ವಿಷ್ಯಕ್ಕೆ ಬರೋಣ ಮನೆಯಲ್ಲಿ ಅಷ್ಟೇ ಅಲ್ದೆ ಕೆಲ ರೈತರು ಬೆಳೆದಂತ ಬೆಳೆಗಳನ್ನು ಅಡುಗೆಗೆ ಬಳಸಲು ವರ್ಷವಿಡೀ ಹಾಗೆ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಅಂತವರಿಗೂ ಕೂಡ ಉಪಯೋಗಕಾರಿ ಇನ್ನು ಕೆಲವರು ಮನೆಯಲ್ಲಿ ಅಡುಗೆಗೆ ಸಂಬಂಧಿಸಿದ ದವಸ ಧಾನ್ಯಗಳನ್ನು ಹಲವು ತಿಂಗಳವರೆಗೆ ಇಟ್ಟಿರುತ್ತಾರೆ ಆದ್ರೆ ನೀವು ಇಡುವಾಗ ಈ ವಿಧಾನವನ್ನು ಅನುಸರಿಸಿದರೆ ಉತ್ತಮ. ಉದಾಹರಣೆಗೆ ಅಕ್ಕಿಯನ್ನು ಪ್ರತಿದಿನ ಬಳಸಲಾಗುತ್ತದೆ ಹಾಗಾಗಿ ಇದನ್ನು ಮನೆಯಲ್ಲಿ ತಿಂಗಳವರೆಗೆ ಹಾಗೆ ಶೇಖರಣೆ ಮಾಡಿಕೊಂಡಿರುತ್ತಾರೆ ಇದರಲ್ಲಿ ಹುಳಗಳು ಸಹ ಬೀಳುತ್ತವೆ, ಹಾಗಾಗಿ ಒಟ್ಟಾರೆಯಾಗಿ ಹುಳಗಳು ಬೀಳದಂತೆ ಬಹುದಿನದವರೆಗೆ ಇರಲು ಏನು ಮಾಡಬೇಕು ಅನ್ನೋದಾದರೆ
ಒಂದು ಹಿಡಿಯಷ್ಟು ಒಣಗಿದ ಕರಬೇವಿನ ಎಲೆಗಳನ್ನು ಪುಡಿಮಾಡಿ ಕೊಂಡು ಈ ಕರಬೇವಿನ ಪುಡಿ ಒಂದು ಕಪ್ ನಷ್ಟು ಇರಲಿ. ಇನ್ನು ಒಂದು ಕಪ್ ಪುಡಿ ಮಾಡಿದ ಬೆಳ್ಳುಳ್ಳಿ ಸಿಪ್ಪೆ ಹಾಗೂ ಅರ್ಧ ಕಪ್ ಲವಂಗವನ್ನು ಹುರಿದು ಪುಡಿ ಮಾಡಿಕೊಳ್ಳಬೇಕು. ಈ ಮೂರನ್ನು ಕೂಡ ಬೆರಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಬಿಸಿಲಿಗೆ 2 ದಿನಗಳಕಾಲ ಚನ್ನಾಗಿ ಓಣಗಿಸಿ. ಒಣಗಿಸಿದ ನಂತರ ಇದನ್ನು ಚಿಕ್ಕ ಚಿಕ್ಕ ಉಂಡೆಯಾಗಿ ಮಾಡಿಕೊಂಡು 2 ದಿನ ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ ಅವುಗಳನ್ನ ಒಂದು ತೆಳುವಾದ ಬಟ್ಟೆಯಲ್ಲಿ ಕಟ್ಟಿ ಅಕ್ಕಿ ಡಬ್ಬ ಅಥವಾ ಚೀಲದಲ್ಲಿ ಹಾಕಿಡಿ ಹೀಗೆ ನೀವು ಶೇಕರಣೆ ಮಾಡಿಟ್ಟ ಯಾವುದೇ ದವಸ ಧಾನ್ಯಗಳಲ್ಲಿ ಇದನ್ನು ಇಡುವುದರಿಂದ ಯಾವುದೇ ರೀತಿಯ ಹೂಳಲಾಗು ಬೀಳೋದಿಲ್ಲ. ಇದು ಹೆಚ್ಚು ಉಪಯೋಗಕಾರಿ ಆದ್ದರಿಂದ ನಿಮ್ಮ ಆತ್ಮೀಯರಿಗೂ ಕೂಡ ತಿಳಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ