1. ಮಜ್ಜಿಗೆ
ಮಜ್ಜಿಗೆ ಎಲ್ಲರಿಗೂ ಸಾಮಾನ್ಯವಾಗಿ ಸಿಗುವ ಪಾನೀಯವಾಗಿದ್ದು, ಅಪೆಂಡಿಕ್ಟಿಸ್ ನೋವಿಗೆ ತುಂಬಾ ಸುಲಭ ಹಾಗೂ ಸಾಮಾನ್ಯವಾಗಿ ಸಿಗುವ ಔಷಧಿ ಇದಾಗಿದೆ. ಕೊತ್ತಂಬರಿ, ಪುದೀನಾ ಎಲೆಗಳು, ತುರಿದ ಸೌತೆಕಾಯಿ, ತುರಿದ ಶುಂಠಿ ಹಾಕಿಕೊಂಡು ತಯಾರಿಸಿದ ಮಜ್ಜಿಗೆಯು ಪರ ಜೈವಿಕ ಪರಿಣಾಮ ಬೀರುವುದು. ತಾಜಾತನ ಉಂಟು ಮಾಡುವ ಪಾನೀಯವಾಗಿದೆ. ದಿನಕ್ಕೆ ಒಂದು ಲೋಟ ಮಜ್ಜಿಗೆ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ತುಂಬಾ ಸಹಕಾರಿ ಆಗಿರಲಿದೆ.
2. ಜೇನುತುಪ್ಪ ಮತ್ತು ಲಿಂಬೆ
ಊಟದ ಕ್ರಮದಿಂದ ಮಲಬದ್ಧತೆ ಬಂದು ಅಪೆಂಡಿಕ್ಟಿಸ್ ಗೆ ಬಹು ದೊಡ್ಡ ಕಾರಣ ಎಂದು ಹೇಳಲಾಗುತ್ತದೆ. ಜೇನುತುಪ್ಪ ಮತ್ತು ಲಿಂಬೆ ರಸವು ಮಲಬದ್ಧತೆ ಸುಧಾರಣೆ ಮಾಡುವುದು ಮತ್ತು ಕರುಳಿನ ಕ್ರಿಯೆ ಸರಾಗಗೊಳಿಸುವುದು. ಇದರಿಂದಾಗಿ ಅಪೆಂಡಿಕ್ಟಿಸ್ ನ ನೋವಿಗೆ ಇದರಿಂದ ಶಮನ ಸಿಗುವುದು. ಒಂದು ಲೋಟ ಬಿಸಿ ನೀರಿಗೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿ ಕುಡಿಯಿರಿ. ಇದು ಕರುಳಿನ ಅನಿಯಮಿತ ಚಲನೆ ಸಮಸ್ಯೆಯನ್ನು ನಿವಾರಣೆ ಮಾಡುವುದು. ಎಂದು ಹಲವು ಅಧ್ಯಯನಗಳು ತಿಳಿಸಿವೆ.
3. ಶುಂಠಿ
ಶುಂಠಿಯನ್ನು ಸಾಂಪ್ರದಾಯಿಕವಾಗಿ ಹೊಟ್ಟೆಯ ಉರಿಯೂತದ ಸಮಸ್ಯೆಗೆ ಬಳಸಲಾಗುತ್ತದೆ. ಶುಂಠಿಯ ಗಿಡದ ಬೇರಿನಲ್ಲಿ 6-ಜಿಂಜೆರೊಲ್ ಎನ್ನುವಂತಹ ಅಂಶವಿದೆ. ಸಂಶೋಧನೆ ಮಾಡಿದ ವೇಳೆ ಈ ಅಂಶವು ಗಡ್ಡೆಯ ಕೋಶಗಳ ಉರಿಯೂತ ನಿವಾರಣೆ ಮಾಡುತ್ತದೆ ಎಂದು ಕಂಡುಬಂದಿದೆ. ಅಪೆಂಡಿಕ್ಟಿಸ್ ನೋವಿನ ವೇಳೆ ರೋಗಿಗಳಲ್ಲಿ ಕಂಡುಬರುವಂತಹ ವಾಂತಿ ಅಥವಾ ವಾಕರಿಕೆ ನಿವಾರಣೆಗೆ ಶುಂಠಿಯು ತುಂಬಾ ಪರಿಣಾಮಕಾರಿ. ಶುಂಠಿ ತುಂಡುಗಳು ಅಥವಾ ಇದರ ರಸ ಕುಡಿದರೆ ಆಗ ದೇಹದಲ್ಲಿನ ಉರಿಯೂತ ಕಡಿಮೆ ಆಗಿ ನೋವು ಶಮನವಾಗುವುದು.
4. ತರಕಾರಿ ಜ್ಯೂಸ್
ತರಕಾರಿ ಜ್ಯೂಸ್-ನಲ್ಲಿ ಸಾಮಾನ್ಯವಾಗಿ ನಾರಿನಾಂಶವು ಅಧಿಕವಾಗಿರುವ ಆಹಾರ ಸೇವನೆ ಮಾಡಿ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಕ್ಯಾರೆಟ್, ಸೌತೆಕಾಯಿ, ಬೀಟ್ ರೂಟ್, ಕ್ರಾನ್ಬೇರಿ, ಮೂಲಂಗಿ, ಬಸಳೆಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ. ಇದು ನೋವು ನಿವಾರಣೆ ಮಾಡುವುದು, ರಕ್ತವನ್ನು ನಿರ್ವಿಷಗೊಳಿಸುವುದ, ಸೋಂಕಿನ ವಿರುದ್ಧ ಹೋರಾಡುವುದು ಮತ್ತು ಜೀರ್ಣಕ್ರಿಯೆನ್ನು ಸರಾಗವಾಗಿಸುವುದು. ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ತರಕಾರಿ ಜ್ಯೂಸ್ ಸೇರಿಸಿಕೊಂಡು ಅಪೆಂಡಿಕ್ಟಿಸ್ ನೋವಿನಿಂದ ಮುಕ್ತಿ ಪಡೆಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ