ಭಾನುವಾರ, ಡಿಸೆಂಬರ್ 15, 2019

ಮನೆಯಲ್ಲಿರುವ ಇರುವೆಗಳು ನಿಮ್ಮ ಸಂತೋಷ ಹಾಗೂ ದುಃಖವನ್ನ ಸೂಚಿಸುತ್ತವೆ ಹೇಗೆ ಗೊತ್ತಾ?

ಪ್ರತಿಯೊಬ್ಬರ ಮನೆಗಳಲ್ಲೂ ಇರುವೆಗಳು ಇರುವುದು ಸಾಮಾನ್ಯ ಹಾಗೂ ಇದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಅಡುಗೆ ಮನೆಯಲ್ಲಿರುವ ಸಿಹಿ ತಿನಿಸುಗಳಿಗೆ ಎಣ್ಣೆಯ ಪದಾರ್ಥಗಳಿಗೆ ಇರುವೆಗಳು ಮುತ್ತಿಕೊಳ್ಳುವುದು ಸಹಜ, ಆದರೆ ಹೀಗೆ ಮುತ್ತಿಕೊಳ್ಳುವ ಇರುವೆಗಳು ನಮ್ಮ ಜೀವನದ ಸುಖ ಹಾಗೂ ದುಃಖದ ಸಂಕೇತವನ್ನ ತೋರುತ್ತವೆ ಎಂದರೆ ನಾವು ಖಂಡಿತ ನಂಬಲೇಬೇಕು. ಈ ಇರುವೆಗಳು ಹೇಗೆ ನಮ್ಮ ಸುಖ ದುಃಖಗಳನ್ನ ಹೇಳುತ್ತವೆ ಅನ್ನೋದನ್ನ ಹೇಳುವುದಾದರೆ ನಮ್ಮ ಹಿರಿಯರು ಕೂಡ ಮನೆಗಳಲ್ಲಿ ಹೇಳುತ್ತಿರುತ್ತಾರೆ ಇರುವೆಗಳು ಗೋಗೆಯ ಮೇಲೆ ಸಾಲು ಸಾಲಾಗಿ ಹೋಗುತ್ತಿದ್ದರೆ ಅಥವಾ ಒಂದೇ ಜಾಗದಲ್ಲಿ ಇದ್ದರೆ ಅದಕ್ಕೆ ಸೂಚನೆ ಏನು ಅನ್ನೋದನ್ನ ಮುಂದೆ ನೋಡಿ.

ಇರುವೆಗಳು ಮನೆಯ ಮೇಲ್ಚಾವಣಿಯ ಮೇಲೆ ಇದ್ದರೆ ಅಥವಾ ಓಡಾಡಿದರೆ ಅತಿ ಶಿಘ್ರದಲ್ಲಿಗೆ ನಿಮಗೆ ಸಂತೋಷ ಪ್ರಾಪ್ತಿಯಾಗಲಿದೆ ಎಂಬ ಸೂಚನೆಯನ್ನ ನೀಡುತ್ತವೆ. ಇನ್ನು ಇರುವೆಗಳು ನಿಮ್ಮ ಮನೆಯಲ್ಲಿರುವ ಅಕ್ಕಿ ಡಬ್ಬಕ್ಕೆ ಮುತ್ತಿದ್ದರೆ ಬಹು ಬೇಗ ನಿಮ್ಮ ಮನೆಯಲ್ಲಿ ಧನದ ವೃದ್ಧಿಯಾಗಲಿದೆ ಎಂದರ್ಥ. ಅಪ್ಪಿ ತಪ್ಪಿ ಇರುವೆಗಳು ನಿಮ್ಮ ಮನೆಯ ತುಪ್ಪ ತುಂಬಿದ ಡಬ್ಬಿಗೆ ಮುತ್ತಿದರೆ ಅಥವಾ ಇಡೀ ದಿನ ರಾತ್ರಿ ಅಲ್ಲಿಯೇ ಇದ್ದರೆ ನಿಮ್ಮ ಸಂಪತ್ತಿನ ನಾಶದ ಸಂಕೇತವನ್ನ ಸೂಚಿಸುತ್ತದೆ. ನಿಮ್ಮ ಸಂಪತ್ತು ನಾಶವಾಗಿ ಶೂನ್ಯಕ್ಕೆ ತಲುಪುತ್ತದೆ ಎಂದರ್ಥ.

ನಿಮ್ಮ ಮನೆಯಲ್ಲಿ ಅತಿಯಾದ ಕೆಂಪು ಇರುವೆಗಳು ಕಾಣಿಸಿಕೊಂಡರೆ ಕಳ್ಳತನದ ಭಯ ಅಥವಾ ಮಾರಣಾಂತಿಕ ಹಲ್ಲೆಗಳಂತಹ ಘಟನೆಗಳು ನಡೆಯುವುದರ ಸಂಕೇತವನ್ನ ಸೂಚಿಸುತ್ತದೆ. ನಿಮ್ಮ ಮನೆಯಲ್ಲಿರುವ ಆಭರಣಗಳಿಗೆ ಕಪ್ಪು ಬಣ್ಣದ ಇರುವೆಗಳು ಮುತ್ತಿದ್ದರೆ ನಿಮ್ಮ ಮನೆಯಲ್ಲಿ ಚಿನ್ನ ಹಾಗೂ ಹಣದ ವೃದ್ಧಿಯಾಗಲಿದೆ ಎಂಬುದರ ಸಂಕೇತವನ್ನ ಸೂಚಿಸುತ್ತದೆ.

ಇನ್ನು ಮರದಿಂದ ಕಪ್ಪು ಇರುವೆಗಳು ಹೊರಗೆ ಬಂದರೆ ಮಳೆಯಾಗಲಿದೆ ಎಂದು, ಹಾಗೂ ಕೆಂಪು ಇರುವೆಗಳು ಮರದಿಂದ ಹೊರಗೆ ಬಂದರೆ ಅನಾವೃಷ್ಟಿಯಾಗಲಿದೆ ಎಂಬುದನ್ನ ಸೂಚಿಸುತ್ತದೆ. ಪೂರ್ವಕ್ಕೆ ಇರುವೆಗಳು ಕಾಣಿಸಿಕೊಂಡರೆ ಭಯದ ವಾತಾವರಣ ಹಾಗೂ ಪಶ್ಚಿಮಕ್ಕೆ ಕಾಣಿಸಿಕೊಂಡರೆ ಲಾಭದ ಸಂಕೇತವನ್ನ ಸೂಚಿಸುತ್ತದೆ. ಹೀಗೆ ಇರುವೆಗಳ ಕುರಿತು ಅನಾದಿ ಕಾಲದಿಂದಲೂ ಹೇಳುತ್ತಾ ಬರಲಾಗುತ್ತದೆ ಕೆಲವರಿ ಇದನ್ನು ನಂಬಿದರೆ ಇನ್ನು ಕೆಲವರು ನಂಬದೆ ಇರಬಹುದು ಆದ್ರೆ ಎಲ್ಲವು ಕೂಡ ಅವರವರ ಆಲೋಚನೆಗೆ ಬಿಟ್ಟಿದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ