ಇದು ಆಧುನಿಕ ಕಾಲ ಹಾಗಾಗಿ ನಾವು ಬಳಸುವ ಪದ್ಧತಿಗಳಲ್ಲಿ ಆಧುನಿಕವಾಗಿ ಬಿಟ್ಟಿದೆ ಹಳೆಯ ವಿಚಾರಗಳನ್ನು ಮೂಲೆಗುಂಪು ಮಾಡಿಬಿಟ್ಟಿವೆ, ಬಾಳೆ ಎಲೆಯ ಊಟದ ಪದ್ಧತಿಯು ಅದರಲ್ಲಿ ಬಂದು ಎಂದರೆ ತಪ್ಪಾಗಲಾರದು, ಹಿಂದೂ ಧರ್ಮ ಅಥವಾ ಶಾಸ್ತ್ರಗಳಲ್ಲಿ ತಿಳಿಸಲಾ ದಂತೆ ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ಮಹತ್ವವನ್ನು ನೀಡಿದೆ, ಬಾಳೆಎಲೆ ಊಟದ ರುಚಿ ಬೇರೆ ಅದು ಸಾಂಪ್ರದಾಯಿಕ ಹೌದು, ಈಗಲೂ ಕೂಡ ಮದುವೆ ಸಮಾರಂಭಗಳಲ್ಲಿ ದೇವಾಲಯದ ಪ್ರಸಾದ ಭೋಜನ ಗಳಲ್ಲಿ ಅನ್ನಸಂತರ್ಪಣೆ ಗಳಲ್ಲಿ ಊಟವನ್ನು ಬಾಳೆ ಎಲೆ ಮೇಲೆ ನೀಡುವುದು.
ಮಾನವನು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಲು ಸಹಕಾರಿಯಾದ ಅಂಶಗಳು ಬಾಳೆ ಎಲೆಯಲ್ಲಿ ಹೇರಳವಾಗಿದೆ ಆದ್ದರಿಂದ ಬಾಳೆಯ ಎಲೆ ಮೇಲೆ ಬಿಸಿ ಆಹಾರ ಬಿದ್ದ ಕೂಡಲೇ ಅಂಶಗಳು ಆಹಾರದಲ್ಲಿ ಸೇರಿ ನಿಮ್ಮ ಹೊಟ್ಟೆಯನ್ನು ಸೇರುತ್ತದೆ, ನಾವು ತಿಂದ ಆಹಾರ ಬಲುಬೇಗನೇ ಜೀರ್ಣವಾಗುತ್ತದೆ.
ಬಾಳೆಯ ಎಲೆಗಳ ಮೇಲೆ ಬ್ಯಾಕ್ಟೀರಿಯಾಗಳಿಗೆ ಬದುಕಲು ಸಾಧ್ಯವಿಲ್ಲ, ಬಾಳೆ ಎಲೆಗಳು ಆಂಟಿ-ಬ್ಯಾಕ್ಟಿರಿಯಾ ಸತ್ವ ವನ್ನು ಹೊಂದಿದೆ, ಯಾವುದೇ ಆಹಾರವನ್ನು ಬಾಳೆಯ ಎಲೆ ಮೇಲೆ ಬಡಿಸಿ ತಿನ್ನುವುದರಿಂದ ಬ್ಯಾಕ್ಟೀರಿಯಾಗಳು ನಾಶವಾಗಿ ಆಹಾರ ಮುಕ್ತವಾಗುತ್ತದೆ, ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ಯಾರ್ದಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದಿಲ್ಲ.
ಚೆನ್ನೈನಲ್ಲಿರುವ ಆಯುರ್ವೇದ ತಜ್ಞರು ಹೇಳುವ ಪ್ರಕಾರ ದಲ್ಲಿ ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಬಿಳಿ ಕೂದಲು ಸಮಸ್ಯೆಗಳು ಕಾಡಲು ಶುರುವಾಗಿ ಇದ್ದರೆ ಅಂತವರು ಮನೆಯಲ್ಲಿ ಊಟ ಮಾಡಲು ಶುರುಮಾಡಿದರೆ ಬಿಳಿ ಕೂದಲಿನ ಸಮಸ್ಯೆ ಶಮನವಾಗುತ್ತದೆ.
ಬಾಳೆ ಎಲೆಯಲ್ಲಿ ನೀವು ಊಟ ಮಾಡಿದರೆ ಅದು ನಿಮ್ಮ ಆರೋಗ್ಯಕ್ಕೆ ತಂಪು, ನಾವು ಸಾಮಾನ್ಯವಾಗಿ ಗ್ಯಾಸ್ ಅನ್ನು ಬಳಸಿ ಅಡುಗೆ ಮಾಡುವುದರಿಂದ ಆಹಾರದಲ್ಲಿ ಸೇರಿ ಕೊಳ್ಳಬಹುದಾದ ಕೃತಕ ಉಷ್ಣವು ಇಲ್ಲಿ ತಂಪಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ