ಬುಧವಾರ, ಸೆಪ್ಟೆಂಬರ್ 25, 2019

ಬೆಳ್ಳುಳ್ಳಿ

ನಾವು ಬಳಸುವ ಆಹಾರದಲ್ಲಿ ದೇಹದ ಆರೋಗ್ಯ ಕಾಪಾಡುವುದರಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು.ಪ್ರತಿದಿನ ಒಂದು ಆಪಲ್ ತಿನ್ನಿ ವೈದ್ಯರಿಂದ ದೂರವಿರಿ ಎಂದು ಹೇಳುವಂತೆ ಪ್ರತಿದಿನವೊಂದು ಇಡೀ ಬೆಳ್ಳುಳ್ಳಿ ಬಳಸಿ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತರಾಗಿ ಎಂದು ಹೇಳುತ್ತದೆ ವೈದ್ಯಕೀಯ ಶಾಸ್ತ್ರ.
ಸಾಕಷ್ಟು ಜನರು ಬೆಳ್ಳುಳ್ಳಿಯಿಂದ ದೂರ ಇರ್ತಾರೆ, ಆದರೆ ಆರೋಗ್ಯದ ದೃಷ್ಟಿಯಿಂದ ಹಾಗೆ ಮಾಡುವುದು ಸರಿಯಲ್ಲ. ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆ ಇರುವಾಗ ನುಂಗುವ ಅಭ್ಯಾಸ ಬೆಳೆಸಿ ಕೊಳ್ಳಿ. ಇಡೀ ಎಸಳು ನುಂಗಲು ಆಗದೆ ಇದ್ದಾರೆ ಅರ್ಧ ಮಾಡಿ ನುಂಗಿರಿ ಮಾತ್ರೆಯಂತೆ. ಹೀಗೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ. ಮುಖದ ಮೇಲಿರುವ ಮೊಡವೆ, ಅದರ ಕಲೆಗಳು ದೂರವಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳುಹತ್ತಿರ ಬರದು. ಅಸಿಡಿಟಿ, ಅಳರ್ಜಿಯಂತಹ ಸಮಸ್ಯೆಗಳಿಗೆ ರಾಮಬಾಣ.ಆದರೆ ತುಂಬಾ ಬೆವರುವ ಗುಣ ಉಳ್ಳವರು ಕಡಿಮೆ ಪ್ರಮಾಣದ ಬೆಳ್ಳುಳ್ಳಿ ಬಳಸಿದರೆ ಒಳ್ಳೆಯದು. ಅತಿಯಾದ ಸೇವನೆಯಿಂದ ಬೆವರು ದುರ್ಗ೦ಧಮಯವಾಗುತ್ತದೆ.

ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ.ಬಿ ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಮನೆ ಮದ್ದಿನಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು. ಹಾಲಿನಲ್ಲಿ ಬೆಳ್ಳುಳ್ಳಿ ಹಾಕಿ ಕುದಿಸಿ ಬಾಣಂತಿಯರಿಗೆ ಕೊಟ್ಟರೆ ಮೊಲೆ ಹಾಲು ಹೆಚ್ಚಾಗುವುದು. ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಸಾಧಾರಣವಾಗಿ ಬರುವ ಕಾಲು ನೋವು ಕಡಿಮೆಯಾಗುತ್ತದೆ. ರೋಗನಿರೋಧಕವಾಗಿ ಬೆಳ್ಳುಳ್ಳಿ ಉಪಯುಕ್ತ. ಕೊಲೆಸ್ಟ್ರಾಲ್ ಜಾಸ್ತಿಯಾಗಿದ್ದಾಗ ಬೆಳ್ಳುಳ್ಳಿಯುಕ್ತ ಮಾತ್ರೆಗಳ ಸೇವನೆ ಹಿತಕರ.

ಅಸಿಡಿಟಿ ಗ್ಯಾಸ್ಟ್ರಿಕ್ ತೊಂದರೆಗಳಿಗೆ ಒಳ್ಳೆಯದು. ವಾತ ಸಂಬಂಧಿ ಕೀಲುನೋವು, ವಯಸ್ಸಾದಾಗ ಬರುವ ಸಂಧಿವಾತಗಳಿಗೂ ಬೆಳ್ಳುಳ್ಳಿ ಸೇವನೆ ಹಿತಕರ. ಚಳಿಗಾಲದಲ್ಲಿ ಕಾಲು ಸೇದುವುದು ಸಾಮಾನ್ಯವಾದ ವಿಚಾರವಾಗಿದೆ. ಎರಡು ಹಿಲುಕು ಬೆಳ್ಳುಳ್ಳಿ ಒಂದು ಬಾರಿ ಜಜ್ಜಿ ಹೆಬ್ಬೆರೆಳಿನ ತಳಭಾಗದಲ್ಲಿಟ್ಟು ಒಂದು ಬಟ್ಟೆ ಕಟ್ಟಿದರೆ ಕಾಲು ಸೇದುವುದು ಕಡಿಮೆಯಾಗುತ್ತದೆ.

ಬೆನ್ನು ನೋವಿಗೆ ಬೆಳ್ಳುಳ್ಳಿ ಉತ್ತಮ ಮನೆ ಔಷಧಿ. ಎರಡು ಅಥವಾ ಮೂರು ಕಾಳು ಲವಂಗವನ್ನು ಬೆಳಗ್ಗೆ ಸೇವಿಸಿದರೆ ಉತ್ತಮ. ಬೆಳ್ಳುಳ್ಳಿ ಎಣ್ಣೆಯಿಂದ ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.

ಬೆಳ್ಳುಳ್ಳಿಯ ಹತ್ತು ಎಸಳುಗಳನ್ನು ಜಜ್ಜಿ ಮೂರನೆ ಒಂದು ಕಪ್ ಹಾಲಿನಲ್ಲಿ ಕುದಿಸಿ ನಿತ್ಯ ಬೆಳಿಗ್ಗೆ ಕುಡಿಯುವುದರಿಂದ ಆರಂಭಿಕ ಹಂತದ ಅಸ್ತಮಾವನ್ನು ನಿಯಂತ್ರಿಸಬಹುದು

ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ.

1. ಹಾಲಿನಲ್ಲಿ ಬೆಳ್ಳಿಳ್ಳಿ ಎಸಳನ್ನು ಕುದಿಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಲಭಿಸುತ್ತವೆ. ಫ್ಲೇವನಾಡ್ಸ್, ಎಂಜೈಮ್‌ಗಳು, ಆಂಟಿ ಆಕ್ಸಿಡೆಂಟ್‌ಗಳು, ಮಿನರಲ್‌ಗಳು, ವಿಟಮಿನ್‌ಗಳು ಲಭ್ಯವಾಗುತ್ತವೆ. ವಿಟಮಿನ್ ಎ, ಬಿ1, ಬಿ2, ಬಿ6, ಸಿ ವಿಟಮಿನ್, ಪೊಟ್ಯಾಷಿಯಂ, ಪ್ರೋಟೀನ್, ಕಾಪರ್, ಮ್ಯಾಂಗನೀಸ್, ಫಾಸ್ಪರಸ್, ಜಿಂಕ್, ಸೆಲೇನಿಯಂ, ಕ್ಯಾಲ್ಸಿಯಂನಂತಹ ಅನೇಕ ಪೋಷಕಾಂಶಗಳು ಈ ಮಿಶ್ರಣದ ಮೂಲಕ ನಮಗೆ ದೊರೆಯುತ್ತವೆ.

2. ಜ್ವರ ಕಾರಣ ಪ್ಲೇಟ್‍ಲೆಟ್‌ಗಳು ಕಡಿಮೆಯಾಗುತ್ತಿರುವವರಿಗೆ ಇದು ಒಳ್ಳೆಯ ಔಷಧ. ಪ್ಲೇಟ್‍ಲೆಟ್‌ಗಳು ವೇಗವಾಗಿ ಹೆಚ್ಚಾಗುತ್ತವೆ. ಇನ್‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ.

3. ಕೆಟ್ಟ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಒಳ್ಳೆಯ ಕೊಲೆಸ್ಟಾರಾಲ್ ಹೆಚ್ಚಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ. ಅದೇನು ಇಲ್ಲದವರಿಗೆ ಭವಿಷ್ಯದಲ್ಲಿ ಬರುವುದಿಲ್ಲ.

4. ಹಲವು ವಿಧದ ಕ್ಯಾನ್ಸರ್‌ಗಳನ್ನು ಗುಣಪಡಿಸುವ ಶಕ್ತಿ ಈ ಮಿಶ್ರಣಕ್ಕಿದೆ. ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಾಗಿ ಲಭ್ಯವಾಗುವ ಕಾಅಣ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ಕ್ಯಾನ್ಸರ್ ಕಣಗಳ ವೃದ್ಧಿ ಕಡಿಮೆಯಾಗುತ್ತದೆ.

5. ವಯಸ್ಸು ಹೆಚ್ಚಾದಂತೆ ಕಾಣಿಸಿಕೊಳ್ಳುವ ವೃದ್ದಾಪ್ಯ ಕುರುಹುಗಳು ಬರುವುದಿಲ್ಲ. ಆಂಟಿ ಏಜಿಂಗ್ ಲಕ್ಷಣಗಳು ಧಾರಾಳವಾಗಿ ಇರುವ ಕಾರಣ, ಯೌವ್ವನವಾಗಿ ಕಾಣಿಸುತ್ತಾರೆ.

6. ರಕ್ತದೊತ್ತಡ, ಮಧುಮೇಹ ಹಿಡಿತದಲ್ಲಿರುತ್ತದೆ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಲಿವರ್ ಶುದ್ಧವಾಗುತ್ತದೆ.

7. ಗಾಯಗಳಾಗಿರುವವರು ಈ ಮಿಶ್ರಣವನ್ನು ಕುಡಿದರೆ ಅವು ಶೀಘ್ರದಲ್ಲಿ ಗುಣಮುಖವಾಗುವ ಸಾಧ್ಯತೆಗಳಿವೆ. ಏಕೆಂದರೆ ಈ ಮಿಶ್ರಣದಲ್ಲಿ ಎರಡು ಪಟ್ಟು ಆಂಟಿ ಬಯೋಟಿಕ್ ಲಕ್ಷಣಗಳಿರುತ್ತವೆ.

8. ರಕ್ತ ಗಡ್ಡೆ ಕಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ.

9. ಚಯಾಪಚಯ ಪ್ರಕ್ರಿಯೆ ಚುರುಕಾಗುತ್ತದೆ. ಅಧಿಕ ತೂಕ ಇರುವವರಿಗೆ ತೂಕ ಕಡಿಮೆಯಾಗುತ್ತಾರೆ.

10. ಕೆಮ್ಮು, ಜ್ವರದಂತಹ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಗುಣವಾಗುತ್ತವೆ. ದಂತ ಸಂಬಂಧಿ ಸಮಸ್ಯೆಗಳು ಇದ್ದರೆ ದೂರವಾಗುತ್ತವೆ.

11. ಚರ್ಮಕ್ಕೆ ಆಗಿರುವ ಫಂಗಸ್ ಇನ್‌ಫೆಕ್ಷನ್ ಗುಣವಾಗುತ್ತದೆ. ಚರ್ಮ ಸೌಂದರ್ಯ ಉತ್ತಮಗೊಳ್ಳುತ್ತದೆ. ಮೊಡವೆಗಳು ಬರುವುದಿಲ್ಲ.

ಕ್ರಪೆ : ಹಿತ್ತಲಮದ್ದು ಬ್ಲಾಗ್ಸ್ಪಾಟ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ