ತೊಂಡೆಕಾಯಿ ಹೆಚ್ಚು ಫೈಬರ್ ಅಂಶವನ್ನು ಹೊಂದಿರುತ್ತದೆ ಇದರಲ್ಲಿ ವಿಟಮಿನ್ ಎ ಬಿ1 ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ ಇದ್ದಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತದೆ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವುದರಲ್ಲಿ ಇದು ಉಪಯೋಗಕ್ಕೆ ಬರುತ್ತದೆ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ತೊಂಡೆಕಾಯಿ ತಿನ್ನುವುದರಿಂದ ಇದು ನಿಮಗೆ ರಾಮಬಾಣ ಇದ್ದಂತೆ ವಾರಕ್ಕೆ ಒಮ್ಮೆ ಆದರೂ ತೊಂಡೆಕಾಯಿ ತಿಂದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಈ ತೊಂಡೆಕಾಯಿಯಲ್ಲಿ ಉತ್ತಮ ಆರೋಗ್ಯ ಅಂಶಗಳೇ ಇವೆ ಈ ಲೇಖನದಲ್ಲಿ ತೊಂಡೆಕಾಯಿ ಬಗ್ಗೆ ತಿಳಿಯೋಣ ಈ ಲೇಖನ ಪೂರ್ತಿಯಾಗಿ ಓದಿರಿ.
ಸ್ನೇಹಿತರೆ ತೊಂಡೆಕಾಯಿ ಹೆಚ್ಚಾಗಿ ಸೇವಿಸುವುದರಿಂದ ಕಫ ಸಮಸ್ಯೆ ದೂರವಾಗುತ್ತದೆ ತೊಂಡೇಕಾಯಿಯಲ್ಲಿ ಇರುವ ಬೀಜಗಳು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಮಲವಿಸರ್ಜನೆ ಸಂಬಂಧಿಸಿದ ಕಾಯಿಲೆಗಳನ್ನು ಗುಣ ಪಡಿಸುತ್ತದೆ ದೇಹದ ಯಾವುದೇ ಭಾಗದಲ್ಲಿ ಹುಳು ಕಚ್ಚಿ ಗಾಯ ಆದರೆ ತೊಂಡೆಕಾಯಿ ಎಲೆಯನ್ನು ಚಚ್ಚಿ ಹಚ್ಚುವುದರಿಂದ ಅದು ನಿವಾರಣೆ ಆಗುತ್ತದೆ ವಿಟಮಿನ್ ಸಿ ವಿಟಮಿನ್ ಬಿ2 ವಿಟಮಿನ್ ಬಿ3 ಹೇರಳವಾಗಿ ಸಿಗುವ ತೊಂಡೆಕಾಯಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ತೊಂಡೆಕಾಯಿ ಎಲೆ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿದರೆ ದೇಹದ ಉಷ್ಣತೆ ಕಡಿಮೆ ಆಗುತ್ತದೆ.
ಎರಡು ಚಮಚ ತೊಂಡೆಕಾಯಿ ಎಲೆ ರಸವನ್ನು ಅರ್ಧ ಬಟ್ಟಲು ಮೊಸರಿನ ಜೊತೆ ದಿನಕ್ಕೆ 2 ಬಾರಿ ಸೇವಿಸಿದರೆ ಬೇಧಿ ನಿಲ್ಲುತ್ತದೆ. ತೊಂಡೆಕಾಯಿ ಹಸಿ ಹಣ್ಣನ್ನು ದಿನಕ್ಕೆ ಎರಡರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದು ಆಗುತ್ತದೆ ಹಾಗೂ ಮಧುಮೇಹ ಗುಣಮುಖ ಆಗುತ್ತದೆ ದೇಹದಲ್ಲಿ ಗುಳ್ಳೆಗಳು ಮತ್ತು ಕಜ್ಜಿ ಆಗಿದ್ದರೆ ತೊಂಡೆಕಾಯಿ ಎಲೆಯನ್ನು ಜಜ್ಜಿ ಈ ಜಾಗಕ್ಕೆ ಲೇಪಿಸಿದರೆ ಈ ಒಂದು ಗುಳ್ಳೆಗಳು ಕಡಿಮೆ ಆಗುತ್ತದೆ. ಋತುಸ್ರಾವದ ಸಮಯದಲ್ಲಿ ತೊಂಡೆಕಾಯಿ ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆ ಆಗುತ್ತದೆ ತೊಂಡೆಕಾಯಿ ಅಲ್ಲಿ ಕಡಿಮೆ ಕ್ಯಾಲೋರಿಗಳು ಇರುತ್ತದೆ ಮತ್ತು ಹೆಚ್ಚು ಹೊತ್ತು ನಮ್ಮ ಹೊಟ್ಟೆ ತುಂಬಿದ ಹಾಗೆ ಇರುತ್ತದೆ ಇದರಿಂದ ನಾವು ಸ್ವಲ್ಪವಾಗಿ ತೂಕವನ್ನು ಕಳೆದುಕೊಳ್ಳಬಹುದು.
ಒಂದು ಲೋಟ ತೊಂಡೆಕಾಯಿ ಎಲೆ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜೊತೆ ಕುದಿಸಿ ತಯಾರಿಸಿದ ಎಣ್ಣೆಯನ್ನು ಚರ್ಮದ ಕಾಯಿಲೆಗೆ ಇದನ್ನು ಉಪಯೋಗಿಸಬಹುದು. ಪೊಟ್ಯಾಷಿಯಂ ಹೆಚ್ಚಿರುವ ತೊಂಡೆಕಾಯಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಣ್ಣುಗಳು ಉರಿ ಆಗುತ್ತಿದ್ದರೆ ಒಂದು ಲೋಟ ನೀರಿಗೆ ಒಂದು ಲೋಟ ತೊಂಡೆಕಾಯಿ ಎಲೆಯ ರಸ ಸೇರಿಸಿ ಒಂದು ಲೋಟ ರಸ ಆಗುವ ವರೆಗೆ ಚೆನ್ನಾಗಿ ಕುದಿಸಿ ಈ ರಸವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಕಣ್ಣಿನ ಉರಿ ಕಡಿಮೆ ಆಗುತ್ತದೆ.
ಒಂದು ಲೋಟ ತೊಂಡೆಕಾಯಿ ಎಲೆ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜೊತೆ ಕುದಿಸಿ ಈ ಎಣ್ಣೆಯನ್ನು ಚರ್ಮದ ಜೊತೆ ಹಚ್ಚಿದರೆ ಸೋಯಾಸಿಸ್ ಅಂತಹ ಚರ್ಮದ ಸಮಸ್ಯೆ ಕಡಿಮೆ ಆಗುತ್ತದೆ ತೊಂಡೆಕಾಯಿ ಕಫದ ಸಮಸ್ಯೆ ನಿವಾರಿಸುತ್ತದೆ ಅಲ್ಲದೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ ಸಂಧಿ ಊತಗಳು ಇದ್ದರೆ ತೊಂಡೆ ಗಿಡದ ಎಲೆಗಳನ್ನು ಬೇವಿನ ಎಲೆಗಳ ಜೊತೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಊತ ಇರುವ ಜಾಗದಲ್ಲಿ ಲೇಪನ ಮಾಡಿದರೆ ಈ ಊತ ಕಡಿಮೆ ಆಗುತ್ತದೆ. ಎಳೆಯ ತೊಂಡೆಕಾಯಿ ಬಾಯಿಗೆ ಹಾಕಿ ಚೆನ್ನಾಗಿ ಆಗಿದರೆ ಬಾಯಿ ಹುಣ್ಣು ಕಡಿಮೆ ಆಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ