ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳೆಂದರೆ:
. ವಯಸ್ಸು
. ಅನುವಂಶಿಕತೆ
. ತೀವ್ರ ರಕ್ತದೊತ್ತಡ
. ಅಧಿಕ ಕೊಲೆಸ್ಟರಾಲ್
. ಸ್ಥೂಲಕಾಯತೆ
. ಕಳಪೆ ಆಹಾರ
. ಮಿತಿಮೀರಿದ ಆಲ್ಕೊಹಾಲ್ ಬಳಕೆ
. ಒತ್ತಡ
. ದೈಹಿಕ ನಿಷ್ಕ್ರಿಯತೆ
Heart-atack
ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುತ್ತದೆ, ಆದರೆ ಕೆಲವು ಲಕ್ಷಣಗಳನ್ನು ನಾವು ಗಮನಿಸಬಹುದು
1- ಎದೆಯ ಬಿಗಿತ, ಏನೋ ಭಾರವಾದ ವಸ್ತುವನ್ನು ಎದೆಮೇಲೆ ಇಟ್ಟಂತೆ (ಆನೆಯು ಎದೆಯ ಮೇಲೆ ನಿಂತಿದೆ) ಅನಿಸಿದರೂ ಹಾರ್ಟ್ ಎಟಾಕ್ ಗೆ ಸೂಚನೆಯಾಗುವುದು.
2- ಉಸಿರಾಟದ ತೊಂದರೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ಇದು ಸಹ ಪ್ರಮುಖ ಲಕ್ಷಣವೆಂದು ಅನುಮಾನಿಸುವುದು.
3- ಅತಿಯಾಗಿ ಸುಸ್ತಾಗುವುದು, ಮೈ ಕೈ ನೋವು ಪದೇ ಪದೇ ಕಂಡುಬಂದರೆ, ಅದನ್ನು ಅಸಡ್ಡೆ ಮಾಡಬಾರದು.
4- ನಿದ್ರೆ ಬರದಿರುವುದು, ದಿನ ಮತ್ತು ರಾತ್ರಿ ಹೆಚ್ಚಾಗಿ ಬೆವರುವಿಕೆ ಇವು ಸಹ ಹೃದಯಾಘಾತ ಕ್ಕೆ ಲಕ್ಷಣವಾಗು ಅವಕಾಶವಿದೆ.
5- ಸಾಮಾನ್ಯ ಶೀತ, ಜ್ವರ, ಆಗಾಗ ಬರುತ್ತಿದ್ದರೆ, ಅವು ಕಡಿಮೆಯಾಗದೆ ಇದ್ದರೂ, ಅನುಮಾನಿಸಬೇಕಾಗುತ್ತದೆ. ಇದರ ಜೊತೆಗೆ ಕೆಮ್ಮು ಸಹ ಹೆಚ್ಚಾಗಿ ಬರುತ್ತದೆ.
6- ಹೃದಯಾಘಾತಕ್ಕೆ ಮುಂಚೆಯೇ ಜನರು ಅಜೀರ್ಣ, ಹೊಟ್ಟೆನೋವು ಮತ್ತು ಇತರ ಜಠರಗರುಳಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
7- ನಿಮ್ಮ ಎಡ ತೋಳು, ಭುಜ, ಕುತ್ತಿಗೆ, ದವಡೆ ಅಥವಾ ಹಿಂಭಾಗದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು ಇದು ಸಹ ಮತ್ತೊಂದು ಲಕ್ಷಣವಾಗಿರುತ್ತದೆ.
8- ಕಣ್ಣುರೆಪ್ಪೆಗಳ ಒಳಗೆ ಮೂಲೆಗಳಲ್ಲಿ ಹಳದಿ ಪ್ಯಾಚ್ಗಳು, ಕಣ್ಣಿನ ತುದಿಯಲ್ಲಿ ಅಥವಾ ಕಾಲುಗಳಲ್ಲಿ, ಪಾದಗಳಲ್ಲಿ, ಹಿಮ್ಮಡಿಯಲ್ಲಿ ಬಾವು ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.
Heart-atack
ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈಧ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ