ಗುರುವಾರ, ಮಾರ್ಚ್ 17, 2022

🌱 *ತುಳಸಿ* 🌱



🌱 *ತುಳಸಿ* 🌱

ಶ್ರೀ ತುಳಸಿ ದೇವಿ ಮಹಾತ್ಮೆ ಅವತಾರ ದೇವತೆಗಳು ದೈತ್ಯರು ಸಮುದ್ರಮಥನ ಕಾಲದಲ್ಲಿ ,ಐರಾವತ ಮೊದಲಾದ (ಹದಿನಾಲ್ಕು) ರತ್ನಗಳು ಉದ್ಭವವಾದವು.

 ಈ ಸಂದರ್ಭದಲ್ಲಿ ಅಮೃತವೂ ಹುಟ್ಟಿತು .ಅದನ್ನು ಕಂಡಾಗ ಶ್ರೀ ಕೃಷ್ಣ ಪರಮಾತ್ಮ ಅಮೃತ ಕಲಶದಲ್ಲಿ ಆನಂದ ಭಾಷ್ಪ ಸುರಿಸಿದ. ಇದರಿಂದ ತುಳಸಿ ದೇವಿ ಅವತಾರ ಆಯಿತು ,ಎಂದು ಪುರಾಣಗಳಿಂದ ಉಲ್ಲೇಖ ತಿಳಿಯುವುದು .

ಹಿಂದೊಮ್ಮೆ ಶ್ರೀಕೃಷ್ಣನ ತುಲಾಭಾರ ಸಂದರ್ಭದಲ್ಲಿ ರುಕ್ಮಿಣಿದೇವಿ ಒಂದು ತುಳಸಿ ದಳವನ್ನು ಹಾಕಿ ತುಲಾಭಾರ ಪೂರ್ಣ ಮಾಡಿದಳು.
 ಆಗ ತುಳಸಿಗೆ ತುಲನೀಯವಾದುದು( ಸಮಾನವಾದುದು) ಯಾವುದು ಇಲ್ಲ ಎಂದು ನಿರ್ಣಯವಾಯಿತು. 

ಆದ್ದರಿಂದ ಈ ಹೆಸರು ಎಂದು ಬ್ರಹ್ಮ ವೈವರ್ತ ಪುರಾಣ ದಲ್ಲಿ ಉಲ್ಲೇಖ ಲಭ್ಯ .

🕉️ *ಶ್ರೀ ತುಳಸಿ ಪೂಜಾ :*🕉️

ಕಾರ್ತಿಕ ಶುದ್ಧ ದ್ವಾದಶಿ ತಿಥಿ ಶ್ರೀ ವಿಷ್ಣುಯೋಗ  ನಿದ್ರೆಯಿಂದ ಎಳುತ್ತಾನೆ .ಆ ದಿನ ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ .

ತುಳಸಿಯೂ ಕಾರ್ತಿಕ ಮಾಸದಲ್ಲಿ ಅವತರಿಸಿದ್ದರಿಂದ ,ಕಾರ್ತಿಕ ದ್ವಾದಶಿ ವಿವಾಹ ನಡೆಯುವ ವಾಡಿಕೆ .
ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ ,ತುಳಸಿ ಎಲ್ಲಿ ಇದೆಯೋ ಅಲ್ಲಿ ಶ್ರೀಹರಿ ಸನ್ನಿಧಾನ.

🕉️ *ತುಳಸಿಯಲ್ಲಿ ಪ್ರಕಾರಗಳು :( ವಿಧಗಳು)* 🕉️

 ಶ್ರೀ ತುಳಸಿಯಲ್ಲಿ ನಾವು ಆರು, ಏಳು,  ವಿಧಗಳನ್ನು ಕಾಣಬಹುದು.
🌱 ಶ್ರೀ ತುಳಸಿ .
🌱ಕ್ಷುದ್ರ ಪತ್ರ .
🌱ಬಿಲ್ವ ಗಂಧ.
 🌱ವವ೯ರಿ.
🌱ರಕ್ತ  ತುಳಸಿ. 
🌱 ಕೃಷ್ಣ ತುಳಸಿ.
🌱ರಾಮ ತುಳಸಿ .
ಎನ್ನುವ ಪ್ರಭೇದಗಳನ್ನು ನಾವು ಕಾಣಬಹುದು.

ಬ್ರಾಹ್ಮಣಪ್ರಿಯ

🕉️ *ನಿತ್ಯ ತುಳಸಿ ಪೂಜಾ ವಿಧಾನ ಇದೆ .* 🕉️

👏🏻 *ಪ್ರಾರ್ಥನೆ* 👏🏻

*ತನ್ಮೂಲೇ ಸವ೯ತೀಥಾ೯ನೀ  ತನ್ಮಧ್ಯೆ ಸರ್ವದೇವತಾಂ*

*ತದಾಗ್ರೇ  ಸರ್ವ ವೇದಶ್ಚ ತುಳಸೀತ್ವಾಂ ನಮಾಮ್ಯಹಂ.॥*

🌱 *ತುಳಸಿ ತೆಗೆಯುವ ಮಂತ್ರ*🌱

*ಶ್ರೀಯ : ಪ್ರಿಯೇ ಶ್ರೀಯಾವಾಸೇ ನಿತ್ಯಂ ಶ್ರೀಧರ ವಲ್ಲಭೆ*

*ಭಕ್ತ್ಯಾ ದತ್ತಂ ವಯಾಟಿಘ್ಯ೯ ಹಿ ತುಳಸಿ ಪ್ರತಿಗೃಹ್ಯತಾಂ.॥*
 
ಹೇ ದೇವಿ ದೇವರ ಪೂಜೆಗಾಗಿ ನಿನ್ನ ಸಂಗ್ರಹ ಅಂತ ಪ್ರಾರ್ಥಿಸಬೇಕು .

*ವಿಧಾನ :*

🛑ಉಗುರು ಹತ್ತಬಾರದು.
 ✅ದ್ವಿದಳ .
✅ತ್ರಿದಳ, 
🛑 ಎಡಗೈ ಸ್ಪರ್ಶವಿಲ್ಲದೆ, 
✅ತಾಮ್ರ ಪಾತ್ರೆಯಲ್ಲಿ ಸಂಗ್ರಹಿಸಬೇಕು .

🚫 *ನಿಷೇಧ ದಿನಗಳು* 🚫

🛑ಸಂಕ್ರಮಣ ,
🛑ಹುಣ್ಣಿಮೆ ,
🛑ಅಮಾವಾಸ್ಯೆ ,
🛑ದ್ವಾದಶಿ ತಿಥಿ ,
🛑ರಾತ್ರಿ ಕಾಲ,
🛑ಸಂಧ್ಯಾಕಾಲ,
 🛑ಗ್ರಹಣ ಸಮಯ ,
ಇವು ವಜ್ಯ೯ ಸಮಯಗಳು .

ಶ್ರೀ ಇಂದಿರಾಪತಿ ದಾಮೋದರ ದೇವ ಈ ಮಾಸದ ನಿಯಾಮಕ ಅಧಿಪತಿ .
ಕಾರ್ತಿಕ ಮಾಸದಲ್ಲಿ  ಶ್ರೀ ತುಳಸಿ ದಾಮೋದರ ವಿವಾಹದ ನಂತರ ವಿವಾಹ ಮುಹೂರ್ತಗಳು ಲಭಿಸುವವು.
 ಸ್ಕಂದಪುರಾಣದಲ್ಲಿ ಶ್ರೀ ನಾರದರ ವಚನ : 

*ತುಳಸೀಕಾಷ್ಠ  ಸಂಭೂತೇ  ಮಾತೇ  ಕೃಷ್ಣ ಜನಪ್ರಿಯೆ।*

*ಬಿಭಮಿ೯ತ್ವಾ ಮಹಂ  ಕಂಠೇ ಕುರುಮಾಂ  ಕೃಷ್ಣ ವಲ್ಲಭಾಂ ॥*

   ವಿಧಿವತ್ತಾಗಿ ಶ್ರೀವಿಷ್ಣುವಿಗೆ ಅರ್ಪಿಸಿದ, ತುಳಸಿ ಮಾಲೆಯನ್ನು ಧರಿಸಿದರೆ ವಿಷ್ಣುಪದ  ಪ್ರಾಪ್ತಿ. 
ನಿರ್ಣಯ ಸಿಂಧುವಿನಲ್ಲಿ ಉಲ್ಲೇಖವಿದೆ.

ಎಲ್ಲಾ ಸಾಧನವಿದ್ದು ಶ್ರೀ ತುಳಸಿ ಇಲ್ಲದ ಪೂಜೆ, ವಲ್ಲನೊ ಹರಿ ಕೊಳ್ಳನೊ 
 ಎಂದು ದಾಸವಾಣಿ .ದೇವರ ಪೂಜೆ ,
ಪಿತೃ ಪೂಜೇ,ಮಾಡುವಾಗ ತುಳಸಿ ಮಾಲೆ ಧಾರಣೆ ಬೇಕು.

 ಇನ್ನು ಶ್ರೀ ತುಳಸಿಯ ಅನಂತ ನಾಮಗಳನ್ನು ನೋಡಿದಾಗ:

 ಸಂಸ್ಕೃತದಲ್ಲಿ ,
ತುಳಸಿ ,
ಸುಲಭಾ,
ಸುರನಾ ,
ಬಹುಮಂಜರಿ,
ಶೂ  ಲಕ್ಷ್ಮಿ, 
ದೇವ ದುಂದುಭಿ,
ಪಾವನಿ ,
ವಿಷ್ಣುಪ್ರಿಯಾ,
 ದಿವ್ಯ ,
ಭಾರತಿ ,
  ಹೀಗೆ ಅನೇಕ ನಾಮಗಳಿಂದ ಸಂಬೋಧಿಸುವರು.

*ಶ್ರೀ ತುಳಸಿಯ ಔಷಧೀಯ ಗುಣಗಳನ್ನು ನೋಡಿದಾಗ :* 

ತುಳಸಿಯದುವಿಶಿಷ್ಟ ಸುವಾಸನೆ,  ಅನೇಕ ಔಷಧಿ ಗುಣ ಹೊಂದಿದೆ. ಔಷಧಿ ವಲಯದಲ್ಲಿ ಇದರ ಬೇಡಿಕೆ ಅಧಿಕ ಹೊರದೇಶಗಳಲ್ಲಿಯೂ ಇದರ ಬೇಡಿಕೆಯಿದೆ.

 ಆಯುರ್ವೇದದಲ್ಲಿಯೂ ಅನೇಕ ರೀತಿಯ ಚಿಕಿತ್ಸೆಗೆ ಇದರ ಬಳಕೆ ಮಾಡುವರು .

ಯುರೋಪಿನಲ್ಲಿ ಆಹಾರವಾಗಿ ಬಳಸುತ್ತಾರೆ .ಇದು ಕೀಟನಾಶಕ ಗುಣವನ್ನು ಹೊಂದಿದೆ ,ಇನಫೆಕ್ಷನ್  ತಡೆಗಟ್ಟುವುದು.  ರೋಗ ಪ್ರತಿರೋಧಕ ಶಕ್ತಿ ವೃದ್ಧಿಗೆ ಪೂರಕ ಫಲಕಾರಿ. ಯ್ಯಾಂಟಿಬೆಕ್ಟೇರಿಯಲ್ಲ,  ಯಾಂಟಿವೈರಲ್,  ಯಾಂಟಿಸೆಪ್ಟಿಕ,   ಆಗಿಯೂ ಇದನ್ನು ಬಳಸುವರು.
ಈಜಿಪ್ತಿನಲ್ಲಿ ಆಹಾರ ಪದಾರ್ಥ ಕೆಡದಂತೆ ರಕ್ಷಿಸಲು ಇದರ ಬಳಕೆ ಉಂಟು,
 ತುಳಸಿತೈಲ  ನರರೋಗಕ್ಕೆ  ಉತ್ತಮ ಔಷಧೀಯ ಗುಣ ಹೊಂದಿರುವದು.ಒತ್ತಡ ಖಿನ್ನತೆ ನಿವಾರಕವೂ ಹೌದು ,ಶ್ವಾಸ ಸಂಬಂಧಿ ಜ್ವರ ನಿವಾರಕ ಹಾಗೂ ನೆಗಡಿಗೆ ಉಪಯುಕ್ತ ಔಷಧ ವಿದು.  ಬಹುಮುಖಿ ಗುಣಕಾರಿ ಸ್ವಭಾವ ತುಳಸಿ ಗುಣಧರ್ಮ.

*ವಾಸ್ತು ಪ್ರಕಾರ ತುಳಸಿ ಮನೆಯಲ್ಲಿ ಪ್ರತಿಷ್ಠಾಪನೆ:* 

1) ನೈರುತ್ಯ ಭಾಗ ಶ್ರೇಷ್ಠ ಎತ್ತರದ ಸ್ಥಳದಲ್ಲಿ ಸ್ಥಾಪಿಸಬೇಕು .

2) ಪೂರ್ವ ಮುಖ ದ್ವಾರದಲ್ಲಿ ಮನೆಯ ಆಗ್ನೇಯ ಪೂರ್ವದಲ್ಲಿ ಸೂಕ್ತ .

3) ಮೂರನೆಯ ಭಾಗ, ಪಶ್ಚಿಮ ನೈರುತ್ಯ ಭಾಗ ಮಧ್ಯಮ .

4) ಉತ್ತರ ವಾಯುವ್ಯ ಭಾಗ ಮಧ್ಯಮ .

5) ಈಶಾನ್ಯ ಆರೋಗ್ಯ ಹಾನಿ.

6) ದಕ್ಷಿಣ ಹಾಗೂ ಪಶ್ಚಿಮ ಭಾಗ ಮನೆಯಲ್ಲಿ ಗಿಡಗಳನ್ನು ನಡುವುದು ಸೂಕ್ತ,

 * ಇನ್ನು ಮರಗಳು ಹಗಲು ಇಂಗಾಲವನ್ನು ಗ್ರಹಿಸಿ ರಾತ್ರಿ ಸಮಯ ಆಮ್ಲಜನಕ ಗ್ರಹಿಸುವವು,  ಆದರೆ ತುಳಸಿ ಮಾತ್ರ ಹಗಲು ಹಾಗೂ ರಾತ್ರಿ ಪ್ರಾಣ ವಾಯುವನ ಬಿಡುವುದು.

For Daily updates join our Whatsapp group.

https://chat.whatsapp.com/G47EI51mAJ9HoNRApC0nfu

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ