ನಮ್ಮ ಹಿಂದೂ ಪುರಾಣದಲ್ಲಿ ಈ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ, ರಥಸಪ್ತಮಿಯ ದಿನದಂದು ಈ ಎಕ್ಕದ ಗಿಡದ ಎಲೆಗಳನ್ನ ಧರಿಸಿ ನದಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಮ್ಮ ಹಿಂದೂ ಪುರಾಣ ಹೇಳುತ್ತದೆ. ಬಿಳಿ ಎಕ್ಕದ ಗಿಡದ ಎಲೆಗಳನ್ನ ವಿಶೇಷವಾಗಿ ಗಣೇಶ ಪೂಜೆಗೆಂದು ಬಳಸುತ್ತಾರೆ, ಬಿಳಿ ಎಕ್ಕದ ಗಿಡ ಹೆಚ್ಚಾಗಿ ಕಂಡುಬರುವುದಿಲ್ಲ. ಈ ಎಕ್ಕದ ಗಿಡದ ಎಲೆಗಳನ್ನ ಆಗಿನ ಕಾಲದಲ್ಲಿ ಆಯುರ್ವೇದದ ಔಷಧವಾಗಿ ಬಳಸುತಿದ್ದರು.
ಈ ಗಿಡವು ನಮ್ಮ ದೇಹದ ಚರ್ಮ ಮತ್ತು ಮೂಳೆಗಳ ಸಮಸ್ಯೆಗಳಿಗೆ ರಾಮಬಾಣವಿದ್ದಂತೆ. ಈ ಗಿಡದ ಎಲೆಗಳಿಗೆ ಸ್ವಲ್ಪ ಉಪ್ಪು ಬೆರೆಸಿ ನುಣ್ಣಗೆ ರುಬ್ಬಿ ಮೂಳೆಗಳ ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಗಾಯಗಳಿದ್ದರೆ ಇದರ ಎಲೆಗಳನ್ನ ಒಣಗಿಸಿ ಅದನ್ನ ಪುಡಿ ಮಾಡಿಟ್ಟುಕೊಂಡು ಗಾಯಗಳ ಮೇಲೆ ಹಚ್ಚಿದರೆ ಎಂತಹ ಗಾಯಗಳಾಗಿದ್ದರು ಬೇಗ ಗುಣವಾಗುತ್ತವೆ.
ಈ ಗಿಡದ ಬೇರನ್ನ ನಾವು ಮಲಗುವ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಕೆಟ್ಟ, ಹಾಗೂ ಭಯ ಬೀಳಿಸುವಂತಹ ಕನಸುಗಳು ಬೀಳುವುದಿಲ್ಲ, ಹಾಗು ಹೀಗೆ ಮಾಡುವುದರಿಂದ ಗ್ರಹ ದೋಷಗಳು ಸಹ ನಿವಾರಣೆಯಾಗುತ್ತವೆ. ಪುರಾಣಗಳ ಪ್ರಕಾರ ಬಿಳಿ ಎಕ್ಕದ ಗಿಡದ ಬೇರಿನಲ್ಲಿ ಗಣಪತಿ ನೆಲೆಸಿದ್ದಾನೆ ಎಂಬುದಾಗಿದೆ, ಆದ್ದರಿಂದ ಬಿಳಿ ಎಕ್ಕದ ಗಿಡವನ್ನ ಹಿಂದೂಗಳು ಈಗಲೂ ಸಹ ಪೂಜೆ ಮಾಡುತ್ತಾರೆ. ಮನೆಯ ಮುಂದೆ ಬಿಳಿ ಎಕ್ಕೆಯ ಗಿಡ ಇದ್ರೆ ಯಾವುದೇ ರೀತಿಯ ವಾಸ್ತು ದೋಷ ಇದ್ರೆ ನಿವಾರಣೆಯಾಗುತ್ತದೆ. ಇನ್ನು ಬಿಳಿ ಎಕ್ಕೆಯ ಹೂವು ಮನೆಯ ಬಾಗಿಲಿಗೆ ತೋರಣವಾಗಿ ಕಟ್ಟುವುದರಿಂದ ಮನೆಯಲ್ಲಿನ ದೃಷ್ಟಶಕ್ತಿಗಳು ಮನೆಯಿಂದ ಹೊರಹೋಗುತ್ತವೆ. ಹೀಗೆ ಅನೇಕ ಉಪಯೋಗಗಳನ್ನು ಎಕ್ಕೆಯಿಂದ ಪಡೆಯಬಹುದಾಗಿದೆ.
ಈ ಗಿಡದ ಹಾಲು ವಿಷವಾದರೂ ಇದು ಸೌಂದರ್ಯಕ್ಕೆ ಬಹಳ ಉಪಯುಕ್ತಕಾರಿ. ಈ ಗಿಡದ ಎಲೆಯಿಂದ ಬರುವ ಹಾಲಿಗೆ ಸ್ವಲ್ಪ ಅರಿಶಿಣವನ್ನ ಬೆರೆಸಿ ಕಣ್ಣಿಗೆ ತಾಗದಂತೆ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಬೆವರು ಗುಳ್ಳೆಗಳಾಗಿದ್ದರೆ ಆ ಗುಳ್ಳೆಗಳಿಗೆ ಎಕ್ಕದ ಹಾಲನ್ನ ತಾಕಿಸಿದರೆ ಗುಳ್ಳೆಗಳು ಒಣಗುತ್ತವೆ. ನಮಗೆ ಗಾಯಗಳಾಗಿ ಹೆಚ್ಚು ರಕ್ತ ಬರುತ್ತಿದ್ದರೆ ಬೇಗ ಎಕ್ಕದ ಗಿಡದ ಹಾಲನ್ನ ಹಚ್ಚುವುದರಿಂದ ರಕ್ತ ಬರುವುದನ್ನ ತಡೆಯಬಹುದು. ಎಕ್ಕೆ ಗಿಡ ಹಾಲನ್ನು ಬಳಸುವಾಗ ಎಚ್ಚರ ಕಣ್ಣಿಗೆ ಬೀಳದಂತೆ ಕಾಳಜಿವಹಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ