ಗುರುವಾರ, ಡಿಸೆಂಬರ್ 12, 2019

ಜ್ವರ ಬಂದಾಗ ತಕ್ಷಣ ಹೀಗೆ ಮಾಡಿದರೆ ಕಡಿಮೆ ಆಗುತ್ತದೆ.!!

ಸಾಮಾನ್ಯವಾಗಿ ದೇಹದ ಉಷ್ಣಾಂಶ ಹೆಚ್ಚಾದರೆ ಅದನ್ನು ಜ್ವರ ಅಂತ ಕರೆಯಲಾಗುತ್ತದೆ. ಆದರೆ ದೇಹದಲ್ಲಿ 37 ಡಿಗ್ರಿ ಸೆಲ್ಶಿಯಸ್ ಅಂಶವು ದೇಹದಲ್ಲಿ ಇದ್ದರೆ ಅದನ್ನು ಜ್ವರ ಎಂದು ಕರೆಯಲಾಗುತ್ತದೆ. 101 ಡಿಗ್ರಿ ಫ್ಯಾರನಿಟ್ ಉಷ್ಣಾಂಶ ಇದ್ದರೆ ಅದನ್ನು ಸಾಮಾನ್ಯ ಜ್ವರ ಎಂದು ಕರೆಯಲಾಗುತ್ತದೆ ಮತ್ತು ಸ್ನೇಹಿತರೇ ಇಷ್ಟು ಕಡಿಮೆ ಉಷ್ಣಾಂಶದಲ್ಲಿ ಜ್ವರ ಏನಾದರೂ ಬಂದರೆ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೆ ಹೋಗಬಾರದು. ಹೆಚ್ಚು ಮಾತ್ರೆ ನುಂಗುವುದರಿಂದ ದೇಹದ ಕೆಂಪು ರಕ್ತ ಕಣಗಳು ಕ್ಷೀಣಿಸುತ್ತಾ ಹೋಗುತ್ತದೆ. ಆದ್ದರಿಂದ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆ ಮದ್ದನ್ನು ಮಾಡಿ ಬಂದಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಲ್ಲಿ ಉತ್ತಮ ಆರೋಗ್ಯವನ್ನು ನಾವು ಪಡೆದುಕೊಳ್ಳಬಹುದು.

ಹಾಗಾದರೆ ಜ್ವರ ಬಂದಾಗ ನಾವು ಮನೆಯಲ್ಲಿ ಮಾಡಬಹುದಾದಂತಹ ಮನೆಮದ್ದುಗಳು ಯಾವುವು ಅಂತ ಹೇಳೋದಾದರೆ,

>> ಮೊದಲನೆಯದಾಗಿ ಜ್ವರ ಬಂದಾಗ ತಣ್ಣೀರಿನ ಬಟ್ಟೆ ಮಾಡಿಕೊಂಡು ಹಣೆಯ ಭಾಗದಲ್ಲಿ ಇಟ್ಟುಕೊಳ್ಳಬೇಕು. ಅರ್ಧ ಗಂಟೆಗೆ ಒಮ್ಮೆ ಬಟ್ಟೆಯನ್ನು ತಣ್ಣೀರಿನಲ್ಲಿ ನೆನೆಸಿ ಮತ್ತೊಮ್ಮೆ ಹಣೆಯ ಮೇಲೆ ಹಾಕಿಕೊಳ್ಳಬೇಕು. ಹೀಗೆ ಮಾಡುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಜ್ವರವೂ ಕೂಡ ಕಡಿಮೆಯಾಗುತ್ತದೆ.

>> ಜ್ವರ ಬಂದಾಗ ಯಾರೂ ಕೂಡ ಸ್ನಾನವನ್ನು ಮಾಡೋದಕ್ಕೆ ಹೋಗುವುದಿಲ್ಲ. ಹೀಗೆ ಜ್ವರ ಬಂದಾಗ ಬಿಸಿನೀರಿನ ಸ್ನಾನ ಮಾಡುವುದರಿಂದ ಉತ್ತಮ. ಇದರ ಬದಲು ಕಾಟನ್ ಟವೆಲ್ ಅನ್ನು ಬಿಸಿ ನೀರಿಗೆ ಹೆಚ್ಚಿ ಅದರಿಂದ ಮೈಯನ್ನು ಒರೆಸಿಕೊಂಡರು ಕೂಡ ಉತ್ತಮ. ಹೀಗೆ ಮಾಡುವುದರಿಂದ ನೀವು ಜ್ವರ ಬಂದಾಗಲೂ ಕೂಡ ಸ್ವಲ್ಪ ರಿಲ್ಯಾಕ್ಸ್ ಪಡೆದುಕೊಳ್ಳಬಹುದು.

>> ಜ್ವರ ಬಂದಾಗ ಹಣ್ಣಿನ ಜ್ಯೂಸ್ ಅಂದರೆ ವಿಟಮಿನ್ ಸಿ ಹೆಚ್ಚಾಗಿರುವಂತಹ ಹಣ್ಣುಗಳ ಜ್ಯೂಸ್ ಅಂದರೆ ಕಿತ್ತಳೆ ಹಣ್ಣಿನ ಜ್ಯೂಸ್, ಕಿವಿ ಹಣ್ಣಿನ ಜ್ಯೂಸ್, ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು ಮತ್ತು ಎಳನೀರನ್ನು ಕುಡಿಯುವುದರಿಂದ ತುಂಬಾನೇ ಪ್ರಯೋಜನ ಇದೆ ಮತ್ತು ಜ್ವರ ಆದಷ್ಟು ಬೇಗ ಕಡಿಮೆಯಾಗುತ್ತದೆ.

>> ಜ್ವರ ಬಂದಾಗ ಗಂಟೆಗೊಮ್ಮೆ ಬಿಸಿ ನೀರನ್ನು ಕುಡಿಯಬೇಕು. ಬಿಸಿ ನೀರು ಅಂದರೆ ಬೆಚ್ಚಗೆ ಇರಬಾರದು, ಕಾಫಿ ಟೀ ಕುಡಿಯುವಷ್ಟು ಬಿಸಿಯಾದರೂ ಇರಬೇಕು. ಹೀಗೆ ಕುಡಿಯುವುದರಿಂದ ಜ್ವರ ಬೇಗನೆ ಕಡಿಮೆಯಾಗುತ್ತದೆ.

ಜ್ವರ ಬಂದಾಗ ಕೆಲವೊಂದು ಮನೆ ಮದ್ದುಗಳನ್ನು ಮಾಡಿಕೊಳ್ಳಬಹುದು. ಅದೇನೆಂದರೆ ಒಂದು ಗ್ಲಾಸ್ ನೀರಿಗೆ ಸ್ವಲ್ಪ ಚಕ್ಕೆ ಪುಡಿ, ಸ್ವಲ್ಪ ಮೆಣಸಿನ ಪುಡಿ ಮತ್ತು ಸ್ವಲ್ಪ ಶುಂಠಿಯನ್ನು ಹಾಕಿ ಎಂಟು ತುಳಸಿ ಎಲೆಗಳನ್ನು ಹಾಕಿ ಕುದಿಸಿ ನಂತರ ಆ ನೀರನ್ನು ಕುಡಿಯುವುದರಿಂದ ಜ್ವರ ಬೇಗನೆ ಕಡಿಮೆಯಾಗುತ್ತದೆ.


ಮತ್ತೊಂದು ವಿಧಾನವು ಹೇಗೆ ಅಂದರೆ ಎರಡು ಲೀಟರ್ ನೀರನ್ನು ಕುದಿಸಬೇಕು. ನಂತರ ಅದಕ್ಕೆ ಐವತ್ತು ಗ್ರಾಂ ಶುಂಠಿಯನ್ನು ಜಜ್ಜಿ ಹಾಕಬೇಕು. ನಂತರ ನೀರನ್ನು ಕುದಿಯುವಾಗ ಎರಡು ಲೀಟರ್ ನೀರು ಅರ್ಧದಷ್ಟು ಆಗಬೇಕು. ಅಂದರೆ ಒಂದು ಲೀಟರ್ ನೀರಿನ ಸಮಕ್ಕೆ ಬರಬೇಕು. ನಂತರ ಇದನ್ನು ಊಟವಾದ ನಂತರ ತಿಂಡಿಯಾದ ಬಳಿಕ ಕುಡಿಯುವುದರಿಂದ ತುಂಬಾನೇ ಉಪಯುಕ್ತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ