ವಿಟಮಿನ್-ಸಿ ಆಗರವಾಗಿರುವ ನಿಂಬೆಹಣ್ಣು ತಿನ್ನಲು ಎಷ್ಟು ರುಚಿ ಕರವೋ ಆರೋಗ್ಯಕ್ಕೂ ಅಷ್ಟೇ ಲಾಭಕಾರಿ. ಆದರೆ ಇದರ ಸಿಪ್ಪೆಯೂ ಅಷ್ಟೇ ಪಯುಕ್ತವಾಗಿದ್ದು. ಮೈಕ್ರೋವೇವ್‌ನಲ್ಲಿ ಜಿಡ್ಡುಗಳು ತುಂಬಿರುತ್ತವೆ. ಈ ರೀತಿಯಾದ ಜಿಡ್ಡನ್ನು ತೆಗೆಯಲು ಅರ್ಧ ನೀರು ತುಂಬಿದ ಪಾತ್ರೆಗೆ ಒಂದೆರಡು ನಿಂಬೆ ಸಿಪ್ಪೆ ಹಾಕಿ ಮೈಕ್ರೋವೇವ್‌ನಲ್ಲಿ ಹೈ ಟೆಂಪರೇಚರ್‌ನಲ್ಲಿ 5 ನಿಮಿಷ ಬೇಯಿಸಿ. ಈಗ ಅದರ ಗೋಡೆಗಳಲ್ಲಿ ಹಬೆಯು ಸಂಗ್ರಹವಾಗಿರುತ್ತದೆ. ಪಾತ್ರೆ ಹೊರತೆಗೆದು ಮೈಕ್ರೋವೇವ್ ನನ್ನು ಚೆನ್ನಾಗಿ ಉಜ್ಜಿ ಬಟ್ಟೆಯಿಂದ ಒರೆಸಿದರೆ ಜಿಡ್ಡು ಮಾಯವಾಗಿ ನಿಂಬೆಯ ಪರಿಮಳದೊಂದಿಗೆ ಮೈಕ್ರೋವೇವ್ ಸ್ವಚ್ಛವಾಗುತ್ತದೆ.
ಬಟ್ಟೆಯಲ್ಲಿ ಸಾರು ಸಾಂಬಾರು ಮುಂತಾದ ಕಲೆ ಉಂಟಾದರೆ ತಕ್ಷಣವೇ ಆ ಜಾಗಕ್ಕೆ ನಿಂಬೆ ಸಿಪ್ಪೆಯಿಂದ ಉಜ್ಜಿ ನಂತರ ಡಿಟರ್ಜಂಟ್‌ನಿಂದ ವಾಶ್ ಮಾಡಿ. ಕಲೆ ಮಾಯವಾಗುತ್ತದೆ. ನಿಂಬೆ ಸಿಪ್ಪೆಯನ್ನು ಒಂದು ಬೌಲ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಇದರಿಂದ ಅಡಿಗೆ ಮನೆಯಲ್ಲಿ ಉಂಟಾಗುವ ವಾಸನೆ ಮಾಯವಾಗಿ ಸುವಾಸನೆಯುಕ್ತವಾಗುತ್ತದೆ.
ಹಣ್ಣು-ತರಕಾರಿಗಳು ಫ್ರೆಶ್ ಆಗಿರಲು, ನೀರಿಗೆ ಸ್ವಲ್ಪ ಉಪ್ಪು ಹಾಗೂ ನಿಂಬೆ ಸಿಪ್ಪೆಯನ್ನು ಹಾಕಿ 5 ನಿಮಿಷಗಳ ನಂತರ ಆ ನೀರಿನಲ್ಲಿ ಹಣ್ಣು-ತರಕಾರಿಗಳನ್ನು ಅದರಲ್ಲಿ ಮುಳುಗಿಸಿಡಿ. ಆನಂತರ ತೆಗೆದು ಒಣಗಿದ ಬಟ್ಟೆಯಿಂದ ಒರೆಸಿದರೆ ಫ್ರೆಶ್ನೆಸ್ ಹಾಗೆಯೇ ಇರುತ್ತದೆ. ಆಯುಧಗಳ ತುದಿಗೆ ನಿಂಬೆಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಉಜ್ಜಿದರೆ ಮೊಂಡಾದ ಆಯುಧಗಳು ಹರಿತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಜಿಡ್ಡಿರುವ ಪಾತ್ರೆಯಲ್ಲಿ ನಿಂಬೆಹಣ್ಣಿನ ಸಿಪ್ಪೆಗೆ ಸ್ವಲ್ಪ ಉಪ್ಪು ಚಿಮುಕಿಸಿ ನಂತರ ಆ ಸಿಪ್ಪೆಯಿಂದ ಪಾತ್ರೆಯನ್ನು ಚೆನ್ನಾಗಿ ತಿಕ್ಕಿ. ಜಿಡ್ಡು ಮಾಯವಾಗಿ ಪಾತ್ರೆ ಹೊಳೆಯುತ್ತದೆ. ಇರುವೆ ಅಥವಾ ಕೀಟಗಳಿರುವ ಜಾಗದಲ್ಲಿ ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಿನೋಡಿ. ಇರುವೆಗಳು ಪುನಃ ಬರುವುದಿಲ್ಲ. ನಿಂಬೆಹಣ್ಣಿನ ಸಿಪ್ಪೆಯಿಂದ, ಜಿರಲೆಗಳಿಂದಲೂ ಮುಕ್ತಿ ಹೊಂದಬಹುದು.
ಅಡಿಗೆ ಮಾಡುವಾಗ ಪತ್ರೆ ಸೀದುಹೋಗಿದ್ದರೆ ಅಥವಾ ತಳ ಹಿಡಿದಿರುವ ಪಾತ್ರೆಗಳಿಗೆ ಸ್ವಲ್ಪ ನೀರನ್ನು ಮತ್ತು ನಿಂಬೆ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ನೀರನ್ನು ತೆಗೆದು ಅದಕ್ಕೆ ಸ್ವಲ್ಪ ಅಡಿಗೆ ಸೋಡಾ ಹಾಕಿ ನಿಂಬೆ ಸಿಪ್ಪೆಯಿಂದ ತಿಕ್ಕಿ. ಸಿದಿದ ಕಲೆ ಮಾಯವಾಗಿ ಪಾತ್ರೆ ಹೊಳೆಯುವುದರ ಜೊತೆಗೆ ಸಿದಿದ ವಾಸನೆ ಕೂಡ ಇರುವುದಿಲ್ಲ. ಫ್ರಿಡ್ಜ್ ನಲ್ಲಿ ನಿಂಬೆಹಣ್ಣಿನ ಸಿಪ್ಪೆಯನ್ನು ಇಡೀ ಇದರಿಂದ ನೀವು ಫ್ರಿಡ್ಜ್ ಬಾಗಿಲು ತೆಗೆದಾಗ ಪರಿಮಳವಾದ ವಾಸನೆ ಬರುತ್ತದೆ.
ಫ್ಲಾಸ್ಕ್‌ಗಳ ಕ್ಲೀನರ್ ಪ್ಲಾಸ್ಕ್‌ಗಳಿಗೆ ಬಿಸಿಯಾದ ನೀರು ತುಂಬಿಸಿ. ಅದರೊಳಗೆ ನಿಂಬೆಹಣ್ಣಿನ ಸಿಪ್ಪೆಯನ್ನು ಹಾಕಿ, 5ರಿಂದ10 ನಿಮಿಷದ ನಂತರ, ಚೆನ್ನಾಗಿ ಕುಲಕಿ ಆನಂತರ ಬಿಸಿನೀರಿನಿಂದ ತೊಳೆದರೆ ಪ್ಲಾಸ್ಕ್ ಅಥವಾ ಕಾಫಿ ಕೆಟಲ್ ಸುವಾಸನೆಯುಕ್ತವಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ