ಬೆಲ್ಲದಲ್ಲಿ ನಿಮ್ಮ ಮುಖ ಹಾಗು ಕೂದಲಿಗೆ ಸಂಬಂದಿಸಿದ ಎಷ್ಟೊಂದು ಲಾಭಗಳಿವೆ ಗೊತ್ತಾ…?
ಹೌದು ಸಾಮಾನ್ಯವಾಗಿ ಬೆಲ್ಲ ಅಂದ್ರೆ ಕೇವಲ ಸಿಹಿ ಅಡುಗೆಗೆ ಅಂತ ಎಷ್ಟೋ ಮಂದಿ ತಿಳಿದುಕೊಂಡಿದ್ದಾರೆ ಆದ್ರೆ ಈ ಬೆಲ್ಲ ಸಿಹಿ ತಿಂಡಿಗೂ ಹೌದು ಮತ್ತು ಮತ್ತು ನಿಮ್ಮ ಮುಖ ಹಾಗು ಕೂದಲಿನ ಅಂದಕ್ಕೂ ಹೌದು.
ಇದೇನಪ್ಪ ಬೆಲ್ಲ ಮುಖ ಮತ್ತು ಕೂದಲಿನ ಅಂದಕ್ಕೆ ಬಳಕೆ ಆಗುತ್ತಾ ಇದಕ್ಕೆ ಇಲ್ಲಿದೆ ನೋಡಿ ಉತ್ತರ.
ಮುಖದ ಮೇಲಿನ ಕಪ್ಪು ಕಲೆ ಹಾಗು ಮೊಡವೆ ಗುಳ್ಳೆಗೆ:
ನಿಯಮಿತವಾಗಿ ಬೆಲ್ಲ ಸೇವನೆ ಮಾಡುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಹಾಗೂ ಪಿಂಪಲ್ ನಿವಾರಣೆಯಾಗುತ್ತವೆ. ಬೆಲ್ಲವನ್ನು ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಬೇಕು. ಬೆಲ್ಲಕ್ಕೆ ಒಂದು ಚಮಚ ಟೋಮ್ಯಾಟೊ ರಸ, ನಿಂಬೆ ರಸ, ಗ್ರೀನ್ ಟೀ ಬೆರೆಸಿ ಮುಖಕ್ಕೆ ಹಚ್ಚಿ. 15 ನಿಮಿಷದ ನಂತರ ತೊಳೆಯಿರಿ.
ಮುಖದ ಸುಕ್ಕು ನಿವಾರಣೆ :
ವಯಸ್ಸು ಹೆಚ್ಚಾದಂತೆ ಮುಖದಲ್ಲಿ ಸುಕ್ಕು ಕಾಣಿಸುತ್ತದೆ. ಬೆಲ್ಲದಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗಿರುತ್ತದೆ. ಅದು ಮುಖದ ಸುಕ್ಕು ನಿವಾರಣೆಯಲ್ಲಿ ಸಹಾಯ ಮಾಡುತ್ತದೆ. ಪ್ರತಿದಿನ ಬೆಲ್ಲ ಸೇವನೆ ಮಾಡಿದರೆ ಸುಕ್ಕು ನಿವಾರಣೆಯಾಗುತ್ತದೆ. ವಯಸ್ಸು ಸಹ ಯಂಗ್ ಆದಂತೆ ಕಾಣಿಸುತ್ತದೆ.
ಸುಂದರವಾದ ಕೂದಲು :
ಬೆಲ್ಲ ಕೂದಲು ದಪ್ಪವಾಗಿ ಹಾಗೂ ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಮುಲ್ತಾನಿ ಮಿಟ್ಟಿ, ಮೊಸರು ಮತ್ತು ನೀರು ಹಾಕಿ ಪ್ಯಾಕ್ ಮಾಡಿ. ಈ ಪ್ಯಾಕ್‌ನ್ನು ಕೂದಲು ತೊಳೆಯುವ ಒಂದು ಗಂಟೆ ಮೊದಲು ತಲೆಗೆ ಹಾಕಿ. ನಂತರ ವಾಶ್ ಮಾಡಿ. ಇದರಿಂದ ಕೂದಲು ದಪ್ಪ ಹಾಗೂ ಸುಂದರವಾಗುತ್ತದೆ.
ಸ್ಕಿನ್ ಹೊಳೆಯಲು ಸಹಕಾರಿ :
ಬೆಲ್ಲದಲ್ಲಿ ಹಲವಾರು ಮಿನರಲ್ ಮತ್ತು ವಿಟಾಮಿನ್ಸ್ ಇರುತ್ತದೆ. ಇದೊಂದು ನ್ಯಾಚುರಲ್ ಕ್ಲಿನ್ಸರ್‌ನಂತೆ ಕೆಲಸ ಮಾಡುತ್ತದೆ. ಬೆಲ್ಲ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆಯೂ ಇರೋದಿಲ್ಲ. ಹೊಟ್ಟೆ ಕ್ಲಿಯರ್ ಆಗಿದ್ದರೆ ಸ್ಕಿನ್ ಕೂಡ ಗ್ಲೋ ಆಗಿರುತ್ತದೆ. ಉಗುರು ಬಿಸಿ ನೀರು ಅಥವಾ ಚಹಾದಲ್ಲಿ ಸಕ್ಕರೆ ಬದಲು ಬೆಲ್ಲ ಹಾಕಿ ಸೇವನೆ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ