♦ ಮೊಸರಿಗೆ ಅನ್ನ, ಬೆಲ್ಲ ಸೇರಿಸಿ, ಊಟ ಮಾಡುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ.
♦ ನಿತ್ಯವೂ ಮೊಸರು ಉಪಯೋಗಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
♦ ಸಿಹಿ ಮೊಸರಿಗೆ ಕಾಳು ಮೆಣಸಿನ ಪುಡಿ ಮತ್ತು ಬೆಲ್ಲ ಅನ್ನದೊಂದಿಗೆ ಸೇರಿಸಿ ಸೇವಿಸಿದರೆ ಉರಿ ಮೂತ್ರದಿಂದಾದ ಉರಿ ಶಮನವಾಗುತ್ತದೆ.
♦ ಸಿಹಿ ಮೊಸರಿಗೆ ಸಕ್ಕರೆ ಬೆರೆಸಿ ಸೇವಿಸಿದರೆ ತೂಕ ವರ್ಧಿಸುತ್ತದೆ.
♦ ಮೊಸರು, ಅರಶಿನ, ಬೆಲ್ಲ ಸೇರಿಸಿ ಸೇವಿಸಿದರೆ ಮೂಗಿನ ತೊಂದರೆ ಕಡಿಮೆಯಾಗುತ್ತದೆ.
♦ ಅರಶಿನ ಕೊಂಬನ್ನು ತೇಯ್ದು, ಮೊಸರಿನೊಂದಿಗೆ ಸೇರಿಸಿ, ಬಾರಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ದತೆ ನಿವಾರಣೆಯಾಗುತ್ತದೆ.
♦ ಒಂದು ಚಮಚ ಮೆಂತ್ಯೆ ಕಾಳನ್ನು ಮೊಸರಿನಲ್ಲಿ ಸೇರಿಸಿ, ನುಂಗುವುದರಿಂದಲೂ ಮಲಬದ್ದತೆ ಪರಿಹಾರವಾಗುತ್ತದೆ.
♦ ಮೊಸರಿಗೆ ಅರಶಿನ ಬೆರೆಸಿ ಲೇಪಿಸುವುದರಿಂದ ತುರಿಕೆ, ಇಸುಬು, ನೀರುಗುಳ್ಳೆ ಇತ್ಯಾದಿ ಚರ್ಮ ರೋಗಗಳಲ್ಲಿ ಉತ್ತಮ ಪರಿಣಾಮ ಕಂಡುಬರುತ್ತದೆ.
ಮಾಹಿತಿ: ಆರೋಗ್ಯ ಮಾಹಿತಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ