರಿಗೆಯ ಪುಡಿ, ಹಾಗೂ ಅರ್ಧ ಚಮಚ ಇಂಗು, ಸ್ವಲ್ಪ ಉಪ್ಪನ್ನ ಹಾಕಿ ಕುಡಿಯುವುದರಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಈ ಸಮಸ್ಯೆ ಇರುವವರು ಒಂದು ಚಮಚ ಓಮ್ ಕಾಳಿಗೆ ಚಿಟಿಕೆ ಉಪ್ಪನ್ನ ಸೇರಿಸಿ ಅಗೆಯಬೇಕು, ಅಗೆಯುತ್ತಾ ಅದರ ರಸವನ್ನ ನುಂಗುವುದರಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ.

ಜೀರಿಗೆ ಹಾಗೂ ಕೊತ್ತೊಂಬರಿ ಬೀಜದ ಜೊತೆಗೆ ಬೆಳ್ಳುಳ್ಳಿಯನ್ನ ಕುದಿಸಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನ ದಿನಕ್ಕೆ ಕನಿಷ್ಠ ಎರಡು ಬಾರಿಯಾದರು ಕುಡಿಯಬೇಕು. ಒಂದು ಚಮಚ ಶುಂಠಿ ರಸ, ಹಾಗೂ ಒಂದು ಚಮಚ ನಿಂಬೆರಸಕ್ಕೆ ಚಿಟಿಕೆ ಉಪ್ಪನ್ನ ಬೆರೆಸಿ ಊಟದ ನಂತರ ಕುಡಿಯುವುದರಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ಅಡುಗೆ ಮಾಡುವಾಗ ಇಂಗು ಹಾಗೂ ಬೆಳ್ಳುಳ್ಳಿಯನ್ನ ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು.

ಭಾನುವಾರ, ಡಿಸೆಂಬರ್ 15, 2019

ಮನೆಯಲ್ಲಿರುವ ಇರುವೆಗಳು ನಿಮ್ಮ ಸಂತೋಷ ಹಾಗೂ ದುಃಖವನ್ನ ಸೂಚಿಸುತ್ತವೆ ಹೇಗೆ ಗೊತ್ತಾ?

ಪ್ರತಿಯೊಬ್ಬರ ಮನೆಗಳಲ್ಲೂ ಇರುವೆಗಳು ಇರುವುದು ಸಾಮಾನ್ಯ ಹಾಗೂ ಇದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಅಡುಗೆ ಮನೆಯಲ್ಲಿರುವ ಸಿಹಿ ತಿನಿಸುಗಳಿಗೆ ಎಣ್ಣೆಯ ಪದಾರ್ಥಗಳಿಗೆ ಇರುವೆಗಳು ಮುತ್ತಿಕೊಳ್ಳುವುದು ಸಹಜ, ಆದರೆ ಹೀಗೆ ಮುತ್ತಿಕೊಳ್ಳುವ ಇರುವೆಗಳು ನಮ್ಮ ಜೀವನದ ಸುಖ ಹಾಗೂ ದುಃಖದ ಸಂಕೇತವನ್ನ ತೋರುತ್ತವೆ ಎಂದರೆ ನಾವು ಖಂಡಿತ ನಂಬಲೇಬೇಕು. ಈ ಇರುವೆಗಳು ಹೇಗೆ ನಮ್ಮ ಸುಖ ದುಃಖಗಳನ್ನ ಹೇಳುತ್ತವೆ ಅನ್ನೋದನ್ನ ಹೇಳುವುದಾದರೆ ನಮ್ಮ ಹಿರಿಯರು ಕೂಡ ಮನೆಗಳಲ್ಲಿ ಹೇಳುತ್ತಿರುತ್ತಾರೆ ಇರುವೆಗಳು ಗೋಗೆಯ ಮೇಲೆ ಸಾಲು ಸಾಲಾಗಿ ಹೋಗುತ್ತಿದ್ದರೆ ಅಥವಾ ಒಂದೇ ಜಾಗದಲ್ಲಿ ಇದ್ದರೆ ಅದಕ್ಕೆ ಸೂಚನೆ ಏನು ಅನ್ನೋದನ್ನ ಮುಂದೆ ನೋಡಿ.

ಇರುವೆಗಳು ಮನೆಯ ಮೇಲ್ಚಾವಣಿಯ ಮೇಲೆ ಇದ್ದರೆ ಅಥವಾ ಓಡಾಡಿದರೆ ಅತಿ ಶಿಘ್ರದಲ್ಲಿಗೆ ನಿಮಗೆ ಸಂತೋಷ ಪ್ರಾಪ್ತಿಯಾಗಲಿದೆ ಎಂಬ ಸೂಚನೆಯನ್ನ ನೀಡುತ್ತವೆ. ಇನ್ನು ಇರುವೆಗಳು ನಿಮ್ಮ ಮನೆಯಲ್ಲಿರುವ ಅಕ್ಕಿ ಡಬ್ಬಕ್ಕೆ ಮುತ್ತಿದ್ದರೆ ಬಹು ಬೇಗ ನಿಮ್ಮ ಮನೆಯಲ್ಲಿ ಧನದ ವೃದ್ಧಿಯಾಗಲಿದೆ ಎಂದರ್ಥ. ಅಪ್ಪಿ ತಪ್ಪಿ ಇರುವೆಗಳು ನಿಮ್ಮ ಮನೆಯ ತುಪ್ಪ ತುಂಬಿದ ಡಬ್ಬಿಗೆ ಮುತ್ತಿದರೆ ಅಥವಾ ಇಡೀ ದಿನ ರಾತ್ರಿ ಅಲ್ಲಿಯೇ ಇದ್ದರೆ ನಿಮ್ಮ ಸಂಪತ್ತಿನ ನಾಶದ ಸಂಕೇತವನ್ನ ಸೂಚಿಸುತ್ತದೆ. ನಿಮ್ಮ ಸಂಪತ್ತು ನಾಶವಾಗಿ ಶೂನ್ಯಕ್ಕೆ ತಲುಪುತ್ತದೆ ಎಂದರ್ಥ.

ನಿಮ್ಮ ಮನೆಯಲ್ಲಿ ಅತಿಯಾದ ಕೆಂಪು ಇರುವೆಗಳು ಕಾಣಿಸಿಕೊಂಡರೆ ಕಳ್ಳತನದ ಭಯ ಅಥವಾ ಮಾರಣಾಂತಿಕ ಹಲ್ಲೆಗಳಂತಹ ಘಟನೆಗಳು ನಡೆಯುವುದರ ಸಂಕೇತವನ್ನ ಸೂಚಿಸುತ್ತದೆ. ನಿಮ್ಮ ಮನೆಯಲ್ಲಿರುವ ಆಭರಣಗಳಿಗೆ ಕಪ್ಪು ಬಣ್ಣದ ಇರುವೆಗಳು ಮುತ್ತಿದ್ದರೆ ನಿಮ್ಮ ಮನೆಯಲ್ಲಿ ಚಿನ್ನ ಹಾಗೂ ಹಣದ ವೃದ್ಧಿಯಾಗಲಿದೆ ಎಂಬುದರ ಸಂಕೇತವನ್ನ ಸೂಚಿಸುತ್ತದೆ.

ಇನ್ನು ಮರದಿಂದ ಕಪ್ಪು ಇರುವೆಗಳು ಹೊರಗೆ ಬಂದರೆ ಮಳೆಯಾಗಲಿದೆ ಎಂದು, ಹಾಗೂ ಕೆಂಪು ಇರುವೆಗಳು ಮರದಿಂದ ಹೊರಗೆ ಬಂದರೆ ಅನಾವೃಷ್ಟಿಯಾಗಲಿದೆ ಎಂಬುದನ್ನ ಸೂಚಿಸುತ್ತದೆ. ಪೂರ್ವಕ್ಕೆ ಇರುವೆಗಳು ಕಾಣಿಸಿಕೊಂಡರೆ ಭಯದ ವಾತಾವರಣ ಹಾಗೂ ಪಶ್ಚಿಮಕ್ಕೆ ಕಾಣಿಸಿಕೊಂಡರೆ ಲಾಭದ ಸಂಕೇತವನ್ನ ಸೂಚಿಸುತ್ತದೆ. ಹೀಗೆ ಇರುವೆಗಳ ಕುರಿತು ಅನಾದಿ ಕಾಲದಿಂದಲೂ ಹೇಳುತ್ತಾ ಬರಲಾಗುತ್ತದೆ ಕೆಲವರಿ ಇದನ್ನು ನಂಬಿದರೆ ಇನ್ನು ಕೆಲವರು ನಂಬದೆ ಇರಬಹುದು ಆದ್ರೆ ಎಲ್ಲವು ಕೂಡ ಅವರವರ ಆಲೋಚನೆಗೆ ಬಿಟ್ಟಿದ್ದು.

ಮನೆಯಲ್ಲಿನ ದವಸ ಧಾನ್ಯಗಳಲ್ಲಿ ಹುಳಗಳಾಗದಂತೆ ಮಾಡುವ ಸುಲಭ ಉಪಾಯ

ಮನೆಗಳಲ್ಲಿ ನಾವುಗಳು ಬಹು ದಿನದವರೆಗೆ ದವಸ ಧಾನ್ಯಗಳನ್ನು ಶೇಖರಣೆ ಮಾಡಿಕೊಳ್ಳುವ ಸಂದರ್ಭ ಬಂದೆ ಬರುತ್ತದೆ ಆದ್ರೆ ಇವುಗಳನ್ನು ನೀಟಾಗಿ ಬಳಸಬೇಕು ಇಲ್ಲದಿದ್ದರೆ ಅವುಗಳಲ್ಲಿ ಹುಳಗಳಾಗಿ ಬಳಕೆ ಮಾಡಲು ಆಗದಂತೆ ಹಾಳಾಗುತ್ತವೆ. ನಿಮಗೆ ಈ ಮೂಲಕ ಶೇಕರಣೆ ಮಾಡಿಟ್ಟ ದವಸ ಧಾನ್ಯಗಳಲ್ಲಿ ಹುಳಗಳು ಆಗದಂತೆ ಬಹುದಿನದವರೆಗೆ ಇವುಗಳು ಉತ್ತಮವಾಗಿರಲು ಏನು ಮಾಡಬಹುದು ಅನ್ನೋ ಒಂದೊಳ್ಳೆ ಸುಲಭ ಉಪಾಯವನ್ನು ತಿಳಿಸಲು ಬಯಸುತ್ತವೆ, ಇದು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಇದರ ಉಪಯೋಗವನ್ನು ಅವರು ಕೂಡ ಪಡೆದುಕೊಳ್ಳಲಿ.

ವಿಷ್ಯಕ್ಕೆ ಬರೋಣ ಮನೆಯಲ್ಲಿ ಅಷ್ಟೇ ಅಲ್ದೆ ಕೆಲ ರೈತರು ಬೆಳೆದಂತ ಬೆಳೆಗಳನ್ನು ಅಡುಗೆಗೆ ಬಳಸಲು ವರ್ಷವಿಡೀ ಹಾಗೆ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಅಂತವರಿಗೂ ಕೂಡ ಉಪಯೋಗಕಾರಿ ಇನ್ನು ಕೆಲವರು ಮನೆಯಲ್ಲಿ ಅಡುಗೆಗೆ ಸಂಬಂಧಿಸಿದ ದವಸ ಧಾನ್ಯಗಳನ್ನು ಹಲವು ತಿಂಗಳವರೆಗೆ ಇಟ್ಟಿರುತ್ತಾರೆ ಆದ್ರೆ ನೀವು ಇಡುವಾಗ ಈ ವಿಧಾನವನ್ನು ಅನುಸರಿಸಿದರೆ ಉತ್ತಮ. ಉದಾಹರಣೆಗೆ ಅಕ್ಕಿಯನ್ನು ಪ್ರತಿದಿನ ಬಳಸಲಾಗುತ್ತದೆ ಹಾಗಾಗಿ ಇದನ್ನು ಮನೆಯಲ್ಲಿ ತಿಂಗಳವರೆಗೆ ಹಾಗೆ ಶೇಖರಣೆ ಮಾಡಿಕೊಂಡಿರುತ್ತಾರೆ ಇದರಲ್ಲಿ ಹುಳಗಳು ಸಹ ಬೀಳುತ್ತವೆ, ಹಾಗಾಗಿ ಒಟ್ಟಾರೆಯಾಗಿ ಹುಳಗಳು ಬೀಳದಂತೆ ಬಹುದಿನದವರೆಗೆ ಇರಲು ಏನು ಮಾಡಬೇಕು ಅನ್ನೋದಾದರೆ


ಒಂದು ಹಿಡಿಯಷ್ಟು ಒಣಗಿದ ಕರಬೇವಿನ ಎಲೆಗಳನ್ನು ಪುಡಿಮಾಡಿ ಕೊಂಡು ಈ ಕರಬೇವಿನ ಪುಡಿ ಒಂದು ಕಪ್ ನಷ್ಟು ಇರಲಿ. ಇನ್ನು ಒಂದು ಕಪ್ ಪುಡಿ ಮಾಡಿದ ಬೆಳ್ಳುಳ್ಳಿ ಸಿಪ್ಪೆ ಹಾಗೂ ಅರ್ಧ ಕಪ್ ಲವಂಗವನ್ನು ಹುರಿದು ಪುಡಿ ಮಾಡಿಕೊಳ್ಳಬೇಕು. ಈ ಮೂರನ್ನು ಕೂಡ ಬೆರಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಬಿಸಿಲಿಗೆ 2 ದಿನಗಳಕಾಲ ಚನ್ನಾಗಿ ಓಣಗಿಸಿ. ಒಣಗಿಸಿದ ನಂತರ ಇದನ್ನು ಚಿಕ್ಕ ಚಿಕ್ಕ ಉಂಡೆಯಾಗಿ ಮಾಡಿಕೊಂಡು 2 ದಿನ ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ ಅವುಗಳನ್ನ ಒಂದು ತೆಳುವಾದ ಬಟ್ಟೆಯಲ್ಲಿ ಕಟ್ಟಿ ಅಕ್ಕಿ ಡಬ್ಬ ಅಥವಾ ಚೀಲದಲ್ಲಿ ಹಾಕಿಡಿ ಹೀಗೆ ನೀವು ಶೇಕರಣೆ ಮಾಡಿಟ್ಟ ಯಾವುದೇ ದವಸ ಧಾನ್ಯಗಳಲ್ಲಿ ಇದನ್ನು ಇಡುವುದರಿಂದ ಯಾವುದೇ ರೀತಿಯ ಹೂಳಲಾಗು ಬೀಳೋದಿಲ್ಲ. ಇದು ಹೆಚ್ಚು ಉಪಯೋಗಕಾರಿ ಆದ್ದರಿಂದ ನಿಮ್ಮ ಆತ್ಮೀಯರಿಗೂ ಕೂಡ ತಿಳಿಸಿ.


ಗುರುವಾರ, ಡಿಸೆಂಬರ್ 12, 2019

ಜ್ವರ ಬಂದಾಗ ತಕ್ಷಣ ಹೀಗೆ ಮಾಡಿದರೆ ಕಡಿಮೆ ಆಗುತ್ತದೆ.!!

ಸಾಮಾನ್ಯವಾಗಿ ದೇಹದ ಉಷ್ಣಾಂಶ ಹೆಚ್ಚಾದರೆ ಅದನ್ನು ಜ್ವರ ಅಂತ ಕರೆಯಲಾಗುತ್ತದೆ. ಆದರೆ ದೇಹದಲ್ಲಿ 37 ಡಿಗ್ರಿ ಸೆಲ್ಶಿಯಸ್ ಅಂಶವು ದೇಹದಲ್ಲಿ ಇದ್ದರೆ ಅದನ್ನು ಜ್ವರ ಎಂದು ಕರೆಯಲಾಗುತ್ತದೆ. 101 ಡಿಗ್ರಿ ಫ್ಯಾರನಿಟ್ ಉಷ್ಣಾಂಶ ಇದ್ದರೆ ಅದನ್ನು ಸಾಮಾನ್ಯ ಜ್ವರ ಎಂದು ಕರೆಯಲಾಗುತ್ತದೆ ಮತ್ತು ಸ್ನೇಹಿತರೇ ಇಷ್ಟು ಕಡಿಮೆ ಉಷ್ಣಾಂಶದಲ್ಲಿ ಜ್ವರ ಏನಾದರೂ ಬಂದರೆ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೆ ಹೋಗಬಾರದು. ಹೆಚ್ಚು ಮಾತ್ರೆ ನುಂಗುವುದರಿಂದ ದೇಹದ ಕೆಂಪು ರಕ್ತ ಕಣಗಳು ಕ್ಷೀಣಿಸುತ್ತಾ ಹೋಗುತ್ತದೆ. ಆದ್ದರಿಂದ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆ ಮದ್ದನ್ನು ಮಾಡಿ ಬಂದಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಲ್ಲಿ ಉತ್ತಮ ಆರೋಗ್ಯವನ್ನು ನಾವು ಪಡೆದುಕೊಳ್ಳಬಹುದು.

ಹಾಗಾದರೆ ಜ್ವರ ಬಂದಾಗ ನಾವು ಮನೆಯಲ್ಲಿ ಮಾಡಬಹುದಾದಂತಹ ಮನೆಮದ್ದುಗಳು ಯಾವುವು ಅಂತ ಹೇಳೋದಾದರೆ,

>> ಮೊದಲನೆಯದಾಗಿ ಜ್ವರ ಬಂದಾಗ ತಣ್ಣೀರಿನ ಬಟ್ಟೆ ಮಾಡಿಕೊಂಡು ಹಣೆಯ ಭಾಗದಲ್ಲಿ ಇಟ್ಟುಕೊಳ್ಳಬೇಕು. ಅರ್ಧ ಗಂಟೆಗೆ ಒಮ್ಮೆ ಬಟ್ಟೆಯನ್ನು ತಣ್ಣೀರಿನಲ್ಲಿ ನೆನೆಸಿ ಮತ್ತೊಮ್ಮೆ ಹಣೆಯ ಮೇಲೆ ಹಾಕಿಕೊಳ್ಳಬೇಕು. ಹೀಗೆ ಮಾಡುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಜ್ವರವೂ ಕೂಡ ಕಡಿಮೆಯಾಗುತ್ತದೆ.

>> ಜ್ವರ ಬಂದಾಗ ಯಾರೂ ಕೂಡ ಸ್ನಾನವನ್ನು ಮಾಡೋದಕ್ಕೆ ಹೋಗುವುದಿಲ್ಲ. ಹೀಗೆ ಜ್ವರ ಬಂದಾಗ ಬಿಸಿನೀರಿನ ಸ್ನಾನ ಮಾಡುವುದರಿಂದ ಉತ್ತಮ. ಇದರ ಬದಲು ಕಾಟನ್ ಟವೆಲ್ ಅನ್ನು ಬಿಸಿ ನೀರಿಗೆ ಹೆಚ್ಚಿ ಅದರಿಂದ ಮೈಯನ್ನು ಒರೆಸಿಕೊಂಡರು ಕೂಡ ಉತ್ತಮ. ಹೀಗೆ ಮಾಡುವುದರಿಂದ ನೀವು ಜ್ವರ ಬಂದಾಗಲೂ ಕೂಡ ಸ್ವಲ್ಪ ರಿಲ್ಯಾಕ್ಸ್ ಪಡೆದುಕೊಳ್ಳಬಹುದು.

>> ಜ್ವರ ಬಂದಾಗ ಹಣ್ಣಿನ ಜ್ಯೂಸ್ ಅಂದರೆ ವಿಟಮಿನ್ ಸಿ ಹೆಚ್ಚಾಗಿರುವಂತಹ ಹಣ್ಣುಗಳ ಜ್ಯೂಸ್ ಅಂದರೆ ಕಿತ್ತಳೆ ಹಣ್ಣಿನ ಜ್ಯೂಸ್, ಕಿವಿ ಹಣ್ಣಿನ ಜ್ಯೂಸ್, ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು ಮತ್ತು ಎಳನೀರನ್ನು ಕುಡಿಯುವುದರಿಂದ ತುಂಬಾನೇ ಪ್ರಯೋಜನ ಇದೆ ಮತ್ತು ಜ್ವರ ಆದಷ್ಟು ಬೇಗ ಕಡಿಮೆಯಾಗುತ್ತದೆ.

>> ಜ್ವರ ಬಂದಾಗ ಗಂಟೆಗೊಮ್ಮೆ ಬಿಸಿ ನೀರನ್ನು ಕುಡಿಯಬೇಕು. ಬಿಸಿ ನೀರು ಅಂದರೆ ಬೆಚ್ಚಗೆ ಇರಬಾರದು, ಕಾಫಿ ಟೀ ಕುಡಿಯುವಷ್ಟು ಬಿಸಿಯಾದರೂ ಇರಬೇಕು. ಹೀಗೆ ಕುಡಿಯುವುದರಿಂದ ಜ್ವರ ಬೇಗನೆ ಕಡಿಮೆಯಾಗುತ್ತದೆ.

ಜ್ವರ ಬಂದಾಗ ಕೆಲವೊಂದು ಮನೆ ಮದ್ದುಗಳನ್ನು ಮಾಡಿಕೊಳ್ಳಬಹುದು. ಅದೇನೆಂದರೆ ಒಂದು ಗ್ಲಾಸ್ ನೀರಿಗೆ ಸ್ವಲ್ಪ ಚಕ್ಕೆ ಪುಡಿ, ಸ್ವಲ್ಪ ಮೆಣಸಿನ ಪುಡಿ ಮತ್ತು ಸ್ವಲ್ಪ ಶುಂಠಿಯನ್ನು ಹಾಕಿ ಎಂಟು ತುಳಸಿ ಎಲೆಗಳನ್ನು ಹಾಕಿ ಕುದಿಸಿ ನಂತರ ಆ ನೀರನ್ನು ಕುಡಿಯುವುದರಿಂದ ಜ್ವರ ಬೇಗನೆ ಕಡಿಮೆಯಾಗುತ್ತದೆ.


ಮತ್ತೊಂದು ವಿಧಾನವು ಹೇಗೆ ಅಂದರೆ ಎರಡು ಲೀಟರ್ ನೀರನ್ನು ಕುದಿಸಬೇಕು. ನಂತರ ಅದಕ್ಕೆ ಐವತ್ತು ಗ್ರಾಂ ಶುಂಠಿಯನ್ನು ಜಜ್ಜಿ ಹಾಕಬೇಕು. ನಂತರ ನೀರನ್ನು ಕುದಿಯುವಾಗ ಎರಡು ಲೀಟರ್ ನೀರು ಅರ್ಧದಷ್ಟು ಆಗಬೇಕು. ಅಂದರೆ ಒಂದು ಲೀಟರ್ ನೀರಿನ ಸಮಕ್ಕೆ ಬರಬೇಕು. ನಂತರ ಇದನ್ನು ಊಟವಾದ ನಂತರ ತಿಂಡಿಯಾದ ಬಳಿಕ ಕುಡಿಯುವುದರಿಂದ ತುಂಬಾನೇ ಉಪಯುಕ್ತ.

ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆಗೆ ಈ ಆಹಾರ ತಿನ್ನಬೇಕು..!!

ಮೂಲವ್ಯಾಧಿ ಅಂದರೆ ಪೈಲ್ಸ್ ಈ ಒಂದು ಸಮಸ್ಯೆ ಇಂದಿನ ದಿನದಲ್ಲಿ ಹೆಚ್ಚಾಗಿ ಕಾಡುತ್ತಾ ಇದೆ ಮತ್ತು ಈ ಒಂದು ಸಮಸ್ಯೆ ಗಂಡಸರಿಗೆ ಹೆಚ್ಚು ಬರುವುದು ಅಂತ ಒಂದು ಸಂಶೋಧನೆ ತಿಳಿಸುತ್ತದೆ ಮತ್ತು ಮೂಲವ್ಯಾಧಿ ಸಮಸ್ಯೆ ಪ್ರಪಂಚದಲ್ಲಿ ಐವತ್ತು ಪರ್ಸೆಂಟ್ ಅಷ್ಟು ಜನರಿಗೆ ಬರುತ್ತದೆ ಮತ್ತು ಈ ಸಮಸ್ಯೆ ಬರುವುದಕ್ಕೆ ಮುಖ್ಯ ಕಾರಣವೇನು ಅಂತ ಹೇಳೋದಾದರೆ ವ್ಯಕ್ತಿ ಪಾಲಿಸುವಂತಹ ಆಹಾರ ಪದ್ಧತಿಯಿಂದ.ಹಾಗಾದರೆ ಮೂಲವ್ಯಾಧಿ ಸಮಸ್ಯೆ ಬಂದರೆ ಯಾವೆಲ್ಲ ಆಹಾರ ಪದ್ಧತಿಯನ್ನು ತಿನ್ನಬೇಕು ಮತ್ತು ಮೂಲವ್ಯಾಧಿ ಸಮಸ್ಯೆ ಬರದೇ ಇರುವ ಹಾಗೆ ತಡೆಗಟ್ಟುವುದಕ್ಕೆ ಯಾವ ಆಹಾರ ಪದ್ಧತಿಯನ್ನು ಪಾಲಿಸಬೇಕು ಅನ್ನೋದರ ಬಗ್ಗೆ ನಾವಿಂದು ತಿಳಿಯೋಣ.

ಮೂಲವ್ಯಾಧಿ ಅಂದರೇನು ಅಂತ ಹೇಳೋದಾದರೆ ಮಲ ವಿಸರ್ಜನೆ ಮಾಡುವಂತಹ ಜಾಗದಲ್ಲಿ ನಾಳಗಳು ಇರುತ್ತವೆ ಆ ಒಂದು ನಾಳಗಳು ಉದಿಕೊಂಡರೆ ಪೈಲ್ಸ್ ಅಂತ ಕರೆಯುತ್ತಾರೆ ಮತ್ತು ಈ ರೀತಿ ಆದಾಗ ಆ ಭಾಗ ತುಂಬಾನೇ ನೋವು ಉಂಟು ಮಾಡುತ್ತದೆ ಇನ್ನು ಕೆಲವರಲ್ಲಿ ರಕ್ತಸ್ರಾವ ಆಗುವಂತಹ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ .
ಆದ್ದರಿಂದ ಮೂಲವ್ಯಾಧಿ ಬಂದರೆ ವ್ಯಕ್ತಿ ತುಂಬಾನೇ ನೋವನ್ನು ಅನುಭವಿಸಬೇಕಾಗುತ್ತದೆ , ಮೂಲವ್ಯಾಧಿ ಬಂದರೆ ವ್ಯಕ್ತಿ ಎಲ್ಲಿಯೇ ಕುಳಿತುಕೊಳ್ಳಲು ಕಷ್ಟ ಪಡುತ್ತಾರೆ ಮತ್ತು ಮಲ ವಿಸರ್ಜಿಸಲು ಕೂಡ ಸಾಕಷ್ಟು ಕಷ್ಟವನ್ನು ಪಡುತ್ತಾನೆ ಆದ್ದರಿಂದ ಈ ಸಮಸ್ಯೆಗೆ ಬೇಗನೆ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.

ನಾವು ಇಂದಿನ ಮಾಹಿತಿಯಲ್ಲಿ ಮೂಲವ್ಯಾಧಿ ಸಮಸ್ಯೆ ಬರದೇ ಇರುವ ಹಾಗೆ ತಡೆಗಟ್ಟಲು ಯಾವ ಆಹಾರ ಪದ್ಧತಿಯನ್ನು ಪಾಲಿಸಬೇಕು ಅನ್ನೋದನ್ನ ತಿಳಿಯೋಣ ಯಾಕೆಂದರೆ ಪ್ರಿವೆನ್ಶನ್ ಈಸ್ ಬೆಟರ್ ದೆನ್ ಕ್ಯೂರ್ ಅನ್ನೋ ಮಾತಿನ ಹಾಗೆ ಸಮಸ್ಯೆ ಬರುವ ಮುಂಚೆಯೇ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ ಅಲ್ವಾ .
>> ಮೊದಲನೆಯದಾಗಿ ಮೂಲಂಗಿ ಮತ್ತು ಮೊಸರು ಎರಡು ಪದಾರ್ಥಗಳನ್ನು ಮಿಶ್ರಿತ ಮಾಡಿ ರುಬ್ಬಿ ವಾರಕ್ಕೆ ೩ ಬಾರಿ ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳಬಹುದು .
>> ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ ಶೋಧಿಸಿ ಶೇಖರಣೆ ಮಾಡಿ ಇಟ್ಟುಕೊಂಡು ನಂತರ ಪ್ರತಿದಿನ ಊಟದ ಮೊದಲು ಎರಡು ಮೂರು ಚಮಚ ಕುಡಿಯುವುದರಿಂದ ಈ ರೀತಿ ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ .
>> ಬಾಳೆ ಹಣ್ಣಿನೊಂದಿಗೆ ಏಲಕ್ಕಿಯನ್ನು ಬೆರೆಸಿ ತಿನ್ನುವುದರಿಂದ ಈ ಸಮಸ್ಯೆ ಬರುವುದಿಲ್ಲ ಮತ್ತು ಒಂದು ಗ್ಲಾಸ್ ನೀರಿಗೆ ಮೂರು ಹನಿ ನಿಂಬೆರಸವನ್ನು ಹಾಕಿಕೊಂಡು ಕುಡಿಯುವುದರಿಂದ ಕೂಡ ಈ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳಬಹುದು .
>> ಹಳ್ಳಿಯ ಕಡೆ ಮಾವಿನ ಗೊರಟೆ ಎಂದು ಸಿಗುತ್ತದೆ ಅದನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿದಿನ ಬೆಳಗ್ಗೆ ತಿನ್ನುವುದರಿಂದ ಈ ಸಮಸ್ಯೆ ದೂರವಾಗುತ್ತದೆ ಮತ್ತು ಬಿಲ್ವ ಪತ್ರೆಯ ಎಲೆ ತೆಗೆದುಕೊಂಡು ಅದನ್ನು ರಸ ಮಾಡಿಕೊಂಡು ಪ್ರತಿದಿನ ಬೆಳಗ್ಗೆ ಸಂಜೆ ಕುಡಿಯುವುದರಿಂದ ಕೂಡ ಈ ಸಮಸ್ಯೆ ಬರುವುದಿಲ್ಲ .
>> ತುಳಸಿ ಗಿಡದ ಬೀಜಗಳನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ಬೆಣ್ಣೆ ಮತ್ತು ಬೆಲ್ಲವನ್ನು ಬೆರೆಸಿ ತಿನ್ನುವುದರಿಂದ ಕೂಡ ಈ ಸಮಸ್ಯೆ ದೂರವಾಗುತ್ತದೆ .
>> ಮುಟ್ಟಿದರೆ ಮುನಿ ಸೊಪ್ಪು ಅಂತ ಕೇಳಿರಬಹುದು ಇದನ್ನು ತೆಗೆದುಕೊಂಡು ಈ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಕೂಡ ಬೇಗನೆ ಈ ಸಮಸ್ಯೆ ದೂರವಾಗುತ್ತದೆ .
>> ಖರ್ಜೂರ ಈ ಒಂದು ಖರ್ಜೂರವನ್ನು ರಾತ್ರಿ ನೆನೆಯಲು ಇಟ್ಟು ಮಾರನೆ ದಿವಸ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನುವುದರಿಂದ ಈ ಸಮಸ್ಯೆ ಖಂಡಿತವಾಗಿಯೂ ದೂರವಾಗುತ್ತದೆ .

ಸ್ಪೂನ್ ಇದನ್ನು ಸೇವಿಸಿದರೆ ಜನ್ಮದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಹತ್ತಿರ ಕೂಡ ಸುಳುವುದಿಲ್ಲ !

ಈ ಮನೆಮದ್ದುಗಳನ್ನು ಪಾಲಿಸಿ ನೋಡಿ ನಿಜಕ್ಕೂ ನಿಮಗೆ ಆಗಿರುವಂತಹ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಹಾಗಾದರೆ ಬನ್ನಿ ಸ್ನೇಹಿತರೇ ಮನೆ ಮದ್ದನ್ನು ಬಳಸಿ ಹೇಗೆ ಗ್ಯಾಸ್ಟಿಕ್ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದು ಅನ್ನೋದನ್ನ ತಿಳಿಯೋಣ. ಮೊದಲನೆಯದ್ದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಹೇಗೆ ಆಗುತ್ತದೆ ಅನ್ನೋದನ್ನು ತಿಳಿಯೋಣ ಹೊಟ್ಟೆಯಲ್ಲಿ ಆಹಾರ ಜೀರ್ಣವಾಗುವುದರಿಂದ ಅದರಲ್ಲಿ ಬರುವಂತಹ ವಿಷಕಾರಿ ಗ್ಯಾಸ್ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಅನ್ನು ಉಂಟು ಮಾಡುತ್ತದೆ ಮತ್ತು ಈ ರೀತಿ ಗ್ಯಾಸ್ಟ್ರಿಕ್ ಸಮಸ್ಯೆಯಾದಲ್ಲಿ ಹೊಟ್ಟೆ ಉಬ್ಬರಿಸುವುದು ಮತ್ತು ಹೊಟ್ಟೆಯಲ್ಲಿ ಇರುವಂತಹ ಆ ಗ್ಯಾಸ್ ಅಥವಾ ಕೆಟ್ಟ ಗಾಳಿ ಹೃದಯದ ಮೇಲೆ ಒತ್ತಡವನ್ನು ಹೇರಿ ಕೆಲವೊಮ್ಮೆ ಹೃದಯದಲ್ಲಿ ಸ್ವಲ್ಪ ನೋವು ಕಂಡುಬರುತ್ತದೆ.

ಹೊಟ್ಟೆಯಲ್ಲಿ ಇರುವಂತಹ ಈ ಕೆಟ್ಟ ಗಾಳಿ ಅಥವಾ ವಿಷಕಾರಿ ಗ್ಯಾಸ್ ಕೆಲವೊಮ್ಮೆ ಬಾಯಿಯಿಂದ ಅಥವಾ ದೇಹದ ಬೇರೆ ಭಾಗಗಳಿಂದ ಆಚೆ ಹೋಗುತ್ತದೆ ಈ ಕಾರಣದಿಂದಾಗಿ ಜನರು ಗುಂಪಿನಲ್ಲಿ ಇರಲು ಹಿಂಜರಿಯುತ್ತಾರೆ ಆದ್ದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಇರುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .
ಗ್ಯಾಸ್ಟ್ರಿಕ್ ಸಮಸ್ಯೆಯಾಗಲು ಮತ್ತೊಂದು ಕಾರಣವೇನು ಅಂತ ಹೇಳೋದಾದರೆ ವ್ಯಕ್ತಿಯ ಆಹಾರ ಪದ್ಧತಿ ಸರಿ ಇಲ್ಲದಿದ್ದಾಗಲೂ ಕೂಡ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಸಮಯಕ್ಕೆ ಸರಿಯಾಗಿ ಊಟವನ್ನು ಮಾಡುವುದು ಮತ್ತು ಆಹಾರ ಪದ್ಧತಿಯನ್ನು ಸರಿಯಾದ ರೀತಿಯಲ್ಲಿ ಪಾಲಿಸಿಕೊಂಡು ಹೋಗುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ.

ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಮದ್ದು ಏನು ಅಂತ ಹೇಳೋದಾದರೆ ಮೊದಲನೆಯದಾಗಿ ಮೊಸರು ಹುಳಿ ಬಾರದಂಥ ಫ್ರೆಶ್ ಮೊಸರನ್ನು ಕಡೆದು ಮಜ್ಜಿಗೆ ಮಾಡಿಕೊಳ್ಳಬೇಕು ಅದನ್ನು ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಮತ್ತು ಹುಳಿ ಮೊಸರನ್ನ ಅಥವಾ ಹುಳಿ ಮಜ್ಜಿಗೆಯನ್ನು ಸೇವನೆ ಮಾಡಬಾರದು ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ .
ಗ್ಯಾಸ್ಟ್ರಿಕ್ ಸಮಸ್ಯೆಗೆ ಮತ್ತೊಂದು ಮನೆ ಮದ್ದು ಯಾವುದು ಅಂದರೆ ಬಾಳೆಗಿಡದ ಬಾಳೆದಿಂಡಿನಲ್ಲಿ ಬರುವಂಥ ರಸವನ್ನು ಕೂಡ ಸೇವನೆ ಮಾಡುವುದರಿಂದ ಈ ಸಮಸ್ಯೆ ದೂರ ಮಾಡಿಕೊಳ್ಳಬಹುದು. ಅಲ್ಲದ ರಸವನ್ನು ಬೆಲ್ಲದೊಂದಿಗೆ ಮಿಶ್ರಿತ ಮಾಡಿ ಸೇವನೆ ಮಾಡುವುದರಿಂದ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ.

ಬಿಸಿ ನೀರಿಗೆ ನಾಲ್ಕು ಚಮಚ ಒಣ ದ್ರಾಕ್ಷಿಯನ್ನು ಹಾಕಿ ರಾತ್ರಿ ನೆನೆಯಲು ಬಿಡಬೇಕು , ನಂತರ ಬೆಳಗ್ಗೆ ನೀರನ್ನು ಶೋಧಿಸಿ ಒಣ ದ್ರಾಕ್ಷಿಯನ್ನು ಹಿಂಡಿ ರಸವನ್ನು ತೆಗೆದು ಅದನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ .
ಈ ರೀತಿಯಾಗಿ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ಮನೆ ಮದ್ದನ್ನು ಮಾಡಿ ಕುಡಿಯುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು ಮತ್ತು ಮಾರುಕಟ್ಟೆಯಲ್ಲಿ ಸಿಗುವಂತಹ ಗ್ಯಾಸ್ಟ್ರಿಕ್ ಟ್ಯಾಬ್ಲೆಟ್ಸ್ಗಳನ್ನು ನುಂಗುವುದರಿಂದ ಯಾವುದೇ ರೀತಿಯ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಆದ್ದರಿಂದ ಮನೆ ಮದ್ದುಗಳನ್ನು ಬಳಸುವುದೇ ಉತ್ತಮ ಅಂತ ಹೇಳಬಹುದು.

ಕಾಮಕಸ್ತೂರಿ

ಕಾಮಕಸ್ತೂರಿ ಗೀಡ ಬಹಳ ಸುಗಂಧಭರಿತವಾಗಿರುತ್ತದೆ, ನೀವು ಕಾಮಕಸ್ತೂರಿಯ ಬೀಜಗಳನ್ನು ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ನಿಮಗೆ ಸಿಕ್ಕಾಪಟ್ಟೆ ಆರೋಗ್ಯಕರವಾದ ಲಾಭಗಳನ್ನು ಸೀಗುತ್ತವೆ, ಎನ್ನುತ್ತಾರೆ ಆರೋಗ್ಯ ತಜ್ಞರು. ಬನ್ನಿ ಕಾಮ ಕಸ್ತೂರಿ ಬೀಜ ದಿನನಿತ್ಯ ನಾವು ಖಾಲಿ ಹೂಟ್ಟೆಗೆ ಸೇವನೆ ಮಾಡುವುದರಿಂದ ಯಾವ ತರಹ ಆರೋಗ್ಯಕ್ಕೆ ಅನುಕೂಲ ಆಗುತ್ತದೆ ಎಂಬುವ ಸಂಪೂರ್ಣವಾದ ಮಾಹಿತಿಯನ್ನು ಮಾಹಿತಿ ಇಲ್ಲಿದೆ ನೋಡಿ.

ಕಮಾ ಕಸ್ತೂರಿಯಲ್ಲಿ ಫ್ಲೇವನಾಯ್ಡ್ಸ್ ಅಂಶ ಹೇರಳವಾಗಿರುತ್ತದೆ,ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಈ ಗೀಡ ಹೆಚ್ಚ್ಚಿಸುತ್ತದೆ,, ಕಾಮಕಸ್ತೂರಿ ಎಲೆಗಳು ಕೂಡ ಮನುಷ್ಯನ ದೇಹಕ್ಕೆ ತುಂಬಾ ಸಹಕಾರಿಯಾಗುತ್ತದೆ, ಅದು ಹೇಗೆ ಅಂತೀರಾ ನಿಮ್ಮ ದೇಹ ಏನಾದರೂ ದುರ್ಗದದಿಂದ ಯಾವ ಕಾರಣಕ್ಕೂ ವಾಸನೆ ಹೋಗುತ್ತಾ ಇಲ್ಲ ಅಂದರೆ ನೀವು ಈ ಕಾಮಕಸ್ತೂರಿಯ ಎಲೆಗಳನ್ನು ಜಜ್ಜಿ ಅದನ್ನು ನಿಮ್ಮ ಮನೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ದುರ್ಗಂಧದ ವಾಸನೆಯನ್ನು ಹೂಗಲಾಡಿಸುತ್ತದೆ.

ಕಾಮಕಸ್ತೂರಿಯ ಎಲೆಯ ರಸವನ್ನು ಚೆನ್ನಾಗಿ ಹಿಂಡಿ ಆ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ನೆಗಡಿಯ ಅಂಶವನ್ನು ತೆಗೆದುಹಾಕಬಹುದು ಹಾಗೂ ನಿಮಗೆ ಬರುವಂತಹ ಚಿಕ್ಕ ಜ್ವರವನ್ನು ಕೂಡ ಕಡಿಮೆ ಮಾಡುತ್ತದೆ, ಹಾಗೂ ಈ ಕಾಮಕಸ್ತೂರಿಯ ಎಲೆಗಳನ್ನು ಕಷಯವಾಗಿ ಮಾಡಿ ಕುಡಿದರೆ ದೂರ ಎನ್ನುವಂತಹ ರೋಗಕ್ಕೂ ಕೂಡ ಈ ಚಮನೆಮದ್ದಾಗಿದೆ.

ನಿಮಗೆ ಪದೇ ಪದೇ ಆಗುವಂತಹ ಬಾಯಾರಿಕೆಯನ್ನು ಕೂಡ ಈ ಕಾಮಕಸ್ತೂರಿ ಕಡಿಮೆ ಮಾಡಿಕೊಳ್ಳುತ್ತದೆ, ರಕ್ತಬೇದಿ, ವಾಂತಿ ಆಗುವುದು ಹೆಚ್ಚು ಇದಕ್ಕೆ ಕಾರಣ ಅವರ ದೇಹದಲ್ಲಿ ಇರುವಂತಹ ಅತಿಯಾದ ಉಷ್ಣಾಂಶ, ಕಮಾಕಸ್ತೂರಿ ಬೀಜಗಳನ್ನು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಳಸುತ್ತಾ ಬಂದರೆ ನಿಮ್ಮ ದೇಹ ಯಾವಾಗಲೂ ತಂಪಾಗಿರುತ್ತದೆ ಹಾಗೂ ಉಷ್ಣಾಂಶವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಬೀಜಗಳು ತುಂಬಾ ಸಹಕಾರಿಯಾಗುತ್ತವೆ.

ಸೋಮವಾರ, ಡಿಸೆಂಬರ್ 9, 2019

ಮಾವಿನ ಎಲೆ

ಬಿಲ್ವ ಪತ್ರೆ

ಹುರುಳಿ ಕಾಳು

ನೀರು ಕುಡಿಯುವ ನಿಗದಿತ ಸಮಯ

ಸೀತಾ ಫಲ

ಬೆಂಡೆಕಾಯಿ

ಅಂಗೈಲಿ ಆರೋಗ್ಯ

ಡಾರ್ಕ್ ಸರ್ಕಲ್

ಬೆಲ್ಲ

ವಾಲ್ನುಟ್ಸ್

ಉಪವಾಸದ ಮಹತ್ವ

ಸಾಸಿವೆಯ ಸೊಬಗು

ಪಿತ್ತಕ್ಕೆ ಜೀರಿಗೆ

ದಾಳಿಂಬೆ

ಹೊಳೆಯುವ ಹಲ್ಲುಗಳಿಗೆ

ಗಂಟಲು ನೋವು

ಸೀಳು ಕೂದಲಿಗೆ ಹಾಗಲಕಾಯಿ

ತಲೆದಿಂಬು ಇಲ್ಲದೆ ನಿದ್ರಿಸುವುದರ ಲಾಭಗಳು

ಒಣಕೆಮ್ಮು

ನೈಸರ್ಗಿಕ ನೋವು ನಿವಾರಕಗಳು

ಪಪ್ಪಾಯಿ ಎಲೆ

ರುದ್ರಾಕ್ಷಿ

ತಲೆ ನೋವಿಗೆ ಪರಿಹಾರಗಳು

ಕರಿಬೇವು

ಅಜೀರ್ಣ

ಕೊಬ್ಬರಿ ಎಣ್ಣೆ

ಎಳ್ಳು

ಕಿತ್ತಳೆ ಹಣ್ಣಿನ ಲಾಭಗಳು

ಅರೋಗ್ಯ ಕಾಯುವ ಹಾಲು

ಮೆಂತೆ ಸೊಪ್ಪು

ಗಂಟಲು ಕಿರಿಕಿರಿ

ಲೆಮನ್ ಗ್ರೀನ್ ಟೀ

ಹಸಿ ಆಲೂಗಡ್ಡೆ ಜ್ಯೂಸು

ರಾತ್ರಿ ಮಲಗುವ ಮುನ್ನ ಲವಂಗ

ಬಾಯಿ ಹುಣ್ಣು

ಹೂಕೋಸು

ಖರ್ಜೂರ

ಖಾಲಿ ಹೊಟ್ಟೆಗೆ ಎರಡು-ಮೂರು ಖರ್ಜೂರ ತಿನ್ನಿ, 

ಚಯಾಪಚಯ ಕ್ರಿಯೆಗೆ ಆರೋಗ್ಯಕರ ಉಪಹಾರ (ಬ್ರೇಕ್ ಫಾಸ್ಟ್) ಸೇವಿಸುವುದು ಅತ್ಯಗತ್ಯ. ದಿನವನ್ನು ಊಟದಿಂದ ಪ್ರಾರಂಭಿಸುವುದು ಉತ್ತಮವಲ್ಲ. ನಾವು ದೀರ್ಘ ಗಂಟೆಗಳ ನಿದ್ರೆಯಿಂದ ಎದ್ದ ನಂತರ ಎರಡು ಗಂಟೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ತಿಂಡಿ ಸೇವಿಸಬೇಕು ಎಂದು ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ. ಈ ಲೇಖನದಲ್ಲಿ, ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಲಾಗಿದೆ.

ರಕ್ತದೊತ್ತಡ ನಿಯಂತ್ರಿಸುತ್ತದೆ

ಖರ್ಜೂರದಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು, ಖನಿಜವು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಖರ್ಜೂರ ಸುಮಾರು 167 ಮಿಗ್ರಾಂ ಪೊಟ್ಯಾಶಿಯಂ ಹೊಂದಿರುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಪೊಟ್ಯಾಶಿಯಂ ಹೆಚ್ಚು. ಸಾಕಷ್ಟು ಪೊಟ್ಯಾಶಿಯಮ್ ತೆಗೆದುಕೊಳ್ಳದಿದ್ದರೆ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಖರ್ಜೂರದಲ್ಲಿರುವ ಮೆಗ್ನೀಶಿಯಮ್ ನಿಮ್ಮ ಹೃದಯ ಮತ್ತು ರಕ್ತನಾಳಗಳಲ್ಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದರ ಪರಿಣಾಮವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯಕ್ಕೆ

ಖರ್ಜೂರದಲ್ಲಿ ಐಸೊಫ್ಲೇವನ್ ಇರುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಯುಕೆ ಅಧ್ಯಯನದ ಪ್ರಕಾರ ಖರ್ಜೂರ ನಿಯಮಿತವಾಗಿ ಸೇವಿಸುವುದರಿಂದ ಪರಿಧಮನಿಯ ಹೃದಯ ಕಾಯಿಲೆ ಬರದಂತೆ ತಡೆಗಟ್ಟಿದೆ. ಫೈಬರ್ ತೂಕ ನಿರ್ವಹಣೆಗೆ ಸಹ ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಿಸಲು

ಇಸ್ರೇಲಿ ಅಧ್ಯಯನದ ಪ್ರಕಾರ ಆರೋಗ್ಯಕರ ವ್ಯಕ್ತಿಗಳು ಸಹ ಖರ್ಜೂರ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಮತ್ತು ಆಕ್ಸಿಡೇಟಿವ್ ಒತ್ತಡದ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರುತ್ತದೆ. ಖರ್ಜೂರದಲ್ಲಿ ಯಾವುದೇ ಕೊಲೆಸ್ಟ್ರಾಲ್ ಇರುವುದಿಲ್ಲ. ಅವು ಕಬ್ಬಿಣದಿಂದ ಕೂಡಿದ್ದು, ಬಾಳೆಹಣ್ಣಿಗಿಂತ ಹೆಚ್ಚು ಫೈಬರ್ ಹೊಂದಿರುತ್ತವೆ.

ಮೂಳೆಗಳನ್ನು ಆರೋಗ್ಯವಾಗಿಡಲು

ಖರ್ಜೂರದಲ್ಲಿ ತಾಮ್ರ, ಮೆಗ್ನೀಶಿಯಂ, ಸೆಲೆನಿಯಮ್ , ಮ್ಯಾಂಗನೀಸ್‌ ಸಮೃದ್ಧವಾಗಿದೆ. ಇವೆಲ್ಲವೂ ನಮ್ಮ ಎಲುಬುಗಳನ್ನು ಆರೋಗ್ಯವಾಗಿಡಲು ಮತ್ತು ಆಸ್ಟಿಯೊಪೊರೋಸಿಸ್ ನಂತಹ ಮೂಳೆ ಸಂಬಂಧಿತ ಕಾಯಿಲೆ ಗಳನ್ನು ತಡೆಯಲು ಸಹಾಯ ಮಾಡುತ್ತದೆ. ಖರ್ಜೂರ ಮೂಳೆಗಳಿಗೆ ಆರೋಗ್ಯಕರವಾದ ಬೋರಾನ್ ಸಹ ಒಳಗೊಂಡಿದೆ.

ಶಕ್ತಿ ಹೆಚ್ಚಿಸುತ್ತದೆ

ಖರ್ಜೂರದ ಹಣ್ಣು ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಂತಹ ನೈಸರ್ಗಿಕ ಸಕ್ಕರೆಗಳನ್ನು ಸಹ ಒಳಗೊಂಡಿದೆ.

ದೇಹದ ತೂಕ ಹೆಚ್ಚಲು

ಕುರಿಮರಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಖರ್ಜೂರ ಸೇವಿಸಿದ ನಂತರ ತೂಕ ಹೆಚ್ಚಾಗಿರುವುದು (30% ರಷ್ಟು) ಕಂಡುಬಂದಿದೆ. ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ ಮಾನವರು ಸಹ ಖರ್ಜೂರ ಸೇವಿಸಿದಾಗ ದೇಹದ ತೂಕ ಹೆಚ್ಚಾಗಿರುವುದು ಕಂಡುಬಂದಿದೆ.

ಪುರುಷರ ಫಲವತ್ತತೆ ಹೆಚ್ಚಲು

ಭಾರತೀಯ ಅಧ್ಯಯನದ ಪ್ರಕಾರ ಪುರುಷ ಫಲವತ್ತತೆ ಹೆಚ್ಚಲು ಖರ್ಜೂರ ಬಳಸಲಾಗುತ್ತದೆ. ಅತಿಸಾರ ಗುಣಪಡಿಸಲು ಕೆಲವು ವರದಿಗಳ ಪ್ರಕಾರ ಖರ್ಜೂರ ಸೇವಿಸುವುದರಿಂದ ಅತಿಸಾರ ಗುಣವಾಗುತ್ತದೆ. ಪೊಟ್ಯಾಶಿಯಮ್ ಖರ್ಜೂರ ದಲ್ಲಿ ಅಧಿಕವಾಗಿರುವುದರಿಂದ ಅತಿಸಾರ ಸುಧಾರಿಸಲು ಸಹಾಯ ಮಾಡುತ್ತದೆ.

ಕೊಲೊನ್ ಕ್ಯಾನ್ಸರ್ ತಡೆಗಟ್ಟಲು

ಖರ್ಜೂರ ಸೇವಿಸುವುದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಬೆಳವಣಿಗೆ ಕಡಿಮೆ ಮಾಡಬಹುದು. ಖರ್ಜೂರ ಸೇವನೆಯು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ಮಲ ಮೃದುವಾಗುತ್ತದೆ

ಅಧ್ಯಯನದ ಪ್ರಕಾರ ಖರ್ಜೂರವು ಮಲಬದ್ಧತೆ ಆಗದಂತೆ ಸಹಾಯ ಮಾಡುತ್ತದೆ. ಫೈಬರ್ ಅಸಮರ್ಪಕ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು. ಆದರೆ ಖರ್ಜೂರ ನಾರಿನ ಉತ್ತಮ ಮೂಲ ವಾಗಿರುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು. ಪ್ರತಿದಿನ ಕನಿಷ್ಠ 20 ರಿಂದ 35 ಗ್ರಾಂ ಫೈಬರ್ ತಿನ್ನುವುದರಿಂದ ನಿಮ್ಮ ಮಲ ಮೃದುವಾಗುತ್ತದೆ.

ಆರೋಗ್ಯಕರ ಗರ್ಭಧಾರಣೆಗೆ

ಖರ್ಜೂರ ಸೇವಿಸುವುದರಿಂದ ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಮೂಲವ್ಯಾಧಿಯನ್ನು ತಡೆಯುತ್ತದೆ. ಗರ್ಭಧಾರಣೆಯ ಕೊನೆಯ ತಿಂಗಳುಗಳಲ್ಲಿ ಗರ್ಭಾಶಯದ ಸ್ನಾಯುಗಳನ್ನು ಬಲಪಡಿಸಲು ಖರ್ಜೂರ ಸಹಾಯ ಮಾಡುತ್ತದೆ.

ಯಾವ ತರಹದ ಖರ್ಜೂರ ಒಳ್ಳೆಯದು? 

*ಖರ್ಜೂರವನ್ನು ಸಾಮಾನ್ಯವಾಗಿ ಕಿರಿದಾದ ಪೆಟ್ಟಿಗೆಗಳಲ್ಲಿ, ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಆದರೆ ನೀವು ಖರೀದಿಸುವಾಗ ತಾಜಾ, ಹೊಳಪುಳ್ಳ, ಮೃದುವಾಗಿರುವ, ಕೊಬ್ಬಿದ ತೇವಾಂಶ ಮತ್ತು ಒಡೆದ ಹಣ್ಣುಗಳನ್ನು ತೆಗೆದುಕೊಳ್ಳಿ. *ಖರ್ಜೂರ ಬಹಳ ಗಟ್ಟಿಯಾಗಿರಬಾರದು, ಅದರ ಮೇಲೆ ಹರಳು ಹರಳಾದ ಸಕ್ಕರೆ ಇರಬಾರದು. ಹೀಗೆ ಸಂಗ್ರಹಿಸಿ *ತಾಜಾ ಖರ್ಜೂರಗಳನ್ನು ರೆಫ್ರಿಜರೇಟರ್ ನಲ್ಲಿ, ಗಾಳಿಯಾಡದ ಪಾತ್ರೆಯಲ್ಲಿ ಇರಿಸಿದಾಗ 6 ತಿಂಗಳವರೆಗೆ ಸಂಗ್ರಹಿಸಬಹುದು. *ಒಣಗಿದ ಖರ್ಜೂರಗಳು, ದೀರ್ಘಾವಧಿ ಬಾಳಿಕೆ ಬರುತ್ತವೆ. 1 ವರ್ಷದವರೆಗೆ ಅದೇ ರೀತಿಯಲ್ಲಿ ಸಂಗ್ರಹಿಸಬಹುದು. ಖರ್ಜೂರಗಳನ್ನು ಗಾಳಿಯಾಡದ ಪ್ಲಾಸ್ಟಿಕ್ ಚೀಲ ಅಥವಾ ಪಾತ್ರೆಯಲ್ಲಿ ಇರಿಸಿದಾಗ ಹೆಚ್ಚು ದಿನ ಬರುತ್ತವೆ.

ವಿಜಯಕರ್ನಾಟಕ .