ಮಂಗಳವಾರ, ಡಿಸೆಂಬರ್ 24, 2019

ಶಂಖದ ಮಹತ್ವ

" "
       
ಅತಿ ಪ್ರಾಚೀನ ಕಾಲದಿಂದಲೂ ಶಂಖದ ಕುರಿತು ವಿಶೇಷ ಉನ್ನತ ಗೌರವವಿದೆ.ಶಂಖವನ್ನು ದೇವತಶಕ್ತಿಯ ಅವಾಹನೆ ಮತ್ತು ರಾಕ್ಷಸ ಶಕ್ತಿಯ ಉಚ್ಛಾಟನೆಗೆ ಬಳಸಲಾಗುತ್ತದೆ.
ಶಂಖದ ಜಲದಲ್ಲಿ ಔಷಧಿಯ ಗುಣ ಇರುವುದರಿಂದ ಅದರ ನೀರನ್ನು ಪ್ರೋಕ್ಷಿಸಿಕೊಳ್ಳುವುದರಿಂದ ಹಲವಾರು ಚರ್ಮ ರೋಗ ನಿವಾರಣೆಯಾಗುತ್ತದೆ ಅದರಿಂದಲೇ ''ಶಂಖದಿಂದ ಬಂದ್ರೆ ತೀರ್ಥ"ಎಂಬಾ ನಾಣ್ಣುಡಿ ಜನರ ಮನದಲ್ಲಿ ಮನೆ ಮಾಡಿದೆ.

ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಮನೆಯ ಮೂಲೆ-ಮೂಲೆಯಿಂದ ಅಷ್ಟ ದಿಕ್ಕುಗಳಿಗೂ ಕೇಳುವಂತೆ ಶಂಖನಾದ ಮಾಡುತ್ತಿದ್ದರು. 

ಇದಕ್ಕೆ ಕಾರಣ ಶಂಖ ನಾದದಲ್ಲಿರುವ  ದುಷ್ಟ ಶಕ್ತಿಯ ಎದೆಯೊಡೆಯುವ ಶಕ್ತಿ. ಶಂಖದ ನಾದ ಎಲ್ಲಿಯವರೆಗೆ ಕೇಳಿಸುತ್ತದೋ, ಅಲ್ಲಿಯ ತನಕ ಯಾವ ದುಷ್ಟ ಶಕ್ತಿಗಳೂ ಸುಳಿಯಲಾರವು.

 ಮೃತ್ಯುವಿನ ತಾಂಡವವಾದ ರಣರಂಗದಲ್ಲಿ ಆಸುರೀ ಶಕ್ತಿಯ ಪ್ರಭಾವ ಇರಬಾರದು ಎನ್ನುವುದಕ್ಕಾಗಿ, ಯುದ್ದಕ್ಕೆ ತಮ್ಮವರನ್ನು ಸಿದ್ಧಗೊಳಿಸುವುದಕ್ಕಾಗಿ ಮತ್ತು ಶತ್ರುಗಳಿಗೆ ತಾವು  ಸಿದ್ಧ ಎನ್ನುವ ಸಂಕೇತ ಕೊಡಲು ಹಿಂದೆ ಶಂಖವನ್ನು ಬಳಸುತ್ತಿದ್ದರು.
ಶಂಖ ನಾದವು ವಾತಾವರಣದ ಋಣಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ.ಚದುರಿದ ಮನಸ್ಸನ್ನು ಏಕಾಗ್ರತೆಗೆ ತರುತ್ತದೆ.ಶಂಖನಾದ ಕೇಳುವ ಪವಿತ್ರ ವಲಯದಲ್ಲಿ ತಾಮಸೀ ಶಕ್ತಿ ಪ್ರವೇಶಿಸಲಾರವು.ಶಂಖವನ್ನು ಊದುವುದರಿಂದ ಎದೆ,ಕಂಠ ಹಾಗೂ ಶ್ವಾಸಕೋಷಗಳಿಗೆ ವ್ಯಾಯಮವಾಗುವುದಲ್ಲದೆ ರಕ್ತ ಸಂಚಾರ ಹತೋಟಿಯಲ್ಲಿರುತ್ತದೆ....
ನಮ್ಮಲ್ಲಿ ಶಂಖಕ್ಕೆ ವಿಶೇಷ ಸ್ಥಾನ ನೀಡಲಾಗಿದೆ,ಪುರೀಕ್ಷೇತ್ರವನ್ನು "ಶಂಖಪುರೀ" ಎನ್ನುತ್ತಿದ್ದರು.

ದಕ್ಷಿಣಾವರ್ತ ಶಂಖವು ಅನಂತ ತತ್ವವನ್ನೂ,ವಿಷ್ಣು ತತ್ವವನ್ನು ಸೂಚಿಸುತ್ತದೆ.
ವಾಮಾವರ್ತ ಶಂಖವು ಲಯ ತತ್ವವನ್ನೂ,ಶಿವ ತತ್ವವನ್ನು ಸೂಚಿಸುತ್ತದೆ.
ಸ್ಪಟಿಕ ಶಂಖವನ್ನು  ಮಹಾಲಕ್ಷ್ಮಿಯ ಸಂಕೇತವಾಗಿ ಬಳಸುತ್ತೇವೆ.
ಶಂಖದಲ್ಲಿ  ನಾರಾಯಣನಿಗೆ ಮಾಡಿದ ಅಭಿಷೇಕವು  ಪವಿತ್ರ ಪುಣ್ಯ ನದಿ ಜಲಕ್ಕೆ ಸಮಾನಾದದ್ದು.

ಮಹಾಭಾರತದಲ್ಲಿ ಶಂಖದ ಉಲ್ಲೇಖವನ್ನು ಕಾಣಬಹುದು.
ಕೃಷ್ಣನು '#ಪಾಂಚಜನ್ಯ'
ಅರ್ಜುನ '#ದೇವದತ್ತ'
ಭೀಮನು '#ಪೌಂಡ್ರ'
ನಕುಲನು '#ಸುಘೋಷ'
ಸಹದೇವನು '#ಮಣಿಪುಷ್ಪಕ'
ಯುಧಿಷ್ಟಿರನು '#ಅನಂತ_ವಿಜಯ'
ಹೀಗೆ ಇನ್ನೂ ಮುಂತಾದ ಶಂಖಗಳನ್ನು ಧರ್ಮಸ್ಥಾಪನೆಯ ಯುದ್ಧ ಘೋಷವಾಗಿ ಬಳಸಲಾಯಿತು...

ಶಂಖ ಬಹಳ ದೊಡ್ಡ ದುಷ್ಟ ಸಂಹಾರಕ ಶಕ್ತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ