ಬುಧವಾರ, ಸೆಪ್ಟೆಂಬರ್ 25, 2019

ಮನೆಮದ್ದು: ಸಿಕ್ಕಾಪಟ್ಟೆ ಕೆಮ್ಮಿದ್ರೆ, ಈ 'ಮನೆಔಷಧ' ಮಾಡಿ ಕುಡಿಯಿರಿ!

By Manu Published:Saturday, October 14, 2017, 23:40 [IST] ಸಾಮಾನ್ಯವಾಗಿ ವಾತಾವರಣದ ಬದಲಾಣೆಯಿಂದಾಗಿ, ಕೆಮ್ಮು, ಶೀತ, ತಲೆನೋವು ಕಾಡುವುದು ಸಹಜ, ಅದರಲ್ಲೂ ಪದೇ ಪದೇ ಬರುತ್ತಿರುವಂತಹ ಕೆಮ್ಮಿನಿಂದ ನೆಮ್ಮದಿ ಹಾಳಾಗುವುದು ಖಚಿತ. ಯಾಕೆಂದರೆ ಯಾರೊಂದಿಗಾದರೂ ಮಾತನಾಡಲು ಆರಂಭಿಸಿದರೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಯಾವುದೇ ಕೆಲಸ ಮಾಡುವಾಗ ಕೆಮ್ಮು ಬರುತ್ತದೆ. ಮಲಗಿದರೆ ಸರಿಯಾಗಿ ನಿದ್ರೆ ಕೂಡ ಹಾಳಾದ ಕೆಮ್ಮಿನಿಂದ ಬರುವುದಿಲ್ಲ ಎನ್ನುವ ದೂರುಗಳು ಬರುತ್ತಾ ಇರುತ್ತದೆ. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು? ಕೆಮ್ಮಿಗೆ ಹಲವಾರು ಮದ್ದುಗಳು ಇವೆ. ಆದರೆ ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇರುತ್ತದೆ. ಕೆಲವೊಂದು ಸಿರಪ್‌ಗಳನ್ನು ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಜಡತ್ವ ಮತ್ತು ನಿದ್ರೆಯ ಸಮಸ್ಯೆ ಬರಬಹುದು. ಇದರಿಂದ ಹೆಚ್ಚಿನವರು ಸಿರಪ್‌ ಸೇವನೆಯಿಂದ ದೂರ ಉಳಿಯುತ್ತಾರೆ. ಆದರೆ ಕೆಮ್ಮಿಗೆ ಕೆಲವೊಂದು ಮನೆಮದ್ದುಗಳು ಇವೆ. ಪ್ರತಿಯೊಂದು ಕಡೆಯು ನಿಮಗೆ ಕಿರಿಕಿರಿ ಉಂಟು ಮಾಡುವಂತಹ ಕೆಮ್ಮಿಗೆ ಒಳ್ಳೆಯ ಮನೆಮದ್ದನ್ನು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದು ಯಾವುದೆಂದು ಮುಂದೆ ಓದುತ್ತಾ ತಿಳಿಯಿರಿ.... Sponsored Explore beautiful Canberra… Singapore Airlines ಜೇನುತುಪ್ಪ ಮತ್ತು ದಾಲ್ಚಿನ್ನಿಯ ಕಷಾಯ ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿಯನ್ನು ಕೆಲವು ನಿಮಿಷಗಳ ಕಾಲ ಬೇಯಿಸಿದ ಬಳಿಕ ಒಲೆಯಿಂದ ಇಳಿಸಿ ಒಂದು ಲೋಟಕ್ಕೆ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ಸಾಧ್ಯವಾದಷ್ಟು ಬಿಸಿಯಾಗಿರುವಾಗಲೇ ಕುಡಿಯುವ ಮೂಲಕ ಕೆಮ್ಮಿಗೆ ಮತ್ತು ಶೀತಕ್ಕೆ ಶೀಘ್ರ ಉಪಶಮನ ದೊರಕುತ್ತದೆ. powered by Rubicon Project ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು ಶು೦ಠಿ, ಬೆಳ್ಳುಳ್ಳಿ, ಹಾಗೂ ಕರಿಮೆಣಸು ಜಜ್ಜಿದ ಶು೦ಠಿ, ಬೆಳ್ಳುಳ್ಳಿಯ ದಳಗಳು, ಹಾಗೂ ಸ್ವಲ್ಪ ಕರಿಮೆಣಸು ಅಥವಾ ಕಾಳುಮೆಣಸು - ಇವೆಲ್ಲವನ್ನೂ ಒ೦ದು ಲೋಟದಷ್ಟು ಕುದಿಯುತ್ತಿರುವ ನೀರಿನಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ, ಸುಮಾರು 15 ನಿಮಿಷ ಬಿಟ್ಟು ಕುಡಿಯಿರಿ. ಉತ್ತಮ ಫಲಿತಾಂಶಕ್ಕಾಗಿ ಈ ಸಿರಪ್ ಅನ್ನು ದಿನಕ್ಕೆರಡು ಬಾರಿ ಸೇವಿಸಿರಿ Sponsored High Performance Fat… indiahealthmantra.com ಸಾಕಷ್ಟು ನೀರು ಕುಡಿಯಿರಿ ಶೀತ ಮತ್ತು ಕೆಮ್ಮಿನ ಮೂಲಕ ನಮ್ಮ ದೇಹದಿಂದ ಸಾಕಷ್ಟು ನೀರು ಹೊರಹರಿಯುತ್ತದೆ. ಇದಕ್ಕೂ ಮುಖ್ಯವಾಗಿ ವೈರಸ್ಸುಗಳ ವಿರುದ್ಧ ಸೆಣೆಸಲು ನಮ್ಮ ಬಿಳಿರಕ್ತಕಣಗಳಿಗೆ ಹೆಚ್ಚಿನ ನೀರು ಬೇಕು. ಆ ಕಾರಣ ಸಾಧ್ಯವಾದರೆ ಬಿಸಿನೀರು, ಇಲ್ಲದಿದ್ದರೆ ಉಗುರುಬೆಚ್ಚನೆಯ ನೀರನ್ನು ಸ್ವಲ್ಪಸ್ವಲ್ಪವಾಗಿ ಕುಡಿಯುತ್ತಲೇ ಇರುವುದು ಒಳ್ಳೆಯದು. ತಣ್ಣನೆಯ ಅಥವಾ ಐಸ್ ನೀರು ಸರ್ವಥಾ ಸಲ್ಲದು. ಉಪ್ಪು+ ಬೆಳ್ಳುಳ್ಳಿ ಒಂದು ಲೋಟ ನೀರಿಗೆ ಕೆಲವು ಹರಳು ಉಪ್ಪು ಹಾಗೂ ಕೆಲವು ಎಸಳು ಬೆಳ್ಳುಳ್ಳಿಗಳನ್ನು ಜಜ್ಜಿ ಕುದಿಸಬೇಕು. ಸುಮಾರು ಐದು ನಿಮಿಷ ಕುದಿಸಿದ ಬಳಿಕ ಒಂದು ಚಮಚ ಅರಿಶಿನದ ಪುಡಿ ಸೇರಿಸಿ ಸೋಸಿದ ನೀರನ್ನು ಸಾಧ್ಯವಾದಷ್ಟು ಬಿಸಿಯಿರುವಾಗಲೇ ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುತ್ತದೆ. 12 Month AI and Machine Learning… GreatLearning Play Rummy & Never Miss Out Fun. Get Rs… Rummy Circle Recommended by Sponsored #1 Formula to Reduce Belly… www.purelyherbs.in ತುಳಸಿ+ಕರಿಮೆಣಸಲು ತುಳಸಿ, ಮತ್ತು ಕಾಳುಮೆಣಸನ್ನು ಅಥವಾ ಕರಿಮೆಣಸನ್ನು ಸಮಪ್ರಮಾಣದಲ್ಲಿ ಪುಡಿಮಾಡಿ, ಒಂದು ಇಂಚಿನಷ್ಟು ದೊಡ್ಡ ಶುಂಠಿಯನ್ನು ಜಜ್ಜಿ ಎಲ್ಲವನ್ನೂ ಒಂದು ಲೋಟ ನೀರಿನಲ್ಲಿ ಕುದಿಸಿ ಎಷ್ಟು ಸಾಧ್ಯವೋ ಅಷ್ಟು ಬಿಸಿಯಿರುವಾಗಲೇ ಕುಡಿಯುವ ಮೂಲಕ ಎಷ್ಟೇ ಗಟ್ಟಿಯಾದ ಕಫವಿದ್ದರೂ ಶೀಘ್ರ ಉಪಶಮನ ದೊರಕುತ್ತದೆ. ಕ೦ದು ಸಕ್ಕರೆ ಹಾಗೂ ಬಿಸಿನೀರು ಒ೦ದು ಲೋಟದಷ್ಟು ನೀರನ್ನು ಕುದಿಸಿರಿ. ನೀರು ಬಿಸಿಯಾಗಿರುವಾಗ, ಅದಕ್ಕೆ ಎರಡು ಚಮಚದಷ್ಟು ಕ೦ದು ಸಕ್ಕರೆಯನ್ನು ಸೇರಿಸಿರಿ. ಸಕ್ಕರೆಯು ನೀರಿನಲ್ಲಿ ಕರಗಲಿ. ನೀರು ಕೊಠಡಿಯ ಉಷ್ಣತೆಯನ್ನು ತಲುಪಿದಾಗ, ಕ೦ದು ಸಕ್ಕರೆಯುಕ್ತ ಈ ನೀರನ್ನು ನಿಧಾನವಾಗಿ ಕುಡಿಯಿರಿ. Sponsored ICICI Bank launches digital… ICICI Bank ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ ಬಟ್ಟಲೊ೦ದರಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿಮಾಡಿರಿ. ಉರಿಯನ್ನು ನ೦ದಿಸಿದ ಬಳಿಕ, ಬೆಳ್ಳುಳ್ಳಿಯ ಒ೦ದು ದಳವನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯ ರಸವು ಇನ್ನೂ ಬಿಸಿಯಾಗಿಯೇ ಇರುವ ವೇಳೆ, ಬೆಳ್ಳುಳ್ಳಿಯ ದಳವನ್ನು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಒ೦ದು ಲೋಟದಷ್ಟು ಬಿಸಿನೀರಿಗೆ ಸೇರಿಸಿರಿ ಹಾಗೂ ಇದಕ್ಕೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಈಗ ಈ ನೈಸರ್ಗಿಕವಾದ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ. ಬಾದಾಮಿ ಕೆಮ್ಮು ನಿವಾರಿಸಲು ಬಲು ಪ್ರಾಚೀನವಾದ ವಿಧಾನವೆಂದರೆ ಬಾದಾಮಿ ಅರೆದು ಸೇವಿಸುವುದು. ಸುಮಾರು ಏಳೆಂಟು ಬಾದಾಮಿಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಡಿ. ಮರುದಿನ ಸಿಪ್ಪೆ ಸುಲಿದು ನುಣ್ಣಗೆ ಅರೆಯಿರಿ. ಇದಕ್ಕೆ ಕೊಂಚ ಬೆಣ್ಣೆ ಮತ್ತು ಸಕ್ಕರೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ. Sponsored #AskUsAnything: Is… https://livingfoodz.com ಹಸಿಶುಂಠಿ ಅರ್ಧ ದೊಡ್ಡಚಮಚ ಹಸಿಶುಂಠಿಯನ್ನು ಜಜ್ಜಿ ಕೊಂಚ ಕಾಳುಮೆಣಸಿನ ಪುಡಿ ಹಾಗೂ ಒಂದು ದೊಡ್ಡ ಚಮಚ ಜೇನು ಮತ್ತು ಕೊಂಚ ಶಿರ್ಕಾ ಸೇರಿಸಿ. ಇವೆಲ್ಲವನ್ನೂ ಸುಮಾರು ಎರಡರಿಂದ ಮೂರು ದೊಡ್ಡಚಮಚ ನೀರು ಬೆರೆಸಿ ಈ ಪ್ರಮಾಣವನ್ನು ದಿನದಲ್ಲಿ ಮೂರು ಹೊತ್ತು ಸೇವಿಸಿ ಖಾಲಿ ಮಾಡಬೇಕು. ಇದರ ಬ್ಯಾಕ್ಟೀರಿಯಾ ನಿರೋಧಕ ಗುಣ ಹಲವು ರೀತಿಯ ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಕೆಮ್ಮಿನ ಒಂದು ಅಡ್ಡಪರಿಣಾಮವಾಗಿರುವ ಸೋಂಕನ್ನು ಹಸಿಶುಂಠಿ ನಿವಾರಿಸುವ ಕಾರಣ ಕೆಮ್ಮಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ. ವೀಳ್ಯದೆಲೆ ಕೆಲವು ವೀಳ್ಯದೆಲೆಗಳನ್ನು ನುಣ್ಣಗೆ ಅರೆದು ಎದೆಯ ಮೇಲೆ ಹಚ್ಚಿ. ಇದರಿಂದ ನಿಧಾನವಾಗಿ ಕೆಮ್ಮು ಕಡಿಮೆಯಾಗುತ್ತದೆ. ಕೆಮ್ಮು ಎದುರಾದರೆ ರೋಗಿ ಧೂಮಪಾನ, ಮಾಂಸಾಹಾರ, ಸಕ್ಕರೆ, ಟೀ, ಕಾಫಿ ಸಂಸ್ಕರಿತ ಆಹಾರಗಳಿಂದ ದೂರವಿದ್ದಷ್ಟೂ ಒಳ್ಳೆಯದು. Sponsored Now at Madame Tussauds:… Forbes India ಈರುಳ್ಳಿ ಈರುಳ್ಳಿಯನ್ನು ಹೆಚ್ಚಿ ಜಜ್ಜಿ ಹಿಂಡಿ ರಸವನ್ನು ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುವುದು ಮಾತ್ರವಲ್ಲ ಕಟ್ಟಿಕೊಂಡಿರುವ ಎದೆಯೂ ಸಡಿಲಗೊಳ್ಳುತ್ತದೆ. ಪ್ರತಿ ಆರು ಗಂಟೆಗಳಿಗೊಮ್ಮೆ ಒಂದರಿಂದ ಎರಡು ಚಿಕ್ಕ ಚಮಚ ಈರುಳ್ಳಿ ರಸವನ್ನು ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ. ಜೇನುತುಪ್ಪ ಹಾಗೂ ಗಿಡಮೂಲಿಕೆಯ ಚಹಾ ದಿನಕ್ಕೆರಡು ಬಾರಿ ಎರಡು ಕಪ್ ಗಳಷ್ಟು ಜೇನುತುಪ್ಪ ಮಿಶ್ರಿತ ಗಿಡಮೂಲಿಕೆಯ ಚಹಾದ ಸೇವನೆಯು ಕೆಮ್ಮನ್ನು ಹೋಗಲಾಡಿಸಲು ನೆರವಾಗುತ್ತದೆ. ಚಹಾ ಸೇವನೆಯ ಬಳಿಕ ಗ೦ಟಲಲ್ಲು೦ಟಾಗಬಹುದಾದ ತುರಿಕೆಯ ಅನುಭವವನ್ನು ಹೋಗಲಾಡಿಸಿಕೊಳ್ಳಲು ಬಿಸಿನೀರನ್ನು ಕುಡಿಯಿರಿ. Sponsored How to Make Cham Cham… https://livingfoodz.com ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ ಒಂದು ಲೋಟ ನೀರಿಗೆ ಕೆಲವು ಹರಳು ಉಪ್ಪು ಹಾಗೂ ಕೆಲವು ಎಸಳು ಬೆಳ್ಳುಳ್ಳಿಗಳನ್ನು ಜಜ್ಜಿ ಕುದಿಸಬೇಕು. ಸುಮಾರು ಐದು ನಿಮಿಷ ಕುದಿಸಿದ ಬಳಿಕ ಒಂದು ಚಮಚ ಅರಿಶಿನದ ಪುಡಿ ಸೇರಿಸಿ ಸೋಸಿದ ನೀರನ್ನು ಸಾಧ್ಯವಾದಷ್ಟು ಬಿಸಿಯಿರುವಾಗಲೇ ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುತ್ತದೆ. ನೈಸರ್ಗಿಕ ಸಿರಪ್ ತಯಾರಿಸಿಕೊಳ್ಳಿ ಒಂದ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿಕೊಂಡು ಅದಕ್ಕೆ ಅರಿಶಿನ ಹುಡಿ, ದಾಲ್ಚಿನ್ನಿ ಮತ್ತು ಕರಿಮೆಣಸನ್ನು ಹಾಕಿಕೊಳ್ಳಿ ಮತ್ತು ಇದನ್ನು ಕುದಿಯಲು ಬಿಡಿ. ಸರಿಯಾಗಿ ಕುದಿಸಿದ ಬಳಿಕ ಇದನ್ನು ಸೋಸಿಕೊಳ್ಳಿ. ಇದನ್ನು ಸೇವಿಸುವ ಮೊದಲು ಜೇನುತುಪ್ಪ ಸೇರಿಸಿ. ಇದು ಕೆಮ್ಮು ನಿವಾರಣೆಗೆ ಅತ್ಯುತ್ತಮ ಔಷಧಿ

ಉಗುರು ಬೆಚ್ಚಗಿನ ನೀರು ಸರಿಯಾಗಿ ಕುಡಿಯಿರಿ

ನೀರನ್ನು ಕುಡಿಯಿರಿ ದೇಹವನ್ನು ತೇವಾಂಶದಿಂದ ಇಡಲು ನೀರು ಕುಡಿಯುವುದು ಅಗತ್ಯ. ಬಿಸಿಯಾದ ಪಾನೀಯಗಳು ಲೋಳೆಯ ಸ್ರವಿಸುವಿಕೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಹುದು. ಅಲ್ಲದೆ ಕೆಮ್ಮು ಇರುವಂತಹ ಸಮಯದಲ್ಲಿ ನೀವು ತಂಪಾದ ಆಹಾರವನ್ನು ತ್ಯಜಿಸಬೇಕು. ಇದು ಶ್ವಾಸಕೋಶದ ದಾರಿಯನ್ನು ಒಣಗಿಸುವುದು ಮತ್ತು ಇನ್ನಷ್ಟು ಸೋಂಕನ್ನು ಉಂಟು ಮಾಡುವುದು.

ಹುಣಸೆಹಣ್ಣು

ಗರ್ಭಿಣಿ ಏಕೆ ಹುಣಸೆ ಹಣ್ಣು ತಿನ್ನಬೇಕು?

ಈಗಷ್ಟೇ ಮದುವೆಯಾದ ಹುಡುಗಿಯರೇನಾದರೂ, “ನಂಗೆ ಹುಳಿ ತಿನ್ಬೇಕು ಅನ್ನಿಸ್ತಿದೆ’ ಅಂದುಬಿಟ್ಟರೆ, ಎಲ್ಲರೂ ಕಣ್ಣರಳಿಸಿ ಕೇಳುವುದೊಂದೇ, “ಏನೇ, ಪ್ರಗ್ನೆಂಟಾ?’ ಅಂತ. ಗರ್ಭಿಣಿಯರಿಗೆ ಹುಣಸೆಹಣ್ಣು, ಮಾವಿನಕಾಯಿ, ಉಪ್ಪಿನಕಾಯಿಯಂಥ ಹುಳಿ ಪದಾರ್ಥಗಳನ್ನು ತಿನ್ನಬೇಕೂಂತ ಆಸೆ ಆಗೋದು ಸಹಜ. ಬಸುರಿ ಬಯಕೆಯನ್ನು ಒಂದೆರಡು ಬಾರಿ ಪೂರೈಸಿದರೂ, ಜಾಸ್ತಿ ಹುಳಿ ತಿನ್ನೋದು ಒಳ್ಳೇದಲ್ಲ ಅಂತಲೂ ಎಚ್ಚರಿಸುತ್ತಾರೆ ಹಿರಿಯರು. ಆದರೆ, ಗರ್ಭಿಣಿಯರು ಹುಣಸೆಹಣ್ಣು ತಿನ್ನುವುದರಿಂದ ನಷ್ಟಕ್ಕಿಂತ, ಲಾಭವೇ ಹೆಚ್ಚು ಅಂತಾರೆ ತಜ್ಞರು. ಹುಣಸೆಹಣ್ಣಿನ ಸೇವನೆಯಿಂದ ತಾಯಿ-ಮಗುವಿಗಿರುವ ಲಾಭಗಳೇನು ಗೊತ್ತಾ?
ಹುಣಸೆ ಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕವಾಗಿದ್ದು, ಗರ್ಭಿಣಿಯರಲ್ಲಿ ರಕ್ತ ಪರಿಚಲನೆ ಪ್ರಮಾಣವನ್ನು
ಬ್ಯಾಲೆನ್ಸ್‌ನಲ್ಲಿ ಇಡುತ್ತದೆ. ಆ ಮೂಲಕ ಅವಧಿ ಪೂರ್ವ ಹೆರಿಗೆಯಾಗುವುದನ್ನು ತಡೆಯಬಹುದು.
ಕಬ್ಬಿಣಾಂಶ ಅಧಿಕವಾಗಿರುವುದರಿಂದ ಮಗುವಿನ ತೂಕಕ್ಕೂ ಒಳ್ಳೆಯದು.
ಹುಣಸೆಹಣ್ಣಿನಲ್ಲಿರುವ ಪೊಟಾಶಿಯಂ ಅಂಶವು, ಗರ್ಭಿಣಿಯರ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ.
ಗರ್ಭಧಾರಣೆಯ ಮೊದಲ ಮೂರು ತಿಂಗಳಿನಲ್ಲಿ ಹುಣಸೆಹಣ್ಣು ಸೇವಿಸಿದರೆ, ಸುಸ್ತು, ವಾಂತಿಯಂಥ ಸಮಸ್ಯೆಗಳು ಕಾಡುವುದಿಲ್ಲ.
ವಿಟಮಿನ್‌ ಬಿ3, 4ಗಳನ್ನು ಒಳಗೊಂಡಿರುವ ಹುಣಸೆಹಣ್ಣು, ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಹುಣಸೆಹಣ್ಣು ಸೇವನೆ ಒಳ್ಳೆಯದು. ಆದರೆ, ಅದನ್ನು ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂಬುದನ್ನು ನೆನಪಿಡಿ.

ಕಾಲು

ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ,ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ ಪಾದಗಳ ಮೇಲೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಅದೇ ಪಾದಗಳಿಗೆ ವ್ಯಾಯಾಮ ಮಾಡುವುದರಿಂದ ನಮ್ಮ ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಎಂಬ ವಿಷಯ ಎಷ್ಟೋ ಮಂದಿಗೆ ತಿಳಿದೇ ಇಲ್ಲ.ಪ್ರತಿದಿನ ನೀವು ಯಾವಾಗಲೆಲ್ಲ ಫ್ರೀ ಇರ್ತೀರೋವಾಗ,ಟಿವಿ ನೋಡಿರ್ವಾಗ ಅಥವಾ ನ್ಯೂಸ್ ಪೇಪರ್ ಓದುವಾಗ ನಿಮ್ಮ ಪಾದಗಳನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿಗೆ ಇಟ್ಟು ಅದ್ದುವುದರಿಂದ ನಿಮ್ಮ ಆರೋಗ್ಯವನ್ನು ಇಮ್ಮಡಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳನ್ನು ಪಡ್ಕೊಬೋದು ಎಂದು ತಿಳಿದುಕೊಳ್ಳಲು ಮುಂದೆ ಓದಿ.

1. ಹಿಮ್ಮಡಿ ಒಡೆಯುವುದು ತಪ್ಪುತ್ತದೆ:
ಚಳಿಗಾಲದಲ್ಲಿ ಚರ್ಮ, ಪಾದದ ಹಿಮ್ಮಡಿ ಒಡೆದು ಅಸಹ್ಯವಾಗಿ ಕಾಣಿಸಿಕೊಳ್ಳುವುದು ಎಲ್ಲರಲ್ಲೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು –ಬಿಸಿ ನೀರಿನಲಿ ನಿಮ್ಮ ಪಾದವನ್ನು ಸುಮಾರು ಹದಿನೆದು ನಿಮಿಷಗಳಷ್ಟು ಕಾಲ ಅದ್ದಿಕೊಂಡಿದ್ದರೆ ಸಾಕು

2. ಶೀತ ಮತ್ತು ನೆಗಡಿಯ ಹತೋಟಿ:
ಶೀತ, ನೆಗಡಿ ಮತ್ತು ಕಫ ಸಮಸ್ಯೆಯಿಂದ ನೀವು ಬಳಲು ತ್ತಿದ್ದರೆ ನಿಮ್ಮ ಪಾದಗಳನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿನಲ್ಲಿಟ್ಟು ಮೂಗಿನ ಮೂಲಕ ಹಬೆಯನ್ನು ತೆಗೆದು ಕೊಳುವುದರಿಂದ ಬಹು ಬೇಗ ನಿಮ್ಮ ನಿಮ್ಮ ಕಟ್ಟಿದ ಮೂಗು, ಶೀತ, ನೆಗಡಿ ಸಮಸ್ಯೆಗಳು ಹತೋಟಿಗೆ ಬರುತ್ತವೆ.ಕಫ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

3. ಕುತ್ತಿಗೆ ನೋವಿನ ಶಮನ:
ಈಗ ಕುತ್ತಿಗೆ ನೋವು ಹಲವರಲ್ಲಿ ಕಂಡುಬರುತ್ತಿದೆ. ನರಮಂಡಲದ ಮೂಲ ನರಗಳು ಪಾದ ಮತ್ತು ಅಂಗೈನಲ್ಲೂ ಸಹ ಇರುವುದರಿಂದ ಪಾದವನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಅದ್ದಿಕೊಂಡರೆ ಕುತ್ತಿಗೆ ನೋವು ಮತ್ತು ಕುತ್ತಿಗೆಯ ಸೆಳೆತಗಳು ಮಾಯವಾಗುತ್ತದೆ.

4. ಒತ್ತಡದ ನಿವಾರಣೆ:
ಬಿಸಿ ನೀರಿನಲ್ಲಿ ನಮ್ಮ ಪಾದಗಳನ್ನು ಸುಮಾರು ಹದಿನೈದು ನಿಮಿಷಗಳ ಹೊತ್ತು ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಚುರುಕುಗೊಂಡು ಮಾನಸಿಕ ಮತ್ತು ದೈಹಿಕ ಒತ್ತಡವು ಕಡಿಮೆಯಾಗುತ್ತದೆ.

5. ತಲೆನೋವು ಕಡಿಮೆಯಾಗುತ್ತದೆ:
ಪಾದಗಳನ್ನ ಬಿಸಿ ನೀರಿನಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಅದ್ದಿದಾಗ ಪಾದಕ್ಕೆ ರಕ್ತ ಸಂಚಾರ ಹೆಚ್ಚಾಗುವುದರಿಂದ ಕತ್ತಿನ ಮತ್ತು ಬೆನ್ನಿನ ಸ್ನಾಯುಗಳು ಸಡಿಲವಾಗುತ್ತದೆ.ಹಾಗಾಗಿ ಒತ್ತಡದಿಂದ ಉಂಟಾದ ತಲೆನೋವು ದೂರವಾಗುತ್ತದೆ.

6. ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ:
ರಾತ್ರಿ ನೀವು ಮಲಗುವ ಮುಂಚೆ ಹದಿನೈದು ನಿಮಿಷಗಳ ಕಾಲ ನಿಮ್ಮ ಪಾದವನ್ನು ಬಿಸಿನೀರಿನಲ್ಲಿ ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ನಿಮ್ಮ ಒತ್ತಡ ಕಡಿಮೆಯಾಗಿ ನಿಮ್ಮ ನಿದ್ರಾ ಹೀನತೆಯ ಸಮಸ್ಯೆಗೆ ಪರಿಹಾರ ತಂದುಕೊಟ್ಟು ಮತ್ತು ನಿದ್ರೆಯು ಚೆನ್ನಾಗಿ ಬರುತ್ತದೆ.

7. ಹಿಮ್ಮಡಿ ನೋವಿಗೆ ಪರಿಹಾರ:
ನೀವು ಹೆಚ್ಚು ಕೆಲಸ ಮಾಡಿದಾಗ ನಿಮಗೆ ಹಿಮ್ಮಡಿ ನೋವು ಬರುವುದು ಸಾಮಾನ್ಯ.ಈ ರೀತಿ ಹಿಮ್ಮಡಿ ನೋವು ಬಂದಾಗ ನಿಮ್ಮ ಎರಡು ಪಾದಗಳನ್ನು ಬಿಸಿನೀರಿನಲ್ಲಿ ಅದ್ದಿಕೊಳ್ಳುವುದರಿಂದ ಹಿಮ್ಮಡಿ ನೋವು ಬಹು ಬೇಗ ಮಾಯವಾಗುತ್ತದೆ.

ನೆಲ್ಲಿಕಾಯಿ

NELLIKAAYI / AMLA / GOOSEBERRY- ನೆಲ್ಲಿಕಾಯಿ

೧.ಪಪ್ಪಾಯ ಹಣ್ಣಿಗೆ ನೆಲ್ಲಿಕಾಯಿ ಚಚ್ಚಿದ್ದು ಹಾಕಿ, ಅದಕ್ಕೆ ಬೇಕಾದರೆ ಸಕ್ಕರೆ ಹಾಕಿ ಸೇವನೆ ಮಾಡಿದರೆ ಕಣ್ಣಿಗೆ ಒಳ್ಳೆಯದು. ಇದರಿಂದ ಕಣ್ಣಿಗೆ ಬಲ ಮತ್ತು ಶಕ್ತಿ ಬರುತ್ತದೆ. ಕಣ್ಣುರಿ, ಮಂದದೃಷ್ಠಿ, ಕಣ್ಣಲ್ಲಿ ನೀರು ಬರುವುದು, ಕಣ್ಣಿನ ಆಯಾಸಕ್ಕೆ ಇದು ಒಳ್ಳೆಯ ಮದ್ದು.

೨.ನೆಲ್ಲಿಕಾಯಿ ಕಷಾಯದಲ್ಲಿ ಕೂದಲು ನೆನೆಸಿ, ತೊಳೆದರೆ,ಕೂದಲು ಉದ್ದ ಮತ್ತು ಹೊಳಪಾಗುತ್ತದೆ.
೩.ನೆಲ್ಲಿಕಾಯಿ ಪೇಸ್ಟ್ ನ್ನು ಬಿಸಿನೀರಿಗೆ ಹಾಕಿ, ತಲೆ ಬುಡಕ್ಕೆ ಹಚ್ಚಿ, ನೆನಯಲು ಬಿಟ್ಟು, ನಂತರ ತೊಳೆದು ಕೊಂಡರೆ ಸಹ ಒಳ್ಳೆಯ ಪರಿಣಾಮ ಬೀರುತ್ತದೆ.

ಸೋಂಪು

ಸೋಂಪು ಕಾಳನ್ನು ಪ್ರತಿದಿನ ಊಟವಾದ ಬಳಿಕ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.ಊಟದ ನಂತರ ತಿನ್ನುವುದರಿಂದ ಬಾಯಲ್ಲಿನ ವಾಸನೆಯೂ ಕಮ್ಮಿಯಾಗುತ್ತದೆ.

ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಅದರ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಅನೇಕ ತೊಂದರೆಗಳು ನಿವಾರಣೆಗಳಾಗುತ್ತವೆ.

ಸೋಂಪು ಅನ್ನು ನೀರಿನಲ್ಲಿ ಕುದಿಸಿ, ಅದರ ಡಿಕಾಕ್ಷನ್ ತಯಾರಿಸಿ, ಅದನ್ನು ಸೇವಿಸುವುದರಿಂದ ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಟ್ಟೆನೋವು ಮತ್ತು ಇತರೆ ತೊಂದರೆ ನಿವಾರಣೆ. ಪೀರಿಯಡ್ಸ್ ಕೂಡ ರೆಗ್ಯುಲರ್ ಆಗಿ ಇರುತ್ತದೆ.

ಇದು ಮಕ್ಕಳಿಗೂ ಒಳ್ಳೆಯದು. ಇದರಿಂದ ಅವರಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಆರೋಗ್ಯ ಮಾಹಿತಿ ಶೇರ್ ಮಾಡಿ

ವಾಂತಿ ತಡೆಯಲು ಒಂದಿಷ್ಟು ಮದ್ದು ಮತ್ತು ಅದಕ್ಕೆ ಉಪಯುಕ್ತ ಸಲಹೆ

ಪ್ರಯಾಣದ ವೇಳೆ ವಾಂತಿ ಮಾಡಿಕೊಳ್ಳುವುದು ನಿಮಗಷ್ಟೇ ಅಲ್ಲ, ನಮ್ಮ ಹಿಂದೆ, ಮುಂದೆ ಕೂತವರಿಗೂ ಕಿರಿಕಿರಿ. ಮುಂದಿನ ಸೀಟಿನಲ್ಲಿ ಕೂತ ವ್ಯಕ್ತಿ ವಾಂತಿ ಮಾಡಿಕೊಂಡರೆ ಕೆಲವೊಮ್ಮೆ ಹಿಂದಿನ ಸೀಟಿನವರಿಗೂ ಅದರ ಅನುಭವ ಆಗುವುದುಂಟು. ಇಂಥ ಕಿರಿಕಿರಿಯ ವಾಂತಿಯಿಂದ ಬಚಾವಾಗಲೆಂದೇ ಒಂದಷ್ಟು ಟಿಪ್ಸ್‌ಗಳನ್ನು ಇಲ್ಲಿ ಕೊಡಲಾಗಿದೆ.

-  ನೀವು ಪ್ರಯಾಣಕ್ಕೆ ಆಯ್ದುಕೊಳ್ಳುವ ವಾಹನ, ಸೀಟು ಕಿರಿಕಿರಿಯೆನಿಸದಂತಿರಲಿ. ಆದಷ್ಟು ಪ್ರಯಾಣದ ವೇಳೆ ರಿಲ್ಯಾಕ್ಸ್ ಆಗಿ ಕುಳಿತುಕೊಳ್ಳಿ. ದೀರ್ಘ ಪ್ರಯಾಣದ ವೇಳೆ ನಿಮ್ಮ ದೇಹಕ್ಕೆ ಹೆಚ್ಚು ದಣಿವಾಗದಂತೆ ನೋಡಿಕೊಳ್ಳಿ.

-  ಅಲರ್ಜಿಯ ಸಮಸ್ಯೆ ಇರುವವರು ಆದಷ್ಟು ಮುನ್ನೆಚ್ಚರಿಕೆ ವಹಿಸುವುದು ಒಳಿತು.
-  ವಾಂತಿಯ ಲಕ್ಷಣ ಕಂಡು ಬಂದ ಕೂಡಲೇ ತಾಜಾ ನಿಂಬೆ ಹಣ್ಣನ್ನು ತುಂಡರಿಸಿ ಅದರ ಪರಿಮಳವನ್ನು ಆಘ್ರಾಣಿಸಿ. ಅಥವಾ ಪ್ರಯಾಣದ ವೇಳೆ ಲಿಂಬೆ ನೀರನ್ನು ಬಾಟಲಿಯಲ್ಲಿಟ್ಟುಕೊಳ್ಳಿ. ವಾಂತಿಯ ಸೂಚನೆ ಸಿಕ್ಕ ತಕ್ಷಣ ಸೇವಿಸಿ.

-  ವಾಂತಿ ಸಮಸ್ಯೆ ಇರುವವರು ಪ್ರಯಾಣಕ್ಕೆ ಬಸ್‌ಗಿಂತ ರೈಲನ್ನು ಆಯ್ಕೆ ಮಾಡಿಕೊಳ್ಳುವುದೇ ಉತ್ತಮ. ಗುಂಡಿಗಳಿಂದ ಕೂಡಿದ ಅಥವಾ ಘಾಟ್‌ನಂಥ ತಿರುವಿನ ರಸ್ತೆಯ ಪ್ರಯಾಣದ ವೇಳೆ ಹೆಚ್ಚಿನವರಿಗೆ ವಾಂತಿಯ ಲಕ್ಷಣ ಕಾಣಿಸಿಕೊಳ್ಳುತ್ತದೆ. ರೈಲು ಪ್ರಯಾಣದಲ್ಲಿ ಇಂಥ ಸಮಸ್ಯೆಗಳಿರುವುದಿಲ್ಲ.
-  ಪ್ರಯಾಣಕ್ಕೂ ಮುನ್ನ ಮಿತಿಮೀರಿ ತಿನ್ನಬೇಡಿ. ಜಂಕ್ ಆಹಾರಗಳನ್ನೂ ಸೇವಿಸಬೇಡಿ. ಸಾಧ್ಯವಾದಷ್ಟು ಪ್ರಯಾಣಕ್ಕೆ ಎರಡು ಗಂಟೆ ಮೊದಲು ಊಟ ಮುಗಿಸಿ. ಇದು ತಿಂದ ಆಹಾರ ಜೀರ್ಣವಾಗಲು ಒಂದಷ್ಟು ಅವಕಾಶ ಮಾಡಿಕೊಡುತ್ತದೆ.

-  ದೂರದ ಪ್ರಯಾಣ ಮಾಡುತ್ತಿದ್ದರೆ ವೈದ್ಯರ ಸಲಹೆ
ಪಡೆದು ವಾಂತಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾತ್ರೆ ತೆಗೆದುಕೊಳ್ಳಿ.

-  ಕೆಲವು ವಾಹನಗಳಲ್ಲಿ ಹಿಮ್ಮುಖ ಸೀಟುಗಳಿರುತ್ತವೆ. ಅನೇಕರಿಗೆ ಇಂಥ ಸೀಟುಗಳಲ್ಲಿ ಕೂತರೆ ಕಿರಿಕಿರಿ ಆಗಿ ವಾಂತಿ ಆಗುವುದುಂಟು. ಇಂಥವರು ಆದಷ್ಟು ಈ ರೀತಿಯ ಸೀಟುಗಳಲ್ಲಿ ಕೂರದಿರುವುದೇ ಒಳಿತು.

-  ಶುಂಠಿ ಮತ್ತು ಜೇನುತುಪ್ಪ ವಾಂತಿಯನ್ನು ನಿಯಂತ್ರಿಸುವ ಅತ್ಯುತ್ತಮ ಮನೆ ಮದ್ದಾಗಿದೆ. ಸಾಧ್ಯವಿದ್ದರೆ ಶುಂಠಿ ಮಿಶ್ರಿತ ಚಹಾವನ್ನು ಸೇವಿಸಬಹುದು. ಇದಕ್ಕೆ ಜೇನುತುಪ್ಪವನ್ನೂ ಸೇರಿಸಬಹುದು. ಇದು ಸಾಧ್ಯವಾಗದಿದ್ದರೆ ಸಣ್ಣದೊಂದು ಶುಂಠಿ ಚೂರನ್ನು ಬ್ಯಾಗಿನಲ್ಲಿಟ್ಟುಕೊಳ್ಳಿ. ಪ್ರಯಾಣದ ವೇಳೆ ಇದನ್ನು ಬಾಯಿಗೆ ಹಾಕಿಕೊಳ್ಳಿ.

-  ಪ್ರಯಾಣದ ವೇಳೆ ಏನೋ ಕಿರಿಕಿರಿ ಅನಿಸುತ್ತದೆಯಾ? ಕಣ್ಣು ಮುಚ್ಚಿ ನಿದ್ರಿಸಲು ಪ್ರಯತ್ನಿಸಿ. ಇದರಿಂದ ವಾಂತಿಯನ್ನು ನಿಯಂತ್ರಿಸಬಹುದು.

-  ಪ್ರಯಾಣದ ಮೊದಲು ಹೊಟ್ಟೆತುಂಬ ಮಾಂಸಾಹಾರ ಸೇವಿಸುವುದು ಒಳ್ಳೆಯದಲ್ಲ. ಯಾಕೆಂದರೆ ಮಾಂಸಾಹಾರ ಜೀರ್ಣವಾಗಲು 72 ಗಂಟೆ ಬೇಕಾಗುತ್ತದೆ.
-  ಆದಷ್ಟು ಶುದ್ಧ ನೀರು, ಶುದ್ಧ ಆಹಾರ ಸೇವಿಸಿ.

ಸೋರೆಕಾಯಿ

1. ಸೋರೆಕಾಯಿಯನ್ನು ಬೇಯಿಸಿ ಜ್ಯೂಸ್ ಮಾಡಿ ಕುಡಿದರೆ ದೇಹ ತಂಪಾಗುವುದು.

2. ಮೂತ್ರ ಉರಿ ಸಮಸ್ಯೆ ಇರುವವರು ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ನಿಂಬೆರಸ ಸೇರಿಸಿ ದಿನಕ್ಕೆ ಒಂದು ಬಾರಿ ಕುಡಿದರೆ ತುಂಬಾ ಒಳ್ಳೆಯದು.

3. ಡಯಾರಿಯಾ ಉಂಟಾಗಿದ್ದರೆ ಅಥವಾ ಅಧಿಕ ಕರಿದ ಪದಾರ್ಥಗಳನ್ನು ತಿಂದಾಗ ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ಉಪ್ಪು ಹಾಕಿ ಕುಡಿಯುವುದು ಒಳ್ಳೆಯದು. ಮಧುಮೇಹಿಗಳು ಈ ಜ್ಯೂಸ್ ಕುಡಿಯುವುದು ಒಳ್ಳೆಯದು.

4. ಬೇಸಿಗೆಯಲ್ಲಿ ವಿಪರೀತ ಬೆವರು ಬರುವವರು ಈ ಜ್ಯೂಸ್ ಕುಡಿದರೆ ಒಳ್ಳೆಯದು.

ಬಾಳೆ ಎಲೆಯ ಉಪಯೋಗಗಳು

ಇದು ಆಧುನಿಕ ಕಾಲ ಹಾಗಾಗಿ ನಾವು ಬಳಸುವ ಪದ್ಧತಿಗಳಲ್ಲಿ ಆಧುನಿಕವಾಗಿ ಬಿಟ್ಟಿದೆ ಹಳೆಯ ವಿಚಾರಗಳನ್ನು ಮೂಲೆಗುಂಪು ಮಾಡಿಬಿಟ್ಟಿವೆ, ಬಾಳೆ ಎಲೆಯ ಊಟದ ಪದ್ಧತಿಯು ಅದರಲ್ಲಿ ಬಂದು ಎಂದರೆ ತಪ್ಪಾಗಲಾರದು, ಹಿಂದೂ ಧರ್ಮ ಅಥವಾ ಶಾಸ್ತ್ರಗಳಲ್ಲಿ ತಿಳಿಸಲಾ ದಂತೆ ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ಮಹತ್ವವನ್ನು ನೀಡಿದೆ, ಬಾಳೆಎಲೆ ಊಟದ ರುಚಿ ಬೇರೆ ಅದು ಸಾಂಪ್ರದಾಯಿಕ ಹೌದು, ಈಗಲೂ ಕೂಡ ಮದುವೆ ಸಮಾರಂಭಗಳಲ್ಲಿ ದೇವಾಲಯದ ಪ್ರಸಾದ ಭೋಜನ ಗಳಲ್ಲಿ ಅನ್ನಸಂತರ್ಪಣೆ ಗಳಲ್ಲಿ ಊಟವನ್ನು ಬಾಳೆ ಎಲೆ ಮೇಲೆ ನೀಡುವುದು.

ಮಾನವನು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಲು ಸಹಕಾರಿಯಾದ ಅಂಶಗಳು ಬಾಳೆ ಎಲೆಯಲ್ಲಿ ಹೇರಳವಾಗಿದೆ ಆದ್ದರಿಂದ ಬಾಳೆಯ ಎಲೆ ಮೇಲೆ ಬಿಸಿ ಆಹಾರ ಬಿದ್ದ ಕೂಡಲೇ ಅಂಶಗಳು ಆಹಾರದಲ್ಲಿ ಸೇರಿ ನಿಮ್ಮ ಹೊಟ್ಟೆಯನ್ನು ಸೇರುತ್ತದೆ, ನಾವು ತಿಂದ ಆಹಾರ ಬಲುಬೇಗನೇ ಜೀರ್ಣವಾಗುತ್ತದೆ.

ಬಾಳೆಯ ಎಲೆಗಳ ಮೇಲೆ ಬ್ಯಾಕ್ಟೀರಿಯಾಗಳಿಗೆ ಬದುಕಲು ಸಾಧ್ಯವಿಲ್ಲ, ಬಾಳೆ ಎಲೆಗಳು ಆಂಟಿ-ಬ್ಯಾಕ್ಟಿರಿಯಾ ಸತ್ವ ವನ್ನು ಹೊಂದಿದೆ, ಯಾವುದೇ ಆಹಾರವನ್ನು ಬಾಳೆಯ ಎಲೆ ಮೇಲೆ ಬಡಿಸಿ ತಿನ್ನುವುದರಿಂದ ಬ್ಯಾಕ್ಟೀರಿಯಾಗಳು ನಾಶವಾಗಿ ಆಹಾರ ಮುಕ್ತವಾಗುತ್ತದೆ, ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ಯಾರ್ದಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದಿಲ್ಲ.

ಚೆನ್ನೈನಲ್ಲಿರುವ ಆಯುರ್ವೇದ ತಜ್ಞರು ಹೇಳುವ ಪ್ರಕಾರ ದಲ್ಲಿ ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಬಿಳಿ ಕೂದಲು ಸಮಸ್ಯೆಗಳು ಕಾಡಲು ಶುರುವಾಗಿ ಇದ್ದರೆ ಅಂತವರು ಮನೆಯಲ್ಲಿ ಊಟ ಮಾಡಲು ಶುರುಮಾಡಿದರೆ ಬಿಳಿ ಕೂದಲಿನ ಸಮಸ್ಯೆ ಶಮನವಾಗುತ್ತದೆ.

ಬಾಳೆ ಎಲೆಯಲ್ಲಿ ನೀವು ಊಟ ಮಾಡಿದರೆ ಅದು ನಿಮ್ಮ ಆರೋಗ್ಯಕ್ಕೆ ತಂಪು, ನಾವು ಸಾಮಾನ್ಯವಾಗಿ ಗ್ಯಾಸ್ ಅನ್ನು ಬಳಸಿ ಅಡುಗೆ ಮಾಡುವುದರಿಂದ ಆಹಾರದಲ್ಲಿ ಸೇರಿ ಕೊಳ್ಳಬಹುದಾದ ಕೃತಕ ಉಷ್ಣವು ಇಲ್ಲಿ ತಂಪಾಗುತ್ತದೆ.

ಕೆಮ್ಮು ಮತ್ತು ನೆಗಡಿ


ಆಹಾರದಲ್ಲಿ ಹೆಚ್ಚು ಶುಂಠಿ ಹಾಗೂ ಮೆಣಸು ಬಳಸಿ. ನಿತ್ಯ ಕುಡಿಯುವ ನೀರಿಗೆ ತುಳಸಿ ಹಾಗೂ ಶುಂಠಿ ಹಾಕಿ ಕುದಿಸಿ, ಆರಿಸಿ ಕುಡಿಯಿರಿ. ಒಂದು ಚಿಟಿಕಿ ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ನೈಸರ್ಗಿಕವಾಗಿ ದೇಹದ ಉಷ್ಣತೆ ಪ್ರಮಾಣ ಹೆಚ್ಚಿಸುವ ಕಷಾಯ, ಸೂಪ್ ಕುಡಿಯಿರಿ. ಸ್ನಾನ ಮಾಡುವಾಗ ಕೂಡ ಒಂದೆರಡು ಹನಿ ನೀಲಗಿರಿ ತೈಲವನ್ನು ನೀರಿಗೆ ಬೆರೆಸಿ ಸ್ನಾನ ಮಾಡಿ.

• ಒಂದು ಬಟ್ಟಲು ನೀರಿಗೆ ಅರ್ದ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು ೧ ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಈ ಕಷಾಯಕ್ಕೆ ೧ ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೆಗಡಿ ಇಲ್ಲವಾಗುತ್ತದೆ.

• ಬಿಸಿಯಾದ ಹಸುವಿನ ಹಾಲಿಗೆ ಕಾಳುಮೆಣಸಿನಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.

• ತುಪ್ಪದಲ್ಲಿ ಹುರಿದ ಮೆಣಸನ್ನು ಸಮಭಾಗ ಸಕ್ಕರೆಯೊಂದಿಗೆ ಸೇರಿಸಿ ಚೆನ್ನಾಗಿ ಪುಡಿಮಾಡಿ ದಿನಕ್ಕೆ ೩ ಸಲ ಅರ್ಧ ಟೀ ಚಮಚ ತಿಂದರೆ ನೆಗಡಿ ಮತ್ತು ಕೆಮ್ಮು  ಕಡಿಮೆಯಾಗುತ್ತದೆ.

• ಚೆನ್ನಾಗಿ ಮಾಗಿದ ರಸಬಾಳೆ ಹಣ್ಣಿನೊಂದಿಗೆ ಅರ್ಧ ಟೀ ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಸೆದು ದಿನಕ್ಕೆ ಮೂರು  ಬಾರಿ ಸೇವಿಸಿದರೆ ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.

ಕಾಲುಂಗುರ ಧರಿಸುವ ಪ್ರಯೋಜನಗಳು


ಕಾಲುಂಗುರವನ್ನು ಬರಿ ಸಂಪ್ರಾಧ್ಯಾಕವಾಗಿ ಹಾಕಿಕೊಳ್ಳೋದು ಅಲ್ಲ, ಇದರಲ್ಲಿದೆ ಹತ್ತಾರು ಆರೋಗ್ಯಕಾರಿ ಉಪಯೋಗಗಳು. ಪ್ರತಿ ಮದುವೆಯಾದ ಹೆಣ್ಣು ಮಕ್ಕಳು ಕಾಲುಂಗುರವನ್ನು ಧರಿಸಿರುತ್ತಾರೆ ಹಾಗು ಇತ್ತೀಚಿನ ಜೀವನ ಶೈಲಿಗೆ ಕಳವರು ಕಾಲುಂಗುರ ಧರಿಸದೇ ಇರಬಹುದು ಆದ್ರೆ ಈ ವಿಚಾರ ತಿಳಿದ ಮೇಲೆ ತಪ್ಪದೆ ಬಳಸುತ್ತಾರೆ ಅನ್ಸತ್ತೆ.

ಭೂಮಿಯಿಂದ ಧ್ರುವೀಯ ಶಕ್ತಿಯನ್ನು ಹೀರಿಕೊಂಡು ದೇಹದಲ್ಲಿ ಹಾದು ಹೋಗಲು ಬೆಳ್ಳಿ ನೆರವಾಗುತ್ತದೆ. ದೇಹದಲ್ಲಿ ಇದು ಅನೇಕ ಬದಲಾವಣೆಗಳನ್ನು ತರುತ್ತದೆ. ಕಾಲುಂಗುರ ಹಾಕುವ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ.

ಈ ಬೆರಳಿಗೆ ಬೆಳ್ಳಿ ಕಾಲುಂಗುರವನ್ನು ಧರಿಸುವುದರಿಂದ ಮಹಿಳೆಯರ ಋತುಚಕ್ರ ಸಮಸ್ಯೆತಡೆಯಬಹುದು. ಇದರಿಂದ ಪಿರಿಯಡ್ಸ್ ಸರಿಯಾಗಿ ಆಗುತ್ತದೆ. ಕಾಲುಂಗುರ ಹಾಕುವುದರಿಂದ ರಕ್ತ ಸಂಚಾರ ಸಮಪರ್ಕಗೊಂಡು, ಗರ್ಭಕೋಶವನ್ನು ಆರೋಗ್ಯವಾಗಿಡಬಹುದು.ಕಾಲಿನ ಕೆಲವು ನರಗಳು ಉತ್ತೇಜನಗೊಳ್ಳುತ್ತದೆ. ಇದರಿಂದ ಸಂತಾನೋತ್ಪತ್ತಿಯೂ ಚೆನ್ನಾಗಿರುತ್ತದೆ.

ಕಾಲುಂಗುರದಿಂದ ಬೆರಳಿನ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ಅಲ್ಲಿರುವ ನರದ ಮೇಲೆ ಪ್ರೆಷರ್ ಬಿದ್ದು, ದೇಹಕ್ಕೆ ಮಸಾಜ್ ಸಿಕ್ಕಿಂತಾಗುತ್ತದೆ. ಇದು ಹಲವು ಸ್ತ್ರೀ ಸಂಬಂಧಿ ರೋಗಗಳಿಗೂ ರಾಮಬಾಣ. ದೇಹದ ಎಲ್ಲಾ ಅಂಗಾಗಳನ್ನೂ ರಿಫ್ರೆಶ್ ಆಗಲು ಕಾಲುಂಗುರ ಧರಿಸುವುದು ಉತ್ತಮ. ಕಾಲುಂಗುರ ಧರಿಸುವುದರಿಂದ ಮಹಿಳೆಯ ಹೊಟ್ಟೆಯಲ್ಲಿರುವ ಮಗುವೂ ಆರೋಗ್ಯವಾಗಿ ಬೆಳವಣಿಗೆಯಾಗುತ್ತದೆ.ಕಾಲುಂಗುರ ನಕರಾತ್ಮಕತೆ ನಿವಾರಿಸುತ್ತದೆ. ಇದು ಗರ್ಭಿಣಿಯರು ಮಾನಸಿಕವಾಗಿ ಆರೋಗ್ಯದಿಂದಿರಲು ಸಹಕರಿಸುತ್ತೆ.

ಬೆಳ್ಳಿ ವಸ್ತು ದೇಹವನ್ನು ತಂಪಾಗಿರಿಸುತ್ತವೆ. ಇದನ್ನು ಧರಿಸುವುದರಿಂದ ಪೊಸಿಟಿವ್‌ ಎನರ್ಜಿ ದೇಹದಲ್ಲಿ ಸಂಚಾರವಾಗುತ್ತದೆ. ಬ್ಲಡ್‌ ಪ್ರೆಶರ್‌ ಸಮಸ್ಯೆ ನಿರಾಳವಾಗಲು ಬೆಳ್ಳಿ ಕಾಲುಂಗುರ ನೆರವಾಗುತ್ತದೆ. ಬೆಳ್ಳಿ ಕಾಲುಂಗುರ ಇಷ್ಟೆಲ್ಲ ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ ಅನ್ನೋದನ್ನ ಕೆಲವು ಸಂಶೋಧನಾ ಅಧ್ಯಯನ ತಿಳಿಸಿದೆ.

ಮಾಟ,ಮಂತ್ರ,ವಶೀಕರಣ ಎಂದರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ? ಇಲ್ಲಿದೆ ಸರಳ ಉಪಾಯ

ಮಾಟ,ಮಂತ್ರ,ವಶೀಕರಣ ಎಂದರೇನು ಗೊತ್ತಾ…ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ?ಕೆಲವರು ಮಾಟ,ಮಂತ್ರ,ವಶೀಕರಣವನ್ನು ನಂಬೋದಿಲ್ಲಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ ಆದರೆ ಇನ್ನೂ ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ.ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದುಮನೆ ಮುಂದೆ ನಿಂಬೆಕಾಯಿ,ಕುಂಕುಮ,ಕುಂಬಳಕಾಯಿ ಇದ್ರೆ ಇವೆಲ್ಲಾ ಮಾಟದ ಸಂಕೇತನಿಮ್ಮ ಮನೆ ಮುಂದೆ ನಿಂಬೆಕಾಯಿ,ಕುಂಕುಮ,ಕುಂಬಳಕಾಯಿ ಯಾರಾದ್ರೂ ಇಟ್ಟು ಹೋದ್ರೆ ನೋ ಡೌಟ್ ನಿಮ್ಮ ಹಾಗೂ ನಿಮ್ಮ ಮನೆ ಮೇಲೆ ಮಾಟ ಮಂತ್ರ ವಶೀಕರಣವಾಗಿದೆ ಎಂದರ್ಥ,ಬನ್ನಿ ನೋಡೋಣ ಇನ್ಯಾವೆಲ್ಲಾ ಲಕ್ಷಣ ಇವೆ ಎಂದು.

1)ಮನೆಯವರೊಂದಿಗೆ ಆಗಾಗ ಜಗಳವಾಗುತ್ತಿದ್ದರೆ ಇದು ಮಾಟದ ಸೂಚನೆ

2)ಅಮಾವಾಸ್ಯೆ ಅಥವಾ ಹುಣ್ಣಿಮೆಗೆ ಗಾಬರಿಗೊಳ್ಳುವುದು

3)ವ್ಯವಹಾರದಲ್ಲಿ ಬದಲಾವಣೆಯಾಗುವುದು

4)ಹೆಚ್ಚಾಗಿ ಅನಾರೋಗ್ಯದಿಂದಿರುವುದು

5)ಒಂದೇ ವ್ಯಕ್ತಿಯ ಬಗ್ಗೆ ಪದೇ ಪದೇ ಯೋಚಿಸುವುದುನಾಶವಾಗುವುದು,

6)ಯೋಚಿಸದೆ ಯಾವುದೇ ವ್ಯಕ್ತಿಯ ಮೇಲೆ ವಿಶ್ವಾಸ ಇಡುವುದು

7)ಹೆಚ್ಚು ಕೋಪಗೊಳ್ಳುವುದು

8)ಹೆದರಿಕೆಯಾಗುವಂತಹ ಕನಸು ಬರುವುದು

9)ಮಾನಸಿಕವಾಗಿ ಅಸ್ಥಿರವಾಗಿರುವುದು

ಮಾಟಕ್ಕೆ ಪರಿಹಾರ ಹೀಗಿದೆ ನೋಡಿ

1)ಫಸ್ಟ್‌ ಏನೆಂದ್ರೆ ಹೊಮಿಯೋಪತಿ ಮೆಡಿಸನ್ ಮೊರೆ ಹೋಗುವುದು ಉತ್ತಮ.ಮಾಟವಾದಾಗ ಮನಸ್ಸು ದೇಹ ಎರಡೂ ಬಲಹೀನವಾಗುತ್ತದೆಹಾಗಾಗಿ ಈ ಟೈಂನಲ್ಲಿ ಯಾವುದೇ ಕಾರಣಕ್ಕೂ ನಿಶಕ್ತರಾಗಬಾರದು. ಸ್ಟ್ರೆಸ್ ಸಮಸ್ಯೆಗೆ ಔಷಧಿ ಸೇವಿಸಿ ಮುಂದೆ ಆಗಬಹುದಾದ ಸಮಸ್ಯೆ ಬಗ್ಗೆ ಹುಷಾರಾಗಿ ಹೆಜ್ಜೆ ಇಡಿ,ಹಾಗಾಗಿ ಈ ಟೈಂನಲ್ಲಿ ಯಾವುದೇ ಕಾರಣಕ್ಕೂ ನಿಶಕ್ತರಾಗಬಾರದು.ಸ್ಟ್ರೆಸ್ ಸಮಸ್ಯೆಗೆ ಔಷಧಿ ಸೇವಿಸಿ ಮುಂದೆ ಆಗಬಹುದಾದ ಸಮಸ್ಯೆ ಬಗ್ಗೆ ಹುಷಾರಾಗಿ ಹೆಜ್ಜೆ ಇಡಿ

2)ಇನ್ನೂ ಮಾಟ ಮಂತ್ರ ಏನಿದ್ರೂ ಜತೆಯಲ್ಲಿ ಇದ್ದವರೇ ಮಾಡಲು ಸಾಧ್ಯ.ಹಾಗಾಗಿ ಜತೆಯಲಿದ್ದವರ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದಿರಿಸಾಧ್ಯವಾದಷ್ಟು

3)ಇತರರ ಮನೆಯಲ್ಲಿ ತಿನ್ನುವುದು ಕುಡಿಯುವುದು ಬಿಟ್ಟುಬಿಡಿನಾಶವಾಗುವುದು.

4)ಮನೆ ಪಕ್ಕ ನಿಂಬೆಹಣ್ಣು, ಕುಂಕುಮ ಹಳದಿ ಇದ್ರೆ ಮೊದಲಿಗೆ ಅದರ ಮೇಲೆ ಸೆಗಣಿ ನೀರು ಚಿಮುಕಿಸಿ, ಬಳಿಕ ಅದನ್ನೆಲ್ಲಾ ನದಿಯಲ್ಲಿವಿಸರ್ಜಿಸಿ

5)ಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿ ಸಾಕಿ.ಇದರಿಂದ ಮಾಟದ ಪ್ರಭಾವ ನಿಮ್ಮಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಪರಿಣಾಮ ಬೀರುತ್ತದೆ

6)ಗಣೇಶನನ್ನು ನಂಬಿದ್ರೆ ಯಾವ ಮಾಟವೂ ನಿಮ್ಮತ್ತ ಸುಳಿಯುದಿಲ್ಲ. ದಿನನಿತ್ಯಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳ ಸಮರ್ಪಿಸಿ

7)ಮನೆಯಲ್ಲಿನ ದುಷ್ಟ ಶಕ್ತಿಯನ್ನ ಹೊರಹಾಕಲು ಉಪ್ಪು ಸಹಕಾರಿ. ಮನೆಯನ್ನ ಉಪ್ಪು ಬೆರೆಸಿದ ನೀರಿನಿಂದ ಉಜ್ಜಿ.ಇದರಿಂದ ದುಷ್ಟ ಶಕ್ತಿ ನಾಶವಾಗುವುದು

8)ಗಣೇಶ ವಿಗ್ರಹವನ್ನು ದೇವರ ಕೋಣೆಯಲ್ಲಿ ಸ್ಥಾಪಿಸೋ ಮುನ್ನಮೊದಲಿಗೆ ಆ ಜಾಗಕ್ಕೆ ಕಲ್ಲುಪ್ಪು ಹಾಕಿ. ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು

9)ನೀವು ಸ್ನಾನ ಮಾಡುವ ನೀರಿಗೂ ಉಪ್ಪು ಬೆರೆಸಿ ಸ್ನಾನ ಮಾಡಿ. ಇದರಿಂದ ನಿಮ್ಮ ಮೇಲೆ ಮಾಟವಾಗಿದ್ರೆ ಅದು ನಾಶವಾಗುವುದು

10)ಎರಡೂ ಕೈಗಳಲ್ಲಿ ಕಲ್ಲುಪ್ಪನ್ನ ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟು ಕೊಳ್ಳಿ. ಸ್ವಲ್ಪಸಮಯದ ನಂತರ ಉಪ್ಪನ್ನ ವಾಶ್‌ಬೇಸಿನ್‌ಗೆ ಎಸೆಯಿರಿ

11)ಮಾಟಕ್ಕೆ ಸಂಬಂಧಪಟ್ಟ ತಜ್ಞರ ಸಲಹೆ ಪಡೆದ್ರೆ ಇನ್ನೂ ಒಳ್ಳೆಯದು.