ಮನೆಯಲ್ಲಿ ತುಳಸಿ ಇದ್ದಾರೆ ಇಷ್ಟೆಲ್ಲ ಲಾಭಗಳು ಸಿಗಲಿವೆ.!!
ತುಳಸಿ ಬರಿ ಪೂಜೆಗೆ ಮಾತ್ರವಲ್ಲ ಆರೋಗ್ಯಕ್ಕೂ ಇದರ ಸಹಕಾರ ತುಂಬಾನೇ ಇದೆ. ತುಳಸಿ ಮನೆಯಲ್ಲಿದ್ದರೆ ಎಷ್ಟೆಲ್ಲ ಪ್ರಯೋಜನ ಇದೆ ಅನ್ನೋದನ್ನ ನೋಡಣ ಬನ್ನಿ.
ಸಂಜೆಯಾದರೆ ಸಾಕು ಸೊಳ್ಳೆ ಕಾಟ ಎನ್ನುವವರ ಸಂಖ್ಯೆ ಹೆಚ್ಚು, ಅಂತವರು ಮನೆಯ ಸುತ್ತ ಹೆಚ್ಚು ಹೆಚ್ಚು ತುಳಸಿ ಗಿಡ ನೆಟ್ಟು ನೋಡಿ. ಇದರ ಸುವಾಸನೆಗೆ ಸೊಳ್ಳೆ ಹೆಚ್ಚು ಸುಳಿಯಲಾರದು. ಇದು ಗಾಳಿಯನ್ನು ಶುದ್ಧ ಹಾಗೂ ನಿರ್ಮಲಗೊಳಿಸುತ್ತದೆ.
ಬೇರೆ ಸಸ್ಯ ಸಂಕುಲಗಳಿಗೆ ಹೋಲಿಸಿದರೆ ತುಳಸಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ. ಅಂದಾಜು ದಿನಕ್ಕೆ 20 ಗಂಟೆಗಳ ಕಾಲ ಇದು ಆಮ್ಲಜನಕ ಹೊರಸೂಸುತ್ತವೆ ಎನ್ನಲಾಗಿದೆ. ಅಲ್ಲದೆ ಇದರಿಂದ ಹೊರಹೊಮ್ಮುವ ಸುವಾಸನೆ ನಮ್ಮ ಲಹರಿಯನ್ನು ಉತ್ತಮಗೊಳಿಸುತ್ತದೆ.
ಮೂತ್ರಪಿಂಡದ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ತುಳಸಿ ಎಲೆಯ ರಸದ ಜತೆಗೆ ಜೇನು ತುಪ್ಪ ಸೇರಿಸಿ ಕುಡಿಯುತ್ತಿದ್ದರೆ ಒಳ್ಳೆಯದು. ಹಾಗಾಗಿ ಮನೆಯ ಸುತ್ತ ತುಳಸಿ ಗಿಡ ನೆಡುವುದು ಉತ್ತಮ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ