ಮೆಕ್ಕೆಜೋಳದಲ್ಲಿ ಆರೋಗ್ಯ ಕಾಪಾಡುವ ಕಾರ್ಬೋಹೈಡ್ರೇಟ್ ಗಳು, ನಾರಿನಂಶ, ಫ್ಯಾಟಿಯಾಮ್ಲಗಳು ಸಮೃದ್ಧಿಯಾಗಿರುತ್ತದೆ.ಅದೇ ರೀತಿ ಪ್ರೋಟೀನ್ ಗಳು, ಪ್ರಾಸ್ಫರಸ್, ಮೆಗ್ನೀಷಿಯಂ, ಮ್ಯಾಂಗನೀಸ್, ಜಿಂಕ್,ತಾಮ್ರ,ಕಬ್ಬಿಣ, ಸೆಲಿನಿಯಂ ಸೇರಿದಂತೆ ವಿಟಮಿನ್ 'ಬಿ' ಇರುತ್ತದೆ.ಅವುಗಳಲ್ಲಿನ ಕೆರೋಟಿನಾಯಿಡ್ಸ್, ಪ್ಲೆವನಾಯಿಡ್ಸ್ ಶರೀರಕ್ಕೆ ತುಂಬಾ ಉಪಯುಕ್ತ.ತೂಕ ಕಡೆಮೆಯಾಗಬೇಕೆಂದರೆ ಬಿಸಿ ಮಾಡಿದ ಮೆಕ್ಕೆಜೋಳ ಬಳಸಬೇಕು.ಮಧುಮೇಹ ಬಾಧಿತರಿಗಿದು ಉತ್ತಮ ಆಹಾರ.ಮಕ್ಕಳಿಗೆ ಹುರಿದ ಜೋಳವನ್ನು ಅಲ್ಪಾಹಾರವಾಗಿ ಕೊಟ್ಟರೆ ಇದರಿಂದ ತಕ್ಷಣ ಶಕ್ತಿ ಸಿಗುತ್ತದೆ.ಇದನ್ನು ಹೆಚ್ಚು ತಿನ್ನುವವರಿಗೆ ನರಗಳ ಧೃಡತೆ, ಜೀರ್ಣ ಕ್ರಿಯೆ ಹೆಚ್ಚಾಗುತ್ತದೆ.ದೇಹದಲ್ಲಿ ಕೊಬ್ಬು ಕಡಿಮೆ ಕಡಿಮೆಯಾಗುತ್ತದೆ.ಇನ್ನೂ ಅನೇಕ ಸಮಸ್ಯೆಗಳಿಗೆ ಮೆಕ್ಕೆಜೋಳ ಉಪಯುಕ್ತವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ